ಶ್ರೀನಿವಾಸಪುರ: ಬೋರ್ ವೆಲ್ ಕೇಬಲ್ ಕಳುವು ಮಾಡುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿದ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೋಣೂರು ಗ್ರಾಮದಲ್ಲಿ ನಡೆದಿದೆರೈತ ಅನಿಲ್ ಎನ್ನುವರ ತೋಟದಲ್ಲಿ ಕಳ್ಳರು ಕೇಬಲ್ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಗ್ರಾಮಸ್ತರು ಕಳ್ಳರನ್ನು ಹಿಡದಿದ್ದು ಕಳ್ಳರನ್ನು ಶ್ರೀನಿವಾಸಪುರ ಪಟ್ಟಣದ ಇಂದಿರಾನಗರದ ಮುಜಾಹಿದ್,ಇಂತಿಯಾಜ್ ಎಂದು ಹೇಳಲಾಗಿದ್ದು,ಕಳ್ಳರನ್ನು ಹಿಡಿದ ಗ್ರಾಮಸ್ಥರು ಅವರನ್ನು ಗ್ರಾಮದ ಬಸ್ ನಿಲ್ದಾಣದಲ್ಲಿ ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡುತ್ತಿದ್ದಾಗ ಗ್ರಾಮಕ್ಕೆ ಪೊಲೀಸರು ಆಗಮಿಸಿ ಕಳ್ಳರನ್ನು ಕಾನುನಾತ್ಮಕವಾಗಿ ತಮಗೆ ಒಪ್ಪಿಸುವಂತೆ ಹೇಳಿರುತ್ತಾರೆ ಇದಕ್ಕೆ ಒಪ್ಪದ ಗ್ರಾಮಸ್ಥರು ಈ ಹಿಂದೆ ಕೆಬಲ್ ಕದ್ದಿರುವ ಕಳ್ಳರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿರುವ ಆರೋಪ ಮಾಡಿ ಪೊಲೀಸರನ್ನು ಗ್ರಾಮಸ್ತರು ತರಾಟೆಗೆ ತೆಗೆದುಕೊಂಡಿರುತ್ತಾರೆ ಈ ಸಂದರ್ಭದಲ್ಲಿ ಪೋಲಿಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮುಕಿ ನಡೆಯುತ್ತದೆ ಹೆಚ್ಚುಸಂಖ್ಯೆಯಲ್ಲಿದ್ದ ಆಕ್ರೋಶಭರಿತ ಗ್ರಾಮಸ್ಥರು ಪೋಲಿಸರ ಜೀಪನ್ನು ಬಡಿದು ಸದ್ದುಮಾಡಿದಾಗ ಪೋಲಿಸರು ಗ್ರಾಮಸ್ಥರನ್ನು ಚದರಿಸುವ ಪ್ರಯತ್ನ ಮಾಡಿರುತ್ತಾರೆ ಈ ಸಂದರ್ಭದಲ್ಲಿ ಜನರ ಕೂಗಾಟದಿಂದ ಪರಿಸ್ಥಿತಿ…
Author: Srinivas_Murthy
ಶ್ರೀನಿವಾಸಪುರ: ಕೋಲಾರ ಹಾಲು ಒಕ್ಕೂಟದ ಶೀಬಿರದ ಕಚೇರಿ ನಿರ್ಮಾಣಕ್ಕೆ ನಿವೇಶನ ಖರೀದಿ ವಿಚಾರದಲ್ಲಿ ಯಾವುದೆ ಅವ್ಯವಹಾರ ಅಥವ ಅಕ್ರಮ ನಡೆದಿಲ್ಲ ಎಲ್ಲವೂ ನಿಯಮಾವಳಿಗಳಂತೆ ಕಾನೂನಾತ್ಮಕವಾಗಿ ಪಾರದರ್ಶಕತೆಯಿಂದ ನಡೆದಿದೆ ಎಂದು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಹನುಮೇಶ್ ಹೇಳಿದರು ಇಂದು ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿಕೋಲಾರ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಪಾಳ್ಯಂ ಭೈರಾರೆಡ್ದಿ ಆರೋಪಿಸಿರುವಂತೆ ಏನು ಅಕ್ರಮಗಳು ನಡೆದಿಲ್ಲ ಶೀಬಿರದ ಕಚೇರಿ ನಿರ್ಮಾಣಕ್ಕೆ ನಿವೇಶನ ಖರಿದಿಯಲ್ಲಿ ಎಲ್ಲವೂ ಸರ್ಕಾರಿ ನಿಯಮಾವಳಿಗಳಂತೆ ಪಾರದರ್ಶಕತೆಯನ್ನು ಪಾಲನೆ ಮಾಡಿದ್ದು ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿ ಅನುಮೊದನೆ ಪಡೆದ ನಂತರ ೩೦೪೦ ಚದರಡಿಯ ನಿವೇಶನ ಖರೀದಿಗೆ ಅರ್ಹ ಮಾಲಿಕರಿಂದ ಅರ್ಜಿ ಅಹ್ವಾನಿಸಿ ಡಿಸೆಂಬರ್ ತಿಂಗಳಲ್ಲಿ ಪತ್ರಿಕಾ ಪ್ರಕಟನೆ ಹೊರಡಿಸಿದ್ದು ಅದರಂತೆ ನಿಗದಿತ ದಿನಾಂಕದ ಒಳಗೆ ಆಸಕ್ತ ಮಾಲಿಕರಿಂದ ಬಂದಂತ ಅರ್ಜಿಯನ್ನು ಪರಿಗಣಿಸಿ ದಾಖಲಾತಿಗಳನ್ನು ಕಾನೂನು ತಙ್ಞರಿಂದ ಪರಶೀಲನೆ ಮಾಡಿಸಿ ಸಂಬಂದಿಸಿದ ನಿವೇಶನಕ್ಕೆ ತಕರಾರು ಇದ್ದರೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಿಸಿದ್ದು ಯಾವುದೆ ಆಕ್ಷೇಪಗಳು…
ಶ್ರೀನಿವಾಸಪುರ: ಶ್ರೀನಿವಾಸಪುರ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲ ಜಯರಾಮೇಗೌಡ ಕಾರ್ಯದರ್ಶಿಯಾಗಿ ಪಿ.ಸಿ.ನಾರಯಣಸ್ವಾಮಿ ಆಯ್ಕೆಯಾಗಿರುತ್ತಾರೆ ಇಂದು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆ ನಡೆದು ಅಧ್ಯಕ್ಷ ಕಾರ್ಯದರ್ಶಿ ಹಾಗು ವಿವಿದ ಸ್ಥಾನಗಳಿಗೆ ಆಯ್ಕೆಯಾದರು.ಶ್ರೀನಿವಾಸಪುರ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಜಯರಾಮೇಗೌಡ,ಪ್ರಧಾನ ಕಾರ್ಯದರ್ಶಿ ಪಿ ಸಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ಟಿ ವಿ ನಾರಾಯಣಸ್ವಾಮಿ,ಖಜಾಂಚಿಯಾಗಿ ಜಿ.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜಯರಾಮೇಗೌಡ ಮಾತನಾಡಿ ಶ್ರೀನಿವಾಸಪುರ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ 5 ನೇ ಬಾರಿಗೆ ಆಯ್ಕೆಯಾಗಿರುತ್ತೇನೆ,ವಕೀಲರ ಸಮಸ್ಯೆಗಳಿಗೆ ಹಿರಿಯ ಹಾಗೂ ಕಿರಿಯರ ಸಲಹೆ ಸೂಚನೆಗಳನ್ನು ಪಡೆದು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇನೆ ಸಂಘವನ್ನು ಇನ್ನಷ್ಟು ಉತ್ತಮವಾಗಿ ಅಭಿವೃದ್ಧಿ ಮಾಡುವುದಾಗಿ ಹೇಳಿದ ಅವರು ನನ್ನ ಆಯ್ಕೆಗೆ ಸಹಕಾರ ನೀಡಿದ ವಕೀಲರ ಸಂಘದ ಸದಸ್ಯರಿಗೆ ಚಿರಋಣಿಯಾಗಿ ಇರುತ್ತೇನೆ ಎಂದರು.ಈ ಸಂದರ್ಭದಲ್ಲಿ ಹಿರಿಯ ವಕೀಲ ಕೊಡಿಚೆರವುನಾರಯಣಸ್ವಾಮಿ,ಶೆಟ್ಟಿಶ್ರೀನಿವಾಸ್,ಕೆ.ಶ್ರೀನಿವಾಸನ್ ಚಲಪತಿ,ಸೌಭಾಗ್ಯವತಿ,ಶ್ರೀನಿವಾಸಗೌಡ ಮುಂತಾದವರು ಇದ್ದರು.
ಶ್ರೀನಿವಾಸಪುರ:ಕೋಲಾರ ಹಾಲು ಒಕ್ಕೂಟದ ಶ್ರೀನಿವಾಸಪುರ ತಾಲೂಕು ನಿರ್ದೇಶಕ ಹನುಮೇಶ್ ಒಕ್ಕೂಟದ ಹೆಸರಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಿವೇಶನ ಖರೀದಿಸಿ ಒಕ್ಕೂಟಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಕೋಲಾರ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಪಾಳ್ಯಂಬೈರಾರೆಡ್ಡಿ ಆರೋಪಿಸಿದರು.ಅವರು ಇಂದು ಪಟ್ಟಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ ಶ್ರೀನಿವಾಸಪುರ ಪಟ್ಟಣದಲ್ಲಿರುವ ಹಾಲು ಒಕ್ಕೂಟದ ಶೀಭಿರ ಕಚೇರಿಗೆ ಕಟ್ಟಡ ಕಟ್ಟಿಸಲು ಎಂದು ಖಾಸಗಿ ವ್ಯಕ್ತಿಗಳಿಂದ ನಿವೇಶನ ಖರೀದಿಸಲು ಮುಂದಾಗಿ ಅದಕ್ಕೆ ದುಬಾರಿ ಲೆಕ್ಕ ತೊರಿಸಿ ಹಾಲು ಒಕ್ಕೂಟಕ್ಕೆ ದಾಖಲೆ ಸಲ್ಲಿಸಿದ್ದು ಇದರಲ್ಲಿ 30-40 ಲಕ್ಷ ರೂಪಾಯಿಗಳ ಹಣ ಲಪಟಾಯಿಸುವಂತ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.ಪಟ್ಟಣದ ಹೊರವಲಯದಲ್ಲಿ ಪಣಸಮಾಕನಹಳ್ಳಿ ಬಳಿ ಸುಮಾರು 10 ಎಕರೆ ಪ್ರದೇಶ ಹಾಗೆ ಸರ್ಕಾರಿ ಕಚೇರಿ ಕಟ್ಟಲು ಅಂದಾಜಿಸಿರುವ ಅಮಾನಿ ಕೆರೆ ಬಳಿ ಅಂದಾಜು 2 ಎಕರೆ ಜಾಗವನ್ನು ಸ್ಥಳೀಯ ಶಾಸಕರ ಸಹಕಾರದಿಂದ ಹಾಲು ಒಕ್ಕೂಟದ ಹೆಸರಿನಲ್ಲಿ ಮಂಜೂರಾಗಿದೆ ಇದರಲ್ಲಿ 10 ಎಕರೆ ಪ್ರದೇಶದಲ್ಲಿ ಹಾಲು ಒಕ್ಕೂಟದಿಂದ ಹಾಲಿನ ಪುಡಿ ತಯಾರಿಕ ಘಟಕ ನಿರ್ಮಾಣ…
ಶಿಡ್ಲಘಟ್ಟ:ನೂರು ದೇವಾಲಯಗಳನ್ನು ಕಟ್ಟುವ ಬದಲು ಹಳೆಯ ದೇವಾಲಯ ಜೀರ್ಣೋದ್ಧಾರ ಮಾಡುವುದು ಪುಣ್ಯದ ಕೆಲಸ ದೇವಾಲಯಗಳು ಗ್ರಾಮದ ಇತಿಹಾಸದ ಪ್ರತೀಕ. ಗ್ರಾಮಗಳ ದೇವಾಲಯಗಳನ್ನು ಪೂರ್ವಜರು ನಿರ್ಮಿಸಿ ದೇವತೆಗಳನ್ನು ಆರಾಧಿಸಿದ್ದ ಪರಂಪರೆ ನಮ್ಮದು ಅದನ್ನು ಮುಂದುವರಿಸಿಕೊಂಡು ಹೋಗಲು ಇಂದಿನ ಪೀಳಿಗೆ ಮುಂದಾಗಬೇಕು ಎಂದು ಶಿಡ್ಲಘಟ್ಟ ಪುರಸಭೆ ಮಾಜಿ ಸದಸ್ಯ ಹಾಗು ಅಯೋದ್ಯನಗರದ ನಾಮಧಾರಿ ನಗರ್ತ ಸಮಾಜದ ಮುಖಂಡ ಕೆ.ಎಂ.ವಿನಾಯಕ್ ಹೇಳಿದರು.ಕೆ.ಎಂ.ವಿನಾಯಕ ಅವರ ಪಟ್ಟಣದ ಪ್ರತಿಷ್ಠಿತ ಕೊಪರಪ್ಪನವರ ಕುಟುಂಬದ ವತಿಯಿಂದ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹಂಡಿಗನಾಳ ಬಳಿಯ ಶಿಲೇಮಾಕನಹಳ್ಳಿಯಲ್ಲಿ ನೂರಾರು ವರ್ಷಗಳ ಪುರಾತನವಾದ ಶ್ರೀಈರಣ್ಣಸ್ವಾಮಿ ಮತ್ತು ಅಕ್ಕಯ್ಯಮ್ಮ ಹಾಗೂ ತಿಮ್ಮಕ್ಕದೇವಿ ದೇವತೆಗಳ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಕೊಪ್ಪರನವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.ಚಿಕ್ಕರಾಜಪ್ಪನವರಕ್ಯಾಶಪ್ಪ ಅವರ ಕೆ.ರತ್ನಪ್ಪ ಮತ್ತು ಕೃಷ್ಣಪ್ಪ ನವರ ತೋಟದಲ್ಲಿನ ಪುರಾತನವಾಗಿದ್ದ ಶ್ರೀಈರಣ್ಣಸ್ವಾಮಿ ಮತ್ತು ಅಕ್ಕಯ್ಯಮ್ಮ ಹಾಗೂ ತಿಮ್ಮಕ್ಕದೇವಿ ದೇವತೆಗಳ ದೇವಾಲಯ ಜೀರ್ಣೋದ್ಧಾರ ಮಾಡಿ ಲೋಕಾರ್ಪಾಣೆ ಮಾಡಲಾಯಿತು ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮಗಳಲ್ಲಿ ದೇವಾಲಯ ಜೀರ್ಣೋದ್ಧಾರ,ವಿಮಾನ ಗೋಪುರ,ಕಳಶ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವವನ್ನು…
ಗೌವನಪಲ್ಲಿಯಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಪ್ರಭಾವಿ ಅಲ್ಪಸಂಖ್ಯಾತ ಮುಖಂಡ ಭಕ್ಷುಸಾಬ್ ಕಾಂಗ್ರೆಸ್ ಸೇರ್ಪಡೆ ರಮೇಶ್ ಕುಮಾರ್ ಹ್ಯಾಟ್ರಿಕ್ ಗೆಲವಿಗೆ ಸಹಕರಿಸಿ ಜಮೀರ್ ಮನವಿ ಶ್ರೀನಿವಾಸಪುರ:ಕುಮಾರಸ್ವಾಮಿ,ಬೊಮ್ಮಾಯಿ ಬಿಜೆಪಿ ಕುರಿತಾಗಿ ನಾನು ಮಾತನಾಡಲ್ಲ ಅವರ ಬಗ್ಗೆ ಮಾತನಾಡಿದಷ್ಟು ವೇಸ್ಟ್ ಅವರನ್ನು ಬಿಟ್ಟು ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ತರುವ ಬಗ್ಗೆ ಮಾತನಾಡೋಣ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಕ್ಷದ ಶಾಸಕಾಂಗ ಪಕ್ಷದ ನಿಯಾಮವಳಿಗಳಂತೆ ಶಿವಕುಮಾರ್ ಅಥಾವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಆದರೆ ದೇಶಾದ್ಯಂತ ಹಾಗು ರಾಜ್ಯದಲ್ಲಿ ಜನತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಿದ್ದಾರೆ ಅದನ್ನು ನಾವ್ಯಾರು ತಡೆಯಲು ಸಾಧ್ಯವಾಗಿವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು ಅವರು ಬುಧವಾರ ಶ್ರೀನಿವಾಸಪುರ ತಾಲೂಕಿನ ಗೌವನಿಪಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಜೋಡೊ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತೆಲಗು ಭಾಷೆಯಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಭಾವನಾತ್ಮಕವಾದ ಭಾಷಣ ಮಾಡಿದ ರಮೇಶ್…
ಶ್ರೀನಿವಾಸಪುರ: ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿ ಸಮಾಜದಲ್ಲಿ ಗುರುತಿಸಕೊಳ್ಳಬೇಕಾದ ಅನಿವಾರ್ಯತೆ ಇದ್ದು ಇದಕ್ಕಾಗಿ ಸಣ್ಣ ಸಮುದಾಯಗಳಲ್ಲಿನ ಆಂತರಿಕ ಭಿನ್ನಭಿಪ್ರಾಯಗಳನ್ನು ಬದಿಗೊತ್ತಿ ಸಮಾಜದಲ್ಲಿ ವಿಭಿನ್ನರಾಗಿ ಗೌರವಿತರಾಗಿ ಗುರುತಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗು ನಾಮಧಾರಿ ಶೆಟ್ರ ಸಮುದಾಯದ ಹಿರಿಯ ಮುಖಂಡ ಇಂದಿರಾಭವನ್ ರಾಜಣ್ಣ ಕರೆ ಇತ್ತರು ಅವರು ತಾಲೂಕಿನ ಅರಿಕೆರೆ ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಅವರಣದಲ್ಲಿ ಅಯೋದ್ಯ ನಗರ ನಾಮಧಾರಿ ಶೆಟ್ರು ಸಮಾಜ ಆಯೋಜಿಸಿದ್ದ 2021-22 ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ವಾತಂತ್ರ‍್ಯ ಹೋರಾಟದಲ್ಲಿ ನಾಯಕತ್ವದ ಮುಂಚೂಣಿಯಲ್ಲಿದ್ದ ನಮ್ಮ ಸಮುದಾಯ ಜಾತಿ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಇದೊಂದು ದುರಂತ ಎಂದ ಅವರು ತೀರಾ ಹಿಂದುಳಿದ ಅತ್ಯಂತ ಚಿಕ್ಕ ಸಮುದಾಯವಾಗಿರುವ ನಮ್ಮ ಸಮಾಜದ ಬಂಧುಗಳು ಇವತ್ತಿನ ವ್ಯವಸ್ಥೆಯಲ್ಲಿ ಕೂಲಿ ಹಾಗು ಕೃಷಿ ಕಾರ್ಮಿಕರಾಗಿ ಸಣ್ಣ ಪುಟ್ಟ ಗೂಡಂಗಡಿಗಳನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ ನಮ್ಮ ಸಮುದಾಯದಲ್ಲಿ ಯಾರು ಸರ್ಕಾರದ ಉನ್ನತ ಸ್ಥಾನಗಳನ್ನು ಅಲಂಕರಿಸಿಲ್ಲ ಅದು…
ಶ್ರೀನಿವಾಸಪುರ: ರಥಸಪ್ತಮಿ ದಿನದಂದು ಸೂರ್ಯೋದಯಕ್ಕೂ ಮುನ್ನ ಶೂಚಿರಭೂತರಾಗಿ ಸೂರ್ಯ ನಮಸ್ಕಾರ ಮಾಡಿದರೆ ಮಾನಸಿಕ ನೆಮ್ಮದಿ ಮಾನಸಿಕ ದೈಹಿಕ ಸಮತೋಲನ ವೃದ್ಧಿಯಾಗುತ್ತದೆ ಕಾಯಿಲೆಗಳಿಂದ ದೂರವಾಗಿರುತ್ತಾರೆ ಎಂದು ಯೋಗಗುರು ಚೌಡಪ್ಪ ಹೇಳಿದರು.ಅವರು ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿನ ಯೋಗ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದರು.ಸೂರ್ಯ ಭಗವಾನನ ಜನುದಿನವಾಗಿ ರಥಸಪ್ತಮಿಯನ್ನು ಆಚರಿಸುವುದು ನಮ್ಮ ಸಂಪ್ರದಾಯ ಸಂಕ್ರಾಂತಿಗೆ ದಕ್ಷಿಣಾಯನದಿಂದ ಉತ್ತರಾಯಣ ಕಡೆ ಪ್ರಯಾಣಿಸುವ ಸೂರ್ಯ ಸಂಪೂರ್ಣ ಉತ್ತರ ದಿಕ್ಕಿಗೆ ತಿರುಗುತ್ತಾನೆ. ಕೊಟ್ಯಾನು ಕೋಟಿ ದೇವತೆಗಳು ಸೂರ್ಯನ ಪತ ಸಂಚಲನಕ್ಕೆ ಸಾಕ್ಷೀಭೂತರಾಗಿರುತ್ತಾರೆಂದು ಪ್ರಕೃತಿ ಪರಂಪರೆ ಸಾರುತ್ತದೆ.ಪತ ಸಂಚಲನ ಬದಲಾವಣೆಯಿಂದ ಕೇವಲ ಆಧ್ಯಾತ್ಮಿಕವಾದವಷ್ಟೆ ಅಲ್ಲ ಪ್ರಾಕೃತಿಕವಾಗಿ ಪರಿಸರಸದ ಮೇಲು ಬದಲಾವಣೆ ಕಾಣಬಹುದಾಗಿದೆ ಸೂರ್ಯನ ಪ್ರಖರತೆ ಹೆಚ್ಚುತ್ತದೆ ಮರಗಿಡ ಸಸ್ಯ ಶ್ಯಾಮಲದ ಮೇಲೆ ಪರಿಣಾಮ ಬೀರುತ್ತದೆ ಪ್ರಕೃತಿಯಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಕಾಣಸಿಗುತ್ತದೆ ಜೊತೆಗೆ ಮನುಷ್ಯರಿಗೆ ದೈಹಿಕ ಕಾಯಿಲೆಗಳು ದೂರವಾಗಲು ಸೂರ್ಯಕಿರಣಗಳು ಶಕ್ತಿ ನೀಡುತ್ತದೆ. ಬೀಜ ಮಂತ್ರಗಳೊಂದಿಗೆ…
ಶ್ರೀನಿವಾಸಪುರ:ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಬಯಕೆ ನನಗೂ ಇದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಪರಿಷತ್ ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ YANಹೊಸದಾಗಿ ಬಾಂಬ್ ಸಿಡಿಸಿದ್ದಾರೆ. ಅವರು ತಾಲೂಕಿನಲ್ಲಿ ನಡೆದಂತ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೋಂಡ ನಂತರ ತಮ್ಮ ಸ್ವಗ್ರಾಮ ಯಚ್ಚನಹಳ್ಳಿಯ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ಅಭ್ಯರ್ಥಿಯಾಗುವ ಬಯಕೆ ವ್ಯಕ್ತಪಡಿಸಿದರು, ನಾನೇನು ರಾಜಕೀಯ ಸನ್ಯಾಸಿಯಲ್ಲಾ ಎಂದ ಅವರು ಭಾರತೀಯ ಜನತಾ ಪಕ್ಷ, ಪ್ರಾದೇಶಿಕ ಪಕ್ಷ ಅಲ್ಲ ರಾಷ್ಟ್ರೀಯ ಪಕ್ಷ, ಪಕ್ಷದ ಸಿದ್ದಾಂತ ಇರುವಂತವರನ್ನು ಗುರುತಿಸಿ ಟಿಕೆಟ್ ಕೋಡಲಾಗುತ್ತದೆ, ಕುಟುಂಬ ರಾಜಕಾರಣದ ಪ್ರಾದೇಶಿಕ ಪಕ್ಷಗಳಾದರೆ ಅಪ್ಪ ಮಕ್ಕಳು ಕೂತು ಸೇರಿ ಟಿಕೆಟ್ ಯಾರಿಗೆ ಕೊಡಬೇಕು ಅಂತ ನಿರ್ಧಾರ ಮಾಡುತ್ತಾರೆ ಇಲ್ಲಿ ಅದೇಲ್ಲ ನಡೆಯಲ್ಲ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಹಣದ ಚೀಲ ಹೊತ್ತು ಕ್ಷೇತ್ರದಲ್ಲಿ ತಿರುಗುತ್ತಿರುವರಿಗೆ ಟಾಂಗ್ ನೀಡಿದರು.ಕಾಂಗ್ರೇಸ್…
ಶ್ರೀನಿವಾಸಪುರ: ಗಣರಾಜ್ಯೋತ್ಸವ ಆಚರಿಸಲು ಶಾಲೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶಿಕ್ಷಕನಿಗೆ ಅಪಘಾತವಾಗಿ ತೀವ್ರವಾಗಿ ಗಾಯಗೊಂಡಿರುತ್ತಾರೆ.ಬೆಂಗಳೂರು-ಕಡಪಾ ರಸ್ತೆಯ ಲಕ್ಷ್ಮಿಪುರ ಕ್ರಾಸ್ ಬಳಿ ಅಪಘಾತ ನಡೆದಿದ್ದು ಗಾಯಗೊಂಡಿರುವ ಶಿಕ್ಷಕನನ್ನು ದೇವಲಪಲ್ಲಿ ಅಶೋಕ್ ಎಂದು ಗುರುತಿಸಲಾಗಿದೆ ಇವರು ತಾಲೂಕಿನ ರಾಯಲ್ಪಾಡು ಪ್ರೌಡಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದುತಮ್ಮ ಶಾಲೆಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ತಮ್ಮ ಗ್ರಾಮದಿಂದ ರೋಣೂರು,ಲಕ್ಷ್ಮೀಪುರ ಮಾರ್ಗವಾಗಿ ಹೋಗಿ ಲಕ್ಷ್ಮಿಪುರ ಕ್ರಾಸ್ ಬಳಿ ಬೆಂಗಳೂರು-ಕಡಪ ಹೆದ್ದಾರಿಗೆ ಹೋಗುವಾಗ ವೇಗವಾಗಿ ಬಂದ ಸಿಮೆಂಟ್ ಟ್ಯಾಂಕರ್ ಬಡಿದು ಶಿಕ್ಷಕ ಗಂಭೀರವಾಗಿ ಗಾಯಗೊಂಡಿರುತ್ತಾರೆ. ಅಪಘಾತ ವಾಗುತ್ತಿದ್ದಂತೆ ಸ್ಥಳಿಯರು ಅಂಬುಲೆನ್ಸ್ ಮೂಲಕ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಕಾರಣ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಗಂಬೀರವಾಗಿ ಗಾಯಗೊಂಡಿರುವ ಶಿಕ್ಷಕನ ಎರಡು ಕಾಲುಗಳು ಮುರಿದಿದ್ದು ತಲೆಗೆ ತೀವ್ರವಾಗಿ ಪೆಟ್ಟಾಗಿದೆ ಆದರೆ ಪ್ರಾಣಪಾಯ ಇಲ್ಲ ಎನ್ನಲಾಗಿದೆ,ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.