Author: Srinivas_Murthy

ಶ್ರೀನಿವಾಸಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತ ದೇಶಕ್ಕೆ ಅವರು ನೀಡಿರುವಂತ ಕಾರ್ಯಕ್ರಮಗಳು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ವೈ.ಎ. ನಾರಾಯಣಸ್ವಾಮಿ ಹೇಳಿದರು ಅವರು ಇಂದು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಹ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿದ ಸಂದರ್ಬದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಗುಂಜೂರುಶ್ರೀನಿವಾಸರೆಡ್ಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಅವರು ಪಕ್ಷದ ಮಾರ್ಗದರ್ಶನದಂತೆ ಪಕ್ಷದ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ ಈ ಕ್ಷೇತ್ರದ ಮತದಾರರು ಅವರನ್ನು ಬೆಂಬಲಿಸಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂಬುದಾಗಿ ತಿಳಿಸಿದರು.ಗುಂಜೂರು ಶ್ರೀನಿವಾಸರೆಡ್ಡಿ ರಾಜಕೀಯ ಮತ್ತು ಬಿಜೆಪಿಗೆ ಹಳಬರು ಪಕ್ಷದ ಹಿರಿಯರು ಪ್ರಮುಖರ ಅಭಿಪ್ರಾಯದಂತೆ ಅವರನ್ನು ಗುರುತಿಸಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸ್ಪರ್ದಿಸಲು ಅವಕಾಶ ಕಲ್ಪಿಸಿದೆ ಎಂದರು ಕಳೆದ 45 ವರ್ಷಗಳಿಂದ ಕ್ಷೇತ್ರ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಇಲ್ಲಿನ ಮತದಾರರು ಬೇಸತ್ತಿದ್ದು ಬದಲಾವಣೆ ಬಯಸುತ್ತಿದ್ದಾರೆ ರಾಜ್ಯದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವುದು…

Read More

ಶ್ರೀನಿವಾಸಪುರ:ಚಲಿಸುತ್ತಿದ್ದ ಲಾರಿಗೆ ಸಿಲುಕಿ ದ್ವಿಚಕ್ರ ವಾಹನ ನಡೆಸುತ್ತಿದ್ದ ಯುವಕನೊಬ್ಬ ಸ್ಥಳದಲ್ಲೆ ಮೃತ ಪಟ್ಟ ಘಟನೆ ತಾಲೂಕಿನ ಗೌವನಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಪುರ ಕ್ರಾಸ್ ನಲ್ಲಿ ಜಿಯೋ ಪೆಟ್ರೊಲ್ ಬಂಕ್ ಬಳಿ ನಡೆದಿದೆ, ಮೃತ ಯುವಕನನ್ನು ಆಂಧ್ರದ ಅನಮಯ್ಯ ಜಿಲ್ಲೆಯ ರಾಜಂಪೇಟ ಮಂಡಲ್ ಬೇಗಂಪೇಟ ನಿವಾಸಿ ದುರ್ಗಾಪ್ರಸಾದ್ (25) ಎಂದು ಗುರುತಿಸಲಾಗಿದೆ.ಮೃತ ದ್ವಿಚಕ್ರ ವಾಹನ ಸವಾರ ಆಂಧ್ರದ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್(software)ಆಗಿ ಕೆಲಸ ಮಾಡುತಿದ್ದು ಭಾನುವಾರ ಬೆಂಗಳೂರಿಗೆ ಹೋಗಲು ಕಳೆದ ಆರು ತಿಂಗಳ ಹಿಂದೆ ಖರೀದಿ ಮಾಡಿದ್ದ ದ್ವಿಚಕ್ರ ವಾಹನದಲ್ಲಿ ಹೋಗುತಿದ್ದ ಈ ಸಂದರ್ಭದಲ್ಲಿ ಲಕ್ಷ್ಮಿಪುರ ಕ್ರಾಸ್ ನಲ್ಲಿ ತೆರಳುವಾಗ ಬಂಕ್ ನಲ್ಲಿ ಡೀಸಲ್ ತುಂಬಿಸಿಕೊಂಡು ರಸ್ತೆಗೆ ಬರುತ್ತಿದ್ದ ಲಾರಿಗೆ ಡಿಕ್ಕಿಹೊಡೆದಿರುತ್ತಾನೆ,ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಅನಾಮತ್ತು ಲಾರಿಗೆ ಕೆಳೆಗೆ ಬಿದ್ದಿರುತ್ತಾನೆ ದ್ವಿಚಕ್ರ ವಾಹನ ರಸ್ತೆಗೆ ಬದಿಗೆ ಬಿದ್ದಿರುತ್ತದೆ,ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿದ ದ್ವಿಚಕ್ರ ವಾಹನ ಸವಾರ ಪ್ರಸಾದ್ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೆ ಪ್ರಾಣ ಬಿಟ್ಟಿರುತ್ತಾನೆ.ದ್ವಿಚಕ್ರ…

Read More

ಶ್ರೀನಿವಾಸಪುರ:ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಜಾರಿಯಾಗಿದ್ದು, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಇಂದು ಶನಿವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಜಿ.ಕೆ.ವೆಂಕಟಶಿವಾರೆಡ್ಡಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಮಾಜಿ ಸದಸ್ಯ ಎಂ.ವಿ.ಶ್ರೀನಿವಾಸ್,ಪುರಸಭೆ ಉಪಾಧ್ಯಕ್ಷೆ ಅಯಿಶಾಖಾನಂ ಹಾಗು ಮಾಜಿ ಅಧ್ಯಕ್ಷ ಮುನಿಯಪ್ಪ ಜೊತೆಗೂಡಿ ಶ್ರೀನಿವಾಸಪುರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.ನಾಮ ಪತ್ರ ಸಲ್ಲಿಸುವುದಕ್ಕೂ ಮುಂಚಿತವಾಗಿ ತಮ್ಮ ಕಾರ್ಯಕರ್ತರೊಂದಿಗೆ ಕುರುಡುಮಲೆ ವಿನಾಯಕ ದೇವಾಲಯದಲ್ಲಿ ತಮ್ಮ ಹೆಸರು ಗೋತ್ರ ಹೇಳದೆ ಸರ್ವಜನರ ಹೆಸರಿನಲ್ಲಿ ಪೂಜೆ ಸಲ್ಲಿಸಿದ ಅವರು ನಂತರ ಪಟ್ಟಣದ ಮುಳಬಾಗಿಲು ರಸ್ತೆಯಲ್ಲಿನ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ನಾಮ ಪತ್ರ ಸಲ್ಲಿಸಿದ್ದಾರೆ.

Read More

ಶ್ರೀನಿವಾಸಪುರ:ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ದಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾವುದೆ ನಿರ್ಧಾರ ತಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುನಿಸಿಕೊಂಡಿದ್ದಾರೆ ಎಂಬ ಉಹಾಪೋಹಗಳ ಹಿನ್ನಲೆಯಲ್ಲಿ ಅವರನ್ನು ಮನವೊಲಿಸಲು ಅಡ್ಡಗಲ್ ಗ್ರಾಮದ ಅವರ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೆಲಿಕಾಫ್ಟರ್ ನಲ್ಲಿ ಬಂದು ಭೇಟಿ ನೀಡಿ ಕೋಪಶಮನಗೋಳಿಸುವ ಪ್ರಯತ್ನ ನಡೆಸಿದ್ದಾರೆ.ಕಾಂಗ್ರೆಸ್ ಪಕ್ಷದ ನಾಯಕರ ನಿಲವುಗಳ ಬಗ್ಗೆ ಬೆಸರಗೊಂಡು ಭಾನುವಾರ ‘ಕೋಲಾರದಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಕಾರ್ಯಕ್ರಮದ ಪೂರ್ವತಯಾರಿಗೂ ಬಾರದೆ ಅಂತರ ಕಾಪಾಡಿಗೊಂಡು ಕಾರ್ಯಕ್ರಮಕ್ಕೂ ಬಾರದೆ ಕ್ಷೇತ್ರದಿಂದ ಜನರನ್ನೂ ಕರೆತರುವುದಿಲ್ಲವಂತೆ ಎಂಬ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಏಕಾಏಕಿ ಗಾಭಾರಿಯಾದ ಕಾಂಗ್ರೆಸ್ ಹೈಕಮಾಂಡ್ ಹಟ ಹಿಡಿದ ರಮೇಶ್ ಕುಮಾರ್ ಅವರ ಮನವೊಲಿಸಲು ರಮೇಶ್ ಕುಮಾರ್ ಸ್ವಗ್ರಾಮಕ್ಕೆ ದಡಬಡಾಯಿಸಿ ಬಂದಿದ್ದಾರೆ.ತಾಲ್ಲೂಕಿನ ಅಡ್ಡಗಲ್ ಗ್ರಾಮದ ನಿವಾಸಕ್ಕೆ ಶನಿವಾರ ಬೆಳಿಗ್ಗೆ ಸುರ್ಜೇವಾಲಾ ಮತ್ತು ಹೆಬ್ಬಾಳ ಶಾಸಕ ಹಾಗು ಸಿದ್ದರಾಮಯ್ಯ ಆಪ್ತ ಭೈರತಿ ಸುರೇಶ್ ಆಗಮಿಸಿ ಮಾತುಕತೆ ನಡೆಸಿ ರಮೇಶ್ ಕುಮಾರ್ ಅವರೊಂದಿಗೆ…

Read More

ಶ್ರೀನಿವಾಸಪುರ:ಶ್ರೀನಿವಾಸಪುರದ ಬಿಜೆಪಿ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ದಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ಬಿ ಫಾರಂ ಅನ್ನು ಪಡೆದು ನಂತರ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಸೇರಿದಂತೆ ಸಂಘ ಪರಿವಾರ ಮೂಲದ ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್,ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್, ಕೋಲಾರದ ಸಂಸದ ಮುನಿಸ್ವಾಮಿ ರಾಜ್ಯ ಎಸ್.ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಹಾಗು ವಿಧಾನಪರಿಷತ್ ಸದಸ್ಯ ರವಿಕುಮಾರ್,ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಭೇಟಿ ಮಾಡಿ ಕೃತಙ್ಞತೆ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ|| ವೇಣುಗೋಪಾಲ್,ತಾಲೂಕು ಅಧ್ಯಕ್ಷ ತಿಮ್ಮಸಂದ್ರಆಶೋಕರೆಡ್ಡಿ,ಕೋಲಾರ ಅಭ್ಯರ್ಥಿ ವರ್ತೂರ್ ಪ್ರಕಾಶ್ ತಾಲೂಕಿನ ಹಿರಿಯ ಮುಖಂಡ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ,ಓಭೇನಹಳ್ಳಿ ಮಂಜುನಾಥರೆಡ್ದಿ ಮುಂತಾದವರು ಇದ್ದರು.

Read More

ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನ ಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಗುಂಜೂರುಶ್ರೀನಿವಾಸರೆಡ್ಡಿ ಸಿಕ್ಕಿದೆ, ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಗುಂಜೂರುಶ್ರೀನಿವಾಸರೆಡ್ಡಿ ಪಕ್ಷೇತರನಾಗಿ ಚುನಾವಣೆ ಎದರಿಸುವೆ ಎಂದು ಕ್ಷೇತ್ರಾದ್ಯಂತ ಪರ್ಯಟನೆ ನಡೆಸಿ ನಿರಂತರವಾಗಿ ತಾಲೂಕಿನ ಜನರೊಂದಿಗೆ ಒಡನಾಟದಲ್ಲಿ ಇದ್ದ ಅವರು ಚುನಾವಣಾ ರಣಕಹಳೆ ಮೊಳಗಿಸಿದ್ದರು.ಇತ್ತಿಚಿಗೆ ಅವರ ಕಾರ್ಯಕರ್ತರು ಬಿಜೆಪಿ ಸೇರುವಂತೆ ಒತ್ತಡ ಹೇರುತ್ತಿದ್ದು ಬಿಜೆಪಿ ಸೇರುವ ಬಗ್ಗೆ ಶ್ರೀನಿವಾಸರೆಡ್ಡಿ ಮೀನಾ ಮೇಷ ಎಣಿಸುತ್ತಿದ್ದರು ಎನ್ನುತ್ತಾರೆ ಅವರ ಕಾರ್ಯಕರ್ತರು ಬದಲಾದ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕರ ಸಲಹೆ ಕಾರ್ಯಕರ್ತರ ಬಲವಂತದ ಮೇರೆಗೆ ವಿಧಾನಪರಿಷತ್ ಮುಖ್ಯಸಚೇತಕ ವೈ.ಎ.ನಾರಯಣಸ್ವಾಮಿ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಕಳೆದವಾರ ಬಿಜೆಪಿ ಸೇರ್ಪಡೆಯಾಗಿದ್ದರು.ಗುಂಜೂರುಶ್ರೀನಿವಾಸರೆಡ್ಡಿ ಬಿಜೆಪಿ ಸೇರುವ ಸುದ್ದಿ ಹರಡುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ತಾರಕ್ಕೇರಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಅವರು ಶ್ರೀನಿವಾಸರೆಡ್ಡಿ ಬಿಜೆಪಿ ಸೇರುವ ಕುರಿತಾಗಿ ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಶ್ರೀನಿವಾಸರೆಡ್ಡಿ ಬಿಜೆಪಿ ಸೇರುವ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದರು. ಈ ಮಧ್ಯೆ ರಾಜ್ಯ ಬಿಜೆಪಿ ವರಿಷ್ಠರು ದೆಹಲಿಗೆ…

Read More

ಎಲ್ಲಾ ಸಮುದಾಯದವರು ನನ್ನವರೆ ನಾನು ಜಾತಿವಾರು ರಾಜಕಾರಣ ಮಾಡುವುದಿಲ್ಲ ಪರಿಶಿಷ್ಠ ಜಾತಿ ಪಂಗಡದವರಿಗೆ ಸರ್ಕಾರಿ ಸೌಲತ್ತು ಕೊಡಿಸದ ಶಾಸಕ ಶ್ರೀನಿವಾಸಪುರ: ಕಳೆದ ಎರಡು ಚುನಾವಣೆಗಳಲ್ಲಿ ಸೋತಿರುವ ಮಾಜಿ ಶಾಸಕ ಹಾಗು ಜೆ.ಡಿ.ಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಈ ಚುನಾವಣೆಯಲ್ಲಿ ಶತಾಯಗತಾಯ ಗೆಲವು ಸಾಧಿಸಬೇಕು ಎಂದು ತಾಲೂಕಿನಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ನಿರಂತರವಾಗಿ ಒಡಾಡುತ್ತಿದ್ದು ಅವರು ಇಂದು ಶ್ರೀನಿವಾಸಪುರ ಪಟ್ಟಣದಲ್ಲಿ ಸಹಸ್ರಾರು ಜನರೊಂದಿಗೆ ಭರ್ಜರಿ ರ್‍ಯಾಲಿ ಮೂಲಕ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು,ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದಿಂದ ಆರಂಭವಾದ ರೋಡ್ ಶೋ ವಲ್ಲಭಾಯಿ ರಸ್ತೆ ಶಂಕರಮಠದ ವೃತ್ತ,ರಂಗಾರಸ್ತೆ ವೃತ್ತ ಮುಳಬಾಗಿಲು ವೃತ್ತ ಎಂ.ಜಿ.ರಸ್ತೆ ಮೂಲಕ ಇಂದಿರಾಭವನ್ ಸರ್ಕಲ್ ನಿಂದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಾರಿಗೂ ಸಾಗಿತ್ತು ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಪಟ್ಟಣದ ಬಿ.ಎಲ್. ಕುಟುಂಬದ ಸದಸ್ಯೆ ಪುರಸಭೆ ಮಾಜಿ ಅಧ್ಯಕ್ಷೆ ಚಂದ್ರಕಲಾ ಅವರ ನೇತೃತ್ವದಲ್ಲಿ ಬಿ.ಎಲ್.ಸೀನಾ,ದುರ್ಗಾಪ್ರಸಾದ್,ಗೌತಮ್ ಮುಂತಾದವರು ಸೇರ್ಪಡೆಯಾದರು. ಗಾರೆ ಮೇಸ್ತ್ರೀ ಕುಟುಂಬ…

Read More

ಶ್ರೀನಿವಾಸಪುರ: ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ಚುನಾವಣಾ ಆಯೋಗ ಒದಗಿಸಿದೆ ಇದರಂತೆ ಅಯಾ ಭಾಗದ ಬಿ.ಎಲ್.ಒ ಗಳು ಮನೆ ಮನೆಗೆ ತೆರಳಿ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೈಕರ ಪಟ್ಟಿ ತಯಾರಿಸುತ್ತಿದ್ದಾರೆ.ಇದರಂತೆ ಶ್ರೀನಿವಾಸಪುರ ಪಟ್ಟಣದ ಅಕ್ಬರ್ ರಸ್ತೆಯ ಭಾಗದ ಬಿ.ಎಲ್.ಒ ಶಿಕ್ಷಕ ಗೋಪಾಲಕೃಷ್ಣ ಮನೆ ಮನೆಗೆ ತೆರಳಿ ಚುನಾವಣಾ ಆಯೋಗ ಈ ಬಾರಿ ರಾಜ್ಯದಲ್ಲಿ ಅತಿ ಹಿರಿಯ ಮತದಾರರಿಗೆ ಅನುಕೂಲವಾಗುವಂತೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಮನೆಯಿಂದಲೆ ಮತದಾನ ಮಾಡಲು ಮೊದಲ ಬಾರಿಗೆ ಅವಕಾಶ ಕಲ್ಪಿಸಿದೆ ಈ ಬಗ್ಗೆ ಆಸಕ್ತಿ ಇರುವಂತ ಸಂಬಂದಿತರು ಅರ್ಜಿ ಸಲ್ಲಿಸಬೇಕು ಅವರಿಗೆ ಮನೆಯಲ್ಲಿ ಮತದಾನ ಸಲ್ಲಿಸಲು ಅವಕಾಶ ಕೊಡಲಾಗುವುದು ಎಂದು ತಿಳಿಸಿದರು.

Read More

ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನ ಯಲ್ದೂರಿನಲ್ಲಿ ನೆಲೆ ನಿಂತಿರುವ ಪುರಾತ ವೈಷ್ಣವ ಪುಣ್ಯಕ್ಷೇತ್ರ ಎಂದು ಖ್ಯಾತಿ ಪಡೆದಿರುವ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯ ಬೃಗ ಮಹಿರ್ಷಿ ಪ್ರತಿಷ್ಠಾಪಿತ ಎನ್ನಲಾಗಿದ್ದು ನಂತರ ಚೋಳರ ಅವಧಿ ಹಾಗೆ ವಿಜಯ ನಗರ ಅರಸರ ಕಾಲದಲ್ಲಿ ದೇವಾಲಯ ಪೂರ್ಣವಾಗಿದೆ ಎನ್ನುತ್ತಾರೆ ದೇವಾಲಯದಲ್ಲಿ ಅತ್ಯಾಕರ್ಷಕ ಮುಖ ಮಂಟಪ ಎತ್ತರದ ಗಾಳಿ ಗೋಪುರ ನೋಡಲು ವೈಶಿಷ್ಟಪೂರ್ಣವಾಗಿದೆ. ವಿಶೇಷ ಏನು ಅಂದರೆ ಬಹುಶಃ ಶ್ರೀನಿವಾಸಪುರ ತಾಲೂಕಿನ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು ಹಾಗೆ ಭವ್ಯ ದೇವಾಲಯವಾಗಿದೆದೇವಾಲಯದಲ್ಲಿ ಪ್ರತಿ ವರ್ಷ ಚೈತ್ರಮಾಸದಲ್ಲಿ ಶ್ರೀ ರಾಮನವಮಿಯಂದು ಆರಂಭಗೊಂಡು ಸುಮಾರು ಒಂಬತ್ತು ದಿನಗಳ ಕಾಲ ವೈಭವೋಪೆತವಾಗಿ ವಾರ್ಷಿಕ ಭ್ರಹ್ಮೋತ್ಸವಗಳು ವೈಖಾಸ ಆಗಮನ ಶಾಸ್ತ್ರದಂತೆ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಪುಟದ ಕೆಳಗೆ ಬರುವಂತ ಬೆಲ್ ಬಟನ್ ಒತ್ತುವ ಮೂಲಕ ಉಚಿತವಾಗಿ ಸಬ್ ಸ್ಕ್ರೇಬರ್ ಆಗಿ ಚೈತ್ರ ಶುದ್ದ ಚತುರ್ದಶಿಯಂದು ಸಂಜೆ ನಡೆಯುವ ಶ್ರೀ ಸೀತಾರಾಮರ ಕಲ್ಯಾಣ ಅದ್ಭುತವಾಗಿರುತ್ತದೆ ನಾಗಪೆಡೆಯ ವಿಶೇಷವಾದ ಹೂವಿನ ಮಂಟಪದಲ್ಲಿ ಲಕ್ಷ್ಮಣ ಸಮೇತ ಜ್ಞಾನದ ಸಂಕೇತವಾಗಿ ಶ್ರೀಕೋದಂಡರಾಮ…

Read More

ಶ್ರೀನಿವಾಸಪುರ:ಜೆಡಿಎಸ್ ಮುಖಂಡರೊಂದಿಗೆ ಕಾಂಗ್ರೆಸ್ ಮುಖಂಡ ಕೂತಿರುವ ಫೋಟೊ ತಾಲೂಕಿನಾದ್ಯಂತ ವೈರಲ್ ಆಗುತ್ತಿದೆ ಚುನಾವಣೆ ಸಮಯದಲ್ಲಿ WhatsAAp ವ್ಯಾಟ್ಸಾಪ್ ನ ವೈಯುಕ್ತಿಕ ಹಾಗು ಗ್ರೂಪಗಳಲ್ಲಿ ಶರವೇಗದಲ್ಲಿ ಹಂಚಿಕೆಯಾಗುತ್ತಿದ್ದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರಕೂತುಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಒಂದು ಕಾಲದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತರಲ್ಲಿ ಆಪ್ತರಾಗಿದ್ದ ಶೇಷಾಪುರ ಗೋಪಾಲ್ ಹಾಗು ಅವರ ಆಪ್ತರು ಎನ್ನಲಾದ ಕೆಲ ಕಾಂಗ್ರೆಸ್ ಯುವ ಮುಖಂಡರು ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಜೊತೆಗೆ ಕೂಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ ವಿಶೇಷವಾಗಿ ಯಲ್ದೂರು ಹೋಬಳಿಯ ಜೆಡಿಎಸ್ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದ್ದಲ್ಲದೆ ಚರ್ಚೆಗೆ ಗ್ರಾಸವಾಗಿದೆ ಎಂಬ ಮಾತು ಕೇಳಿಬರುತ್ತಿದೆ.ಕಳೆದ ವಿಧಾನಸಭೆ ಚುನಾವಣೆ ನಂತರದಲ್ಲಿ ಶೇಷಾಪುರ ಗೋಪಾಲ್ ರವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕ್ಯಾಂಪಿನಿಂದ ದೂರಸರಿದಿದ್ದರು ಆನಂತರ ಇಬ್ಬರ ನಡುವೆ ಸ್ನೇಹ ಸಂಪೂರ್ಣವಾಗಿ ಹಳಸಿದ ಪರಿಣಾಮ ವೇದಿಕೆಗಳು ಸಿಕ್ಕಾಗಲೆಲ್ಲ ಶೇಷಾಪುರ ಗೋಪಾಲ್ ರವರು ಮಾಜಿ ಸ್ಪೀಕರ್…

Read More