ನ್ಯೂಜ್ ಡೆಸ್ಕ್:ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಪ್ರಾರಂಭವಾಗಿದ್ದು ದೇಶಾದ್ಯಂತ ಜನತೆ ರಾಮ ನಾಮ ಜಪ ಮಾಡುತ್ತಿದ್ದಾರೆ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ಅಂದ್ರೆ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಭರದ ಸಿದ್ಧತೆಗಳು ಶರವೇಗದಲ್ಲಿ ಸಾಗುತ್ತಿದೆ,ಶತ-ಶತ ವರ್ಷಗಳ ನಂತರ ಬಾಲ ರಾಮ ಮತ್ತೊಮ್ಮೆ ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾಗುವ ಸಮಯ ಹತ್ತಿರ ಬಂದಿದೆ.ಜನವರಿ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠೆ ನೆರವೇರಲಿದೆ.ಬಾಲರಾಮನ ಕೆತ್ತನೆಗೆ ಬಳಸಿದ ಕಲ್ಲನ್ನು ಮೈಸೂರು ಸಮೀಪದಲ್ಲಿ ಸಿಕ್ಕಿದ ಕೃಷ್ಣ ಶಿಲೆ ಎಂಬುದಾದರೆ ಅದು ಬಾಲ ಶ್ರೀರಾಮನಮೂರ್ತಿ ಕೆತ್ತನೆಗೆ ಬಳಸಲು ಅರ್ಹವಾಗಿದೆ ಎಂದು ಕೋಲಾರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್(NIRM) ಸಂಸ್ಥೆಯ ತಜ್ಞರು ದೃಡಿಕರಿಸಿದ್ದಾರಂತೆ.ಈ ಸಂಸ್ಥೆಯ ನೊಂದಾಯಿತ ಕಚೇರಿ ಹಾಗು ಪರಿಕ್ಷಾ ಕೇಂದ್ರ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಚಾಂಪಿಯನ್ ರಿಫ್ ನ ದೊಡ್ಡವಲಗಮಾಧಿ ಪ್ರದೇಶದಲ್ಲಿದೆ.ಇದು ಭಾರತ ಸರ್ಕಾರದ ಗಣಿ ಸಚಿವಾಲಯದ ಅಡಿಯಲ್ಲಿ ಇರುವ ಸ್ವಾಯತ್ತ ಸಂಶೋಧನಾ ಸಂಸ್ಥೆಯಾಗಿದೆ.
ಕರ್ನಾಟಕದ ಕಲ್ಲುಗಳನ್ನು ಬಳಸಿ ಮೈಸೂರಿನ ಶಿಲ್ಪಿ ಅರುಣ್ ವಿಗ್ರಹ ಕೆತ್ತನೆ ಮಾಡಿದ್ದಾರೆ ಅನ್ನುವುದು ಇನ್ನೂಂದು ವಿಶೇಷ. ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿದ ಕಲ್ಲು ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದಿಂದ ತರಲಾಗಿದ್ದು,ಕೆಲ ತಿಂಗಳುಗಳ ಹಿಂದೆ ಅಯೋಧ್ಯೆಯ ಟ್ರಸ್ಟಿಗಳು ಮೈಸೂರಿಗೆ ಬಂದು ಕಲ್ಲನ್ನು ನಾನಾ ರೀತಿಯಲ್ಲಿ ಪರೀಕ್ಷೆ ಮಾಡಿಸಿದ್ದು ನಂತರ ಕೋಲಾರದ ಕೆಜಿಎಫ್ ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಸಮ್ (NIRM) ಸಂಸ್ಥೆ ವತಿಯಿಂದ ಪರಿಕ್ಷೆಗೆ ಒಳಪಡಿಸಿ ಸಂಸ್ಥೆ ದೃಡಿಕರಿಸಿದ ನಂತರ ಅಯೋಧ್ಯೆಗೆ ತರಸಿಕೊಂಡಿದ್ದಾರೆ. ಸುಮಾರು ಹತ್ತು ಅಡಿ ಆಳದಲ್ಲಿ ಜಮೀನಿನಲ್ಲಿ ಕಲ್ಲು ಸಿಕ್ಕಿದ್ದು ಜಮೀನಿನ ಮಾಲಿಕ ಮಾಲಿಕ ರಾಮದಾಸ್ ಅನ್ನುವುದು ಕಾಕಾತಾಳಿಯ. ಕೃಷ್ಣ ಶಿಲೆ ಎಂದು ಕರೆಯಲಾಗುವ ಕಪ್ಪುಕಲ್ಲಿನಲ್ಲಿ ಆಸಿಡ್, ವಾಟರ್, ಫೈರ್, ರಸ್ಟ್ ಪ್ರೊಫ್ ನಿಂದ ಕೃಷ್ಣ ಶಿಲೆ ಕೂಡಿದೆ ಎಂದು ಮೂರ್ತಿ ಕೆತ್ತನೆಯ ಶಿಲ್ಪಿಗಳು ಮಾಹಿತಿ ನೀಡಿದ್ದಾರೆ.ಮೂರು ಪ್ರತ್ಯೇಕ ಕಲ್ಲುಗಳಲ್ಲಿ ಬಾಲರಾಮಮೂರ್ತಿ ಮೈತಳೆದಿದ್ದಾನೆ.
ಮೈಸೂರಿನ ಶಿಲ್ಪಿಯ ಕಲ್ಪನೆಯಲ್ಲಿ ಬಾಲರಾಮನಮೂರ್ತಿ
ಮೈಸೂರಿನ ಪ್ರಸಿದ್ಧ ಶಿಲ್ಪಿಗಳ ಐತಿಹಾಸಿಕ ಕುಟುಂಬದ ಹಿನ್ನೆಲೆ ಇರುವ ಅರುಣ್ ಯೋಗಿರಾಜ್ ಪ್ರಸ್ತುತ ದೇಶದ ಬಹುಬೇಡಿಕೆಯ ಶಿಲ್ಪಿ.ಶಿಲ್ಪ ಕಲಾವಿದರ ಕುಟುಂಬದ ಐದನೇ ತಲೆಮಾರಿನ ಪೀಳಿಗೆಯ ಎಂ.ಬಿ.ಎ ಪಧವಿದರ ಅರುಣ್ ಯೋಗಿರಾಜ್ ಪರಿಕಲ್ಪನೆಯಲ್ಲಿ ಕೆತ್ತಯಾಗಿರುವ ಬಾಲರಾಮನ ವಿಗ್ರಹವನ್ನು ಅಯೋಧ್ಯೆ ರಾಮಮಂದಿರ ಸಮಿತಿಯು ಆಯ್ಕೆ ಮಾಡಿದೆ.ಹೊಸ ವರ್ಷದ ದಿನವೇ ಆಯೋಧ್ಯೆ ರಾಮಮಂದಿರ ಸಮಿತಿಯು ಖುದ್ದು ಅರುಣ್ ಯೋಗಿರಾಜ್ ಅವರಿಗೆ ಕರೆ ಮಾಡಿ ನೀವು ರೂಪಿಸಿದ ವಿಗ್ರಹವನ್ನೇ ಆಯ್ಕೆ ಮಾಡಲಾಗಿದೆ ಎನ್ನುವ ಸಂದೇಶವನ್ನು ರವಾನಿಸಿದ್ದಾರಂತೆ ಇದನ್ನು ಖುದ್ದು ಅರುಣ್ ಯೋಗಿರಾಜ್ ಅವರೇ ಹಂಚಿಕೊಂಡಿದ್ದಾರೆ.ಮೂವರಲ್ಲಿ ಒಬ್ಬರದ್ದು ಮೂರ್ತಿ ಅಂತಿಮವಾಗಿದ್ದು ಕಳೆದ ವರ್ಷ ರಾಮನವಿಗ್ರಹ ತಯಾರಿಸಲು ದೇಶದ ಹಲವಾರು ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಕೊನೆಗೆ ಮೂವರನ್ನು ಗುರುತಿಸಿದ್ದು ಕರ್ನಾಟಕದ ಇಬ್ಬರು ಹಾಗೂ ರಾಜಸ್ಥಾನದ ಒಬ್ಬರು ಕಲಾವಿದರ ಹೆಸರು ಅಂತಿಮಗೊಳಿಸಲಾಗಿತ್ತು ಮೂವರಲ್ಲಿ ಅರುಣ್ ಯೋಗಿರಾಜ್, ಜಿ.ಎಸ್.ಭಟ್ ಕರ್ನಾಟಕದವರಾದರೆ,ಸಂಜಯ್ ಪಾಂಡೆ ಎನ್ನುವ ಕಲಾವಿದ ರಾಜಸ್ಥಾನದವರು. ಈ ಮೂವರು ತಾವು ಕೆತ್ತಿದ್ದ ಮೂರ್ತಿಗಳನ್ನು ತೆಗೆದುಕೊಂಡು ಹೋಗಿದ್ದರು. ಇದರಲ್ಲಿ ಅತ್ಯುತ್ತಮ ಎನ್ನುವ ರೀತಿಯಲ್ಲಿರುವ ಅರುಣ್ ರೂಪಿಸಿದ 25 ಅಡಿ ಎತ್ತರದ ವಿಗ್ರಹವನ್ನು ಅಂತಿಮಗೊಳಿಸಲಾಗಿದೆ. ಈಗಾಗಲೇ ಅರುಣ್ ಯೋಗಿ ರಾಜ್ ಅವರು ಕೆಲ ದಿನಗಳ ಹಿಂದೆ ರೂಪಿಸಿದ್ದ ಎರಡು ಪ್ರಮುಖ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಉತ್ತರ ಭಾರತದ ಪ್ರಮುಖ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೊಂಡಿವೆ. ಉತ್ತರಾಖಂಡದ ಕೇದಾರನಾಥದಲ್ಲಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ವಿಗ್ರಹ ಹಾಗೂ ದೆಹಲಿ ಇಂಡಿಯಾ ಗೇಟ್ ನಲ್ಲಿ ಭಾರತ ಸರ್ಕಾರ ಸ್ಥಾಪಿಸಿರುವ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಏಕಶಿಲೆಯ ಕಪ್ಪು ಗ್ರಾನೈಟ್ ಕಲ್ಲಿನ ಶಿಲ್ಪ ಕೂಡ ಅರುಣ್ ಯೋಗಿರಾಜ್ ನಿರ್ಮಿಸಿರುವುದು ಎಂಬುದು ಹೆಮ್ಮೆ.
ಎಂ.ಬಿ.ಎ ಪಧವಿದರ ಶಿಲ್ಪಿಯಾದ ಕಥೆ
ಅರುಣ್ ಅವರ ಕೈಚಳಕದಲ್ಲಿ ಸಾಧಕರ ಪ್ರತಿಮೆಗಳು ತಲೆ ಎತ್ತಬೇಕು ಎಂಬ ಬೇಡಿಕೆಯಿಂದಾಗಿ ದೇಶದ ವಿವಿಧ ರಾಜ್ಯಗಳ ಜನರು ಅರುಣ್ ಅವರನ್ನು ಹುಡುಕಿಕೊಂಡು ಬರುತ್ತಿದ್ದಾರೆ.ತನಗೆ ಸಿಕ್ಕ ಅವಕಾಶಗಳ ಸಮರ್ಥವಾಗಿ ಬಳಸಿಕೊಂಡು ಪ್ರವರ್ಧಮಾನಕ್ಕೆ ಬರುತ್ತಿರುವ ಅರುಣ್ ಉದ್ಯಮಶೀಲ. ಹಾಗಾಗಿ ದೇಶದ ನಾನಾ ಕಡೆಗಳಿಂದ ಇವರ ಕಲೆಗೆ ಬೇಡಿಕೆ ಹೆಚ್ಚು ಸೃಷ್ಟಿಯಾಗಿದೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅರುಣ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಅರುಣ್ ತಂದೆ ಯೋಗಿರಾಜ್ ಕೂಡ ನುರಿತ ಶಿಲ್ಪಿ. ಕೆಲ ದಿನಗಳ ಹಿಂದೆಯಷ್ಟೇ ಅವರು ಮೃತಪಟ್ಟಿದ್ದು,ಅವರ ಅಜ್ಜ ಬಸವಣ್ಣ ಶಿಲ್ಪಿಯಾಗಿದ್ದು, ಮೈಸೂರು ರಾಜರಿಂದ ಪೋಷಕರಾಗಿದ್ದರು.ಇಂತಹ ಕುಟುಂಬದ ಅರುಣ್ ಯೋಗಿರಾಜ್ ಬಾಲ್ಯದಿಂದಲೂ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದು ಎಂಬಿಎ ಮುಗಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಆದರೆ ಅವರಲ್ಲಿನ ಪ್ರತಿಭೆ ಶಿಲ್ಪಕಲೆಯ ವೃತ್ತಿ ಕೌಶಲ್ಯಕ್ಕೆ ತುಡಿಯುತ್ತಿದ್ದ ಕಾರಣದಿಂದ ಮಾಡುತ್ತಿದ್ದ ಕೆಲಸ ಬಿಟ್ಟು 2008ರಿಂದ ಕೆತ್ತನೆ ವೃತ್ತಿ ಮುಂದುವರಿಸಿ ಹದಿನೈದು ವರ್ಷದಲ್ಲಿ ಹೆಮ್ಮೆಯ ಸಾಧನೆ ಮಾಡಿದ್ದಾರೆ.
Breaking News
- ಚಿಂತಾಮಣಿಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾಮಾತೆಗೆ ವಿಶೇಷ ಪೂಜೆ
- ಕೋಲಾರದಲ್ಲಿ ವಿಜಯದಶಮಿಯಂದು RSS ಬೃಹತ್ ಶಕ್ತಿ ಪ್ರದರ್ಶನ
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
Sunday, October 13