ಮಾವಿನಕಾಯಿ ಹಣ ಸ್ಕೂಟನಲ್ಲಿಟ್ಟಿದ್ದು ಊರಿಗೆ ಹೋಗುವಾಗ ಅಂಗಡಿ ಬಳಿ ನಿಲ್ಲಿಸಿದ್ದ ವಾಹನದಿಂದ ಹಣ ಕದ್ದಿರುವ ಕಳ್ಳರ ಗ್ಯಾಂಗ್ ಶ್ರೀನಿವಾಸಪುರ:ರೈತನೊಬ್ಬ ಮಾವಿನಕಾಯಿ ಹಣ ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಸ್ಕೂಟರನ ಡಿಕ್ಕಿಯಲ್ಲಿಟ್ಟು ಊರಿಗೆ ಹೊರಟವ ದಾರಿಯಲ್ಲಿ ಎಲೆಕ್ಟ್ರಿಕ್ ಅಂಗಡಿ ಬಳಿ ನಿಲ್ಲಿಸಿ ಮನೆಗೆ ಬೇಕಾದ ವಸ್ತುಗಳನ್ನು ಖರಿದಿಸಿ ವಾಪಸ್ಸು ಊರಿಗೆ ಹೋಗಿ ನೋಡಿದರೆ ಸ್ಕೂಟರನ ಡಿಕ್ಕಿಯಲ್ಲಿಟ್ಟ ಹಣ ನಾಪತ್ತೆ ಗಮನಕ್ಕೆ ಬಂದಿದೆ.ಹಣ ಕಳೆದುಕೊಂಡ ವ್ಯಕ್ತಿ ಮಣಿಗಾನಹಳ್ಳಿ ಗ್ರಾಮದ ವೆಂಕಟೇಶಪ್ಪ,ಈತ ಮಾವಿನಕಾಯಿ ಹಾಕಿದ್ದ ಹಣ ಸುಮಾರು ಒಂದೂವರೆ ಲಕ್ಷ ಮಂಡಿ ಮಾಲಿಕ ನೀಡಿದ ಚೆಕ್ ಅನ್ನು ಕೆನರಾಬ್ಯಾಂಕಿನಲ್ಲಿ ಡ್ರಾ ಮಾಡಿಕೊಂಡು ಹೊರಗೆ ಬಂದು ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದಾನೆ ನಂತರ ವಾಹನ ಚಲಾಯಿಸಿಕೊಂಡು ಊರಿಗೆ ಹೋರಟವನು ಕೆಇಬಿ ಕಚೇರಿ ಮುಂಬಾಗದ ಎಲೆಕ್ಟ್ರಿಕ್ ಅಂಗಡಿ ಬಳಿ ವಾಹನ ನಿಲ್ಲಿಸಿ ಮನೆಗೆ ಬೇಕಾದಂತ ವಸ್ತುಗಳನ್ನು ಖರಿದಿಸಿರುತ್ತಾನೆ ವಸ್ತುಗಳ ಕವರ್ ಅನ್ನು ವಾಹನಕ್ಕೆ ತಗಲಾಕಿಕೊಂಡು ಊರಿಗೆ ಹೋಗಿ ಹಣ ತಗೆದುಕೊಳ್ಳಲು ಸ್ಕೂಟರ್ ಡಿಕ್ಕಿ ತೆರೆದಿದ್ದಾನೆ ಅಲ್ಲಿ ಹಣ ಇಲ್ಲದಿರುವುದನ್ನು ಕಂಡು ಗಾಬರಿಯಾಗಿದ್ದಾನೆ ನಂತರ…
Author: Srinivas_Murthy
ನ್ಯೂಜ್ ಡೆಸ್ಕ್:ಅರಣ್ಯಕ್ಕೆ ಹೊಂದಿಕೊಂಡ ಕಾಡು ಪ್ರದೇಶದ ಸಣ್ಣ ಕುಗ್ರಾಮದ ಅಂಗನವಾಡಿಯ ಶಿಕ್ಷಕಿಯೊಬ್ಬರು ಇಂದುಆಂಧ್ರಪ್ರದೇಶ ವಿಧಾನಸಭೆ ಸದಸ್ಯೆ ಅರ್ಥಾತ್ ಶಾಸಕಿ(MLA), ಅಂದು ಅಂಗನವಾಡಿ ಶಿಕ್ಷಕಿಯಾಗಿ ಎಲ್ಲಾ ಮಕ್ಕಳು ಸರಿಯಾಗಿ ಕುಳಿತಿದ್ದಾರ ಅಂಗನವಾಡಿ ಕೇಂದ್ರದಲ್ಲಿ ಎಲ್ಲಾ ವಸ್ತುಗಳು ಸರಿಯಾಗಿದೀಯಾ ಹಾಜರಾತಿ ರಿಜಿಸ್ಟರ್‌ನಲ್ಲಿ ಎಲ್ಲವು ದಾಖಲಾಗಿದೀಯಾ ಸರಿಯಾಗಿ ಬರೆಯಾಗಿದಿಯಾ ಅಥವಾ ಮರೆತುಬಿಟ್ಟಿದ್ದೀವಾ ಓಕೆ ಓಕೆ ಎಂದು ಸದಾ ಚಟುವಟುಕೆಯಿಂದ ಮಕ್ಕಳೊಂದಿಗೆ ಅಂಗನವಾಡಿಯಲ್ಲಿ ಒಡಾಡುತ್ತಿದ್ದ ಶಿಕ್ಷಕಿ ಇಂದು ಆಂಧ್ರದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾದ ರಂಪಚೋಡವರಂ ಶಾಸಕರಾಗಿದ್ದಾರೆ.ಅಂಗನವಾಡಿ ಟೀಚರ್ ಎಂಎಲ್‌ಎ ಹೇಗಾದರು ಎನ್ನುವುದೆ ಬಹಳಷ್ಟು ಜನಕ್ಕೆ ಕುತೂಹಲ,ಬುಡಕಟ್ಟು ಜನಾಂಗದ ಮತಗಳು ಅಕೆಯನ್ನು ಇಂದು ಈ ಮಟ್ಟಕ್ಕೆ ತಂದಿದೆ ಅನ್ನುವುದು ವಿಶೇಷ.ಆಂಧ್ರದ ಕರಾವಳಿಯಲ್ಲಿನ ಅವಿಭಜಿತ ಪೂರ್ವಗೋದಾವರಿ ಜಿಲ್ಲೆಯ ಅತಿದೊಡ್ಡ ಎಸ್ಟಿ ವಿಧಾನಸಭಾ ಕ್ಷೇತ್ರವಾದ ರಂಪಚೋಡವರಂ ಕ್ಷೇತ್ರ ಸಂಪೂರ್ಣ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ.ಇದು ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಪಕ್ಷವಾದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆ ಪಕ್ಷದಿಂದ ಯಾರೆ ನಿಂತರು ಗೆಲವು ಸಾಧಿಸುತ್ತಿದ್ದ ಕ್ಷೇತ್ರ, ಅಂತಹ ಕ್ಷೇತ್ರದಲ್ಲಿ…
ನ್ಯೂಜ್ ಡೆಸ್ಕ್:ಭಕ್ತಿಯ ಸಂಕೇತವಾದ ಅಯೋಧ್ಯೆ ಶ್ರೀರಾಮಚಂದ್ರ ಭಾರತೀಯರ ಅಚ್ಚುಮೆಚ್ಚಿನ ದೇವರು ಭಾವನಾತ್ಮಕವಾಗಿ ಶ್ರೀರಾಮನ್ನು ಪ್ರೀತಿಯೊಂದಿಗೆ ಪೂಜಿಸುತ್ತಾರೆ ದೇಶದ ಸಂಸ್ಕೃತಿ, ನಂಬಿಕೆ, ಪರಂಪರೆಯ ಐತಿಹಾಸಿಕ ಸಂಕೇತ. ಶ್ರೀರಾಮನ ಆದರ್ಶ ನಮ್ಮ ಜೀವನದಲ್ಲೂ ಇರಲಿ ಎಂದು ಭಯಸುತ್ತಾರೆ ಇಂತಹ ಶ್ರೀರಾಮನಿಗೆ ಈಗಿನ ತೆಲಂಗಾಣ ರಾಜ್ಯದ ಭದ್ರಾಚಲಂ ಶ್ರೀಸೀತಾರಾಮರಿಗೆ ರಾಮದಾಸು ಎಂಬ ಭಕ್ತ ದೇವಸ್ಥಾನ ನಿರ್ಮಿಸಿದ್ದು ಇತಿಹಾಸ ರಾಮದಾಸನ ಸಿನಿಮಾ ನೋಡಿದ ಬಹುತೇಕರಿಗೆ ಆತನ ಭಕ್ತಿಯ ಕುರಿತಾಗಿ ಸಾಕಷ್ಟು ತಿಳಿದಿರುತ್ತದೆ ಅಷ್ಟೊಂದು ಆಪ್ಯಾಯತೆ ಪ್ರೀತಿಯಿಂದ ಭದ್ರಾಚಲಂ ನಲ್ಲಿ ತನ್ನ ಪ್ರೀತಿಯ ರಾಮಯ್ಯನಿಗೆ ಶ್ರೀಸೀತಾರಾಮನ ದೇವಾಲಯವನ್ನು ಭಕ್ತ ರಾಮದಾಸು ಪ್ರೀತಿಯಿಂದ ಕಟ್ಟಿಸಿರುವುದು ಇತಿಹಾಸ.ಇಷ್ಟೊಂದು ಭಕ್ತಿ ಪವಿತ್ರ್ಯತೆಯ ಭದ್ರಾಚಲಂ ಶ್ರೀಸೀತಾರಾಮ ದೇವಸ್ಥಾನ ಗೋದಾವರಿ ನದಿ ತೀರದ ಪಶ್ಚಿಮ ದಿಕ್ಕಿನತ್ತ ಮುಖ ಮಾಡಿರುವುದು ಈ ದೇವಸ್ಥಾನದ ವಿಶೇಷತೆಯಾಗಿದೆ ಇದು ಭಗವಾನ್ ರಾಮನಿಗೆ ಸಮರ್ಪಿತವಾಗಿರುವ ವಿಶಿಷ್ಟ ದೇವಾಲಯವಾಗಿ “ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯ” ಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಸ್ತುತ ಭಾರಯದಲ್ಲಿ ಅಯೋಧ್ಯೆಯ ನಂತರ ಅತಿದೊಡ್ಡ ಶ್ರೀರಾಮಕ್ಷೇತ್ರವಾಗಿದೆಈಗ ಇಂತಹುದೆ ಭದ್ರಾಚಲಂ ಶ್ರೀಸೀತಾರಾಮ ದೇವಸ್ಥಾನವನ್ನು…
ನ್ಯೂಜ್ ಡೆಸ್ಕ್:ಎಲ್ಲವೂ ಸರಿಹೋಗಿದೆ ಎನ್ನುವಷ್ಟರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಶುರುವಾಗಿದೆ ಕಥುವಾ ಜಿಲ್ಲೆಯ ಮಚೇಡಿಯ ದಟ್ಟವಾದ ಅರಣ್ಯದ ಮಧ್ಯೆ ಸಾಗುವಂತ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಭಾರತೀಯ ಸೇನೆಯ ಬೆಂಗಾವಲು ಪಡೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಇದರಲ್ಲಿ ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಜೊತೆಗೆ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಈ ಪ್ರದೇಶವು ಭಾರತೀಯ ಸೇನೆಯ 9 ಕಾರ್ಪ್ಸ್ ಅಡಿಯಲ್ಲಿ ಬರುತ್ತದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ ಭಾರತೀಯ ಸೈನಿಕರು ಕೂಡ ಪ್ರತಿದಾಳಿ ನಡೆಸಿದರು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.ಸೇನೆಯ ಮೇಲೆ ದಾಳಿ ನಡೆಸುವ ಉಗ್ರರು ಅರಣ್ಯ ಪ್ರದೇಶದೊಳಗೆ ಪರಾರಿಯಾಗುತ್ತಿದ್ದು, ಉಗ್ರರ ಈ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದೆ.ಕಳೆದ ಮೂರ್ನಾಲ್ಕು ದಿನಗಳಲ್ಲಿ ಇದು ಸೇನೆಯ ಮೇಲೆ ನಡೆದ 2ನೇ ದಾಳಿಯಾಗಿದೆ. ಒಂದು ವಾರದಲ್ಲಿ ಸೇನಾ ವಾಹನವನ್ನೇ ಗುರಿಯಾಗಿಸಿ ನಡೆಸಿದ 2ನೇ ದಾಳಿಯೂ ಆಗಿದೆ. ಇತ್ತೀಚೆಗೆ ಇಲ್ಲಿನ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇದುವರಿಗೂ 6…
ಬೆಂಗಳೂರು:ಶ್ರೀನಿವಾಸಪುರ ಮೂಲದವರಾದ ನ್ಯಾಯಮೂರ್ತಿ ಬಿ ವೀರಪ್ಪ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದು ಈಗ ಅವರನ್ನು ಉಪಲೋಕಾಯುಕ್ತರನ್ನಾಗಿ ರಾಜ್ಯಪಾಲರು ಶುಕ್ರವಾರ ನೇಮಕ ಮಾಡಿ ಆದೇಶಿಸಿದ್ದಾರೆ.ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್ 3(1)ರ ಅಡಿ ದೊರೆತಿರುವ ಅಧಿಕಾರ ಬಳಸಿ ನಿವೃತ್ತ ನ್ಯಾಯಮೂರ್ತಿ ವೀರಪ್ಪ ಅವರನ್ನು ಉಪಲೋಕಾಯುಕ್ತರನ್ನಾಗಿ ನೇಮಕ ಮಾಡಿರುವುದಾಗಿ ರಾಜ್ಯಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ, ವಿಧಾನಸಭೆ ಸ್ಪೀಕರ್, ಪರಿಷತ್ ಸಭಾಪತಿ ಮತ್ತು ವಿರೋಧ ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಮೂರ್ತಿ ವೀರಪ್ಪ ಅವರ ಹೆಸರನ್ನು ಉಪಲೋಕಾಯುಕ್ತರ ಹುದ್ದೆಗೆ ಶಿಫಾರಸ್ಸು ಮಾಡಿದ್ದಾರೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ರಾಜ್ಯದಲ್ಲಿ ಉಪ ಲೋಕಾಯುಕ್ತರ ಎರಡು ಹುದ್ದೆಗಳಿವೆ. 2022ರ ಜೂನ್ 14ರಂದು ಉಪ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರನ್ನು ಲೋಕಾಯುಕ್ತ ಹುದ್ದೆಗೆ ಬಡ್ತಿ ನೀಡಿ, ಅಂದಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಅಂದಿನಿಂದಲೂ ಉಪ ಲೋಕಾಯುಕ್ತ ಹುದ್ದೆ ಖಾಲಿಯಾಗಿತ್ತು.ಎರಡನೇ ಉಪ ಲೋಕಾಯುಕ್ತರ…
ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಸಪ್ತಮಾತ್ರೀಕೆಯರಲ್ಲಿ ಒಬ್ಬರಾದ ವಾರಾಹಿ ಮಾತೆ ದೀಕ್ಷೆ ತೊಟ್ಟಿದ್ದರು ವಿಜಯವಾಡದ ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಕೇಂದ್ರ ಕಚೇರಿಯಲ್ಲಿ ವಾರಾಹಿ ಮಾತೆಯ ಪೂಜೆಯೊಂದಿಗೆ ಜುನ್ 25 ರಂದು ಅವರು ವೇದ ಪಂಡಿತರ ಮಂತ್ರಘೋಷಗಳ ನಡುವೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹನ್ನೊಂದು ದಿನಗಳ ಕಾಲ ವಾರಾಹಿ ದೀಕ್ಷೆ ತೊಟ್ಟಿದ್ದು 11 ದಿನಗಳ ಇದ್ದರು ದೀಕ್ಷಾ ಸಮಯದಲ್ಲಿ ಪವನ್ ಹಾಲು, ಹಣ್ಣುಗಳು ಮತ್ತು ದ್ರವ ಆಹಾರವನ್ನು ಮಾತ್ರ ಸೇವಿಸುತ್ತ ವ್ರತಾಚರಣೆ ಮಾಡಿದ್ದಾಗಿ ಹೇಳಲಾಗಿದ್ದು ಪವನ್ ಕಲ್ಯಾಣ್ ಅವರ ದೀಕ್ಷೆ ತೊಟ್ಟು ಪೂಜೆ ಸಲ್ಲಿಸುತ್ತಿರುವ ಫೋಟೋಗಳನ್ನು ಜನಸೇನಾ ಪಕ್ಷವು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದು, ಫೋಟೋಗಳು ಈಗ ಎಲ್ಲಡೆ ವೈರಲ್ ಆಗುತ್ತಿವೆ. ವಾರಾಹಿ ವಾಹನದಲ್ಲಿಯೇ ಚುನಾವಣಾ ಕ್ಯಾಂಪೇನ್ಚುನಾವಣೆ ಕ್ಯಾಂಪೇನ್ ಸಂದರ್ಭದಲ್ಲೂ ಮೀಲ್ಟ್ರಿ ವಾಹನ ಹೊಲುವಂತ ಅದೆ ಬಣ್ಣದ ಬಾರಿ ಗಾತ್ರದ ಟ್ರಕ್ ತರಿಸಿದ್ದ ಪವನ್ ಆ ವಾಹನಕ್ಕೂ ವಾರಹಿ ಎಂದು ನಾಮಕರಣ ಮಾಡಿದ್ದರು.ಪವನ್ ತೆಲಂಗಾಣ…
ಶ್ರೀನಿವಾಸಪುರ:ತಾಲೂಕಿನ ಮುತ್ತಕಪಲ್ಲಿ ಪಂಚಾಯಿತಿ ವ್ಯಾಪ್ತಿಯ ಮಟಕನ್ನಸಂದ್ರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಮಹಿಳೆಯೊಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರ ಇಂತಹದೊಂದು ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ, ಅನುಮಾನಸ್ಪದ ರೀತಿಯಲ್ಲಿ ಮೃತ ಪಟ್ಟಿರುವ ಮಹಿಳೆಯನ್ನು ಗ್ರಾಮದ ಮುನಿವೆಂಕಟರೆಡ್ಡಿ ಅವರ ಪತ್ನಿ ನಾರಯಣಮ್ಮ(58) ಎಂದು ಗುರುತಿಸಲಾಗಿದೆ.ತಾಲೂಕಿನ ಮಟಕನ್ನಸಂದ್ರ ಗ್ರಾಮದಲ್ಲಿ ವೆಂಕಟರಮಣಪ್ಪ ಮತ್ತು ಮುನಿವೆಂಕಟರೆಡ್ಡಿ ರವರ ಕುಟುಂಬಗಳ ನಡುವೆ ನಿವೇಶನ ಹಾಗು ದಾರಿ ವಿಚಾರವಾಗಿ ವಿವಾದ ಇದ್ದು, ಈ ಜಮೀನಿಗೆ ಸಂಬಂದಿಸಿದಂತೆ ಶ್ರೀನಿವಾಸಪುರ ನ್ಯಾಯಾಲಯದಲ್ಲಿ ವೆಂಕಟರಮಣಪ್ಪ ಪ್ರಕರಣ ದಾಖಲಿಸಿದ್ದಾರೆ ನ್ಯಾಯಲಯದಲ್ಲಿ ಇದೇ ತಿಂಗಳು ವಿಚಾರಣೆ ನಡೆಯಲಿದ್ದು ಪ್ರತ್ಯರ್ಥಿಗಳಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದೆ ಇದು ಮುನಿವೆಂಕಟರೆಡ್ಡಿ ಕುಟುಂಬಸ್ಥರನ್ನು ಆತಂಕಕ್ಕೆ ಈಡು ಮಾಡಿದೆ ಅವರ ಪತ್ನಿ ನಾರಾಯಣಮ್ಮ ನಮ್ಮ ಕುಟುಂಬಕ್ಕೆ ಆದ ಅಪಮಾನ ಎಂದು ಭಾವಿಸಿ ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತು ಎಲ್ಲಡೆ ಕೇಳಿಬರುತ್ತಿದೆ. ಆತ್ಮಹತ್ಯೆ ಗ್ರಾಮದಲ್ಲಿ ಗಲಭೆಗೂ ಕಾರಣವಾಯಿತಮುನಿವೆಂಕಟರೆಡ್ಡಿ ಅವರ ಪತ್ನಿ ನಾರಯಣಮ್ಮ ಆತ್ಮಹತ್ಯೆ ವಿಚಾರವಾಗಿ ಮುನಿವೆಂಕಟರೆಡ್ಡಿ ಮತ್ತು ವೆಂಕಟರವಣಪ್ಪ ಕುಂಟುಂಬಗಳ ನಡುವೆ ಮತ್ತಷ್ಟು ವಿವಾದಕ್ಕೆ…
ರಾಜ್ಯ ಸರ್ಕಾರದ ಯೋಜನೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು ಶ್ರೀನಿವಾಸಪುರ :ರಾಜ್ಯ ಸರ್ಕಾರ ಮಹಿಳೆಯರಿಗೆ ಜಾರಿಗೆ ತಂದಿರುವ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಉಚಿತ ಪ್ರಯಾಣದ ಪರಿಣಾಮ ಆಟೋ ಚಾಲಕರು ಬಾಡಿಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿ ನರಳುವಂತಾಗಿದೆ ಲಕ್ಷಾಂತರ ಆಟೋಚಾಲಕರ ಕುಟುಂಬಗಳು ಬಿದಿಗೆ ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಆರೋಪಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ತಾಲೂಕು ಆಟೋ ಚಾಲಕರ ಸಂಘದವತಿಯಿಂದ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಸರ್ಕಾರಕ್ಕೆ ಬಡವರ ಹಾಗು ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ ರಾಜ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡಿಸೇಲ್.ಎಲ್.ಪಿ.ಜಿ ಉತ್ಪನ್ನಗಳ ಬೆಲೆ ಏರಿಕೆ ಮಾಡಿರುವುದರಿಂದ ಆಟೋ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಅದರೊಂದಿಗೆ ಕಾರ್ಮಿಕರು ಸಾಮನ್ಯ ಜನತೆ ಉಪಯೋಗಿಸುವ ದಿನನಿತ್ಯ ಪಧಾರ್ಥಗಳಾದ ಹಾಲು, ತರಕಾರಿ ಗಗನಕ್ಕೆ ಏರಿಕೆಯಾಗಿರುವುದು ಕಾರ್ಮಿಕರ ಕುಟುಂಬದ ನಿತ್ಯ ಬದುಕಿನ ನಿರ್ವಹಣೆಗೆ ಕಷ್ಟಕರವಾಗಿದೆ ಎಂದ ಅವರು ಆಟೋ ಪ್ರಯಾಣದ ಧರವನ್ನು ಏರಿಸುವಂತೆ…
ನ್ಯೂಜ್ ಡೆಸ್ಕ್: 10 ಮತ್ತು 20 ರೂ. ಮುಖಬೆಲೆ ನಾಣ್ಯಗಳನ್ನು ನೀರಾಕರಿಸಿದರೆ ರಿಸರ್ವ್ ಬ್ಯಾಂಕ್ ಆದೇಶದಂತೆ ದೂರು ದಾಖಲಿಸಬಹುದಾಗಿದ್ದು ದೂರು ಸಾಬಿತಾದರೆ IPC ಸೆಕ್ಷನ್ 124A ಅಡಿಯಲ್ಲಿ ಜೈಲು ಶಿಕ್ಷೆ ಆಗಲಿದೆ ಎಂದು ಆದೇಶ ಆಗಿದೆ ಎಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ 10 ಮತ್ತು 20 ರೂಪಾಯಿಯ ನಾಣ್ಯಗಳು ಅಮಾನ್ಯವಾಗಿದೆ ಎಂದು ಸಬೂಬು ಹೇಳಿ ನಾಣ್ಯಗಳನ್ನು ನೀರಾಕರಿಸಿದರೆ ನಾಣ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಶಿಕ್ಷೆ ಬೀಳಲಿದೆ.ಆದ್ದರಿಂದ ಈ ರೀತಿಯ ತಪ್ಪನ್ನು ಮಾಡಲು ಹೋಗಬೇಡಿ ಎಂದು ಅವರು ಎಚ್ಚರಿಕೆ ಆರ್.ಬಿ.ಐ ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ 10 ಮತ್ತು 20 ರೂಪಾಯಿ ನಾಣ್ಯಗಳು ಅಮಾನ್ಯವಾಗಿದೆ ಚಲಾವಣೆ ಆಗುವುದಿಲ್ಲ ಎಂಬ ಸುದ್ದಿ ಸಾಮಜಿಕ ಜಾಲ ತಾಣಗಳಲ್ಲಿ ಹಬ್ಬಿತ್ತು.ಅಂಗಡಿ ಮಾಲೀಕರು ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದು ಮಾರುಕಟ್ಟೆಯಲ್ಲಿ ಚಿಲ್ಲರೆ ಸಮಸ್ಯೆಯಿಂದ ವ್ಯಾಪರಸ್ಥರು ಮತ್ತು ಸಾರ್ವಜನಿಕರು ನಾಣ್ಯಗಳ ವಿನಿಮಯ ನಿರಾಕರಣೆಯಿಂದಾಗಿ ತೊಂದರೆಗೆ ಒಳಗಾಗಿದ್ದರು ಈ ಬಗ್ಗೆ ಹೊಸ ಕಾನೂನು ಜಾರಿಗೆ ತಂದಿರುವ ಭಾರತ…
ಜಾಣ ಕುರುಡು ನೀತಿಯಲ್ಲಿ ಎಪಿಎಂಸಿ ಸಂತೆ ಸುಂಕ ಪಡೆಯುತ್ತಿರುವ ಪುರಸಭೆ ತಾಲೂಕು ಆಡಳಿತ ಸಂಬಂದವಿಲ್ಲದಂತಿದೆ ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ವಾರದ ಸಂತೆಗೆ ಸೂಕ್ತ ಜಾಗವಿಲ್ಲದೆ ಹೆದ್ದಾರಿಯಲ್ಲೆ ನಡೆಯುತ್ತಿದೆ, ಇದು ಹಲವಾರು ಅನಾಹುತಗಳಿಗೆ ಕಾರಣವಾಗಿದ್ದು ಪೋಲಿಸರು ಪುರಸಭೆ ತಾಲೂಕು ಆಡಳಿತ ಕಣ್ಣು-ಕಿವಿ ಮುಚ್ಚಿಕೊಂಡು ಸಂತೆ ನಡೆಯಲು ಸಹಕಾರ ನೀಡಿದಂತಾಗಿದೆ ಎಂದು ಜನತೆ ಹೇಳುತ್ತಿದ್ದಾರೆ.ಶ್ರೀನಿವಾಸಪುರ ಪಟ್ಟಣ ಆರಂಭಂದಿಂದಲು ಈಚಲಕುಂಟೆ ಕೆರೆಗೆ ಹೊಂದಿಕೊಂಡಿರುವ ಅಚ್ಚುಕಟ್ಟು ಪ್ರದೇಶದಲ್ಲಿ ಸಂತೆ ನಡೆಯುತಿತ್ತು, ಅಧಿಕಾರಕ್ಕೆ ಬರುವಂತ ಜನಪ್ರತಿನಿಧಿಗಳು ಸಂತೆ ಮೈದಾನದ ಜಾಗದಲ್ಲಿ ನಿವೇಶನ ರಹಿತರಿಗೆ ಒಂದಷ್ಟು ಜನಕ್ಕೆ ಗುಡಿಸಲು ಹಾಕಿಕೊಳ್ಳಲು ಪರೊಕ್ಷವಾಗಿ ಅವಕಾಶ ಕಲ್ಪಿಸಿದರು ಮುಂದೆ ಒಂದಷ್ಟರ ಜೊತೆಗೆ ಮತ್ತೊಂದಷ್ಟು ಆಯಿತು ಸಂತೆಗೆ ಜಾಗವಿಲ್ಲದಷ್ಟು ಗುಡಿಸಲುಗಳು ತಲೆ ಎತ್ತಿತು,ಮತ್ತೆ ರಾಜಕೀಯ ತಿರುವು ಪಡೆದುಕೊಂಡು ಗುಡಿಸಲು ವಾಸಿಗಳಿಗೆ ಬೃಹದಕಾರವಾಗಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತೆಗೆ ಜಾಗವಿಲ್ಲದಷ್ಟು ಬೃಹದಕಾರವಾಗಿ ಗುಡಿಸಲು ವಾಸಿಗಳಿಗೆ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತೆ ವಹಿವಾಟು ಅನಾಮತ್ ಮುಳಬಾಗಿಲು-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಗೆ ಬಂದು ಬಿಟ್ಟಿದೆ ಈಗ ನಡುರಸ್ತೆಯಲ್ಲೆ ಸಂತೆವ್ಯಾಪಾರ ನಡೆಯುತ್ತಿದೆಹೈವೆ ರಸ್ತೆಯಲ್ಲಿ…