ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದಲ್ಲಿ ಈಗ ಚುನಾವಣೆ ಹತ್ತಿರ ಬರುತ್ತಿದೆ ಹಾಗಾಗಿ ಅಲ್ಲಿನ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದ್ದು ಟಿಡಿಪಿ ಯುವ ಮುಖಂಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮತ್ತು ಪ್ರಮುಖ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್(P.K) ಹೈದರಾಬಾದ್ನಿಂದ ಒಂದೇ ವಿಮಾನದಲ್ಲಿ ವಿಜಯವಾಡಕ್ಕೆ ಬಂದು ಇಬ್ಬರೂ ಒಂದೇ ವಾಹನದಲ್ಲಿ ಉಂಡವಳ್ಳಿಯಲ್ಲಿರುವ ಚಂದ್ರಬಾಬು ನಿವಾಸಕ್ಕೆ ತೆರಳಿ ಚಂದ್ರಬಾಬು ಅವರನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ವೈನಾಟ್ 175 ಅನ್ನುವ ಸ್ಲೋಗನ್ ಗುರಿಯಾಗಿಸಿಕೊಂಡು ಆಡಳಿತಾರೂಢ ಜಗನಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಮುಖ ವಿರೋಧ ಪಕ್ಷವಾಗಿರುವ ತೆಲಗುದೆಶಂ ಪಾರ್ಟಿ ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದೆ. ಜೊತೆಗೆ ಜನಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಅಂತಿಮ ಹೋರಾಟಕ್ಕೆ ಮುಂದಾಗಿದೆ.
ಪ್ರಶಾಂತ್ ಕಿಶೋರ್ ತಮ್ಮ ಪಕ್ಷಕ್ಕೆ ರಣತಂತ್ರ ರೂಪಿಸದಿದ್ದರೂ ರಾಜಕೀಯ ಸಲಹೆಗಾರರಾಗಲಿ ಎಂದು ಟಿಡಿಪಿ ಬಯಸಿತ್ತು.ಈ ಕ್ರಮದಲ್ಲಿ ಚಂದ್ರಬಾಬು ಜತೆ ಭೇಟಿಗೆ ಒಮ್ಮೆ ಬರುವಂತೆ ಆಹ್ವಾನ ನೀಡಲಾಗಿದ್ದ ಹಿನ್ನಲೆಯಲ್ಲಿ ಪ್ರಶಾಂತ್ ಕಿಶೋರ್ ಚಂದ್ರಬಾಬು ನಿವಾಸಕ್ಕೆ ಆಗಮಿಸಿ ಚಂದ್ರಬಾಬು ಜತೆ ಸುಮಾರು ಮೂರು ಗಂಟೆ ಮಾತುಕತೆ ನಡೆಸಿದ್ದಾರೆ. ಹಲವು ಮಹತ್ವದ ವಿಚಾರಗಳನ್ನು ಚರ್ಚೆ ಮಾಡಿದ್ದು ಮುಂಬರುವ ಚುನಾವಣೆಯಲ್ಲಿ ಟಿಡಿಪಿ ಗೆಲುವಿನ ಕುರಿತಾದ ರಾಜಕೀಯ ತಂತ್ರಗಾರಿಕೆ ಬಗ್ಗೆ ಮಾತನಾಡಿರುವುದಾಗಿ ಹೇಳಲಾಗುತ್ತಿದೆ.ಪ್ರಶಾಂತ್ ಕಿಶೋರ್ ಅವರು ಕಳೆದ ಚುನಾವಣೆಯಲ್ಲಿ ಆಂಧ್ರದ ಹಾಲಿ ಮುಖ್ಯಮಂತ್ರಿ ಜಗನಮೋಹನರೆಡ್ಡಿ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದು ಪ್ರಶಾಂತ್ ಅವರಿಗೆ ಜಗನ್ ಶಕ್ತಿ ಸಾಮರ್ಥ್ಯ ದೌರ್ಬಲ್ಯಗಳ ಅರಿವು ಇದೆ ಹಾಗಾಗಿ ಅದರ ಆಧಾರದಲ್ಲಿ ಬರುವಂತ ಚುನಾವಣೆಯಲ್ಲಿ ಚಂದ್ರಬಾಬು ಪರ ಕೆಲಸ ಮಾಡಿದರೆ, ತೆಲುಗು ದೇಶಂ ಪಕ್ಷಕ್ಕೆ ಉಪಯೋಗವಾಗಲಿದೆ ಎಂಬುದು ತೆಲುಗು ದೇಶಂ ಪಕ್ಷದ ಶ್ರೇಣಿಯ ನಂಬಿಕೆ.
ಪ್ರಶಾಂತ್ ಕಿಶೋರ್ ನೇತೃತ್ವದ ಐ.ಪ್ಯಾಕ್ ತಂಡದಲ್ಲಿ ಒಂದು ಕಾಲದಲ್ಲಿ ಕಾರ್ಯನಿರ್ವಹಿಸಿ ಈಗ ತನ್ನದೆ ಟೈಮ್ ಕನ್ಸಲ್ಟೆನ್ಸಿ ತಂಡ ಕಟ್ಟಿಕೊಂಡು ರಾಜಕೀಯ ತಂತ್ರಜ್ಞರಾಗಿ ಗುರುತಿಸಿಕೊಂಡಿರುವ ರಾಬಿನ್ ಶರ್ಮಾ ಆಂಧ್ರಪ್ರದೇಶದಲ್ಲಿ ತೆಲಗುದೆಶಂ ಪಕ್ಷದ ರಾಜಕೀಯ ಕಾರ್ಯತಂತ್ರದ ಭಾಗವಾಗಿ 2-3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಇದೀಗ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿದ್ದಾರೆ. ಚಂದ್ರಬಾಬು ಮತ್ತು ಪ್ರಶಾಂತ್ ಕಿಶೋರ್ ನಡುವಿನ ಸಭೆಯಲ್ಲಿ ರಾಬಿನ್ ಶರ್ಮಾ ಹಾಗು ತಂಡದ ಸದಸ್ಯರೂ ಭಾಗವಹಿಸಿದ್ದು ವಿಶೇಷ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಶಾಂತ್ ಕಿಶೋರ್ ದೇಶದ ರಾಜಕಾರಣದಲ್ಲಿಯೇ ಅತ್ಯಂತ ಹಿರಿಯರಾಗಿರುವ ಚಂದ್ರಬಾಬು ಅವರು ಕರೆದಿದ್ದು ಸೌಜನ್ಯಕ್ಕಷ್ಟೇ ಚಂದ್ರಬಾಬು ಅವರೊಂದಿಗೆ ಭೇಟಿಯಾಗಿದ್ದೇನೆ ಯಾವುದೆ ರಾಜಕೀಯದ ಪ್ರಸ್ತಾಪನೆ ಮಾಡಿಲ್ಲ ಎಂದಿರುತ್ತಾರೆ.
ಚಂದ್ರಬಾಬು ಮತ್ತು ಪ್ರಶಾಂತ್ ಕಿಶೋರ್ ಭೇಟಿಯಾದ ಸುದ್ಧಿ ಸ್ಥಳೀಯ ಮಾಧ್ಯಮಗಳಿಗಿಂತ ಹೆಚ್ಚು ಪ್ರಚಾರವನ್ನು ರಾಷ್ಟ್ರೀಯ ಮಾಧ್ಯಮಗಳು ಮಾಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13