ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ಅದೇಷ್ಟೊ ಗ್ರಾಮೀಣ ಕುಟುಂಬಗಳ ಮಕ್ಕಳಿಗೆ ಆಸರೆ ನೀಡಿ ಅನ್ನ ಶಿಕ್ಷಣ ನೀಡಿದ ಅವರು ಶ್ರೀ ಭೈರವೇಶ್ವರ ಶಿಕ್ಷಣ ಸಂಸ್ಥೆ ಸ್ಥಾಪಕರಾಗಿದ್ದ ಖ್ಯಾತ ಶಿಕ್ಷಣ ತಜ್ಞ,ಪರಿಸರ ಪ್ರೇಮಿ ಶ್ರೀನಿವಾಸಪುರ ತಾಲೂಕಿನಲ್ಲಿ ತ್ರಿದಾಹೋಹಿ ಪರಂಪರೆ ಹುಟ್ಟುಹಾಕಿದ್ದ ಇಮರಕುಂಟ ಶ್ರೀರಾಮರೆಡ್ಡಿ(84)ಮೇಷ್ಟ್ರು ಇನ್ನಿಲ್ಲ.ಹಲವಾರು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ತಡ ಸಂಜೆ ಹೃದಾಘಾತಕ್ಕೆ ಒಳಗಾಗಿದ್ದಾರೆ.
ಇಮರಕುಂಟ ಮೇಷ್ಟ್ರು ಎಂದು ಗ್ರಾಮೀಣ ಭಾಗದಲ್ಲಿ ಹೆಸರು ವಾಸಿಯಾಗಿದ್ದ ಶ್ರೀರಾಮರೆಡ್ಡಿ ಪತ್ನಿ ನಂಜಮ್ಮ,ಇಬ್ಬರು ಪುತ್ರರು ಒರ್ವ ಪುತ್ರಿ ಹಾಗು ದೊಡ್ಡ ಸಂಖ್ಯೆಯಲ್ಲಿ ಶಿಷ್ಯ ವರ್ಗವನ್ನು ಅಗಲಿದ್ದಾರೆ.
ಕೋಲಾರದ ಕಲಾಂ ಅಂತಲೆ ಖ್ಯಾತರಾಗಿದ್ದ ಶ್ರೀರಾಮರೆಡ್ಡಿ ಹಲವಾರು ಅವಿಷ್ಕಾರಗಳಿಗೆ ರೂಪ ಕೊಟ್ಟಂತ ಮಹಾನ್ ವ್ಯಕ್ತಿ,ಸರ್ಕಾರಿ ಸೇವೆಯಲ್ಲಿ ಶಿಕ್ಷಕರಾಗಿ ಮೂರುವರೆ ದಶಕಗಳ ಸೇವೆ ಸಲ್ಲಿಸಿ ನಿವೃತ್ತರಾದ ಅವರು 24 ವರ್ಷಗಳ ಹಿಂದೆ ಭೈರವೇಶ್ವರ ಶಿಕ್ಷಣ ಸಂಸ್ಥೆ ಕಟ್ಟಿ ಬಾನೆತ್ತರಕ್ಕೆ ಬೆಳೆಸಿ ಜಗತ್ತೆ ನನ್ನ ಕುಟುಂಬ ಎಂದು ಕುಟುಂಬವನ್ನೆ ಮರೆತು ಶಿಕ್ಷಣ ಸಂಸ್ಥೆಯಲ್ಲೆ ಜೀವನ ಕಳೆಯುತ್ತಿದ್ದರು,ಶೈಕ್ಷಣಿಕ ಕ್ಷೇತ್ರವೆ ನನ್ನ ಬದುಕು ಎಂದು ಶಿಕ್ಷಕರಾಗಿ ಸುಮಾರು 55 ವರ್ಷಗಳ ಕಾಲ ಮಕ್ಕಳಿಗೆ ಪಾಠ ಹೇಳಿಕೊಡುತ್ತ ಮಕ್ಕಳೊಂದಿಗೆ ಮಗುವಾಗಿ ವಿದ್ಯಾರ್ಥಿಗಳ ಬದುಕಿಗೆ ಅಗತ್ಯ ಕೌಶಲ್ಯಗಳನ್ನು ಕಲಿಸುತ್ತಿದ್ದರು ಇವರಿಂದ ಪ್ರೇರಿಪಿತರಾದ ಹಲವಾರು ವಿದ್ಯಾರ್ಥಿಗಳು ಸ್ವಯಂ ಉದ್ಯೋಗಿಗಳಾಗಿ ಸಣ್ಣ-ಪುಟ್ಟ ಉದ್ಯಮಗಳನ್ನು ನಡೆಸುತ್ತಿದ್ದಾರೆ.ಹಲವಾರು ಮಂದಿ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ನೆಲೆಸಿದ್ದಾರೆ.
ಪ್ರಶಸ್ತಿಗಳ ಮಹಾಪೂರ
ಸರ್ಕಾರಿ ಶಿಕ್ಷಕರಾಗಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ,ಬಸವರಾಜು ಪ್ರತಿಷ್ಠಾನದ ಪ್ರಶಸ್ತಿ,ವೃಕ್ಷ ಮಿತ್ರ ಪ್ರಶಸ್ತಿ,ಶ್ರೀ ಆದಿಚುಂಚನಗಿರಿ ಕ್ಷೇತ್ರ ಕೊಡಮಾಡುವ ಚುಂಚಶ್ರೀ ಪ್ರಶಸ್ತಿ ಸೇರಿದಂತೆ ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ಅವರು ಇನ್ನು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.ಶ್ರೀನಿವಾಸಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27