Author: Srinivas_Murthy

ಶ್ರೀನಿವಾಸಪುರದ ಲಿಂಗಾಪುರ ನಾಗರಾಜ್ ಮುಖ್ಯಸ್ಥರಾದರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ(ರೊಕೊ)ಸಂಸ್ಥೆ ವತಿಯಿಂದ ಕಲಿಕಾ ಸಾಮಗ್ರಿಗಳ ವಿತರಣೆ ಶ್ರೀನಿವಾಸಪುರ : ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಗ್ರಾಮೀಣ ಶೈಕ್ಷಣಿಕ ವ್ಯವಸ್ಥೆಗೆ ಜೀವ ತುಂಬುವಂತ ಕೆಲಸವನ್ನು ಬೆಂಗಳೂರಿನ ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ(ರೊಕೊ) ಮಾಡಿದೆ. ಸಂಸ್ಥೆ ವತಿಯಿಂದ ಶ್ರೀನಿವಾಸಪುರ ತಾಲೂಕಿನ ಕೆಲವೊಂದು ಸರ್ಕಾರಿ ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳು ಸೇರಿದಂತೆ ಸಲಕರಣೆಗಳನ್ನು ವಿತರಿಸಿದ್ದಾರೆ. ಇದ್ಯಾವುದು ಹೇಳಿಕೆಗೆ ಅಥಾವ ಫೋಟೋ ಸೆಷನ್ ಗಾಗಿ ಕಾಟಾಚಾರಕ್ಕೆ ವಿತರಿಸಿದ ವಸ್ತುಗಳಲ್ಲ ಭರ್ಜರಿ ನಲವತ್ತಾರು ಲಕ್ಷ ಮೌಲ್ಯದ ನಲಿಕಲಿ ಟೇಬಲ್‌ಗಳು, ಚೇರುಗಳು, ಶಾಲಾ ಬ್ಯಾಗ್‌ಗಳು, ವಿಧ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಹಾಗು ನೋಟ್ ಪುಸ್ತಕಗಳನ್ನು ವಿತರಿಸಲಾಗಿದೆ.ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ (ರೊಕೊ) ಸಂಸ್ಥೆ ಮುಖ್ಯಸ್ಥ ನಾಗರಾಜ್ ಶ್ರೀನಿವಾಸಪುರ ತಾಲೂಕಿನ ಲಿಂಗಾಪುರ ಗ್ರಾಮದವರಾಗಿದ್ದು ಅವರು ತಾವು ಒದಿದ ಶಾಲೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆಯನ್ನು ಬಲ ಪಡಿಸುವ ಕೆಲಸ ಮಾಡಿದ್ದಾರೆ.ಅವರು ತಾಲೂಕಿನ ಚೆನ್ನಯ್ಯಗಾರಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಯಲ್ಲಿ ಸಲಕರಣೆಗಳನ್ನು ವಿತರಿಸಿ…

Read More

ಶ್ರೀನಿವಾಸಪುರ:ರಾಜ್ಯದ ಹಿತ ದೃಷ್ಠಿಯಿಂದ ಜೆಡಿಎಸ್ ಪಕ್ಷ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಇಂದು ತಾಲೂಕು ಜೆಡಿಎಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ರಾಷ್ಟ್ರಕ್ಕೆ ಮೋದಿ ನಾಯಕತ್ವ ಹೇಗೊ ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಅಗತ್ಯವಾಗಿದೆ.ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿ ಬಲದಿಂದ ಎಲ್ಲಾ ಸ್ಥಾನಗಳಲ್ಲೂ ಎಂ.ಪಿ ಅಭ್ಯರ್ಥಿಗಳು ಜಯಸಾಧಿಸುತ್ತಾರೆ.ಶ್ರೀನಿವಾಸರ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು ಶ್ರೀನಿವಾಸಪುರದ ಉತ್ತಮ ಭವಿಷ್ಯಕ್ಕಾಗಿ ಯೋಜನೆಗಳನ್ನು ಕಾರ್ಯಗತ ಗೊಳಿಸುವ ಸಲುವಾಗಿ ಶ್ರೀನಿವಾಸಪುರದಲ್ಲಿ ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಲ್ಲೇಶ್ ಬಾಬು ಅವರಿಗೆ ಹೆಚ್ಚಿನ ಲೀಡ್ ನೀಡುವ ಮೂಲಕ ಗೆಲ್ಲಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.ನಮ್ಮೂರ ಹೆಣ್ಮಗಳ ಮಗ ಮಲ್ಲೇಶ್ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಹೋಬಳಿಯ ಮುದಿಮಡಗು ಪಂಚಾಯಿತಿಯ ಹೆಣ್ಮಮಗಳು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮನವರ ಮಗನಾಗಿರುವ ಮಲ್ಲೇಶ್ ಬಾಬು ಅವರ ತಂದೆ ದಿವಂಗತ ಮುನಿಸ್ವಾಮಿ ಐ ಎ ಎಸ್ ಅಧಿಕಾರಿಯಾಗಿ ಸಾಮಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿದ್ದರು ಇಂತಹ ವಿದ್ಯಾವಂತ ಕುಟುಂಬದಿಂದ ಬಂದಿರುವ…

Read More

ಮಳೆಯಿಲ್ಲ ನೀರಿಲ್ಲ ಕರೆಂಟಿಲ್ಲ ಮಾವು ಇಲ್ಲಶ್ರೀನಿವಾಸಪುರ:ವಿಭಜಿತ ಕೋಲಾರ ಜಿಲ್ಲೆಯ ಜನತೆ ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದಾರೆ ಹಗಲು ಸೂರ್ಯನ ತಾಪಕ್ಕೆ ಭೂಮಿ ಕಾದ ಕೆಂಡವಾಗುತ್ತಿದ್ದು, ರಾತ್ರಿ ಧಗೆ ಹೆಚ್ಚಾಗುತ್ತಿದೆ.ಮಳೆ ಇಂದೋ ನಾಳೆಯೋ ಬರಬಹುದು ಎಂಬ ನೀರಿಕ್ಷೆಯಲ್ಲಿ ಬಿಸಿ ಗಾಳಿಯನ್ನು ಸೇವಿಸುತ್ತ ಜನತೆ ಪರಿತಪಿಸುತ್ತಿದ್ದಾರೆ.ಈಗಾಗಲೆ ಕಳೆದ 122 ವರ್ಷಗಳಲ್ಲೇ ಅತ್ಯಂತ ಹೆಚ್ಚು ತಾಪಮಾನ ದಾಖಲಾಗಿದೆ ಇದು ಜನರ ಅರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಅದರಲ್ಲೂ ವಯಸ್ಸಾದವರು ಎಳೆಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದ್ದು ಆರೋಗ್ಯ ಸಮಸ್ಯೆಗಳು ಕಾಡುತ್ತದೆ ಎಂಬ ಆತಂಕ.ಬಿಸಿಲ ತಾಪಕ್ಕೆ ಮನೆ ಸೇರುತ್ತಿರುವ ಜನತೆಬಿಸಿಲ ತಾಪಕ್ಕೆ ಹೆದರಿ ಜನ ಮುಂಜಾನೆಯೆ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದು ಬೆಳಿಗ್ಗೆ ಹತ್ತುಗಂಟೆ ಹೊತ್ತಿಗೆ ಬಿಸಿಲು ಪ್ರಖರವಾಗುತ್ತ ಹೋಗಿ ಹನ್ನೆರಡು ಗಂಟೆಯೊಷ್ಟೊತ್ತಿಗೆ ಭೂಮಿ ಕಾದು ಕೆಂಡವಾಗುತ್ತಿದೆ ಇದರಿಂದ ಜನತೆ ರಣ ಬಿಸಿಲಿನ ಕಾರಣಕ್ಕೆ ಮಧ್ಯಾನದಃ ಹೊತ್ತಿಗೆ ಮನೆ ಸೇರಿಕೊಳ್ಳುತ್ತಿದ್ದಾರೆ,ಇದರಿಂದಾಗಿ ಪಟ್ಟಣ ಹಾಗು ನಗರದ ರಸ್ತೆಗಳು ಜನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿವೆ ಇದು ವ್ಯಾಪಾರದ ಮೇಲೂ ತೀವ್ರ ಪರಿಣಾಮ…

Read More

ನ್ಯೂಜ್ ಡೆಸ್ಕ್: ತಮಿಳುನಾಡು ಅಂದರೆ ದ್ರಾವಿಡ ನೆಲೆ ಅಲ್ಲಿನ ರಾಜಕೀಯ ಸಾಮಜಿಕ ಹೋರಾಟ ಎಲ್ಲವೂ ದ್ರಾವಿಡ ಮೂಲದ್ದೆ ಇಂತಹ ಭೂಮಿಯಲ್ಲಿ ಈ ಬಾರಿ ರಾಜಕೀಯದಲ್ಲಿ ಬದಲಾವಣೆಯ ದೊಡ್ಡ ಗಾಳಿ ಬೀಸಬಹುದು ಎನ್ನುವ ಮಾತು ಕೇಳಿಬರುತ್ತಿದೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಪ್ರಾಂತೀಯ ಕದನದಲ್ಲಿ ಒಂದೇರಡು ಸ್ಥಾನಗಳಿಗೆ ಸೀಮಿತವಾಗಿದ್ದ ಬಿಜೆಪಿ ಈಗ ಆಣ್ಣಾಮಲೈ ಎಂಬ ಯುವ ನಾಯಕತ್ವ ಹಾಗು ಹಿಂದುಳಿದ ಅಸ್ತ್ರ ಬಳಿಸಿ ಚುನಾವಣೆ ಎದುರಿಸಲು ಮುಂದಾಗಿರುವುದು ತಮಿಳುನಾಡಿನ ರಾಜಕೀಯ ಕುರಿತಾಗಿ ಇಡೀ ದೇಶದ ಗಮನ ಸೆಳೆಯುವಂತಾಗಿದೆ.ಲೋಕಲ್ ಎಲೆಕ್ಷನ್ ನಲ್ಲಿ ಉತ್ತಮ ಸಾಧನೆಇದಕ್ಕೆ ಪೂರಕವಾಗಿ ಫೆಬ್ರವರಿ ತಿಂಗಳಲ್ಲಿ ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ದಿಸಿ ಕಳೆದ ಬಾರಿಗಿಂತಲೂ ಹೆಚ್ಚು ಸಾಧನೆ ಮಾಡಿದಿದ್ದು,ಬಿಜೆಪಿ 1 ಕಾರ್ಪೊರೇಷನ್‌ ವಾರ್ಡ್‌, 24 ಪುರಸಭೆ ವಾರ್ಡ್‌ ಮತ್ತು 102 ಪಟ್ಟಣ ಪಂಚಾಯಿತಿ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, ಪ್ರಾತಿನಿಧ್ಯವೇ ಇಲ್ಲದ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಂತರ ಬಿಜೆಪಿ ಮೂರನೇ ಅತಿದೊಡ್ಡ…

Read More

ಅಭ್ಯರ್ಥಿ ಫೈನಲ್ ಆದರೂ ಕಾರ್ಯಕರ್ತರ ನಡುವಿನ ಗೊಂದಲ ಬಗೆ ಹರೆದಿಲ್ಲ ಮುಳಬಾಗಿಲು:ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಇಂದು ಪ್ರಖ್ಯಾತ ಪುಣ್ಯಕ್ಷೇತ್ರವಾದ ಮುಳಬಾಗಿಲು ಕುರುಡುಮಲೆ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಳಬಾಗಿಲಿನಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.ಕುರುಡುಮಲೆಯಲ್ಲಿರುವ ವಿನಾಯಕ ದೇವಾಲಯದಲ್ಲಿ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಕೋಲಾರ ಉಸ್ತುವಾರಿ ಸಚಿವ ಭೈರತಿಸುರೇಶ್ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಸುಧಾಕರ್ ಸೇರಿದಂತೆ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ,ಪರಿಷತ್ ಸದಸ್ಯರದ ಅನಿಲ್,ನಸೀರ್ ಆಹ್ಮದ್ ಮುಂತಾದವರು ಭಾಗಿಯಾಗಿದ್ದರು.ಶಿಡ್ಲಘಟ್ಟ ಉಸ್ತುವಾರಿ ಗದ್ದಲ ಪಂಚಾಯಿತಿಕುರುಡುಮಲೆ ಗಣೇಶನಿಗೆ ಪೂಜೆ ಮುಗಿಸಿದ ನಂತರ ಮುಳಬಾಗಿಲು ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿಡ್ಲಘಟ್ಟ ಕಾಂಗ್ರೆಸ್ ನಲ್ಲಿರುವ ಗುಂಪುಗಾರಿಕೆ ಬುಗಿಲೆದ್ದಿತು ಕಾರ್ಯಕರ್ತರ ಗದ್ದಲ ದೊಡ್ದ ಸದ್ದುಮಾಡಿತು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಟಿಕೆಟ್ ವಂಚಿತ ಪುಟ್ಟು ಆಂಜಿನಪ್ಪ ಕಾಂಗ್ರೆಸ್…

Read More

ಶ್ರೀನಿವಾಸಪುರ: ಮಾನಸೀಕವಾಗಿ ಮನನೊಂದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿ ಶಿಗಪಲ್ಲಿ@ಶೀಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನು ನೇಣಿಗೆ ಶರಣಾದ ತಂದೆಯೊಬ್ಬನ ಕಥೆ,ಕೃಷಿ ಕಾರ್ಮಿಕನಾಗಿದ್ದ ಶಿಗಪಲ್ಲಿ ನಾರಾಯಣಸ್ವಾಮಿ (40) ಹೆಂಡತಿ ಹಾಗು ಇಬ್ಬರು ಮಕ್ಕಳೊಂದಿಗೆ ಗ್ರಾಮದಲ್ಲಿಯೇ ವಾಸವಾಗಿದ್ದ ಇತ್ತಿಚಿಗೆ ಗಂಡ ಹೆಂಡತಿ ನಡುವೆ ಅನ್ಯೊನ್ಯತೆ ಕಡಿಮೆಯಾಗಿ ಪತ್ನಿ ಕಾಣೆಯಾಗುತ್ತಾಳೆ, ಈ ಬಗ್ಗೆ ಗ್ರಾಮದಲ್ಲಿ ಹಲವಾರು ಉಹಾಪೋಹಗಳು ಹರಡುತ್ತವೆ,ನಂತರದ ಬೆಳವಣಿಗೆಯಲ್ಲಿ ಆಕೆ ಕೋಲಾರದ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿರುವುದಾಗಿ ಹೇಳುತ್ತಾರೆ,ಇತ್ತ ನಾರಯಣಸ್ವಾಮಿ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಹಳೆಯ ಪ್ರಕರಣಕ್ಕೆ ಸಂಬಂದಿಸಿದಂತೆ ದೂರು ಇದ್ದು ಪೋಲಿಸರು ಕರೆದಾಗ ಠಾಣೆಗೆ ಹೋಗಿಬರುತ್ತಿದ್ದ, ಹೀಗೆ ಹಲವಾರು ರಿತಿಯಲ್ಲಿ ಮಾನಸಿಕವಾಗಿ ತೊಳಲಾಟಕ್ಕೆ ಸಿಲುಕಿದ್ದ ಆತ ತನ್ನ ಇಬ್ಬರು ಮಕ್ಕಳಾದ ಪವನ್ (12) ಮತ್ತು ನಿತಿನ್ (10) ವಿಷ ಕುಡಿಸಿ ತಾನು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಶಂಕೆ…

Read More

ಶ್ರೀನಿವಾಸಪುರ:ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಸವಾರರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಕ್ರಾಸ್ ನಲ್ಲಿ ನಡೆದಿರುತ್ತದೆ.ತಾಲೂಕಿನ ಕಡಪ- ಬೆಂಗಳೂರು ಹೆದ್ದಾರಿಯಲ್ಲಿ ತಾಡಿಗೋಳ್ ನಂತರದ ಕಮತಂಪಲ್ಲಿ ಕ್ರಾಸ್ ನಲ್ಲಿ ನಡೆದಿರುವ ಅಪಘಾತ ನಡೆದಿದ್ದು ಮೃತ ದುರ್ದೈವಿಗಳನ್ನು ತಾ.ಬೈರಗಾನಪಲ್ಲಿ ಗ್ರಾಮದ ಗೋಪಾಲಪ್ಪ(58) ಹಾಗು ಚಿಂತಾಮಣಿ ತಾ.ಕೊನಪ್ಪಲ್ಲಿ ನಿವಾಸಿ ವೆಂಕಟೇಶ್ (45) ಎಂದು ಗುರುತಿಸಲಾಗಿದೆ.ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿರುತ್ತದೆ.ಬೆಂಗಳೂರು ನೊಂದಣಿ ಹೊಂದಿರುವ ಮಾರುತಿ ಎಸ್ ಕ್ರಾಸ್ ಹೈಬ್ರಿಡ್ ನಿಲಿ ಬಣ್ಣದ ಕಾರು ಚಿಂತಾಮಣಿ ಕಡೆಗೆ ವೇಗವಾಗಿ ಹೋಗುತಿದ್ದು ಚಾಲಕನ ನಿಯಂತ್ರಣ ತಪ್ಪಿ ಚಿಂತಾಮಣಿಯಲ್ಲಿ ಸಂತೆ ಮುಗಿಸಿ ಬೈರಗಾನಪಲ್ಲಿಗೆ ಹೋರಟಿದ್ದ ಇಬ್ಬರಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಅಪಘಾತ ನಡೆದಿದೆ ಎನ್ನುಲಾಗಿದ್ದು, ಡಿಕ್ಕಿಯಾದ ರಭಸಕ್ಕೆ ಕಾರು ಮತ್ತು ಸವಾರರ ಸಮೇತ ದ್ವಿಚಕ್ರ ವಾಹನ ಸುಮಾರು 15 ಅಡಿಗಳ ಆಳದ ಕಂದಕಕ್ಕೆ ಬಿದ್ದಿದ್ದು ಹಳ್ಳದಲ್ಲಿದ್ದ ಕಲ್ಲು ಬಂಡೆಗಳಿಗೆ ಬಡಿದು ದ್ವಿಚಕ್ರ ಸವಾರರು ಸ್ಥಳದ್ಲ್ಲೆ ಮೃತಪಟ್ಟಿರುತ್ತಾರೆ.ರಸ್ತೆ ಮಾರ್ಗ ಸೂಚಿ ಇಲ್ಲದ್ದೆ ಅಪಘಾತಕ್ಕೆ ಕಾರಣ!ಚಿಂತಾಮಣಿಯ ಮಾಡಿಕೆರೆ…

Read More

ಶೇ 50% ರಿಯಾಯತಿ ಧರದಲ್ಲಿ ಮಾರಾಟನಾನಾ ಕಂಪನಿಯ ತರಾವರಿ ಫ್ಯಾನ್, ಏರ್ ಕೂಲರ್7 ಸಾವಿರಕ್ಕೂ ಹೆಚ್ಚು ಬೆಲೆಯ ವಸ್ತುಗಳಿಗೆ ಸಾಲ ಶ್ರೀನಿವಾಸಪುರ:ಜನರನ್ನು ಕಾಡುತ್ತಿರುವ ಬಿರು ಬೆಸಿಗೆಯ ತಾಪದಿಂದ ಜನರನ್ನು ಕಾಪಾದಲು ಶ್ರೀನಿವಾಸಪುರದ ಸಾಯಿ-ರಜನಿ ಸಂಸ್ಥೆಯ ಶುಭಂ ಗೃಹಪಯೋಗಿ ವಸ್ತುಗಳ ಮಳಿಗೆಯಲ್ಲಿ ನಾನಾ ಕಂಪನಿಯ ಗಮನ ಸೆಳೆಯುವಂತ ತರಾವರಿ ಫ್ಯಾನ್, ಏರ್ ಕೂಲರ್,ಎಸಿ ವಸ್ತುಗಳ ರಿಯಾತಿ ಧರದ ಮೇಳ ಆಯೋಜಿಸಲಾಗಿದೆ. ಜನರ ಅವಶ್ಯಕತೆಗೆ ತಕ್ಕಂತೆ ಅನಕೂಲವಾದ ಫ್ಯಾನ್, ಏರ್ ಕೂಲರ್,ಎಸಿ ವಸ್ತುಗಳನ್ನು ರಿಯಾತಿ ಧರದಲ್ಲಿ ನೀಡಲು ಶುಭಂ ಗೃಹಪಯೋಗಿ ವಸ್ತುಗಳ ಮಳಿಗೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಮಾಲಿಕರು.ಭಾರತದಲ್ಲಿರುವ ಉನ್ನತ ಗುಣಮಟ್ಟದ ಬ್ರಾಂಡ್ ನ ಆಕರ್ಷಕ ಫ್ಯಾನ್,ಏರ್ ಕೂಲರ್,ಎಸಿ(ಹವಾನಿಂತ್ರಣ ಸಲಕರಣೆ) ವಸ್ತುಗಳ ಹಾಗೂ ಅಪರೂಪದ ಉಪಕರಣಗಳ ದೊಡ್ಡ ಸಂಗ್ರಹ ಒಂದೇ ಸೂರಿನಡಿ ಸಿಗಲಿದ್ದು ಖರೀದಿಗೆ ಉತ್ತಮ ವಾತವರಣ ಕಲ್ಪಿಸಿದ್ದು, ಜೊತೆಗೆ ಶೇ 50% ರಿಯಾಯತಿ ಧರದಲ್ಲಿ ಷರತ್ತುಗಳ ಅನ್ವಯದಂತೆ ಗ್ರಾಹಕರಿಗೆ ಮಾರಾಟಮಾಡಲಾಗುತ್ತಿದೆ.ಅವಶ್ಯಕತೆ ಇರುವಂತವರಿಗೆ 7 ಸಾವಿರಕ್ಕೂ ಹೆಚ್ಚು ಬೆಲೆಯ…

Read More

ಕೋಲಾರ:ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಹೆಸರು ಫೈನಲ್ ಆಗುತ್ತಿದ್ದಂತೆ ರಾಜಕೀಯ ತಂತ್ರ-ಪ್ರತಿತಂತ್ರ ಜೋರಾಗುತ್ತಿದೆ. ಕಡಾಕಂಡಿತವಾಗಿ ಕೋಲಾರ ಕ್ಷೇತ್ರವನ್ನು ಗೆಲ್ಲಲು ಮೈತ್ರಿ ಕೂಟದಲ್ಲಿ ಕಸರತ್ತು ಶುರುವಾಗಿದೆ ಇದಕ್ಕಾಗಿ ಕೋಲಾರ ಎನ್‌ಡಿ‌ಎ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಇಂದು ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಮನೆಗೆ ಭೇಟಿನೀಡಿ ಬೆಂಬಲಿಸುವಂತೆ ಕೋರಿದರು.ಕೋಲಾರ ನಗರದ ಎಸ್ ಜಿ ಲೇಔಟ್ ನಲ್ಲಿರುವ ಮುನಿಸ್ವಾಮಿ ಮನೆಗೆ ಭೇಟಿ ನೀಡಿದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಸಂಸದ ಮುನಿಸ್ವಾಮಿಗೆ ಶಾಲು ಹೊದಿಸಿ ಸನ್ಮಾನಿಸಿ ಚುನಾವಣೆಯಲ್ಲಿ ಸಹಾಯ ಮಾಡುವಂತೆ ಹಾಲಿ ಸಂಸದರನ್ನು ಕೋರಿದರು. ಇದಕ್ಕೆ ಪ್ರತಿಯಾಗಿ ಸಂಸದ ಮುನಿಸ್ವಾಮಿ ಮಲ್ಲೇಶ್ ಅವರಿಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ಶ್ರೀನಿವಾಸಪುರ ಶಾಸಕ ಹಾಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ,ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ಎಂ.ಎಲ್.ಸಿ ಗೋವಿಂದರಾಜು,ಚಿಂತಾಮಣಿ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ,ಕೋಲಾರ ಸಿಎಂಆರ್ ಶ್ರೀನಾಥ್,ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್, ಮುಂತಾದವರು ಇದ್ದರು. ಸಿಎಂಆರ್ ಮನೆಯಲ್ಲಿ ಜೆಡಿಎಸ್…

Read More

ಕೋಲಾರ: ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ ಹಾಗು ಸಚಿವ ಕೆ.ಎಚ್‌. ಮುನಿಯಪ್ಪ ಬಣಗಳ ನಡುವಿನ ಜಗಳದ ಪರಿಣಾಮ ಕೋಲಾರ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ. ಬೆಂಗಳೂರು ಪಾಲಿಕೆ ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಹಾಗು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಗೌತಮ್‌ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಬಿಡುಗಡೆ ಮಾಡಿರುವ ಪತ್ರದಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಲು ಕೆ.ವಿ. ಗೌತಮ್‌ ಅವರಿಗೆ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇದರೊಂದಿಗೆ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಂತಾಗಿದೆ ಬಾಕಿ ಇದ್ದ ನಾಲ್ಕು ಕ್ಷೇತ್ರಗಳ ಪೈಕಿ ಬಳ್ಳಾರಿ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರಕ್ಕೆ ಶುಕ್ರವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಕೋಲಾರ ಕ್ಷೇತ್ರದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.ಮುನಿಯಪ್ಪ ಹಾಗೂ ರಮೇಶ್‌ ಕುಮಾರ್‌ ಬಣಗಳ ನಡುವಿನ…

Read More