ನ್ಯೂಜ್ ಡೆಸ್ಕ್: ತೆಲಂಗಾಣದಲ್ಲಿ ಚುನಾವಣಾ ಸಮಯ ಶುರುವಾಗುತ್ತಿದೆ ಇನ್ನೆರಡು ಮೂರು ತಿಂಗಳಲ್ಲಿ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ,ಅಲ್ಲಿನ ರಾಜಕೀಯದಲ್ಲಿ ಆಡಳಿತಾರೂಡ ಭಾರತ ರಾಷ್ಟ್ರೀಯ ಪಕ್ಷ(ಬಿ.ಅರ್.ಎಸ್) ಪಕ್ಷ ಪ್ರಭಾವಿಯಾಗಿದೆ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿಸಲು ತನ್ನದೆ ರಣತಂತ್ರ ರೂಪಿಸುತ್ತಿದೆ.ಇದನ್ನು ಎದುರಿಸಲು ಕಾಂಗ್ರೆಸ್ ಹಾಗು ಬಿಜೆಪಿ ಪೈಪೋಟಿಗೆ ಬಿದ್ದಿವೆ.
ಬಿ.ಅರ್.ಎಸ್ ಪಕ್ಷದ ರಾಜಕೀಯ ರಣತಂತ್ರ ಭೇದಿಸಲು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ರಾಜಕೀಯ ತಂತ್ರಗಾರ ಸುನಿಲ್ ಕನಗೊಲ್ ಅವರೆ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಪೊಲಿಟಿಕಲ್ ಸ್ಟಾಟಜಿ ಮಾಡುತ್ತಿದ್ದು, ಕರ್ನಾಟಕ ಕಾಂಗ್ರೆಸ್ ಗೆಲುವಿನ ಉಚಿತ ಯೋಜನೆಗಳ ಪಟ್ಟಿಯನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಿದ ಸಭೆಯಲ್ಲಿ ಉಚಿತ ಗ್ಯಾರಂಟಿ ಘೋಷಣೆಗಳನ್ನು ಘೋಷಿಸಿದೆ ಇದರ ಪರಿಣಾಮ ಇತ್ತಿಚಿಗೆ ಇತರೆ ಪಕ್ಷಗಳ ಮುಖಂಡರು ಪ್ರಮುಖ ಕಾರ್ಯಕರ್ತರು ತೆಲಂಗಾಣ ಕಾಂಗ್ರೆಸ್ ನತ್ತ ವಲಸೆ ಆರಂಭಿಸಿದ್ದಾರೆ,ಜಂಪಿಂಗ್ ಸ್ಟಾರ್ ಗಳು ಕ್ಯೂ ಕಟ್ಟಿ ನಿಂತಿದ್ದಾರೆ ಈ ಬಲದಿಂದಲೇ ಚುನಾವಣೆ ಎದುರಿಸಿ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದರೊಂದಿಗೆ ದೇಶಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಒಲವು ಸಿಕ್ಕರೆ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿದೆ.ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡ ತೆಲಂಗಾಣದ ಮೇಲೆ ವಿಶೇಷ ಗಮನ ಹರಿಸುತ್ತಿದ್ದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಹ ತೆಲಂಗಾಣದ ಮೇಲೆ ವಿಶೇಷ ಆಸಕ್ತರಾಗಿದ್ದು ಕಾರ್ಯಕರ್ತರಲ್ಲೂ ಹೊಸ ಉತ್ಸಾಹ ಮೂಡಿಸಿದೆ
ತೆಲಂಗಾಣ ಕಾಂಗ್ರೆಸ್ ಶಕ್ತಿ ಕೇಂದ್ರ ಬೆಂಗಳೂರು-ಡಿ.ಕೆ.ಶಿ
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಜವಾಬ್ದಾರಿ ವಹಿಸಿಕೊಂಡಂತಿರುವ ಕರ್ನಾಟಕ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮದೇ ಆದ ತಂತ್ರಗಳನ್ನು ಹಣೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ತೆಲಂಗಾಣದಲ್ಲಿ ಬಿಆರ್ಎಸ್ ಮತ್ತು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ ಬಯಸುವ ಇತರೆ ಪಕ್ಷದ ನಾಯಕರು ಬೆಂಗಳೂರಿಗೆ ಸರತಿ ಸಾಲಿನಲ್ಲಿ ಬಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುತ್ತ,ತೆಲಂಗಾಣ ಕಾಂಗ್ರೆಸ್ ಸೇರುವ ಬಗ್ಗೆ ಆಸಕ್ತರಾಗಿ ತಮಗಿರುವ ಅನುಮಾನಗಳ ಕುರಿತಾಗಿ ಬಗೆಹರಿಸಿಕೊಳ್ಳುತ್ತಿದ್ದಾರೆ,ತೆಲಂಗಾಣ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಕ್ರೇಜ್ ಹೇಗಿದೆಯಂದರೆ ಅಲ್ಲಿನ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಕನ್ಫರ್ಮೇಷನ್ ನೀಡಿದ್ದರೂ ಫೈನಲ್ ಕನ್ಫರ್ಮೇಷನ್ ಅನ್ನು ಬೆಂಗಳೂರಿಗೆ ಬಂದು ಡಿ.ಕೆ.ಶಿವಕುಮಾರ್ ಅವರಿಂದ ಪಡೆಯುತ್ತಿದ್ದಾರಂತೆ ತೆಲಂಗಾಣ ಕಾಂಗ್ರೆಸ್ ಪಕ್ಷದ ನಾಯಕರು ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡುತ್ತಿಲ್ಲ. ಬದಲಾಗಿ ಬೆಂಗಳೂರಿಗೆ ಬಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುತ್ತಿದ್ದಾರೆ.
ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿ ಸಹೋದರಿ ಮಾಜಿ ಮುಖ್ಯಮಂತ್ರಿ ರಾಜಶೇಖರೆಡ್ಡಿ ಮಗಳು ವೈ.ಎಸ್.ಶರ್ಮಿಳಾ ತೆಲಂಗಾಣ ಕಾಂಗ್ರೆಸ್ ಪಕ್ಷ ಕಟ್ಟಿ ಪಾದಯಾತ್ರೆ ಕಾರ್ಯಕ್ರಮ ನಡೆಸಿ ರಾಜಕೀಯ ತಂತ್ರಗಾರಿಕೆ ಮಾಡಲು ಮುಂದಾಗಿ ವಿಫಲರಾಗಿ ಕೊನೆಗೆ ಡಿ.ಕೆ.ಶಿವಕುಮಾರ್ ರನ್ನು ಭೇಟಿಯಾಗಿ ತನಗೆ ಉನ್ನತ ಸ್ಥಾನ ನೀಡಿದರೆ ತನ್ನ ಪಕ್ಷವನ್ನು ಕಾಂಗ್ರೆಸ್ ನಲ್ಲಿ ವೀಲಿನ ಗೋಳಿಸುವ ಬಗ್ಗೆ ಹೇಳಿದ್ದಾರಂತೆ ಇದುವರಿಗೂ ಯಾವುದೆ ಫೈನಲ್ ಆಗಿಲ್ಲ ಹಾಗೆ ತೆಲಂಗಾಣ ರಾಜಕೀಯದಲ್ಲಿ ಒಂದು ಕಾಲದ ತೆಲಗುದೆಶಂ ಪಕ್ಷದ ಪ್ರಭಾವಿ ರಾಜಕಾರಣಿ, ಮಾಜಿ ಮಂತ್ರಿ ಈಗ ಬಿ.ಅರ್.ಎಸ್ ಪಕ್ಷದಲ್ಲಿರುವ ಮೊತಕಪಲ್ಲಿ ನರಸಿಂಹಲು ಕಾಂಗ್ರೆಸ್ ಸೇರುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿ ಇದಕ್ಕಾಗಿ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17