ತಂದೆ ತಾಯಿ ವೃತ್ತಿಯಲ್ಲಿ ಶಿಕ್ಷಕರು ಅವರ ಆಶಯದಂತೆ ಐ.ಎ.ಎಸ್ ಪಾಸ್ ಮಾಡಿದ ವೈದ್ಯ ಗೌತಮ್ ಶ್ರೀನಿವಾಸಪುರ: ಆತ ವೃತ್ತಿಯಲ್ಲಿ ವೈದ್ಯ ಅದನ್ನೆ ಮುಂದುವರೆಸಿದ್ದರೆ ಇವತ್ತು ವೈದ್ಯಕೀಯ ವೃತ್ತಿಯಲ್ಲಿ ಸಾಗುತ್ತಿದ್ದರು ಇದಕ್ಕಿಂತ ಭಿನ್ನವಾಗಿ ಸಮಾಜಮುಖಿಯಾಗಿ ವ್ಯವಸ್ಥೆಯಲ್ಲಿ ವಿಶೇಷವಾದದನ್ನು ಸಾಧಿಸಬೇಕು ಎಂಬ ಪೋಷಕರ ಆಶಯದಂತೆ ಸಂಕಲ್ಪತೊಟ್ಟು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ, ಕೇಂದ್ರ ಲೋಕಸೇವಾ ಆಯೋಗದ ಪರಿಕ್ಷೆ ಬರೆದು (UPSC) ಪಾಸ್ ಮಾಡಿ ಐ.ಎ.ಎಸ್ ಆಗಬೇಕು ಎಂಬ ಪೋಷಕರ ನನಸು ಈಡೇರಿಸುವ ನಿಟ್ಟಿನಲ್ಲಿ ಕಠಿಣ ನಿರ್ಧಾರ ಮಾಡಿದ ಶ್ರೀನಿವಾಸಪುರ ಪಟ್ಟಣದ ನಿವಾಸಿ ಯುವಕ ಡಾ||ಗೌತಮ್ 939 ರ‍್ಯಾಂಕ್ ಪಡೆದು ಐಎಎಸ್ ಸಾಧನೆ ಮಾಡಿದ್ದಾರೆ.ಇವರು ಯಾವುದೇ ಕೋಚಿಂಗ್ ತರಬೇತಿ ಇಲ್ಲದೆಯೇ ಸಾಧನೆ ಮಾಡಿದ್ದಾರೆ ಎಂಬುದು ವಿಶೇಷ. ಪಟ್ಟಣದ ಮಾರುತಿ ನಗರದಲ್ಲಿ ವಾಸವಾಗಿರುವ ಡಯಟ್ ಉಪನ್ಯಾಸಕ ಜಿ.ಎಮ್.ಗಂಗಪ್ಪನವರ ಪುತ್ರ ಡಾ|| ಗೌತಮ್ ನಾಗರೀಕ ಸೇವಾ ಪರಿಕ್ಷೆಯಲ್ಲಿ 939ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿರುತ್ತಾರೆ. ತಾಲೂಕಿನ ರೋಣೂರು ಹೋಬಳಿ ಗೋಪಾಲಪುರದ ಜಿ.ಎಮ್.ಗಂಗಪ್ಪ ಕೃಷಿಕನ ಮಗನಾಗಿ ತಾನು ಓದಿ…
Author: Srinivas_Murthy
ಶ್ರೀನಿವಾಸಪುರ:ತಾಲೂಕಿನ ಯಲ್ದೂರಿನಲ್ಲಿ ಶ್ರದ್ಧಾ ಭಕ್ತಿಯಿಂದ ಗಂಗಮ್ಮ ಜಾತ್ರೆಯ ದೀಪೋತ್ಸವ ನಡೆಸಲಾಯಿತು,ಗ್ರಾಮದ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ದೀಪೋತ್ಸವ ಕಾರ್ಯಕ್ರಮ ಆಯೋಜಿಸಿ ನಂತರ ಗಂಗಮ್ಮ ದೇವಾಲಯದ ಪೂಜಾರಿ ದೀಪ ಹೋತ್ತು ದೇವಾಲಯ ಸುತ್ತುತ್ತಾರೆ. ಯಲ್ದೂರು ನಡುಬಿದಿಯಲ್ಲಿರುವ ಗಂಗಮ್ಮ ದೇವಾಲಯದಲ್ಲಿ ಆನಾದಿಕಾಲದಿಂದಲೂ ಗ್ರಾಮದ ಆಚಾರದಂತೆ ಹೊಸ ಸಂವತ್ಸರ ಯುಗಾದಿ ನಂತರ ಬರುವ ಮೊದಲ ಸೋಮವಾರ ಗಂಗಮ್ಮನ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಗಂಗಜಾತ್ರೆ ಎಂದು ಆಚರಿಸುವ ಗಂಗಮ್ಮ ದೇವರ ಮೂಲಮೂರ್ತಿಗೆ ಅಭಿಷೇಕ ವಿವಿಧ ರೀತಿಯ ಬಣ್ಣದ ಹೂಗಳಿಂದ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.ಉತ್ತಮ ಮಳೆ ಬೆಳೆಯಾಗುತ್ತದೆ,ಗ್ರಾಮದ ಜನರನ್ನು ಸುರಕ್ಷತೆಯಿಂದ ಕಾಪಾಡುತ್ತಾಳೆ ಎಂದು ನಂಬಿ ಹರಿಕೆ ಹೊತ್ತ…
ಶ್ರೀನಿವಾಸಪುರ:ಅರಣ್ಯ ಇಲಾಖೆ ದೌರ್ಜನ್ಯದಿಂದ ಸಣ್ಣಪುಟ್ಟ ರೈತರು ಜಮೀನು ಕಳೆದುಕೊಂಡು ಬಿದಿಪಾಲಾಗಿದ್ದೀವಿ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ದಳಸನೂರು ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿ ಪ್ರತಿಭಟನೆ ನಡೆಸಿ ಹೇಳಿಕೆ ನೀಡಿದ್ದರು.ಶ್ರೀನಿವಾಸಪುರ ಮತಕ್ಷೇತ್ರವಾದ ಕಸಬಾ ಹೋಬಳಿಯ ಕೆಲ ಗ್ರಾಮಗಳ ರೈತರು ನಾಲ್ಕೈದು ದಶಕಗಳಿಂದ ಸಾಗುವಳಿ ಮಾಡಿಕೊಂಡಿದ್ದು ಅಂತವರನ್ನು ಅರಣ್ಯ ಇಲಾಕೆ ಅಧಿಕಾರಿಗಳು ಜಮೀನು ತಮ್ಮದು ಎಂದು ಬೆಳೆದಿದ್ದ ಬೆಳೆ ನಾಶಮಾಡಿ ರೈತರನ್ನು ಜಮೀನಿಂದ ಕಾಲಿ ಮಾಡಿಸಿದ್ದಾರೆ ಎಂದು ಆರೋಪಿಸಿ ಕಸಬಾ ಹೋಬಳಿಯ ಕೆಲ ಗ್ರಾಮಗಳ ರೈತರು ದಳಸನೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸರಕಾರ, ಜನಪ್ರತಿನಿಧಿಗಳು ನಮಗೆ ಸ್ಪಂದನೆ ನೀಡುತ್ತಿಲ್ಲ ನಮ್ಮ ಕಷ್ಟಕ್ಕೆ ಆಗುತ್ತಿಲ್ಲ ನಮಗೆ ಅನಕೂಲ ಆಗದ ಮೇಲೆ ಮತ ಹಾಕಿ ಎನು ಪ್ರಯೋಜನ ಎಂದು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಲೋಕಸಭೆ ಚುನಾವಣೆಯಲ್ಲಿ ಮತ ಬಹಿಷ್ಕಾರ ಅನಿವಾರ‍್ಯ ಎಂದದು ಮತ ಬಹಿಷ್ಕಾರ ನಿರ್ಧಾರ ಪ್ರಕಟಿಸಿದ್ದರು.ಶ್ರೀನಿವಾಸಪುರ ಕ್ಷೇತ್ರದಲ್ಲಿ ಗ್ರಾಮಸ್ಥರ ಮತ ಬಹಿಷ್ಕಾರ ತೀರ್ಮಾನ ಸಾರ್ವಜನಿಕವಾಗಿ ಕುತೂಹಲಕ್ಕೂ ಕಾರಣವಾಗಿತ್ತಲ್ಲದೆ ಜಿಲ್ಲಾಡಳಿತಕ್ಕೆ ತಲೆ ನೋವಾಗಿ…
ಪ್ರಥಮ ದ್ವೀತಿಯ ತೃತೀಯ ಬಹುಮಾನ ವಿತರಣೆ ಬಹುತೇಕ ಸ್ಪರ್ದಿಗಳು ಶ್ರೀರಾಮ ನವಮಿ ಕಲ್ಪನೆಯಲ್ಲಿ ರಂಗೋಲಿ ಬಿಡಿಸಿದ್ದು ವಿಶೇಷ ಶ್ರೀನಿವಾಸಪುರ: ಶ್ರೀರಾಮನವಮಿ ಅಂಗವಾಗಿ ಶ್ರೀನಿವಾಸಪುರ ಪಟ್ಟಣದ ಶ್ರೀ ಚೌಡೇಶ್ವರಿ ಯುವಕ ಸಂಘದ ವತಿಯಿಂದ ಪಟ್ಟಣದ ಸುಭಾಷ್ ರಸ್ತೆಯಲ್ಲಿ ಏರ್ಪಡಿಸಿದ್ದ ‘ಸಡಗರದ ರಂಗೋಲಿ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಸುಭಾಷ್ ರಸ್ತೆಯ ನಿವಾಸಿಗರ ಸಹಕಾರದೊಂದಿಗೆ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಬಣ್ಣ ಬಣ್ಣದ ರಂಗವಲ್ಲಿ ಬಿಡಿಸಲು ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ 10 ವರ್ಷದ ಹೆಣ್ಮಕ್ಕಳಿಂದ ಹಿಡಿದು, ವಯಸ್ಸಾದ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡು ರಂಗೋಲಿ ಬಿಡಿಸಿದರು.ರಂಗವಲ್ಲಿ ಬಿಡಿಸುವವರು ಒಬ್ಬರಾದರೆ ಅವರಿಗೆ ಉತ್ತೇಜನ ನೀಡಲು ಕುಟುಂಬದ ಕೆಲ ಸದಸ್ಯರು, ಸ್ನೇಹಿತರು ಸಹ ಆಗಮಿಸಿ ಸಲಹೆ ಸೂಚನೆಗಳನ್ನು ನೀಡುತ್ತ ಉತ್ತೇಜಿಸುತ್ತಿದ್ದರು ಎಲ್ಲರಲ್ಲೂ ಕುತೂಹಲ ಒಂದಕ್ಕಿಂತ ಮತ್ತೊಂದು ಭಿನ್ನವಾದ ರಂಗವಲ್ಲಿ ಕಂಡು ಸಂತಸ ವ್ಯಕ್ತಪಡಿಸುತ್ತಿದ್ದರು.ಶ್ರೀರಾಮನವಮಿ ಪರಿಕಲ್ಪನೆಯಡಿಯಲ್ಲಿ ಬಹುತೇಕ ಸ್ಪರ್ದಾಳುಗಳು ರಾಮಮಂದಿರ ರಾಮಸೀತೆ ಅಂಜನೇಯ ಬಿಲ್ಲುಭಾಣಗಳರಂಗೋಲಿಗಳನ್ನು ಬಿಡಿಸಿದ್ದು ವಿಶೇಷವಾಗಿತ್ತು ಸಂಜೆ ನಾಲ್ಕು ಗಂಟೆಯ ಪ್ರಕರ ಸೂರ್ಯಯನ ಬೆಳಕಿನಲ್ಲೆ ಪ್ರಾರಂಭವಾದ ರಂಗೋಲಿ ಸ್ಪರ್ದೆ ಮುಗಿಯುವ…
ಯಲ್ದರೂ ಹೋಳೂರು ಕಸಬಾ ಹೋಬಳಿಗಳಲ್ಲಿಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪರ ಬಹಿರಂಗ ಸಭೆಅಬ್ಯರ್ಥಿ ಮಲ್ಲೇಶ್ ಬಾಬು ದಾಖಲೆ ಅಂತರದಲ್ಲಿ ಗೆಲವು ಶ್ರೀನಿವಾಸಪುರ:ಸ್ವಾತಂತ್ರ್ಯ ಪೂರ್ವದಲ್ಲಿನ ಕಾಂಗ್ರೆಸ್ ಈಗ ಬದುಕಿಲ್ಲ ಈಗಿನ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ಹೇಸರು ಹೇಳುವ ಅರ್ಹತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು ಅವರು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಮುದುವಾಡಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಹೇಳಿದರು, ದೇಶದಲ್ಲಿ ಎದ್ದಿರುವ ಮೋದಿ ಅಲೆ ನೋಡಿ ಕಾಂಗ್ರೆಸ್ ಗೆ ನಡುಕ ಉಂಟಾಗಿದೆ ಕಳೆದ ಭಾರಿ ಕಾಂಗ್ರೆಸ್ ಗೆ ಮತ ಹಾಕಿದವರೆಲ್ಲಾ ಈ ಭಾರಿ ಬಿಜೆಪಿಗೆ ಮತ ಹಾಕಲು ಮುಂದಾಗಿದ್ದಾರೆ. ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದವರು ಇಂದು ಮೋದಿ ಪ್ರಧಾನಿ ಆಗಲಿ ಎಂದು ವೈಯುಕ್ತಿಕವಾಗಿ ಭರವಸೆ ನೀಡುತ್ತಿದ್ದು ರಾಜ್ಯದಲ್ಲಿನ ಎಲ್ಲಾ 28 ಕ್ಷೇತ್ರಗಳಲ್ಲಿ ಎನ್ ಡಿ ಎ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.ರಾಹುಲ್ ಹೆಸರು ಹೇಳಿದರೆ ಮತ ಬರಲ್ಲಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಬರುವ ಮತಗಳೂ ಕಾಂಗ್ರೆಸ್…
ವಿಧಾನಸಭೆ ವಿರೋಧ ಪಕ್ಷದ ನಾಯಕನಮುಂದೆ ಗುಂಪುಗಾರಿಕೆ ಬಹಿರಂಗಬಂಗಾರಪೇಟೆ ಮಾಜಿ ಶಾಸಕರಿಂದವಿರೋಧ ಪಕ್ಷದ ನಾಯಕ ಅಶೋಕ್ ಮಾತಿಗೆ ವಿರೋಧ ನ್ಯೂಜ್ ಡೆಸ್ಕ್:ಕೋಲಾರ ಕಾಂಗ್ರೆಸ್ ಬಣ ಕಿತ್ತಾಟ ಜಗ್ಗಜಾಹಿರ ಈಗ ಕೋಲಾರ ಬಿಜೆಪಿಯಲ್ಲೂ ಗುಂಪುಗಾರಿಕೆ ಮುಖಂಡರ ನಡುವಿನ ಮನಸ್ತಾಪ ದಿನೆ ದಿನೆ ಬಹಿರಂಗವಾಗುತ್ತಿದೆ, ಗುರುವಾರ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಸ್ವಕ್ಷೇತ್ರವಾದ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಅಂಚಾಳ ಗ್ರಾಮದಲ್ಲಿ ಚುನಾವಣಾ ಸಂಬಂಧ ನಡೆದ ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶದಲ್ಲಿ ಕೋಲಾರ ಬಿಜೆಪಿ ಗುಂಪುಗಾರಿಕೆ ಬಣ ರಾಜಕೀಯ ಕಾರ್ಯಕರ್ತರ ಮುಂದೆ ಬಹಿರಂಗವಾಗಿದೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಲಿ ಸಂಸದ ಮುನಿಸ್ವಾಮಿ ಅವರನ್ನು ಹೋಗಳುತ್ತ ನೀವು ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಬರುವಂತೆ ಹೇಳುತ್ತಿದ್ದಂತೆ ಸಮಾವೇಶದ ವೇದಿಕೆಯಲ್ಲಿದ್ದ ಬಂಗಾರಪೇಟೆ ಮಾಜಿ ಶಾಸಕ ವೆಂಕಟಮುನಿಯಪ್ಪ ಹಾಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಅವರುಗಳು ಆಶೋಕ್ ಅವರ ಭಾಷಣವನ್ನು ತೀವ್ರವಾಗಿ ವಿರೋಧಿಸಿದ್ದಾರೆ ಕೂಡಲೆ ಅವರ ಅಭಿಮಾನಿಗಳು ಎರು ಧ್ವನಿಯಲ್ಲಿ ಕೂಗಾಡಿದ್ದಾರೆ. ನಾವ್ಯಾರು…
ಶ್ರೀನಿವಾಸಪುರ:ಯುಗಾದಿ ಹೊಸ ಸಂವತ್ಸರದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಕರಗ ಮಹೋತ್ಸವ ಹಾಗು ಊರ ದೇವರುಗಳ ಪಲ್ಲಕ್ಕಿ ಜಾತ್ರೆ ಉತ್ಸವ ಅದ್ದೂರಿಯಾಗಿ ನಡೆಯಿತು.ಗ್ರಾಮದೇವತೆ ಶ್ರೀ ಚೌಡೇಶ್ವರಿ,ಶ್ರೀ ಗಂಗಮ್ಮ ಮತ್ತು ಪೀಲೆಕಮ್ಮ,ಶ್ರೀ ಲಕ್ಷ್ಮೀವೆಂಕಟೇಶ್ವರ,ಶ್ರೀ ಉಗ್ರ ನೃಸಿಂಹ,ಶ್ರೀ ನಗರೇಶ್ವರ,ಶ್ರೀ ವಾಸವಿ ಕನ್ಯಾಕಾ ಪರಮೇಶ್ವರಿ,ಗಟ್ಟಹಳ್ಳಿ ಶ್ರೀ ನಡೀರಮ್ಮ, ಗುಂಡಮನತ್ತ ಶ್ರೀ ಅಷ್ಟಮೂರ್ತಮ್ಮ, ಶ್ರೀ ರೇಣುಕಾಎಲ್ಲಮ್ಮ,ಶ್ರೀ ನಲ್ಲಗಂಗಮ್ಮ,ಶ್ರೀ ಸಪ್ತಮಾತೃಕೇಯರ ದೇವರುಗಳ ಹೂವಿನ ಪಲ್ಲಕ್ಕಿ ರಥಗಳು ಒಂದಕ್ಕೊಂದು ಅಲಂಕೃತವಾಗಿ ಸಾಲಾಗಿ ನಡೆದ ಶೋಭಾಯಾತ್ರೆ ಯುಗಾದಿ ಹಬ್ಬದ ದಿನ ಸಂಜೆ ಪ್ರಾರಂಭಗೊಂಡು ಪಟ್ಟಣದಾದ್ಯಂತ ಸಂಚರಿಸಿ ಮಾರನೆ ದಿನ ಬೆಳಗಿನ ಜಾವದವರಿಗೂ ನಡೆಸಲಾಯಿತು. ವಿಶೇಷ ಆಕರ್ಷಣೆಯಾದ ಕರಗಹೊಳೂರಿನಲ್ಲಿ ಕರಗ ಹೊರುವ ವೆಂಕಟೇಶ್ ರವರು ಶ್ರೀನಿವಾಸಪುರ ಪಟ್ಟಣದಲ್ಲೂ ಕರಗ ಹೊತ್ತು ಆಕರ್ಷಣೆಯಾಗಿ ಮಹೋತ್ಸವ ನಡೆಸಿಕೊಟ್ಟರು ಪಟ್ಟಣದ ಕಟ್ಟೆಕೆಳಗಿನ ಪಾಳ್ಯ, ಎಂ.ಜಿ.ರಸ್ತೆ ಇನ್ನಿತರೆ ಸ್ಥಳಗಳಲ್ಲಿ ಬಣ್ಣ ಬಣ್ಣದ ಲೈಟ್ ಗಳಿಂದ ಕೂಡಿದಂತ ವೇದಿಕೆಯಲ್ಲಿ ಕರಗ ನೃತ್ಯ ಆಯೋಜಿಸಲಾಗಿತ್ತು,ವಿಶೇಷವಾಗಿ ಮನೆಗಳ ಬಳಿ ಕರಗಕ್ಕೆ ಪಾದ ಪೂಜೆ ಮಾಡಿ ಜನ…
ಮಳೆಯಿಲ್ಲದೆ ಬಿಸಿಲ ತಾಪಕ್ಕೆ ಮಾವುಬೆಳೆಸುಟ್ಟು ಸೊರಗಿ ನೆಲಕ್ಕೆ ಉರುಳುತ್ತಿದೆಔಷಧಿ ಸಿಂಪಡಿಸಿದರೂ ಬೆಳೆ ಉಳಿಯುತ್ತಿಲ್ಲಬೆಳೆಗಾರನಿಗೆ ಉಳಿದ ಔಷಧಿ ಸಾಲ. ಶ್ರೀನಿವಾಸಪುರ:ಶ್ರೀನಿವಾಸಪುರದ ವಿಶ್ವ ಪ್ರಸಿದ್ಧ ಮಾವಿನಬೆಳೆ ಮಳೆಯಿಲ್ಲದೆ ದಿನೆ ದಿನೆ ಎರುತ್ತಿರುವ ಬಿಸಿಲಿನ ತಾಪಕ್ಕೆ ಜೀವನಾಡಿ ಬೆಳೆ ಉದರಿ ಹೋಗುತ್ತಿದೆ,ಉತ್ಪಾದನೆಯಲ್ಲಿ ಶೇ.70ರಷ್ಟು ಕುಸಿತವಾಗುವ ಪರಿಸ್ಥಿತಿ ಏರ್ಪಟ್ಟಿದೆ ಬಹುತೇಕ ರೈತರು ಮಾವು ಬೆಳೆಯ ಮೇಲೆ ಅವಲಂಬಿತರಾಗಿ ಬದಕು ಸಾಗಿಸುತ್ತಾರೆ,ಈ ಬಾರಿ ಬಿಸಿಲಿನ ತಾಪಕ್ಕೆ ಹೂ, ಪಿಂದೆಗಳು ಉದುರುತ್ತಿರುವುದನ್ನು ನೋಡಿದರೆ 10 ಟನ್ ಬರುತ್ತಿದ್ದ ಮಾವು 1-2 ಟನ್ ಸಿಗುವುದು ಅನುಮಾನವಾಗಿದ್ದು ಮಾವು ಬೆಳೆಗಾರರನ್ನು ಆತಂಕಕ್ಕೆ ಈಡು ಮಾಡಿದೆ.ಈ ಬಾರಿಯ ಮಾವು ಹಂಗಾಮಿನಲ್ಲಿ ಫಸಲು ನೀರಿಕ್ಷೆ ಮೂಡಿಸಿತ್ತು ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಗಿಡಗಳು ಅಕಾಲಿಕವಾಗಿ ಚಿಗುರೊಡೆದು ಹೂವು,ಕಾಯಿಗಳನ್ನು ಉದುರಿಸಿದೆ.ಒಂದು ವರ್ಷದಿಂದ ಸಮರ್ಪಕ ಮಳೆ ಬಾರದೆ,ಭೂಮಿಯಲ್ಲಿ ಉಷ್ಣಾಂಶ ಹೆಚ್ಚಿದ್ದು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಹೂ ಹಂತದಲ್ಲೆ ಮಾವಿನ ಫಸಲು ಉದರಿ ಡಿಸೆಂಬರ್ ತಿಂಗಳಿನಲ್ಲಿ ಬರಬೇಕಿದ್ದ ಹೂ ಫೆಬ್ರವರಿ ತಿಂಗಳಿನಲ್ಲಿ ಬಂದಿತು ಫಸಲು ತಡವಾಗುವುದರ ಜೊತೆಗೆ ರಣ…
ನ್ಯೂಜ್ ಡೆಸ್ಕ್:ಆಂಧ್ರ ಸಿನಿಮಾಗಳಲ್ಲಿ ಕಂಟಿನ್ಯೂ ಹಿಟ್ ಸಿನಿಮಾಗಳನ್ನೆ ನೀಡುತ್ತ ತೆಲಗು ಸಿನಿಮಾ ಪರಿಶ್ರಮದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಹಿರಿಯ ನಟ ನಂದಮೂರಿಬಾಲಕೃಷ್ಣ ತೆಲಗು ರಾಜಕೀಯ ವಲಯದಲ್ಲೂ ರಾಯಸೀಮಾ ಪ್ರಾಂತ್ಯವಾದ ಹಿಂದೂಪುರದಲ್ಲಿ ಎರಡು ಬಾರಿ ಗೆದ್ದು ಶಾಸಕರಾಗಿದ್ದಾರೆ ತಾವು ಪ್ರತಿನಿಧಿಸುವ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರು ತನ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಗೆ ತನ್ನ ಸ್ವಂತ ಹಣದಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಿ ಮಾದರಿ ಆಸ್ಪತ್ರೆಯನ್ನಾಗಿಸಿದ್ದಾರೆ,ಹಣ್ಣು ತರಕಾರಿ ಮಾರುಕಟ್ಟೆಯನ್ನು ವಿನೂತಾತ್ಮಕವಾಗಿ ನಿರ್ಮಿಸಿ ಜನರಿಂದ ಶಭ್ಬಾಸ್ ಗಿರಿ ಪಡೆದಿದ್ದಾರೆ,ಕೊಟ್ಯಾಂತರ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸಿದ್ದಾರೆ ಹೀಗೆ ತನ್ನದೆ ಜೇಬಿನಿಂದ ಹಣ ಖರ್ಚು ಮಾಡಿ ಮೂಲಸೌಕರ್ಯಗಳ ಅಭಿವೃದ್ಧಿ ಮಾಡುವ ಮೂಲಕ ಕ್ಷೇತ್ರದಲ್ಲಿ ಸೈ ಅನಿಸಿಕೊಂಡಿದ್ದಾರೆ. ಈಗ ಮತ್ತೆ ಚುನಾವಣೆ ಬಂದಿದ್ದು ಹ್ಯಾಟ್ರಿಕ್ ಗೆಲವು ಸಾಧಿಸುವ ನಿಟ್ಟಿನಲ್ಲಿ ಕ್ಷೇತ್ರಾದ್ಯಂತ ಒಡಾಡುತ್ತಿದ್ದಾರೆ.ಆಂಧ್ರಪ್ರದೇಶದ ಅವಿಭಜಿತ ಅನಂತಪುರ ಜಿಲ್ಲೆಯಾಗಿದ್ದು ಈಗ ಶ್ರೀ ಸತ್ಯಸಾಯಿ ಪುಟ್ಟಪರ್ತಿ ಜಿಲ್ಲೆಯಾಗಿರುವ ಕನ್ನಡ ಭಾಷಿಕರೆ ಹೆಚ್ಚಾಗಿರುವ ಹಿಂದೂಪುರ ವಿಧಾನಸಭೆ ಕ್ಷೇತ್ರ ಆರಂಬದಿಂದಲೂ ತೆಲುಗು ದೇಶಂ ಪಕ್ಷದ ಭದ್ರಕೋಟೆ,1983…
ಶ್ರೀನಿವಾಸಪುರ: ಅರಣ್ಯ ಇಲಾಖೆ ಕಿರಕುಳಕ್ಕೆ ಬೆಸೆತ್ತು ತಾಲೂಕಿನ ದಳಸನೂರು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ, ಇಂದು ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಕಳೆದ 30-40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ರೈತಾಪಿ ಜನರನ್ನು ಅರಣ್ಯ ಈಗ ಏಕಾಏಕಿ ಒಕ್ಕಲೆಬ್ಬಿಸಿದೆ ರೈತಾಪಿ ಜನರ ಅನುಭವದಲ್ಲಿದ್ದ ನೂರಾರು ಎಕರೆ ಸಾಗುವಳಿ ಜಮೀನನ್ನು ಅರಣ್ಯ ಇಲಾಖೆ ದೌರ್ಜನ್ಯವಾಗಿ ಕಿತ್ತುಕೊಂಡಿದೆ, ಜಮೀನು ಕಳೆದುಕೊಂಡ ಕೃಷಿಕರು ಅಕ್ಷರಶಃ ಬಿದಿಪಾಲಾಗಿದ್ದಾರೆ,ನಮಗೆ ನ್ಯಾಯ ಒದಗಿಸುವ ದೃಷ್ಠಿಯಿಂದ ಸರ್ಕಾರ ಜಂಟಿ ಸರ್ವೆ ಮಾಡಿಸಿ ರೈತರ ನೆರವಿಗೆ ಬರುವಂತೆ ಒತ್ತಾಯಿಸಿದರು ಇದುವರಿಗೂ ನಮ್ಮ ಮನವಿಗೆ ನ್ಯಾಯ ಸಿಕ್ಕಿಲ್ಲ ಇದರಿಂದ ನಾವು ನಮ್ಮ ರಕ್ಷಣೆಗೆ ಬಾರದ ಸರ್ಕಾರದ ಕ್ರಮ ಖಂಡಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯದ ವಿರುದ್ದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ಗ್ರಾಮಸ್ಥರು ನಿರ್ಧಾರ ಮಾಡಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.