Author: Srinivas_Murthy

ಶ್ರೀನಿವಾಸಪುರ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ,ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಹತ್ಯೆ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಶ್ರೀನಿವಾಸಪುರ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು.ಪಟ್ಟಣದ ವ್ಯಾಪಾರಸ್ಥರು,ಹೋಟೆಲ್ ಮಾಲಿಕರು ಮುಂಜಾನೆಯಿಂದಲೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದ್ದರು,ಆಟೋ ಚಾಲಕರು ಮತ್ತು ಖಾಸಗಿ ವಾಹನಗಳ ಚಾಲಕರು ಮಾಲಿಕರು ತಮ್ಮ ವಾಹನಗಳನ್ನು ಬೀದಿಗಿಳಿಸದೆ ಬಂದ್ ಗೆ ಸಹಕಾರ ನೀಡಿದ್ದರು,ಬಂದ್ ಅಂಗವಾಗಿ ಬಹುತೇಕ ಶಾಲಾಕಾಲೇಜುಕಳಿಗೆ ರಜಾ ಘೋಷಿಸಲಾಗಿತ್ತು,ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಖಾಸಗಿ ಬ್ಯಾಂಕುಗಳು ವಾಣಿಜ್ಯ ಸಂಸ್ಥೆಗಳು ಬಾಗಿಲು ತೆಗೆದಿದ್ದಾದರೂ ಪ್ರತಿಭಟನಾಕಾರರು ಅವುಗಳ ಬಾಗಿಲು ಹಾಕಿಸಿದರು.ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಮುಳಬಾಗಿಲು.ಕೋಲಾರ,ಚಿಂತಾಮಣಿಗೆ ಒಡಾಡಿತಾದರು ಪಟ್ಟಣದ ಒಳಗೆ ಬಾರದೆ ಹೊರ ವಲಯದ ಸುಮಾರು 1-2 ಕೀ.ಮಿ ದೂರದಿಂದ ಬಸ್ಸುಗಳನ್ನು ಆಪರೇಟ್ ಮಾಡಿದರು,ಬಂದ್ ಬೆಂಬಲಿಸಿ ಪ್ರತಿಭಟನೆಯಲ್ಲಿ ಪುರಷರು ಅಷ್ಟೆ ಅಲ್ಲದೆ ಮಹಿಳೆಯರು ಯುವತಿಯರು ಸ್ವಯಂ ಪ್ರೇರಿತರಾಗಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಬಂದ್ ಗೆ ಕರೆ ನೀಡಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಇಂದಿರಾಭವನ್ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ರಚಿಸಿ ಹತ್ಯೆ ಮಾಡಿದವರನ್ನು…

Read More

ಶ್ರೀನಿವಾಸಪುರ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ,ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಹತ್ಯೆ ವಿರೋಧಿಸಿ ಮಂಗಳವಾರ ಶ್ರೀನಿವಾಸಪುರ ತಾಲೂಕು ಬಂದ್ ಮಾಡುವಂತೆ ವಿವಿಧ ಸಂಘಟನೆಗಳು ಕರೆ ಕೊಟ್ಟಿದ್ದಾರೆ.ಕಳೆದವಾರ ತಮ್ಮ ತೋಟದ ಬಳಿ ಬರ್ಬರವಾಗಿ ಹತ್ಯೆಯಾದ ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸಬೇಕು ಎಂದು ಅಗ್ರಹಿಸಿ ತಾಲೂಕಿನ ದಲಿತ ಸಂಘಟನೆಗಳು,ಪ್ರಗತಿಪರ ಸಂಘಟನೆಗಳು,ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ತಾಲೂಕು ಬಂದ್ ಮಾಡುವಂತೆ ಕರೆ ಕೊಟ್ಟಿದೆ.ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರಿಗೆ ಎಲ್ಲರು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವಂತೆ ಕೋರಿದ್ದಾರೆ. ಬಂದ್ ಗೆ ರಿಪಬ್ಲಿಕ್ ಪಾರ್ಟಿ ಬೆಂಬಲದಲಿತ ಸಮುದಾಯದ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ದಲಿತ ಸಮುದಾಯದಲ್ಲಿ ಬಹುದೊಡ್ಡ ಶಕ್ತಿಯಾಗಿ ಬೆಳೆದಿದ್ದರು ದಲಿತ ಸಮುದಾಯಕ್ಕೆ ಭರವಸೆಯ ಮುಖಂಡರಾಗಿದ್ದರು ಅವರ ಹತ್ಯೆ ದಲಿತ ಸಮುದಾಯಕ್ಕೆ ಬಹು ದೊಡ್ಡ ನಷ್ಟ ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಮುಖಂಡ ಎಂ.ವೆಂಕಟಸ್ವಾಮಿ ಹೇಳಿದರು.ಗೃಹ ಮಂತ್ರಿಗಳ ಆಪ್ತರಾಗಿದ್ದ ಶ್ರೀನಿವಾಸನ್ ಹತ್ಯೆ ಹಿಂದೆ ಬಹುದೊಡ್ಡ ಕಾಣದ ಕೈಗಳು ಸುಪಾರಿ…

Read More

ಶ್ರೀನಿವಾಸಪುರ:ಹಿಂದೆ ನನ್ನ ಅಧಿಕಾರವಧಿಯಲ್ಲಿ ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ಮತ್ತು ಉದ್ಯಾನವನ ನಿರ್ಮಾಣ ಮಾಡಿಸಿದ್ದೇನೆ, ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 2 ಎಕರೆ ಜಮೀನು ಮೀಸಲು ಇಡಿಸಿದ್ದೇನೆ ಮುಂದಿನ ದಿನಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಒತ್ತು ನಿಡುತ್ತೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಅವರು ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಎಲ್ಲಾ ಸಮಾಜಗಳನ್ನು ಗೌರವದಿಂದ ನಡೆಸಿಕೊಂಡಿದ್ದೇನೆ ಯಾರಿಗೂ ನೋವಾಗುವಂತೆ ವರ್ತಿಸಿಲ್ಲ ಯಾರನ್ನೂ ನೋಯಿಸಿ ಮಾತನಾಡಿಲ್ಲ ಎಲ್ಲಾ ಸಮಾಜಗಳ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ್ದೇನೆ ಎಂದ ಅವರು ವಾಲ್ಮೀಕಿ ಸಮುದಾಯ ಆರ್ಥಿಕವಾಗಿ ಸಾಮಜಿಕವಾಗಿ ಆಭಿವೃದ್ಧಿಯಾಗಬೇಕಿದೆ ಅದಕ್ಕಾಗಿ ಪ್ರಾಮಾಣಿಕವಾಗಿ ಸಹಕಾರ ನೀಡುತ್ತೇನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇತರೆ ಸರ್ಕಾರದ ಸೌಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಿಮ್ಮ ಎಲ್ಲಾ ವೈಯುಕ್ತಿಕ ಕಷ್ಟ ಸುಖಗಳಿಗೆ ಸ್ಪಂದಿಸಲು ಸಿದ್ದನಿದ್ದೇನೆ ಎಂದರು.ಸರ್ಕಾರಿ ಅಧಿಕಾರಿ ನೌಕರರ ಗೈರು ಶಾಸಕ ಬೇಸರರಾಷ್ಟ್ರೀಯ ಹಬ್ಬಗಳು ಸೇರಿದಂತೆ ಮಹಾತ್ಮರ ಜಯಂತಿ…

Read More

ಕೋಲಾರ: ದ್ವಿಚಕ್ರ ಸವಾರಿಗೆ ಹೆಲ್ಮೆಟ್ ಕಡ್ದಾಯ ಗೊಳಿಸಿ ಸರ್ವೋಚ್ಛ ನ್ಯಾಯಲಯ ಆದೇಶಿಸಿದೆ ರಾಜ್ಯ ಪೋಲಿಸ್ ಇಲಾಖೆ ಜಾರಿಮಾಡಬೇಕು ಎಂದು ಸುತ್ತೋಲೆ ಹೊರಡಿಸಿದೆ ಇದರ ಪರಿಣಾಮ ಬೆಂಗಳೂರು ನಗರ ಸೇರಿದಂತೆ ಕೆಲವೊಂದು ನಗರಗಳಲ್ಲಿ ಪೋಲಿಸರ ಒತ್ತಾಯಕ್ಕೆ ದ್ವಿಚಕ್ರ ಸವಾರು ಕಡ್ದಾಯ ಅಲ್ಲದಿದ್ದರು ಹೆಲ್ಮೆಟ್ ಧರಿಸಿ ಒಡಾಡುತ್ತಿದ್ದಾರೆ.ದ್ವಿಚಕ್ರ ವಾಹನಗಳು ಅಪಘಾತಕ್ಕೆ ಒಳಗಾಗುವುದು ಗ್ರಾಮೀಣ ಭಾಗದಲ್ಲೆ ಹೆಚ್ಚು,ಹಳ್ಳ ದಿನ್ನೆ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಹಳ್ಳ ತಪ್ಪಿಸಲು ಹೋಗಿ ಎದರು ವಾಹನಕ್ಕೆ ಡಿಕ್ಕಿ ಹೊಡೆದು ಸಾವನಪ್ಪುತ್ತಿರುವುದು ಗ್ರಾಮೀಣ ಭಾಗದ ದ್ವಿಚಕ್ರ ವಾಹನ ಸವಾರರೆ. ಇದರಿಂದಾಗಿ ಗ್ರಾಮೀಣ ಅರೆ ಗ್ರಾಮೀಣ ಪ್ರದೇಶಗಳಲ್ಲೂ ದ್ವಿಚಕ್ರ ಸವಾರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕಿದೆ ಎನ್ನುವುದು ಅರಿವು ಬಳಗದ ಶಿವಪ್ಪ ಅವರ ವಾದ.ಕೋಲಾರ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ದಟ್ಟಣೆ ಹೆಚ್ಚುತ್ತಿದೆ ಅದರಲ್ಲೂ ಕರೋನಾ ನಂತರದಲ್ಲಿ ಕಚೇರಿ ಸೇರಿದಂತೆ ಫ್ಯಾಕ್ಟರಿಗಳಲ್ಲಿ ಕೆಲಸ ಕಾರ್ಯನಿರ್ವಹಿಸುವಂತ ಮಹಿಳೆಯರುವರು ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಬಳಸುತ್ತಿದ್ದಾರೆ ಇದರ ಪರಿಣಾಮ ದ್ವಿಚಕ್ರ ವಾಹನ ದಟ್ಟಣೆ ಹೆಚ್ಚಾಗಿದೆ, ಅದರೆ ಬಹುತೇಕರು ವಾಹನ ಸಂಚಾರ…

Read More

ಶ್ರೀನಿವಾಸಪುರ:ಸತ್ಸಂಗ ಬಳಗ ಮತ್ತು ಶಂಕರ ಸೇವಾ ಸಮಿತಿ ಸಂಯುಕ್ತವಾಗಿ ಶ್ರೀನಿವಾಸಪುರದ ಶಂಕರಮಠದಲ್ಲಿ ಲೋಕ ಕಲ್ಯಾಣರ್ಥವಾಗಿ ಶ್ರೀ ದುರ್ಗಾ ಹೋಮ ನಡೆಸಲಾಯಿತು.ಶಂಕರ ಮಠದ ಆವರಣದಲ್ಲಿ ಆಯೋಜಿಸಿದ್ದ ಹೋಮ ಕುಂಡಕ್ಕೆ ಸತ್ಸಂಗ ಬಳಗದ ಮುಖ್ಯಸ್ಥರಾದ ಸತ್ಯಮೂರ್ತಿ-ಮಂಗಳಾ ದಂಪತಿ ಪೂಜೆ ಸಲ್ಲಿಸಿದ ನಂತರ ಅರ್ಚಕರಾದ ವೇದಬ್ರಹ್ಮ ಕುರುಮಾಕಲಹಳ್ಳಿ ಪ್ರಕಾಶ್ ರವರು ಪೂಜಾ ವಿಧಿವಿಧಾನಗಳನ್ನು ನಡೆಸಿ ಹೋಮ ನಡೆಸಿಕೊಟ್ಟರು.ಸತ್ಸಂಗ ಬಳಗದ ಮುಖ್ಯಸ್ಥ ಸತ್ಯಮೂರ್ತಿ ಮಾತನಾಡಿ ದುರ್ಗಾದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು ದುಷ್ಟ ಶಿಕ್ಷಕಿ ಶಿಷ್ಠ ರಕ್ಷಕಿಯಾದ ಮಾತೆಯನ್ನು ನವರಾತ್ರಿಗಳಂದು 9 ರೂಪಗಳಾಗಿ ಪೂಜಿಸುವುದು ವಿಶೇಷ ಹಾಗೆ ದುರ್ಗಾ ಮಂತ್ರಗಳನ್ನು ಪಠಿಸುವುದರಿಂದ ಮತ್ತು ಹೋಮ ಹವನಾದಿಗಳನ್ನು ನಡೆಸುವುದರಿಂದ ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟಗಳು ದೂರವಾಗುತ್ತದೆ ಭಯ ಮತ್ತು ಅಡೆತಡೆಗಳು ನಿವಾರಣೆಯಾಗುತ್ತದೆ ಅದರಂತೆ ವಿಜಯದಶಮಿಯಂದು ಸಮಸ್ತ ಜನರ ಶ್ರೆಯಸ್ಸಿಗಾಗಿ ಲೋಕಕಲ್ಯಾಣಾರ್ಥವಾಗಿ ಶ್ರೀ ದುರ್ಗಾಹೋಮ ನಡೆಸಲಾಯಿತು ಎಂದರು.ಇದೆ ಸಂದರ್ಭದಲ್ಲಿ ಕನ್ಯಕಾ ಪೂಜೆಯನ್ನು ನೇರವೇರಿಸಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿರೆಡ್ಡಿ,ಶಂಕರ ಸೇವಾ ಸಮಿತಿಯ ಜೆ.ಕೆ.ಮಂಜುನಾಥ್, ಪುರಸಭೆ ಸದಸ್ಯೆ ಶಾಂತಮ್ಮ, ಶಿಕ್ಷಕಿ ಸುಧಾಮಣಿ, ಸತ್ಸಂಗ ಬಳಗದ…

Read More

ಶ್ರೀನಿವಾಸಪುರ:ದಸರಾ ಹಬ್ಬವನ್ನು ನಾಡಹಬ್ಬವಾಗಿ ಆಚರಣೆ ಮಾಡಲಾಗುತ್ತದೆ ನಾಡಿನ ಪರಂಪರೆ ಸಾಂಸೃತಿಕ ಹಾಗು ಸೌಹಾರ್ದತೆಯನ್ನು ಬಿಂಬಿಸುವ ಹಬ್ಬ ಎಂದು ತಹಶೀಲ್ದಾರ್ ಶೀರಿನ್ ತಾಜ್ ಹೇಳಿದರು ಅವರು ಪಟ್ಟಣದ ಬಾಲಾಂಜನೇಯ ದೇವಾಲಯದ ಆವರಣದಲ್ಲಿ ಸರ್ಕಾರಿ ಶಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಶಮಿ ಮರಕ್ಕೆ ಬಾಣ ಹೂಡಿ ಮಾತನಾಡಿದ ಅವರು ದುಷ್ಟ ಶಕ್ತಿಗಳ ದಮನ ಮಾಡಿದ ದಿನವೆ ವಿಜಯದಶಮಿ ಆಚರಣೆಯ ಮಹತ್ವ ಎಂದರು.ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಜಮಾಬಂದಿ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಮುನಿರೆಡ್ಡಿ ನೆಲವಂಕಿ ಕಂದಾಯ ನಿರೀಕ್ಷಕ ಗುರುರಾಜ್ ರಾವ್,ಗ್ರಾಮ ಲೆಕ್ಕಿಗರಾದ ವಸುಂದರಾದೇವಿ, ದೇವಾಲಯ ಆಡಳಿತ ಮಂಡಳಿ ಮುಖ್ಯಸ್ಥ ಗೋಫಿನಾಥ್ ರಾವ್,ಶ್ರೀನಿವಾಸಪ್ಪ,ಸುಬ್ರಣ್ಯಂ,ಕೊಳ್ಳೂರು ನಾಗರಾಜ್, ಮುಂತಾದವರು ಇದ್ದರು.

Read More

ಹತ್ಯೆಯಾದ ಕೆಲವೆ ಗಂಟೆಗಳ ಅವಧಿಯಲ್ಲಿ ಆರೋಪಿಗಳ ಬಂಧನ ವೇಮಗಲ್ ಠಾಣಾ ವ್ಯಾಪ್ತಿಯ ಲಕ್ಷ್ಮಿಸಾಗರ ಅರಣ್ಯದಲ್ಲಿ ಹಂತಕರು ಆರೋಪಿಗಳೆಲ್ಲಾ ಕೋಲಾರ ಜಿಲ್ಲೆಯವರು ಶ್ರೀನಿವಾಸಪುರ:ವೈಯುಕ್ತಿಕ ದ್ವೇಷಕ್ಕೆ ಶ್ರೀನಿವಾಸಪುರದ ಪ್ರಭಾವಿ ರಾಜಕಾರಣಿ ಕೌನ್ಸಿಲರ್ ಸೀನಪ್ಪ ಹತ್ಯೆಯಾದರ? ಇಂತಹದೊಂದು ಮಾತನ್ನು ಪೋಲಿಸರು ಹೇಳಿದ್ದಾರೆ ಹಾಡಹಗಲೆ ಹತ್ಯೆಮಾಡಿದ ಆರೋಪಿಗಳನ್ನು ಪೋಲಿಸರು ಕೆಲವೆ ಗಂಟೆಗಳ ಅವಧಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಕೋಲಾರ ಜಿಲ್ಲಾ ಎಸ್.ಪಿ ನಾರಯಣ್ ತಿಳಿಸಿದ್ದಾರೆ.ಕೋಲಾರ ತಾಲೂಕು ವೆಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಅರಣ್ಯದ ಬಳಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿಸುವ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪರಿಣಾಮ ಇಬ್ಬರಿಗೆ ಗುಂಡು ಹಾರಿಸಿದ್ದು ಆರೋಪಿಗಳು ಗಾಯಗೊಂಡಿದ್ದಾರೆ.ಗಾಯಗೊಂಡ ಆರೋಪಿಗಳನ್ನು ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ,ಆರೋಪಿಗಳಾದ ವೇಣುಗೋಪಾಲ್ ಶ್ರೀನಿವಾಸಪುರದವನಾದರೆ,ಹರ್ಷಿತ್ ಮತ್ತು ಮುನೇಂದ್ರ ಮುಳಬಾಗಿಲು ತಾಲೂಕು ಕೊಳತೂರು ಗ್ರಾಮದವರು,ಸಂತೋಷ್ ಬಂಗಾರಪೇಟೆಯ ಅಜ್ಜಪ್ಪನಹಳ್ಳಿ ಗ್ರಾಮದವನು,ನಾಗೇಂದ್ರ ಮುಳಬಾಗಿಲು ನಿವಾಸಿ,ಅರುಣ್ ಕುಮಾರ್ ವೇಮಗಲ್ ನಿವಾಸಿಯಾಗಿದ್ದಾನೆ, ಶ್ರೀನಿವಾಸನ್ಕೊಲೆ ಹಿಂದೆ ಯಾವುದೇ ರಾಜಕೀಯ ಇಲ್ಲ ಇದೊಂದು ಹಳೆ ವೈಷಮ್ಯದ ಹತ್ಯೆ ಎಂದು ಪ್ರಾಥಮಿಕ…

Read More

6-7 ಜನರಿದ್ದ ಅಪರಿಚಿತ ಹಂತಕರ ತಂಡದಿಂದ ಕೃತ್ಯ ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಹೊಗಳಗೆರೆ ವೃತ್ತದಲ್ಲಿ ಶ್ರೀನಿವಾಸನ್ ಅವರ ರೆಸ್ಟೋರೆಂಟ್ ಕಟ್ಟಡದ ಬಳಿ ಘಟನೆ ಶ್ರೀನಿವಾಸಪುರ:ಶ್ರೀನಿವಾಸಪುರದ ಪ್ರಭಾವಿ ರಾಜಕಾರಣಿ ಕಾಂಗ್ರೆಸ್ ಮುಖಂಡ,ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತವಲಯದ ಎಂ.ಶ್ರೀನಿವಾಸನ್@ಕೌನ್ಸಿಲರ್ ಸೀನಪ್ಪ(63) ನವರ ಮೇಲೆ ಇಂದು ಹಾಡಹಗಲು ನಡು ಮಧ್ಯಾನಃ ಅಪರಿಚಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ಶ್ರೀನಿವಾಸನ್ ಅವರನ್ನು ತಕ್ಷಣ ಶ್ರೀನಿವಾಸಪುರದ ಆಸ್ಪತ್ರೆಗೆ ಸಾಗಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಿರುತ್ತಾರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಶ್ರೀನಿವಾಸನ್ ಅವರು ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಹೊಗಳಗೆರೆ ವೃತ್ತದಲ್ಲಿ ತಮ್ಮ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್ ಕಟ್ಟಡದ ಬಳಿ ಕಟ್ಟಡ ಕಾಮಗಾರಿ ವಿಚಾರವಾಗಿ ಗಾರೆ ಮೇಸ್ತ್ರಿ ಅಮರ್ ಮತ್ತು ಕೃಷ್ಣ ಅವರೊಂದಿಗೆ ಮಾತನಾಡುತ್ತಿರುವಾಗ ಸುಮಾರು 6-7 ಜನರಿದ್ದ ಯುವಕರ ತಂಡವೊಂದು ಬಂದು ಅಂಕಲ್ ಎಂದು ಸಂಬೊದಿಸಿ ಹಬ್ಬದ ಶುಭಾಶಯ ತಿಳಿಸಿದ್ದಾರೆ ಇದಕ್ಕೆ ಪ್ರತಿಯಾಗಿ…

Read More

ಶ್ರೀನಿವಾಸಪುರ:ಶಂಕಿತ ಡೆಂಘೀ ಜ್ವರಕ್ಕೆ ಮಗುವೊಂದು ಬಲಿಯಾಗಿದೆ ಎಂದು ಜಾಕೀರ್ ಹುಸೇನ್ ಮೊಹಲ್ಲಾದ ನಿವಾಸಿಯೊಬ್ಬರು ಹೇಳಿದ್ದು ಕಳೆದ 20 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ 8 ತಿಂಗಳ ಹಸುಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದೆ ಎಂದು ಕುಟುಂಬಿಕರು ಹೇಳುತ್ತಾರೆ ವಿಷಮ ಜ್ವರ ಇದ್ದ ಮಗುವಿಗೆ ಪೋಷಕರು ಕೋಲಾರ ಚಿಕಿತ್ಸೆಗೆ ಕರೆದೊಯಿದಿದ್ದು ಅಲ್ಲಿ ಫಲಕಾರಿಯಾಗದೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು ಫಲ ನೀಡದೆ ಮಗು ಮೃತಪಟ್ಟಿರುವುದಾಗಿ ಪೋಷಕರು ಅಲವತ್ತುಕೊಳ್ಳುತ್ತಾರೆ.ಜಾಕೀರ್ ಹುಸೆನ್ ಮೊಹಲ್ಲಾದಲ್ಲಿ ಡೆಂಘೀ ಜ್ವರದಿಂದ ಮಗು ಸಾವನ್ನಪ್ಪಲು ಸ್ಥಳಿಯವಾಗಿ ಸ್ವಚ್ಚತೆ ಇಲ್ಲದ್ದೆ ಕಾರಣವಾಗಿದ್ದು ಇಲ್ಲಿ ಇನ್ನೂ 15 ರಿಂದ 20 ಮಕ್ಕಳು ವಿಷಮ ಜ್ವರದಿಂದ ಬಳಲುತ್ತಿರುವುದಾಗಿ ಜನ ಹೇಳುತ್ತಾರೆ.ಹರಿಯದ ಕೊಳಚೆ ನೀರಿನಿಂದ ವಿಷಮ ಜ್ವರ ಹರಡಲು ಕಾರಣವಿಷಮ ಜ್ವರಗಳ ಕುರಿತಾಗಿ ಸಾರ್ವಜನಿಕವಾಗಿ ಸಾಕಷ್ಟು ಮಟ್ಟದಲ್ಲಿ ಅರಿವು ಮೂಡಿಸಲಾಗಿತ್ತಿದೆ ಇಂದ್ರಧನುಷ್ ಕಾರ್ಯಕ್ರಮ ಮಾಡಿದಾಗಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಜನತೆಗೆ ಜಾಗೃತಿ ಮೂಡಿಸಲಾಗುತ್ತಿದೆ ಶಾಲಾಕಾಲೇಜುಗಳಲ್ಲಿ ಸಹ ವಿಷಮ ಜ್ವರಗಳ ಕುರಿತಾಗಿ ಜನಜಾಗೃತಿ ಮೂಡಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮೊಹಮದ್…

Read More

ತಡರಾತ್ರಿ ವಿಧಾನಸೌಧ ಬಳಿ ಧರಣಿ ಕುಳಿತ ಸಂಸದ ಮುನಿಸ್ವಾಮಿ ಸ್ಥಳಕ್ಕೆ ಬಂದು ಮನವಿ ಆಲಿಸಿದ ಅರಣ್ಯ ಮಂತ್ರಿ ಖಂಡ್ರೆ ಸಣ್ಣ ರೈತರಿಗೆ ನ್ಯಾಯ ಸಿಗುವರಿಗೂ ಹೋರಾಟ ಸಂಸದ ಶ್ರೀನಿವಾಸಪುರ:ತಾಲೂಕಿನಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ಅರಣ್ಯ ಮಂತ್ರಿ ಘೋಷಣೆ ಮಾಡಿದ್ದಾರೆ. ಗುರುವಾರ ಅಲಂಬಗಿರಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ತೆರವು ಕಾರ್ಯಚರಣೆ ನಡೆಸುತ್ತುತಬೇಕಾದರೆ ಸ್ಥಳಕ್ಕೆ ಆಗಮಿಸಿದ ಸಂಸದ ಮುನಿಸ್ವಾಮಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡು ಈಗಾಗಲೆ ಈ ವಿಷಯ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು ಜಂಟಿ ಸರ್ವೆ ಆಗುವ ವರಿಗೂ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಸಂಸದ ಮುನಿಸ್ವಾಮಿ ಅಗ್ರಹಿಸಿ ಕಾರ್ಯಚರಣೆ ಸ್ಥಳಕ್ಕೆ ನುಗ್ಗಲು ಪ್ರಯತ್ನಿಸಿದಾಗ ಅರಣ್ಯ ಇಲಾಖೆ ಹಾಗು ಪೊಲೀಸ್ ಸಿಬ್ಬಂದಿ ಸಂಸದರನ್ನು ಸುತ್ತುವರಿದು ಸ್ಥಳದಿಂದ ಕದಲದಂತೆ ಸನ್ನಿವೇಶ ನಿರ್ಮಾಣಮಾಡಿದಾಗ ಸಂಸದ ಮುನಿಸ್ವಾಮಿ ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಕಂದಾಯ ಇಲಾಖೆ ನೀಡಿರುವ ದಾಖಲೆಗಳನ್ನು ಇಟ್ಟುಕೊಂಡು ಎಪ್ಪತ್ತು-ಎಂಬತ್ತು ವರ್ಷಗಳಿಂದ ಸಾಗುವಳಿ…

Read More