ಶ್ರೀನಿವಾಸಪುರ:ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಡೆಗಣಿಸಿದರೆ ಪಕ್ಷ ಮೂಲೆಗುಂಪಾಗುತ್ತದೆ ಆಂಧ್ರದಲ್ಲಿ ಕಾಂಗ್ರೆಸ್ ಗೆ ಬಂದಿರುವ ಗತಿ ಬರುತ್ತದೆ ಎಂದು ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಈ ಮಾತನ್ನು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಪರವಾಗಿ ಸಂದೇಶ ರವಾನಿಸಿದ್ದಾರೆ.
ಕುರುಬಸಮಾಜದವರ ಬೆಂಬಲ ಕೋರಿ ಕನಕ ಭವನದಲ್ಲಿ ಶ್ರೀನಿವಾಸಪುರ ತಾಲೂಕಿನ ಕುರುಬ ಸಮುದಾಯದವರ ಸಭೆ ನಡೆಸಿ ಮಾತನಾಡಿದ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಸೈಡ್ ಲೈನ್ ಮಾಡಿ ಅವರ ಸ್ಥಾನಕ್ಕೆ ನಾನು ಬರಬಹುದು ಎಂಬ ಲೆಕ್ಕಾಚಾರ ಯಾರಿಗಾದರೂ ಇದ್ದರೆ ಕಾಂಗ್ರೆಸ್ ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದರು.
ಕೆಲವರು ಸಿದ್ದರಾಮಯ್ಯ ಅವರ ಬೆನ್ನಮೇಲೆ ಕೈಹಾಕಿಕೊಂಡು ಕರೆದುಕೊಂಡು ಹೋಗಿ ವರುಣಾದಲ್ಲಿ ನಿಲ್ಲಿಸಿ ಸೋಲಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು, ಇವತ್ತು ರಾಹುಲ್ ಗಾಂಧಿಗೆ ಸರಿಸಮನಾಗಿ ವಿರೋಧ ಪಕ್ಷಗಳನ್ನು ಎದರಿಸುವ ತಾಕತ್ತು ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ ಇದ್ದು ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ದಿಸಿದರೆ ಹಿಂದುಳಿದ ಅಲ್ಪಸಂಖ್ಯಾತ ಪರಿಶಿಷ್ಟರು ಮತ ನೀಡಿ ಗೆಲ್ಲಿಸುತ್ತಾರೆ ಇದನ್ನು ಸಹಿಸದ ಕೆಲವರು ಹೊಟ್ಟೆಕಿಚ್ಚು ಬಿಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ನನ್ನ ಮೆಲೆ ಅಭಿಮಾನ ಇಟ್ಟು ಕುರುಬಸಮಾಜ ಒಗ್ಗಾಟ್ಟಾಗಿ ನನ್ನನ್ನು ಬೆಂಬಲಿಸುವಂತೆ ಕೋರಿದರು ಸಭೆಯಲ್ಲಿ ಕುರುಬ ಸಂಘದ ತಾಲೂಕು ಅಧ್ಯಕ್ಷ ಎಂ.ವೇಮಣ್ಣ,ಮಾಜಿ ಅಧ್ಯಕ್ಷೆ ಕಶೇಟ್ಟಳ್ಳಿ ಸುಜಾತಮ್ಮ,ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಯಲ್ದೂರು ಗೌರಮ್ಮ,ಗಂಗಾಧರ್,ಪಾತಮುತ್ತಕಪಲ್ಲಿಅಂಜನೇಯಗೌಡ, ಕೋಲಾರ ಸೋಮಶೇಖರ್, ವೆಂಕಟರಮಣಪ್ಪ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Friday, April 24



