ನ್ಯೂಜ್ ಡೆಸ್ಕ್:ಆಂಧ್ರಪ್ರದೇಶ ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಎ.ಪಿ ಮಾಜಿ ಮಂತ್ರಿ ಕಾಪು ಸಮುದಾಯದ ಪ್ರಭಾವಿ ಮುಖಂಡ ಕನ್ನಲಕ್ಷ್ಮೀನಾರಾಯಣ ಕಮಲ ಪಾಳಯಕ್ಕೆ ಗುಡ್ ಬೈ ಹೇಳಿದ್ದಾರೆ ಅವರ ನಿರ್ಧಾರದಿಂದ ಆಂಧ್ರಪ್ರದೇಶ ರಾಜಕೀಯದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಕೆಲ ದಿನಗಳಿಂದ ಕನ್ನ ಲಕ್ಷ್ಮೀನಾರಯಣ್ ಅವರು ಬಿಜೆಪಿ ಬಿಡುವ ಬಗ್ಗೆ ಪ್ರಚಾರ ಇತ್ತಾದರು ಇಷ್ಟೊಂದು ತುರ್ತಾಗಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಯಾರು ಉಹಿಸಿರಲಿಲ್ಲ ಇದು ಕಮಲ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ಬಿಜೆಪಿ ಯಲ್ಲಿದ್ದಾಗ ತಮ್ಮದೇ ಪಕ್ಷದ ನಾಯಕರನ್ನು ಟೀಕಿಸುತ್ತಿದ್ದರು.
ಕನ್ನಾ ಲಕ್ಷ್ಮೀನಾರಾಯಣ ಪವನ್ ಕಲ್ಯಾಣ್ ಕುರಿತಾಗಿ ಪ್ರತಿಕ್ರಿಯಿಸಿ ಪವನ್ ಅವರನ್ನು ಬಿಜೆಪಿ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಕಾಮೆಂಟ್ ಮಾಡುವ ಮೂಲಕ ಬಿಜೆಪಿಗೆ ಮುಜುಗರ ತಂದಿದ್ದರು. ಕಳೆದ ಡಿಸೆಂಬರ್ 14 ರಂದು ಜನಸೇನಾ ಪ್ರಮುಖ ನಾಯಕ ನಾದೆಂಡ್ಲಾ ಮನೋಹರ್ ಅವರನ್ನು ಭೇಟಿಯಾಗಿದ್ದ ಕನ್ನಾ ಅವರ ನಡೆ ಕುರಿತಾಗಿ ಜನಸೇನಾ ಪಕ್ಷ ಸೇರುತ್ತಾರೆ ಎಂಬ ಪ್ರಚಾರವೂ ನಡೆದಿತ್ತು. ನಂತರದಲ್ಲಿ ಆಂಧ್ರ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಹಾಗು ಮುಖಂಡ ಜಿವಿಎಲ್ ನರಸಿಂಹರಾವ್ ಅವರ ರಾಜಕೀಯ ಶೈಲಿ ಕುರಿತಾಗಿ ಕನ್ನಾ ಟೀಕೆ ಮಾಡಿದ್ದರು.
ದೆಹಲಿ ಹಾಗೂ ಭೀಮಾವರಂನಲ್ಲಿ ನಡೆದ ಕಾರ್ಯಕಾರಿಣಿ ಸಭೆಗಳಿಗೂ ಹಾಜರಾಗದೆ ದೂರ ಉಳಿಯುವ ಮೂಲಕ ಪಕ್ಷ ತೊರೆಯುವ ಸೂಚನೆ ನೀಡಿದ್ದ ಕನ್ನಲಕ್ಷ್ಮೀನಾರಾಯಣ ಟಿಡಿಪಿ ಸೇರುತ್ತಾರಾ?ಪವನ್ ಜೊತೆ ರಾಜಕೀಯವಾಗಿ ಇರುತ್ತಾರ? ಎಂಬ ಚರ್ಚೆ ನಡೆಯಿತಿದೆ.
ಕನ್ನಲಕ್ಷ್ಮೀನಾರಾಯಣ ಮೂಲತಃ ಕಾಂಗ್ರೆಸ್ ಪಕ್ಷದವರು ತಮ್ಮ ವಿದ್ಯಾರ್ಥಿ ದಸೆಯಲ್ಲೆ ಎನ್.ಎಸ್.ಯು.ಐ ಮೂಲಕ ರಾಜಕಾರಣದಲ್ಲಿ ಗುರುತಿಸಿಕೊಂಡ ಅವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿಯಾಗಿ ಬೆಳೆದು 2009 ರಲ್ಲಿ ಗುಂಟೂರು (ಪಶ್ಚಿಮ) ವಿಧಾನಸಭಾ ಕ್ಷೇತ್ರದಿಂದ ಐದನೇ ಅವಧಿಗೆ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅವರು ಗೆದ್ದರು ನಂತರ ಆಂಧ್ರಪ್ರದೇಶದ ಅತಿದೊಡ್ಡ ಕ್ಷೇತ್ರವಾದ ಪೆಡಕುರಪಾಡುದಿಂದ 1989 ರಿಂದ 2004 ರವರೆಗೆ ಸತತ ನಾಲ್ಕು ಅವಧಿಗೆ ಶಾಸಕರಾಗಿದ್ದರು, 1994 ರ ಅಸೆಂಬ್ಲಿ ಚುನಾವಣೆಯಲ್ಲಿ ಚುನಾಯಿತರಾಗಿ 1991 ರಿಂದ 1994 ರವರಿಗೂ ನೆದರುಪಲ್ಲಿ ಜನಾರ್ದನ ರೆಡ್ಡಿ ಮತ್ತು ದಿವಂಗತ ಶ್ರೀ ಕೋಟ್ಲಾ ವಿಜಯ ಭಾಸ್ಕರ ರೆಡ್ಡಿ ಸಂಪುಟದಲ್ಲಿ ಕೃಷಿ ಮತ್ತು ಕೃಷಿ ತಂತ್ರಜ್ಞಾನ ಮಿಷನ್ನ ಕ್ಯಾಬಿನೆಟ್ ಸಚಿವರಾಗಿ ನಂತರ 2004 ರಿಂದ 2009 ರವರಿಗೂ ಡಾ.ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ನಂತರ 2009 ರಲ್ಲಿ ಕೆ.ರೋಸಯ್ಯ ಸಂಪುಟದಲ್ಲಿ ಆಹಾರ ಸಂಸ್ಕರಣೆ, ವಾಣಿಜ್ಯ ಮತ್ತು ರಫ್ತು ಉತ್ತೇಜನ ಸಚಿವರಾಗಿ 2010 ರಿಂದ 2012 ರ ವರಿಗೂ ಕಿರಣ್ ಕುಮಾರ್ ರೆಡ್ಡಿ ಅವರ ಸಂಪುಟದಲ್ಲಿ ವಸತಿ ಸಚಿವ,ಕೈಗಾರಿಕೆಗಳ ಸಚಿವರಾಗಿದ್ದರು,ಆನಂತರ ಆಂಧ್ರ ವಿಭಜನೆಯಾದ ಮೇಲೆ ಬಿಜೆಪಿ ಸೇರಿದ ಅವರು ಭಾರತೀಯ ಜನತಾ ಪಕ್ಷದ ಆಂಧ್ರಪ್ರದೇಶದ ಅಧ್ಯಕ್ಷರಾಗಿ 2018 – 2020 ಕಾರ್ಯನಿರ್ವಹಿದಿದ್ದರು ನಂತರ ಇತ್ತಿಚಿಗಿನ ಬೆಳವಣಿಗೆಯಲ್ಲಿ ಪಕ್ಷ ತೊರೆಯುವ ಬಗ್ಗೆ ಮಾತನಾಡುತ್ತಿದ್ದ ಅವರು ಇಂದು ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ.
ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ಅವರನ್ನು ತೀವ್ರವಾದ ಪದಜಾಲಗಳಿಂದ ಟೀಕಿಸಿದ್ದ ಕನ್ನಾ ಸದ್ಯ ಬಿಜೆಪಿ ತೊರೆದಿದ್ದು ಟಿ.ಡಿ.ಪಿ ಸೇರುವ ಬಗ್ಗೆ ಅನುಮಾನ ಎನ್ನಲಾಗುತ್ತಿದೆ,ಪವನ್ ಕಲ್ಯಾಣ್ ಜನಸೇನಾ ಪಕ್ಷ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿಯಾದರು ಆಂಧ್ರದ ರಾಜಕೀಯ ಪರಿಸ್ಥಿತಿಯಲ್ಲಿ ಪವನ್ ಅನಿವಾರ್ಯವಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಕನ್ನಾಗೆ ಮತ್ತೆ ಸಮಸ್ಯೆಯಾಗುತ್ತದೆ ಎನ್ನುವ ಮಾತು ಇದೆ.
Breaking News
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
- ಶ್ರೀನಿವಾಸಪುರ ತಾಡಿಗೋಳ್ RTO ಚೆಕ್ ಪೋಸ್ಟ್ ಲೋಕಾಯುಕ್ತ ದಾಳಿ.
- ಮುತ್ತಕಪಲ್ಲಿ ಪಂಚಾಯಿತಿ ಅಕ್ರಮಗಳ ತನಿಖೆಗೆ ಆಗ್ರಹ
Saturday, October 12