ಶ್ರೀನಿವಾಸಪುರ: ಚುನಾವಣೆ ಹತ್ತಿರ ಇರುವಾಗ ಎಂ.ಜಿ. ರಸ್ತೆಯಲ್ಲಿ ಕೆ.ಸಿ. ವ್ಯಾಲಿ ಪೈಪ್ ಲೈನ್ ಕಾಮಗಾರಿಯನ್ನು ತರಾತುರಿಯಲ್ಲಿ ಮಾಡುತ್ತಿರುವುದು ನೋಡಿದರೆ ಇದೊಂದು ಚುನಾವಣೆ ಗಿಮಿಕ್ ಗಾಗಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ರಮೇಶ್ಕುಮಾರ್ ವಿರುದ್ದ ಜೆ.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ. ಶಿವಾರೆಡ್ಡಿ ಆರೋಪಸಿದರು.
ಅವರು ಜೆ.ಡಿ.ಎಸ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪಟ್ಟಣದ ರಸ್ತೆಗಳನೆಲ್ಲ ಅಗೆದು ಹಾಳು ಮಾಡಿದ್ದಾರೆ ಆತುರ ಆತುರವಾಗಿ ಮಾಡುತ್ತಿರುವ ಕಾಮಗಾರಿಯಿಂದ ಪಟ್ಟಣದಲ್ಲಿ ಸಂಚಾರಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.ಕನಿಷ್ಠ ಸಾರ್ವಜನಿಕರು ಒಡಾಡಲು ಸಾದ್ಯವಾಗದ ಪರಿಸ್ಥಿತಿ ನಿರ್ಮಿಸಿದ್ದಿರ,ಎಂ.ಜಿ. ರಸ್ತೆಯಲ್ಲಿ ಕೆ.ಸಿ. ವ್ಯಾಲಿ ಪೈಪ್ ಲೈನ್ ಕಾಮಗಾರಿ ಮಾಡುವ ಅವಶ್ಯಕತೆ ಏನಿತ್ತು ಪರ್ಯಾಯ ಮಾರ್ಗವಾಗಿ ಪಟ್ಟಣದ ಹೊರವಲಯದಲ್ಲಿ ಪೈಪ್ ಲೈನ್ ಕಾಮಗಾರಿ ಮಾಡಬಹುದಾಗಿತ್ತಲ್ವಾ ಶಾಸಕರೆ ಚುನಾವಣಾ ಗಿಮಿಕ್ ಗಾಗಿ ಪ್ರತಿಷ್ಟೆಗೆ ಬಿದ್ದು ಪಟ್ಟಣದಲ್ಲಿ ಪೈಪ್ ಲೈನ್ ಕಾಮಗಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ. ರಾಜಣ್ಣ ಮಾತನಾಡಿ, ಶಾಸಕ ರಮೇಶ್ಕುಮಾರ್ ಅವಧಿಯಲ್ಲಿ ತಾಲ್ಲೂಕಿನ ಅಭಿವೃದ್ದಿ ಶೂನ್ಯವಾಗಿದೆ, ಕಾಲಕ್ಕೆ ತಕ್ಕಂತೆ ಅತ್ಯುತ್ತಮ ಮಾತುಗಾರರಾಗಿರುವ ರಮೇಶ್ ಕುಮಾರ್ ಅಯಾ ಸಂದರ್ಭಕ್ಕೆ ಅನಕೂಲ ಪಡೆಯುವ ರೀತಿಯಲ್ಲಿ ಮಾತನಾಡಿ, ಜನತೆಯನ್ನು ಯಾಮಾರಿಸಿ ಕಾಲಹರಣ ಮಾಡುವಲ್ಲಿ ನಿಸ್ಸಿಮರು. ಈ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಭಿವೃದ್ದಿ ಕೆಲಸಗಳು ನಡೆದಿರುವುದು ವೆಂಕಟಶಿವಾರೆಡ್ಡಿ ಶಾಸಕರಾಗಿದ್ದಾಗ ಸಮಯದಲ್ಲಿ ತಾಲೂಕಿನ ಪ್ರಗತಿಗೆ ಮಾಜಿ ಶಾಸಕರ ಕೊಡುಗೆ ಅಪಾರವಾಗಿದ್ದು. ಪಟ್ಟಣದಲ್ಲಿ ಸ್ಟೇಡಿಯಂ ನಿರ್ಮಾಣ,ಬಸ್ ನಿಲ್ದಾಣ, ತಾಲೂಕು ಕಚೇರಿ, ಸರಕಾರಿ ಆಸ್ಪತ್ರೆ, ಕೋರ್ಟ್ ಕಟ್ಟಡ ನಿರ್ಮಾಣ ಇದೆಲ್ಲವು ವೆಂಕಟಶಿವಾರೆಡ್ಡಿ ಕಾಲದಲ್ಲಿ ನಿರ್ಮಿಸಲಾಗಿದ್ದು ತಾಲೂಕಿಗೆ ರಮೇಶ್ ಕುಮಾರ್ ಕೊಡುಗೆ ಏನೆಂದು ಪ್ರಶ್ನಿಸಿದರು ತಾಲೂಕಿನ ಅಭಿವೃದ್ಧಿಯನ್ನು ಧ್ಯೇಯವಾಗಿಟ್ಟುಕೊಂಡ ವೆಂಕಟಶಿವಾರೆಡ್ಡಿ, ಪಟ್ಟಣದ ಅಭಿವೃದ್ದಿಗಾಗಿ 15 ಕೋಟಿ ರೂಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಬಂದಿರುತ್ತಾರೆ,ಈ ಮೊತ್ತವನ್ನು ಪಟ್ಟಣದಲ್ಲಿ ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಿರುವ ವಾರ್ಡುಗಳ ಅಭಿವೃದ್ಧಿಗೆ ಬಳಸಲು ಯೋಜನೆ ರೂಪಿಸದೆ ಶಾಸಕ ರಮೇಶ್ಕುಮಾರ್ 3 ಕೋಟಿ ರೂಗಳ ವೆಚ್ಚದಲ್ಲಿ ಈಜು ಕೊಳ ನಿರ್ಮಿಸಲು ಮುಂದಾಗಿರುವುದು ಖಂಡನೀಯ ಪಟ್ಟಣದ ಪ್ರಗತಿ ಬಗ್ಗೆ ಶಾಸಕರಿಗೆ ಆಸಕ್ತಿ ಇದ್ದರೆ ಮೊದಲು ಸ್ವಿಮ್ಮಿಂಗ್ಪೂಲ್ ಯೋಜನೆ ಕೈ ಬಿಟ್ಟು ಜನಸಾಮಾನ್ಯರ ಸೌಲಭ್ಯಗಳ ಪ್ರಗತಿಗೆ ಒತ್ತು ನೀಡಬೇಕೆಂದು ಆಗ್ರಹಿಸಿದರು.
ಮುಖಂಡ ಅಂಬೇಡ್ಕರ್ ಪಾಳ್ಯರವಿ ಮಾತನಾಡಿ ವೆಂಕಟಶಿವಾರೆಡ್ದಿ ಅವರು ವಿಶೇಷವಾಗಿ ಎಸ್.ಸಿ. ಎಸ್.ಟಿ. ಅಹಿಂದ ಸಮುದಾಯಗಳ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ, ವೆಂಕಟಶಿವಾರೆಡ್ಡಿ ಶಾಸಕರಾಗಿದ್ದಾಗ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರು ನಮ್ಮ ಅಣ್ಣನವರಾದ ಸಿ.ಮುನಿಯಪ್ಪರವರನ್ನು ಅಧ್ಯಕ್ಷರನ್ನಾಗಿ, ಎಂ. ಶ್ರೀನಿವಾಸನ್ರನ್ನು ಜಿಲ್ಲಾ ಪಂಚಾಯಿತಿ ಮತ್ತು ಎ.ಪಿ.ಎಂ.ಸಿ. ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನಮ್ಮ ಎಸ್.ಸಿ. ಎಸ್.ಟಿ. ಸಮಾಜಗಳಿಗೆ ರಮೇಶ್ಕುಮಾರ್ ಕೊಡಿಗೆ ಏನೂ ಇಲ್ಲ ಸರ್ಕಾರದ ವತಿಯಿಂದ ಕೊರೆಸುವಂತ ಬೋರ್ ವೆಲ್ ಅನ್ನು ಸಹ ಕೊಡಿಸಿಲ್ಲ ಎಂದು ಆರೋಪಿಸಿದರು.
ಸ್ಪಷ್ಟತೆ ಇಲ್ಲದ ಸೇರ್ಪಡೆ
ಮೊನ್ನೆ ಮೊನ್ನೆಯವರಿಗೂ ರಮೇಶ್ ಕುಮಾರ್ ಜೊತೆಯಲ್ಲೆ ಇದ್ದ ಬಿ.ಎಮ್. ಪ್ರಕಾಶ್. ಕೆ. ನಾರಾಯಣಸ್ವಾಮಿ, ಮುಂತಾದವರು ಕಾರಣಾಂತರಗಳಿಂದ ಅವರಿಂದ ದೂರ ಉಳಿದು ಈಗ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಇವರೊಂದಿಗೆ ಸುಮಾರು 250- ಕುಟುಂಬಗಳು ಸಹ ಸೇರ್ಪಡೆಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಚಾರಪಡಿಸಿಕೊಂಡು ಸಾರ್ವಜನಿಕರಿಗೆ ತಪ್ಪುಸಂದೇಶ ನೀಡುವಂತ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಲಜಿ ಸಮಾಜದ ಮುಖಂಡ ಶಂಕರಪ್ಪ ಮಾತನಾಡಿ ಇದ್ದಕ್ಕಿದ್ದಂತೆ ಬಲಿಜ ಸಮಾಜದ ಸಮ್ಮೇಳನ ಮಾಡಿರುವ ಶಾಸಕ ರಮೇಶ್ ಕುಮಾರ್ ತಮ್ಮ ರಾಜಕೀಯ ಅನಕೂಲಕ್ಕೆ ಒಂದಿಬ್ಬರು ಮುಖಂಡರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಬಲಿಜ ಸಮಾಜದವರು ಎಲ್ಲರೂ ಬೆಂಬಲ ನೀಡಿದ್ದಾರೆ ಎಂದು ಬಿಂಬಿಸಲು ಮುಂದಾಗಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪುರಸಭೆ ಸದಸ್ಯ ಆನಂದ್, ನಾಸೀರ್ ಖಾನ್,ಬಿ.ಎಲ್.ದುರ್ಗಾಪ್ರಸಾದ್ ಮಣಿ, ಜಗದೀಶ್, ಸುಂಕುಅಮರನಾಥ್, ಮಂಜುನಾಥ್ಗೌಡ, ಏಜು, ಅಂಜಾದ್ ಖಾನ್ ಮತ್ತಿತರರು ಇದ್ದರು.
Breaking News
- ಚಿಂತಾಮಣಿಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾಮಾತೆಗೆ ವಿಶೇಷ ಪೂಜೆ
- ಕೋಲಾರದಲ್ಲಿ ವಿಜಯದಶಮಿಯಂದು RSS ಬೃಹತ್ ಶಕ್ತಿ ಪ್ರದರ್ಶನ
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
Sunday, October 13