ಬೆಂಗಳೂರು:ಇಂದು ಶ್ರೀನಿವಾಸಪುರಕ್ಕೆ ಆಗಮಿಸಬೇಕಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಗ್ಯದಲ್ಲಿ ದೀಡೀರ್ ಏರುಪೇರಾದ ಕಾರಣ ಅವರನ್ನು ಬುಧವಾರ ಮುಂಜಾನೆ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು.
ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇಂದು ಬುಧವಾರ ಶ್ರೀನಿವಾಸಪುರಕ್ಕೆ ಆಗಮಿಸಿ ರೈತರ ಜಮೀನುಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು,ಹಲವು ವರ್ಷಗಳಿಂದ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ನ್ಯಾಯಾಲಯದಲ್ಲಿ ಭೂ ವಿವಾದವಿದ್ದು,ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ, ಚಿಂತಕುಂಟ, ಕೇತಗಾನಹಳ್ಳಿ ಬಳಿ ಕಳೆದ ಮೂರು ದಿನಗಳಲ್ಲಿ ಸುಮಾರು 560 ಎಕರೆ ಒತ್ತುವರಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ನಡೆದಿದೆ. ತೆರವು ಕಾರ್ಯಾಚರಣೆ ವೇಳೆ ಕೋಳಿ ಫಾರಂಗಳು, ಮಾವಿನ ಮರಗಳು, ಎಲೆಕೋಸು, ಕ್ಯಾಪ್ಸಿಕಂ ಹಾಗೂ ಇತರೆ ಬೆಳೆಗಳು, ಪಂಪ್ ಸೆಟ್, ಬೋರ್ ವೆಲ್ ಎಲ್ಲವನ್ನೂ ತೆರವು ಮಾಡಿ ನಾಶಪಡಿಸಿದ ಆರೋಪ ಕೇಳಿಬಂದಿತ್ತು ಅದರಂತೆ ನಷ್ಟಕ್ಕೆ ಒಳಗಾಗಿರುವ ರೈತರ ಬೆಳೆಗಳು ಪರಶೀಲನೆ ನಡೆಸಿ ರೈತರೊಂದಿಗೆ ಸಂವಾದ ನಡೆಸಲು ಹೆಚ್ಡಿಕೆ ಆಗಮಿಸಲಿದ್ದರು. ಆದರೆ ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಹಿನ್ನಲೆಯಲ್ಲಿ ಶ್ರೀನಿವಾಸಪುರ ಪ್ರವಾಸ ದೀಡಿರ್ ರದ್ದಾಗಿದೆ.
ಪುತ್ರನ ನೋಡಲು ಆಸ್ಪತ್ರೆಗೆ ಧಾವಿಸಿದ ದೇವೇಗೌಡರು
ಕುಮಾರಸ್ವಾಮಿ ಆರೋಗ್ಯ ಏರುಪೇರಾಗಿ ಆಸ್ಪತ್ರೆಗೆ ಧಾಖಲಾಗಿರುವ ಹಿನ್ನಲೆಯಲ್ಲಿ ಅವರ ತಂದೆ ದೇವೇಗೌಡರು ಪುತ್ರನ ಆರೋಗ್ಯ ವಿಚಾರಿಸುವ ಸಲುವಾಗಿ ಕುಮಾರ ಸ್ವಾಮಿ ಅವರು ಅಡ್ಮಿಟ್ ಆಗಿರುವ ಜಯನಗರದ ಅಪೋಲೊ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪುತ್ರ ಕುಮಾರ ಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಅಪೋಲೋ ಆಸ್ಪತ್ರೆ ವೈದ್ಯರು ಕುಮಾರ ಸ್ವಾಮಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ತಿಳಿಸಿರುತ್ತಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



