Author: Srinivas_Murthy

ಸಿನಿಡೆಸ್ಕ್:ಸಿನಿಮಾ ರಂಗವೆ ಹಾಗೆ ನಟಿ-ನಟರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಸಾಮಾನ್ಯ ಇಂದು ಜೊತೆ ಜೊತೆಯಲ್ಲಿ ಓಡಾಡ, ಮರು ದಿನವೇ ವಿಚ್ಛೇದನ ಮಾಮೂಲಿಯಂಬಂತಾಗಿದೆ ಕೆಲವರು ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆಯಾಗಿ ಎಲ್ಲರನ್ನು ನಿಬ್ಬೇರಗಾಗಿಸುತ್ತಾರೆ. ಟ್ರೋಲಿಗರ ಬಾಯಿಗೆ ಆಹಾರವೂ ಆಗುತ್ತಾರೆ. ಇದಕ್ಕೆ ಸ್ಪಷ್ಟ ಉದಾಃರಣೆ ಎಂದರೆ ಮಲಯಾಳಂ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ ಮತ್ತು ನಟಿ ದಿವ್ಯಾ ಶ್ರೀಧರ್ ಮದುವೆಯಾದ್ದಾರೆ. ಮೊನ್ನೆಯಷ್ಟೇ ಗುರುವಾಯೂರು ದೇವಸ್ಥಾನದಲ್ಲಿ ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಸಪ್ತಪದಿಯನ್ನು ತುಳಿದು ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರಿಬ್ಬರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹದ್ದು ಮೀರಿದ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಇಬ್ಬರ ನಡುವಿನ ವಯಸ್ಸಿನ ಅಂತರ ಒಂದು ಕಾರಣ ಅನ್ನುವುದಾದರೆ ಹಣ, ಅಂತಸ್ತು ಮತ್ತು ದೈಹಿಕ ಸುಖ ಎಂದು ಕಾರಣ ನೀಡಿ ಚರ್ಚೆ ಮಾಡುತ್ತಿದ್ದಾರೆ.ಮಲಯಾಳಂ ಕಿರುತೆರೆಯಲ್ಲಿ ಖಳನಾಯಕಿಯ ಪಾತ್ರದಲ್ಲಿ ಖ್ಯಾತರಾದ ದಿವ್ಯಾಶ್ರೀಧರ್ ತಮ್ಮದೇ ಛಾಪು ಮೂಡಿಸಿರುವ ಅಂದಗಾತಿ ಆಕೆ ತಮ್ಮ ಮೊದಲ ಪತಿಯಿಂದ ಇಬ್ಬರು ಮಕ್ಕಳನ್ನು ಪಡೆದಿದ್ದು ಕಾರಣಾಂತರಗಳಿಂದ ಪತಿಯಿಂದ ದೂರವಾಗಿದ್ದ ದಿವ್ಯಾ…

Read More

ನ್ಯೂಜ್ ಡೆಸ್ಕ್:ಇತ್ತೀಚೆಗೆ ನಡೆದ ಅಮೇರಿಕಾದ ಚುನಾವಣೆಯಲ್ಲಿ ತೆಲುಗಿನ ಖ್ಯಾತ ನಟ ಬಾಲಕೃಷ್ಣ ಹೆಸರು ನಮೂದಿಸಿ ಮತ ಚಲಾಯಿಸಿದ್ದಾರೆ ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ನಂದಮೂರಿ ಯುವರತ್ನ ಬಾಲಕೃಷ್ಣ (ಬಾಲಕೃಷ್ಣ) ಅವರನ್ನು ತೆಲುಗು ಜನರೆಲ್ಲ ಪ್ರೀತಿಯಿಂದ ಕರೆಯುವುದು ಜೈ ಬಾಲಯ್ಯ ಎಂದು ಈ ಬಾಲಯ್ಯ ಹೆಸರನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ಅಲ್ಲಿನ ಮತದಾನದ ಹಕ್ಕು ಪಡೆದವನೊಬ್ಬ ಮತಪತ್ರದಲ್ಲಿ ನಮೂದಿಸಿ ಅಭಿಮಾನಿಯೊಬ್ಬ ತನ್ನ ಅಭಿಮಾನವನ್ನು ಮೆರೆದಿದ್ದಾನೆ ಈ ಬ್ಯಾಲೆಟ್ ಪೇಪರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ವ್ಯಾಪಕ ಟೀಕೆಅಮೇರಿಕಾ ಅಧ್ಯಕ್ಷ ಚುನಾವಣೆ ಬ್ಯಾಲೆಟ್ ಪೇಪರನಲ್ಲಿ ಬಾಲಯ್ಯ ಹೆಸರು ಬರೆದಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು ಮೌಲ್ಯಯುತ ಮತವನ್ನು ದುರ್ಬಳಕೆ ಮಾಡಿಕೊಂಡಿದ್ದ ಬಗ್ಗೆ ಕೆಲವರು ಪ್ರಶ್ನಿಸುತ್ತಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಣಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿ ಅಮೆರಿಕದ ಪೌರತ್ವ ರದ್ದುಪಡಿಸಿದರೆ ಮತದ ಮೌಲ್ಯ ಗೊತ್ತಾಗುತ್ತದೆ. ಎನ್ನುವ ಮಾತು ಕೇಳಿಬರುತ್ತಿದೆ.

Read More

ನ್ಯೂಜ್ ಡೆಸ್ಕ್: ಶ್ರೀನಿವಾಸಪುರದ ಹಾಲಿ ಹಾಗು ಮಾಜಿ ಶಾಸಕರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಚುನಾವಣಾ ಕ್ಯಾಂಪೈನ್ ಗಾಗಿ ರೌಂಡ್ಸ್ ಹೋಗಿದ್ದಾರೆ.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕೋಡಂಬಳ್ಳ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಜೋತೆಗೂಡಿ ಚುನಾವಣೆ ಪ್ರಚಾರ ಮಾಡಿದ ಅವರು ತಾವು ಕೋಲಾರಕ್ಕೆ ಕೆ.ಸಿ.ವ್ಯಾಲಿ ತಂದದ್ದ ಬಗ್ಗೆ ಹೇಳಿ ನಿಮ್ಮ ಸ್ಥಳೀಯ ವ್ಯಕ್ತಿ ಯೋಗೇಶ್ವರ್ ನಿಮ್ಮೂರ ಕೆರೆಗಳಿಗೆ ನೀರು ತುಂಬಿಸಿದ್ದಾನೆ ಆತನ ಶ್ರಮಕ್ಕೆ ಗೌರವ ನೀಡಲು ಆತನನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮತ ಯಾಚಿಸಿದರು.ಇವರೊಂದಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ,ಮಾಲೂರು ಶಾಸಕ ನಂಜೇಗೌಡ,ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಮೇಕಲನಾರಯಣಸ್ವಾಮಿ,ಸಂತೋಷರೆಡ್ಡಿ ಸೇರಿದಂತೆ ಹಲವರು ಇದ್ದರು. ಹಾಲಿ ಶಾಸಕ ವೆಂಕಟಶಿವಾರೆಡ್ಡಿ ಸಹ ಚನ್ನಪಟ್ಟಣ ಉಪಚುನಾವಣೆಯಲ್ಲಿ NDA ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿ ಚನ್ನಪಟ್ಟಣ ಕ್ಷೇತ್ರದಲ್ಲಿ ದೇವೇಗೌಡರ ದೂರದೃಷ್ಟಿಯಿಂದ ಚನ್ನಪಟ್ಟಣ ಸಸ್ಯಶಾಮಲವಾಗಿದೆ ಅವರ ಸೇವೆಯನ್ನು ಇಲ್ಲಿನ ಜನ ಮರೆಯಬಾರದು, ಕೇಂದ್ರ ಸಚಿವರಾಗಿರುವ…

Read More

ನ್ಯೂಜ್ ಡೆಸ್ಕ್:ಎಣ್ಣೆ ಪಾರ್ಟಿಯಲ್ಲಿನ ಖರ್ಚು ಭಾಗಮಾಡಿಕೊಳ್ಳುವಾಗ ವ್ಯತ್ಯಾಸ ಆಗಿ ಕಡಿಮೆ ಹಣ ಕೊಟ್ಟಿದ್ದಲ್ಲದೆ ಸೋದರಮಾವನನ್ನು ಬಡಿದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ. ಮಾವ ಮನೋಜ್ ಹಾಗು ಅವನ ಸೋದರಳಿಯ ಧರಮ್ ಠಾಕೂರ್ ಸೇರಿ ಡಿಯೋರಿ ತಪಾರಿಯಾ ಎಂಬ ಗ್ರಾಮದಲ್ಲಿ ಎಣ್ಣೆ ಹಾಗು ಚಿಕನ್ ಪಾರ್ಟಿ ಮಾಡಿದ್ದಾರೆ ನಂತರ ಒಟ್ಟು ಲೆಕ್ಕದಲ್ಲಿ ಖರ್ಚು ಸಮಭಾಗ ಹಂಚಿಕೊಳ್ಳುವಾಗ ಇಬ್ಬರ ನಡಿವೆ ಜಗಳ ಆಗಿದೆ ನೀನು ಕಡಿಮೆ ಹಣ ಕೊಟ್ಟಿರುವುದಾಗಿ ಮನೋಜ್ ಖ್ಯಾತೆ ತಗೆದಿದ್ದಾನೆ ಇದಕ್ಕೆ ಧರಮ್ ಠಾಕೂರ್ ಆಕ್ಷೆಪ ವ್ಯಕ್ತಪಡಿಸಿದ್ದಾನೆ ಇಬ್ಬರು ಕೈ ಕೈ ಮೀಲಾಯಿಸಿಕೊಂಡು ಜಗಳ ಮಾಡಿಕೊಂಡಿದ್ದಾರೆ ಕುಪಿತಗೊಂಡ ಧರಮ್ ಠಾಕೂರ್ ತನ್ನ ಮಾವ ಮನೋಜ್‌ ನನ್ನು ಕೋಲಿನಿಂದ ಹೊಡೆದು ಕೊಂದಿದ್ದಾನೆ.

Read More

ಶ್ರೀನಿವಾಸಪುರ:ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕು ಕಸಬಾ ಹೋಬಳಿ ಪಾಳ್ಯ ಗ್ರಾಮದಲ್ಲಿ ನಡದಿದೆ.ಕೊಲೆಯಾದ ಮಹಿಳೆಯನ್ನು ಗ್ರಾಮದ ಶ್ರೀರಾಮರೆಡ್ಡಿ ಎಂಬುವರ ಪತ್ನಿ ರೂಪಾ (38) ಎಂದು ಗುರುತಿಸಲಾಗಿದೆ.ಸೋಮವಾರ ಮಧ್ಯಾಹ್ನ ರೂಪಾ ಹಸು ಮೇಯಿಸಲು ಹೋದವರು ಮುಸ್ಸಂಜೆಯಾದರು ಮನೆಗೆ ವಾಪಸ್ಸು ಬಾರದ ಹಿನ್ನಲೆ ಕುಟುಂಬಸ್ಥರು ಗ್ರಾಮದ ಸುತ್ತಮುತ್ತಲು ಹುಡುಕಾಡಿದಾಗ ಗ್ರಾಮದ ಹೊರವಲಯದ ಚುರುವುನಹಳ್ಳಿಗೆ ಹೋಗುವ ದಾರಿಯಲ್ಲಿನ ಕೆರೆ ಕಾಲುವೆ ಬಳಿ ರೂಪಾ ರಕ್ತದ ಮಡವಿನಲ್ಲಿ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಶ್ರೀನಿವಾಸಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಇತ್ತು ಪರಿಶೀಲನೆ ನಡೆಸಿದ್ದಾರೆ, ಮೊಬೈಲ್ ಕಾಲ್ ತನಿಖೆ ಒಳಪಡಿಸಿದಾಗ ಕೊಲೆ ಆರೋಪಿ ಸುಳಿವು ಸಿಕ್ಕಿದೆ ಗ್ರಾಮದ ಆನಂದಪ್ಪ ಎಂಬುದನ್ನು ಪತ್ತೆ ಹಚ್ಚಿದ್ದಾರೆ ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಮೃತ ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಇದ್ದ ವಿಚಾರ ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆ ಹಾಗು ಆರೋಪಿ ನಡುವೆ…

Read More

ಶ್ರೀನಿವಾಸಪುರ:ಕಾರು ಹಾಗೂ ದ್ವಿಚಕ್ರವಾಹನ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಕೋಡಿಚೆರವು ನಾರಯಣಸ್ವಾಮಿ(65) ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.ಶ್ರೀನಿವಾಸಪುರ-ಕೋಲಾರ ರಸ್ತೆಯ ಚಲ್ದಿಗಾನಹಳ್ಳಿ ಕ್ರಾಸ್ ನಲ್ಲಿ ಸೋಮವಾರ ಸಂಜೆ ಅಪಘಾತ ನಡೆದಿದ್ದು ಮೃತ ನಾರಯಣಸ್ವಾಮಿ ಕುಂಬಾರ ಸಮಾಜದ ಮುಖಂಡರು,ಕೊಡಿಚೆರುವು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗು ಜೆಡಿಎಸ್ ಮುಖಂಡ ಜೋತೆಗೆ ಮಾಜಿ ಸಂಸದ ಹಾಲಿ ಮಂತ್ರಿ ಕೆ.ಹೆಚ್.ಮುನಿಯಪ್ಪ ನವರ ಆಪ್ತರಾಗಿದ್ದರು.ಅಪಘಾತದಲ್ಲಿ ಕಾರು ಹಾಗೂ ದ್ವಿಚಕ್ರ ಎರಡು ವಾಹನಗಳು ಸಂಪೂರ್ಣ ಜಕಂ ಗೊಂಡಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೋಂಡಿದ್ದಾರೆ ಶ್ರೀನಿವಾಸಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನ್ಯೂಜ್ ಡೆಸ್ಕ್:ರೋಹಿತ್ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಕರೆದುಕೊಂಡು ಸಿರೆ ಖರೀದಿಸಲು ವಿಶಾಲ್ ಅಂಗಡಿಗೆ ತನ್ನ ಪತ್ನಿಯೊಂದಿಗೆ ಸೀರೆ ಖರೀದಿಸಲು ಬಂದಿದ್ದ. ದಂಪತಿಗಳು ದೀರ್ಘಕಾಲದವರೆಗೆ ಹಲವಾರು ಸೀರೆಗಳನ್ನು ಪರಿಶೀಲಿಸಿದ್ದಾರೆ ಆದರೆ ಯಾವುದು ಆಯ್ಕೆ ಮಾಡಲಿಲ್ಲ.ಇದಕ್ಕೆ ಅಂಗಡಿ ಮಾಲಿಕ ವಿಶಾಲ್ ಗ್ರಾಹಕ ರೋಹಿತ್‌ಗೆ ಯಾವ ಬೆಲೆಯ ಸೀರೆಗಳನ್ನು ಖರೀದಿಸಲು ಬಯಸುತ್ತೀರಿ ಎಂದು ಕೇಳಿದ್ದಾನೆ ಇದಕ್ಕೆ ರೋಹಿತ್ ರೂ 1,000 ಮೌಲ್ಯದ್ದು ಎಂದಿರಿತ್ತಾನೆ ಅಂಗಡಿ ಮಾಲಿಕ ಖರೀದಿದಾರನನ್ನು ‘ಅಂಕಲ್’ ಎಂದು ಸಂಬೋಧಿಸಿರುತ್ತಾನೆ ಇದಕ್ಕೆ ನನ್ನ ಗೌರವ ಕಡಿಮೆ ಮಾಡಿದ್ದಾನೆ ಎಂದು ಆರೋಪಿಸಿ ಜಗಳವಾಡಿದ್ದಾನೆ ವಾಪಸ್ಸು ಹೋದ ಗ್ರಾಹಕ ನಂತರ ಸ್ನೇಹಿತರೊಂದಿಗೆ ವಾಪಸ್ಸು ಬಂದು ಅಂಗಡಿ ಮಾಲಿಕನನ್ನು ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಈ ಘಟನೆ ಮಧ್ಯಪ್ರದೇಶದ ಭೂಪಾಲ್ ನಗರದಲ್ಲಿ ನಡೆದಿದ್ದು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿಂತಾಮಣಿ:ಚಲಿಸುತ್ತಿದ್ದ ಮಾರುತಿ ಓಮ್ನಿ ವ್ಯಾನ್ ರಸ್ತೆಬದಿಯ ಹಳ್ಳಕ್ಕೆ ಬಿದ್ದು ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡು ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಚಿಂತಾಮಣಿ ತಾ.ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲಪಲ್ಲಿ ಬಳಿ ಘಟನೆ ನಡೆದಿದೆ.ಬೆಂಕಿಗಾಹುತಿಯಾದ ಮೃತಪಟ್ಟ ವ್ಯಕ್ತಿಯನ್ನು ಚಿಂತಾಮಣಿ ನಗರದ ಟಿಪ್ಪುನಗರದ ನಿವಾಸಿ ಇಬ್ರಾಹಿಂ(45) ಎನ್ನಲಾಗಿದ್ದು ಮೃತ ವ್ಯಕ್ತಿ ವ್ಯಾಪಾರಸ್ಥನಾಗಿದ್ದು ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ಚಿಂತಾಮಣಿ ಕಡೆಯಿಂದ ಗಂಡ್ರಗಾನಹಳ್ಳಿ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಮಾರುತಿ ಓಮ್ನಿ ವ್ಯಾನ್ ಹಳ್ಳಕ್ಕೆ ಉರಳಿ ಬಿದ್ದಿದೆ ಈ ಸಂದರ್ಭದಲ್ಲಿ ಓಮ್ನಿ ವ್ಯಾನ್ ಗೆ ಬೆಂಕಿಹೊತ್ತಿಕೊಂಡಿದೆ ಕಾರಿನಲ್ಲಿದ್ದ ಇಬ್ರಾಹಿಂ ಸಹ ಸುಟ್ಟು ಮೃತಪಟ್ಟಿದ್ದಾನೆ.ಸುಟ್ಟು ಮೃತಪಟ್ಟ ವ್ಯಕ್ತಿಯನ್ನು ನೋಡಿ ಸ್ಥಳದಲ್ಲಿದ್ದ ಜನರು ಮಮ್ಮಲ ಮರುಗಿದರು. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಮುರಳಿಧರ್.ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟರವಣಪ್ಪ.ಸಬ್ ಇನ್ಸಪೇಕ್ಟರ್ ಶಿವಕುಮಾರ್,ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಶ್ರೀನಿವಾಸಪುರ:ಎರಡು ಗ್ರಾಮಗಳ ನಡುವೆ ಇದ್ದ ಬಂಡಿದಾರಿ(ಎತ್ತಿನ ಗಾಡಿ ಒಡಾಡುತ್ತಿದ್ದ ರಸ್ತೆ) ಹಲವಾರು ಕಾರಣಗಳಿಗೆ ಒತ್ತುವರಿಯಾಗಿದ್ದು ಇದನ್ನು ತೆರವು ಮಾಡಿಸಿಕೊಳ್ಳುವಲ್ಲಿ ಗ್ರಾಮಸ್ಥರ ಕೈಯಲ್ಲಿ ಸಾಧ್ಯವಾಗದ ಹಿನ್ನಲೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯ ಹೆಬ್ಬಟಅನಂದ್ ಕಂದಾಯ ಇಲಾಖೆ ಅಧಿಕಾರಿಗಳ ಮತ್ತು ಒತ್ತುವರಿ ದಾರರ ನಡುವೆ ಸಮನ್ವಯತೆ ಮೂಡಿಸಿ ಒತ್ತುವರಿ ದಾರರ ಮನವೊಲಿಸಿ ದಾರಿ ತೆರವು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಶ್ರೀನಿವಾಸಪುರ ತಾಲ್ಲೂಕಿನ ಯಲವಳ್ಳಿ ಯಿಂದ ಕೋಲಾರ-ಶ್ರೀನಿವಾಸಪುರ ಮುಖ್ಯ ರಸ್ತೆಯ ತನಕ ಇದ್ದ ಬಂಡಿದಾರಿ ಈಗ್ಗೆ 30 ವರ್ಷಗಳ ಹಿಂದೆ ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದರು ಇದನ್ನು ತೆರವು ಮಾಡಿಸಲು ತಾಲೂಕು ದಂಡಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು ಸಮಸ್ಯೆ ಇತ್ಯರ್ಥವಾಗಲಿಲ್ಲ ಪುನಃ ತಹಶೀಲ್ದಾರ್ ಅವರಿಗೆ ಮನವಿ ಪತ್ರ ತೀವ್ರವಾಗಿ ಒತ್ತಾಯಿಸಿದ್ದರು ಈ ಸಂದರ್ಭದಲ್ಲಿ ಸ್ಥಳಕ್ಕೆ ಕಂದಾಯ ಇಲಾಖೆ ಹಾಗು ಸರ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರ್ವೇ ಮಾಡಿ ಒತ್ತುವರಿಯಾಗಿದ್ದ ಬಂಡಿದಾರಿ ಸಮಸ್ಯೆ ಬಗೆ ಹರಿಸಲು ಮುಂದಾಗಿದ್ದು ಯಶಸ್ವಿಯಾಗದ ಹಿನ್ನಲೆಯಲ್ಲಿ ಪಂಚಾಯತಿ ಸದಸ್ಯ ಆನಂದ್ ಜಮೀನು ಒತ್ತುವರಿ ದಾರರ ಮನವೊಲಿಸಿ…

Read More

ನ್ಯೂಜ್ ಡೆಸ್ಕ್:ವಾಯುವ್ಯ ಸೌದಿ ಅರೇಬಿಯಾದ ಖೈಬರ್ ಓಯಸಿಸ್‌ನಲ್ಲಿ ಪುರಾತತ್ವ ಶಾಸ್ತ್ರಜ್ಞರು 4,000 ವರ್ಷಗಳಷ್ಟು ಹಳೆಯದಾದ ಪಟ್ಟಣವನ್ನು ಕಂಡುಹಿಡಿದಿದ್ದಾರೆ. ಇದರ ಹೆಸರನ್ನು ಅಲ್-ನತಾಹ್ ಎಂದು ಗುರುತಿಸಲಾಗಿದೆ. ಪಟ್ಟಣದ ಸುತ್ತಲೂ 14.5 ಕಿಮೀ ಉದ್ದದ ಗೋಡೆಯನ್ನು ಹೊಂದಿದ್ದು ಕ್ರಿ.ಪೂ.2400BC ಯಷ್ಟು ಹಳೆಯದಾಗಿದ್ದು ಅಲ್ಲಿ 500 ಜನ ವಾಸಿಸುತ್ತಿದ್ದರು ಎನ್ನಲಾಗಿದ್ದು,ಮರುಭೂಮಿಯಲ್ಲಿನ ಹಸಿರು ಪ್ರದೇಶವಾದ ಖೈಬರ್‌ನ ಗೋಡೆಯ ಓಯಸಿಸ್‌ನೊಳಗೆ ಅಡಗಿದ್ದು. ಪ್ರಾಚೀನ ಅಲೆಮಾರಿ ಜೀವನ ಶೈಲಿಯಿಂದ ಜನರು ನಗರ ಜೀವನಶೈಲಿಗೆ ಹೇಗೆ ಬದಲಾದರು ಎಂಬುದನ್ನು ಈ ಸಂಶೋಧನೆಯು ತೋರಿಸುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.

Read More