- ನೆಲದ ಪಾಲಾದ ತರಕಾರಿ ಬೆಳೆಗಳು
- ಕೊಯ್ಲು ಹಂತದಲ್ಲಿದ್ದ ಬೆಳೆ
- ಬೊರ್ ವೆಲ್ ಶೆಡ್ ಗಳು ನೆಲಸಮ
ಶ್ರೀನಿವಾಸಪುರ:ಒತ್ತುವರಿಯಾಗಿದೆ ಎನ್ನಲಾದ ಅರಣ್ಯ ಇಲಾಖೆಗೆ ಸೇರಿದ ಜಮೀನು ಒತ್ತುವರಿ ತೆರವು ಗೊಳಿಸುವ ಕಾರ್ಯಚರಣೆ ಶನಿವಾರ ಮದ್ಯರಾತ್ರಿ ಸಹ ಮುಂದುವರೆದಿದ್ದು 200ಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಿವಾಸಪುರ-ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಸಬಾ ವ್ಯಾಪ್ತಿಯ ಕೇತಗಾನಹಳ್ಳಿ,ಚಿಂತಕುಂತೆ,ಹೆಬ್ಬಟ,ಅರಿಕೇರಿ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಜಮೀನು ತೆರವು ಕಾರ್ಯಚರಣೆ ಶನಿವಾರ ಮದ್ಯರಾತ್ರಿ ನಿರ್ವಹಿಸಲಾಗಿದೆ. 50ಕ್ಕೂ ಹೆಚ್ಚು ಜೆಸಿಬಿಗಳನ್ನು ಕಾರ್ಯಚರಣೆಯಲ್ಲಿ ಬಳಸಿಕೊಂಡು ಹತ್ತಾರು ವರ್ಷಗಳ ಮಾವು ಹಾಗು ಇನ್ನಿತರೆ ಮರಗಳನ್ನು ನೆಲಸಮ ಮಾಡಲಾಗಿದ್ದು ಈ ಭಾಗದಲ್ಲಿ ಮಾವಿನ ಮರಗಳಿಗಿಂತ ಹೆಚ್ಚಾಗಿ ವ್ಯವಸಾಯ ಭೂಮಿ ಇದ್ದು ಹತ್ತಾರು ಬೊರವೆಲ್ ಗಳು ಶೆಡ್ ಗಳು,ಕೃಷಿಹೊಂಡಗಳು,ನೆಲಸಮ ಮಾಡಲಾಗಿದ್ದರೆ ಕೊಯ್ಲು ಹಂತದಲ್ಲಿದ್ದ ಕೊಸು,ಸೌತೆಕಾಯಿ.ಈರೇಕಾಯಿ ಟಮ್ಯಾಟೊ ಇನ್ನಿತರೆ ತರಕಾರಿ ಬೆಳೆಗಳು ಜೆಸಿಬಿಗಳ ಅರ್ಭಟದಲ್ಲಿ ನಾಶವಾಗಿದೆ.ತೆರವು ಕಾರ್ಯಚರಣೆ ನೇತೃತ್ವ ವಹಿಸಿದ್ದ ಕೋಲಾರ ಜಿಲ್ಲಾ ಅರಣ್ಯಾಧಿಕಾರಿ ಎಡುಕೊಂಡಲು ಮಾತನಾಡಿ ಕಳೆದ ಮೂರು ದಿನಗಳಿಂದ ತೆರವು ಕಾರ್ಯದಲ್ಲಿ 500 ಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಂಡು ಅರಣ್ಯ ಗಡಿಯನ್ನು ಗುರುತು ಮಾಡಲಾಗಿದೆ ಎಂದು ಹೇಳಿದರು.
ರೈತರ ಅಸಾಯಕತೆ
ಅರಣ್ಯ ಭೂಮಿ ಒತ್ತುವರಿ ಎನ್ನುವುದಾದರೆ ಇದೆ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದೆವೆ ಜೊತೆಗೆ ಅನಕೂಲವಂತ ರೈತರು ಬೊರ್ ವೆಲ್ ಕೊರೆಸಿಕೊಂಡು ವಿದ್ಯತ್ ಸಂಪರ್ಕ ಸಹ ಪಡೆದುಕೊಂಡಿದ್ದೇವೆ ನೀರಿನ ಅನಕೂಲ ಪಡೆದಿರುತ್ತೇವೆ ಅವತ್ತೆ ಅರಣ್ಯ ಇಲಾಖೆಯವರು ಭೂಮಿ ವಿಚಾರವಾಗಿ ತಕರಾರು ತಗೆದಿದ್ದರೆ ನಾವು ಮುಂದುವರಿಯುತ್ತಿರಲಿಲ್ಲ ಇವತ್ತು ಬೆಳೆ ಕೊಯ್ಲು ಹಂತಕ್ಕೆ ಬಂದಿದೆ ಒಂದೇರಡು ದಿನ ನೀರು ಕಟ್ಟಿ ಕಾಪಾಡಿದ್ದರೆ ಬೆಳೆ ಕೈಗೆ ಬರುತಿತ್ತು ಎಂದು ತಮ್ಮ ಅಸಾಯಕತೆಯಿಂದ ಹೇಳುತ್ತಾರೆ.
ಬೊರ್ ವೆಲ್ ಪೈಪ್ ಹೊತ್ತೊಯಿದ ರೈತರು
ರಾತ್ರೋರಾತ್ರಿ ಒತ್ತುವರಿ ಕಾರ್ಯಚರಣೆ ಮಾಡಿದ ಹಿನ್ನಲೆಯಲ್ಲಿ ರೈತರು ವ್ಯವಸಾಯಕ್ಕೆ ಬಳಸಿಕೊಂಡಿದ್ದ ಹನಿನೀರಾವರಿ ಪೈಪಗಳು ಸಲಕರಣೆಗಳು,ಬೊರ್ ವೆಲ್ ಕೊರೆಸಿದವರು ಬೊರ್ ನಲ್ಲಿ ಇಳಿಸಿದ್ದ ಲೊಹದ ಪೈಪಗಳು ಕೆಬಲ್ ಗಳನ್ನು ಟ್ರ್ಯಾಕ್ಟರ್ ಗೆ ತುಂಬಿಸಿಕೊಂಡು ಹೋಗುತ್ತಿದ್ದರು.
ಮದ್ಯರಾತ್ರಿ ನಡೆದ ತೆರವು ಕಾರ್ಯಚರಣೆಯಲ್ಲಿ ಕೋಲಾರ ಜಿಲ್ಲಾ ಉಪ ಅರಣ್ಯಾಧಿಕಾರಿ ಸುಮಂತ್,ಶ್ರೀನಿವಾಸಪುರ ರೇಂಜ್ ಫಾರೆಸ್ಟರ್ ಮಹೇಶ್,ಶ್ರೀನಿವಾಸಪುರ ಉಪ ವಲಯದ ಅರಣ್ಯಾಧಿಕಾರಿಗಳಾದ ಶ್ರೀನಾಥ್,ಅನಿಲ್ ಕುಮಾರ್,ನವೀನ್,ಮಂಜುನಾಥ್ ಸೇರಿದಂತೆ 100 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗು ಪೋಲಿಸ್ ಸಿಬ್ಬಂದಿ ರಕ್ಷಣೆಯಲ್ಲಿ ಪಾಲ್ಗೋಂಡಿದ್ದರು, ಕಾರ್ಯಚರಣೆ ನಂತರ ಯಾವುದೆ ಅಹಿತಕರ ಘಟನೆಗೆ ಅವಕಾಶ ಇಲ್ಲದಂತೆ ಸ್ಥಳದಲ್ಲಿ ಜಿಲ್ಲಾ ಪೋಲಿಸ್ ಸಶಸ್ತ್ರ ಪಡೆಯನ್ನು ನಿಯೋಜಿಸಲಾಗಿದೆ.