ಶ್ರೀನಿವಾಸಪುರ:ಅಪರಿಚಿತ ವಾಹನ ಬಡಿದು ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿ ಮೃತ ಪಟ್ಟ ಘಟನೆ ಶನಿವಾರ ತಡ ಸಂಜೆ ಬೆಂಗಳೂರು-ಕಡಪಾ ಹೈವೆಯಲ್ಲಿ ನಡದಿದೆ.ಮೃತ ವ್ಯಕ್ತಿಯನ್ನು ತಾಲೂಕಿನ ದಲಿತ ಮುಖಂಡ ಗಾಂಡ್ಲಹಳ್ಳಿನಾರಯಣಸ್ವಾಮಿ(65) ಎಂದು ಗುರತಿಸಲಾಗಿದೆ. ಬೆಂಗಳೂರು-ಕಡಪಾ ಹೈವೆಯಲ್ಲಿ ಶನಿವಾರ ಸಂಜೆ ಗಾಂಡ್ಲಹಳ್ಳಿನಾರಯಣಸ್ವಾಮಿ ಚಿಂತಾಮಣಿ ಕಡೆಯಿಂದ ದ್ವಿಚಕ್ರವಾಹದಲ್ಲಿ ಬರುತ್ತಿದ್ದು ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಕ್ರಾಸ್ ಬಳಿ ಎದರುಗಡೆಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ವಾಹನ ಚಲಾಯಿಸುತ್ತಿದ್ದ ಗಾಂಡ್ಲಹಳ್ಳಿನಾರಯಣಸ್ವಾಮಿ ವಾಹನದಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೀಯೆ ಸಾವನಪ್ಪಿರುತ್ತಾರೆ ಎಂದು ಪೋಲಿಸರು ಶಂಕಿಸಿರುತ್ತಾರೆ.ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎಂಬತ್ತರ ದಶಕದಲ್ಲಿ ಕೋಲಾರ ಜಿಲ್ಲೆಯ ದಲಿತ ಸಂಘಟನೆಯಲ್ಲಿ ಚುರುಕಾಗಿದ್ದ ಗಾಂಡ್ಲಹಳ್ಳಿನಾರಯಣಸ್ವಾಮಿ ಅವಿವಾಹಿತರಾಗಿದ್ದು ಪ್ರಖರ ಭಾಷಣಕಾರಾಗಿದ್ದ ಅವರು ಯಾವುದೆ ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಳ್ಳದೆ ನೇರ ಹಾಗು ನಿಷ್ಠೂರವಾದಿ ಎಂದು ಖ್ಯಾತರಾಗಿದ್ದರು. ಶ್ರದ್ದಾಂಜಲಿ ಅರ್ಪಣೆತಾಲೂಕು ಕಚೇರಿ ಮುಂಬಾಗದಲ್ಲಿನ ಅಂಬೇಡ್ಕರ್ ಪುತ್ಥಳಿ ಬಳಿ ತಾಲೂಕಿನ ದಲಿತ ದಂಘಟನೆಗಳ ಮುಖಂಡರು ಗಾಂಡ್ಲಹಳ್ಳಿನಾರಯಣಸ್ವಾಮಿ ಪಾರ್ಥೀವ ಶರಿರ ಇಟ್ಟು ಸಾಮೂಹಿಕವಾಗಿ ಶ್ರದ್ದಾಂಜಲಿ ಅರ್ಪಣೆ ಮಾಡಿದರು…
Author: Srinivas_Murthy
ಶ್ರೀನಿವಾಸಪುರ:ಶ್ರೀನಿವಾಸಪುರದ ಗ್ರಾಮ ದೇವತೆಯಂದು ಪೂಜಿಸುವ ಶ್ರೀಚೌಡೇಶ್ವರಿ ವರ್ಧಂತೋತ್ಸವ ಜಯಂತಿ ಕಾರ್ಯಕ್ರಮ ಭಕ್ತಿ ಭಾವದಿಂದ ಅದ್ದೂರಿಯಾಗಿ ಆಚರಿಸಲಾಯಿತು.ಆಷಾಢದಲ್ಲಿ ಮಂಗಳಕರವಾದ ರೇವತಿ ನಕ್ಷತ್ರದಂದು ಚೌಡೇಶ್ವರಿ ವರ್ಧಂತಿಯನ್ನು ಆಚರಿಸಲಾಗುತ್ತದೆ.ವರ್ಧಂತೋತ್ಸವ ಅಂಗವಾಗಿ ಚೌಡೇಶ್ವರಿ ಅಮ್ಮನವರಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು ಬೆಳಿಗ್ಗೆ ಬ್ರಹ್ಮ ಮುಹೂರ್ತದ ಸಮಯದಲ್ಲಿ ಸುಪ್ರಭಾತ ಸೇವೆಯೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮಗಳು ಪಂಚಾಮೃತಾಭಿಷೇಕ, ಪುಷ್ಪಾರ್ಚನೆ, ನಂತರ ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ ಪಾರಯಣ. ಸಹಸ್ರನಾಮ ಕುಂಕುಮಾರ್ಚನೆ ಮಂತ್ರಪುಷ್ಪ, ಅಷ್ಟಾವಧ ಸೇವೆ ನಂತರ ಮತ್ತಿತರ ಧಾರ್ಮಿಕ ವಿಧಿವಿಧಾನಗಳ ಆಚರಣೆ ನಂತರ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳುವರ್ಧಂತೋತ್ಸವ ಅಂಗವಾಗಿ ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಮುಂಜಾನೆಯಿಂದಲೆ ದೇವಾಲಯಕ್ಕೆ ಆಗಮಿಸಿ ಶ್ರೀಚೌಡೇಶ್ವರಿ ಅಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನಿತರಾದರು.ರಾತ್ರಿ ಒಂಬತ್ತು ಗಂಟೆಯಾದರೂ ಆಗಮಿಸುತ್ತಿದ್ದ ಭಕ್ತರು.ಕೊಳ್ಳೂರು ಬಡಾವಣೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲೂ ವರ್ಧಂತೋತ್ಸವ ಅಂಗವಾಗಿ ವಿಶೇಷ ಪೂಜೆ ದುರ್ಗಾ ಹೋಮ ಹವನ ನಡೆಸಿದ್ದು,ಭವ್ಯವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು.
ನ್ಯೂಜ್ ಡೆಸ್ಕ್:ಗಂಡ IAS ಅಧಿಕಾರಿ ಆದರೆ ಪತ್ನಿ ರೌಡಿ ಜೊತೆ ಓಡಿ ಹೋದ ಕತೆಯಿದು IAS ಅಧಿಕಾರಿಯನ್ನು ಬಿಟ್ಟು ಹೋದ ಪತ್ನಿ ಹೋದದ್ದಾರು ಹೇಗೆ ಎಲ್ಲಿಗೆ ಆಗಿದ್ದಾದರೂ ಏನು ಎಂಬುದೆ ವಿಶೇಷ ಕಥಾನಕ.ಐಎಎಸ್ ಅಧಿಕಾರಿಯ ಪತ್ನಿ ವಿಲಾಸಮಯವಾದ ಐಷಾರಾಮಿ ಜೀವನ ನಡೆಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳು ಲಭ್ಯವಿದ್ದರು ಅವಳು ಅಡ್ಡದಾರಿ ಹಿಡಿದಳು. ಗ್ಯಾಂಗ್ ಸ್ಟಾರ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ IAS ಅಧಿಕಾರಿ ಪತ್ನಿ ಕೊನೆಗೆ IAS ಗಂಡನ ತೊರೆದು ರೌಡಿ ಗ್ಯಾಂಗ್ ಲೀಡರ್ ಜೊತೆ ಹೋಗಿಬಿಟ್ಟಳು ಆನಂತರ ಏನಾಯಿತು ಅನ್ನುವುದೆ ಕೌತುಕ.ಗುಜರಾತ್ ನಲ್ಲಿ ನಡೆದಿರುವಂತ ಹಲವು ಟ್ವಿಸ್ಟ್ ಗಳನ್ನು ಹೊಂದಿರುವ ಕಥಾನದ ಮುಖ್ಯಪಾತ್ರಧಾರಿ ಐಎಎಸ್ ಅಧಿಕಾರಿಯಾಗಿರುವ ರಂಜಿತ್ ಕುಮಾರ್ ಗುಜರಾತ್ ರಾಜ್ಯದ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ(GERC) ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸೂರ್ಯ ಜಯ್ (45) ಎಂಬ ಪತ್ನಿ ಇದ್ದು ಇಬ್ಬರ ನಡುವೆ ಆನ್ಯೋನ್ಯತೆ ಇದ್ದು ಇಬ್ಬರು ಗುಜರಾತ್ ನ ಗಾಂಧಿನಗರದಲ್ಲಿ ಸುಖಮಯವಾದ ಜೀವನ ಸಾಗಿಸುತ್ತಿದ್ದರು. ಈ ದಂಪತಿ ನಡುವೆ ಮತ್ತೊಬ್ಬ…
ಶ್ರೀನಿವಾಸಪುರ:ಜನರ ನಡುವೆ ಸೌಹಾರ್ದತೆಯ ಮಾನವೀಯ ಸಂಭಂದಗಳು ಇರಬೇಕು ಇದರಿಂದ ಸಮಾಜದಲ್ಲಿ ಆರೋಗ್ಯಪೂರ್ಣ ವಾತವರಣ ಇರುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿರೆಡ್ಡಿ ಹೇಳಿದರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಶ್ರೀನಿವಾಸಪುರ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲದ ನಿವಾಸಿ ಸಕ್ಕರೆ ಕಾಯಿಲೆಯಿಂದ ಕಾಲನ್ನು ಕಳೆದುಕೊಂಡು ಬಳಲುತ್ತಿರುವ ಅತಾವುಲ್ಲಾ ಸೇರಿದಂತೆ ಇತರರಿಗೆ ವೀಲ್ ಚೇರ್ ಹಾಗು ಇತರೆ ಸಲಕರಣೆಗಳನ್ನು ವಿತರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮಾತನಾಡಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈಗಾಗಲೇ 88 ಮಂದಿ ವಿಶೇಷ ಚೇತನರಿಗೆ ವೀಲ್ ಚೇರ್, ವಾಟರ್ ಬೆಡ್ ಯೂ ಶೇಪ್ ವಾಕರ್ ಕಮೋಡ್ ಚೇರ್ ಆಕ್ಸಿಲರಿ ಕ್ರಚ್ಚಸ್ ಇನ್ನಿತರ ಸಲಕರಣೆಗಳನ್ನು ಧರ್ಮಸ್ಥಳ ಸಂಸ್ಥೆ ಉಚಿತವಾಗಿ ನೀಡಿದ್ದು ವಿಶೇಷಚೇತನರು ಇದ್ದಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು…ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಸ್ಥೆಯ ಕೋಲಾರ ಜಿಲ್ಲಾ ನಿರ್ದೇಶಕ ಪದ್ಮಯ್ಯ ಗೌಡ,ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮೇಲ್ವಿಚಾರಕರಾದ ಯಶೋಧಾ…
ಶ್ರೀನಿವಾಸಪುರ:ಒಂಟಿ ಮನೆ ಗುರಿಯಾಗಿಸಿಕೊಂಡು ದರೋಡೆ ಮಾಡಿರುವ ಘಟನೆ ಬೆಂಗಳೂರು-ಕಡಾಪ ಹೈವೆ ರಸ್ತೆಯಲ್ಲಿ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿ ನಡೆದಿರುತ್ತದೆ.ಬುಧವಾರ ರಾತ್ರಿ ಸುಮಾರು ಎಂಟುಗಂಟೆ ಸಮಯದಲ್ಲಿ ತಾಡಿಗೋಳ್ ಕ್ರಾಸ್ ಸಮೀಪದಲ್ಲಿರುವ ಭಗವಾನ್ ಶಾಲೆ ಬಳಿಯ ಒಂಟಿಮನೆಯಲ್ಲಿ ಮನೆಯ ಯಜಮಾನ ರೇಷನ್ ತರಲು ಅಂಗಡಿಗೆ ಹೋಗಿದ್ದ ವೇಳೆ ನಾಲ್ಕು ಜನರಿದ್ದ ಅಪರಿಚಿತರ ಗುಂಪು ಮನೆಯ ಬಳಿ ಕುರಿಶೆಡ್ ಜಾಗದಲ್ಲಿ ಅವಿತಿರುತ್ತಾರೆ ಈ ಸಮಯದಲ್ಲಿ ನಾಯಿ ಬೊಗಳಿದ್ದು ಅನುಮಾನಗೊಂಡ ಮನೆಯ ಯಜಮಾನಿ ಶೆಡ್ ಬಳಿ ನೋಡಿದಾಗ ಅಲ್ಲಿದ್ದ ದಾಂಡಿಗರ ಗುಂಪು ಆಕೆಯನ್ನು ಹೆದರಿಸಿದ್ದಾರೆ ಆಕೆ ಭಯದಿಂದ ಮನೆಯತ್ತಿರ ಓಡಿಬಂದಿದ್ದಾರು ದಾಂಡಿಗರ ಗುಂಪು ಅಟ್ಟಿಸಿಕೊಂಡು ಬಂದು ಮನೆಯೊಳಗೆ ನುಗ್ಗಿದ್ದಾರೆ ತಮ್ಮಲ್ಲಿದ್ದ ಪಿಸ್ತೂಲ್ ಲಾಂಗುಗಳು ತೋರಿಸಿ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ಬೆದರಿಸಿದ ಖದೀಮರು ಮನೆ ಯಜಮಾನಿ ಹಾಕಿಕೊಂಡಿದ್ದ ಮಾಂಗಲ್ಯ,3 ಜೊತೆ ಓಲೆ,6 ಉಂಗುರ,1 ನಕ್ಲೆಸ್, 55 ಸಾವಿರ ಹಣವನ್ನು ತಗೆದುಕೊಂಡು ಹೋಗಿದ್ದಾರೆ.ಮನೆಯಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ಕೊಟ್ಟು ಪರಶೀಲನೆ ನಡೆಸಿ ಪ್ರಕರಣ…
ನ್ಯೂಜ್ ಡೆಸ್ಕ್:ಮುಂಗಾರು ಅಧಿವೇಶನದಲ್ಲಿ ಬುಧವಾರ ಸದನದಲ್ಲಿ ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ವಿಧಾನಸಭೆ ನಡೆಯುವ ಒಳಗಡೆಯೇ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ವಿಧಾನಸಭೆಯಿಂದ ತಾಳ ಬಡಿಯುತ್ತಾ ಭಜನೆ ಮಾಡುತ್ತಲೇ ವಿಧಾನ ಪರಿಷತ್ಗೆ ತೆರಳಿದ ಬಿಜೆಪಿ ವಿಧಾನ ಪರಿಷತ್ ಸದಸ್ಯರು, ವಿಧಾನಸೌಧದ ಕಾರಿಡಾರ್ಗಳಲ್ಲಿ ವಾದ್ಯಗಳನ್ನು ಬಾರಿಸುತ್ತ ಶ್ರೀರಾಮನ ಭಜನೆ,ವಿಠ್ಠಲ ಭಜನೆ ಭಾವಗೀತೆಗಳ ಗಾಯನ ಮಾಡುತ್ತ ವಿಪಕ್ಷ ನಾಯಕ ಆರ್.ಆಶೋಕ್ ಮತ್ತು ಸಿಟಿ ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್ ಹೆಜ್ಜೆ ಹಾಕಿದರೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮೂಕನಾದೆ ನಾನು ಮುಡ ಹಗರಣಕ್ಕೆ ಎಂದು ಹಾಡಿಗೆ ತಾಳ ಬಾರಿಸಿದರು, ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಭಾಗೀರಥಿ ಮುರಳ್ಯ ಸದನದಲ್ಲಿ ಗಮನ ಸೆಳೆದರು ಇದಕ್ಕೆ ಇತರ ಸದಸ್ಯರು ಸಾಥ್ ನೀಡಿದರು.ಇನ್ನು ಭಜನೆ ಮೂಲಕವೇ ಕಾಂಗ್ರೆಸ್ ಸರ್ಕಾರಕ್ಕೆ ಲೆವಡಿ ಮಾಡಿದ ಬಿಜೆಪಿ, ‘ಸಮಾಜವಾದ ಅಂತಾರೆ ಮಜಾವನ್ನೇ ಮಾಡ್ತಾರೆ. ಸಮಾಜವಾದ ಅಂತಾರೆ…
ಶ್ರೀನಿವಾಸಪುರ:ಆಂಧ್ರಪ್ರದೇಶದ ಅಸೆಂಬ್ಲಿ ಸಮಾವೇಶ ನಡೆಯುತ್ತಿದೆ ಈ ಸಂದರ್ಭದಲ್ಲಿ ಶ್ರೀನಿವಾಸಪುರದ ಶಾಸಕ ವೆಂಕಟಶಿವಾರೆಡ್ಡಿ ಅವರು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗು ಐಟಿ ಮತ್ತು ಮಾನವ ಸಂಪನ್ಮೂಲ ಸಚಿವ ಲೋಕೆಶ್ ಅವರನ್ನು ವಿಜಯವಾಡದ ವೆಲಗಪುಡಿಯಲ್ಲಿರುವ ವಿಧಾನಸಭಾ ಸಚಿವಾಲಯದಲ್ಲಿ ಭೇಟಿಯಾಗಿ ನೂತನ ಸರ್ಕಾರಕ್ಕೆ ಹಳದಿ ಬಣ್ಣದ ಹೂಗುಚ್ಚ ನೀಡಿ ಶುಭಕೋರಿದ್ದಾರೆ.ನಂತರ ಇಬ್ಬರು ಚರ್ಚೆ ನಡೆಸಿದ್ದು ಕರ್ನಾಟಕ-ಆಂಧ್ರ ಗಡಿಯಂಚಿನ ಭಾಗದ ರಸ್ತೆಗಳ ಅಭಿವೃದ್ಧಿ ನೀರಾವರಿ ಹಾಗು ರೈಲ್ವೆಮಾರ್ಗಗಳ ಕುರಿತಂತೆ ಚರ್ಚೆ ನಡೆಸಿರುವುದಾಗಿ ತಿಳಿದು ಬಂದಿದೆ. ಆಂಧ್ರ ಅಸೆಂಬ್ಲಿ ಸಮಾವೇಶದ ನಡೆಯುತ್ತಿದ್ದು ಆಂಧ್ರ ಬಡ್ಜೆಟ್ ಮಂಡನೆಯಾಗುವ ಸಂದರ್ಭದಲ್ಲಿ ಇಬ್ಬರ ಭೇಟಿ ಮಹತ್ವ ಪಡೆದುಕೊಂಡಿದೆ.ಇತ್ತಿಚಿಗೆ ನಡೆದಂತ ಆಂಧ್ರಪ್ರದೇಶದ ಚುನಾವಣೆ ವಿಚಾರವಾಗಿ ತಮ್ಮ ಆಪ್ತರ ಬಳಿ ಈ ಬಾರಿ ಆಂಧ್ರದಲ್ಲಿ ಮೈತ್ರಿ ಕೂಟ ಅಧಿಕಾರಕ್ಕೆ ಬರಲಿದೆ ಚಂದ್ರಬಾಬುನಾಯ್ಡು ನಾಲ್ಕನೆ ಬಾರಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಭವಿಷ್ಯ ನುಡಿದಿದ್ದರು.
ಕೋಲಾರ:ಕಾಲೇಜು ಹುಡುಗರು ಪರಸ್ಪರ ಬೈದಾಡುಕೊಳ್ಳುವುದು ಹೊಡೆದಾಡುವುದು ಸಾಮನ್ಯ ಇದನ್ನು ಎಲ್ಲರೂ ಕೇಳಿರುತ್ತಾರೆ ನೋಡಿರುತ್ತಾರೆ ಆದರೆ ಇಬ್ಬರು ಕಾಲೇಜು ಉಪನ್ಯಾಸಕರು ಕಾಲೇಜು ಆವರಣದಲ್ಲೇ ಕೈಕೈ ಮಿಲಾಯಿಸಿಕೊಂಡು ಬಡಿದಾಡಿಕೊಂಡಿರುವ ದಾರುಣ ಘಟನೆ ಕೋಲಾರ ನಗರದ ಸರ್ಕಾರಿ ಜೂನಿಯರ್ ಕಾಲೇಜು ನಡೆದಿದೆ.ಇಬ್ಬರು ಉಪನ್ಯಾಸಕರು ಒಂದು ಕಾಲದಲ್ಲಿ ಆಪ್ತ ಸ್ನೇಹಿತರು ಕನ್ನಡ ಸೇವೆಗೆ ಟೊಂಕಕಟ್ಟಿ ನಿಂತು ಸೇವೆ ಮಾಡಿದವರು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಬ್ಬರು ಅಧ್ಯಕ್ಷರಾಗಿದ್ದವರು, ಈಗ ಅದೆ ವಿಚಾರದಲ್ಲಿ ವೈಯುಕ್ತಿಕ ದ್ವೇಷ ಬೆಳೆಸಿಕೊಂಡು ಇಬ್ಬರು ಶತೃಗಳಾಗಿದ್ದಾರೆ ಅವರೆ ನಾಗಾನಂದ ಕೆಂಪರಾಜ್ ಮತ್ತು ಜೆ.ಜಿ.ನಾಗರಾಜ್, ಇವರು ಹಳೇಯ ದ್ವೇಶಕ್ಕೆ ಜೀವ ಕೊಟ್ಟು ಮಂಗಳವಾರ ಎಲ್ಲರೂ ನೋಡನೊಡುತ್ತಿದ್ದಂತೆ ಹೋಡೆದಾಡಿಕೊಂಡು ಸಣ್ಣಪುಟ್ಟ ಗಾಯಮಾಡಿಕೊಂಡಿರುವ ಉಪನ್ಯಾಸಕರು ಕೋಲಾರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಜೆ.ಜೆ.ನಾಗರಾಜ್ ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಮತ್ತೊಬ್ಬರು ನಾಗನಂದ ಕೆಂಪರಾಜ್ ಅದೇ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕ ಇಬ್ಬರು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾಗಿದ್ದವರು.ಮಂಗಳವಾರ ಎಂದಿನಂತೆ ಕಾಲೇಜಿಗೆ ಹಾಜರಾದ…
ಶ್ರೀನಿವಸಪುರ:ಕ್ಷಣಮಾತ್ರದಲ್ಲಿ ಕೈಚಳಕ ತೋರಿ ಹಣ ಕದಿಯುವ ಓಜಿಕುಪ್ಪಂ ಕಳ್ಳರ ಗ್ಯಾಂಗ್ ಕೋಲಾರ ಜಿಲ್ಲೆಗೆ ಒಕ್ಕರಿಸಿಕೊಂಡಿದೆ,ಈಗ್ಗೆ ಎರಡು ವರ್ಷಗಳ ಹಿಂದೆ ಬೆಂಗಳೂರು ನಗರ ಪೋಲಿಸರಿಗೆ ತಲೆ ನೋವಾಗಿ ಕಾಡಿದ್ದ ಓಜಿಕುಪ್ಪಂ ಕಳ್ಳರ ಗ್ಯಾಂಗ್ ಅನ್ನು ಹೆಡೆ ಮುರಿ ಕಟ್ಟುವಲ್ಲಿ ಬೆಂಗಳೂರು ಪೋಲಿಸರು ಯಶಸ್ವಿಯಾಗಿದ್ದರು. ಈಗ ಓಜಿಕುಪ್ಪಂ ಕಳ್ಳರ ಗ್ಯಾಂಗ್ ಕೋಲಾರಕ್ಕೆ ಬಂದಿದೆ ಇದನ್ನು ಕೋಲಾರ ಜಿಲ್ಲೆ ಪೋಲಿಸರೆ ಒಪ್ಪಿಕೊಳ್ಳುತ್ತಾರೆ. ಓಜಿಕುಪ್ಪಂ ಕದೀಮರ ಗ್ಯಾಂಗ್ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದ ಹಣ ಕಾರಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನ ಎಗರಿಸಿರುವ ಘಟನೆಗಳು ಅವಿಭಜಿತ ಕೋಲಾರದ ಶ್ರೀನಿವಾಸಪುರ ಚಿಂತಾಮಣಿ ವೇಮಗಲ್ ಗಳಲ್ಲಿ ಸರಣಿಯಾಗಿ ನಡೆಯುತ್ತಿದೆ.ಶನಿವಾರ ಶ್ರೀನಿವಾಸಪುರದಲ್ಲಿ ಮಾವುಬೆಳೆಗಾರನ ಸ್ಕೂಟರ್ ನಲ್ಲಿದ್ದ ಒಂದೂವರೆ ಲಕ್ಷ ಹಣ ಎಗರಿಸಿದ್ದು ಇದು ಮಾಸುವ ಮುನ್ನವೆ ಸೋಮವಾರ ಚಿಂತಾಮಣಿ ನಗರದಲ್ಲಿ ಈರುಳ್ಳಿ ವ್ಯಾಪಾರಿ ಕಾರನಲ್ಲಿ ದುಡ್ಡಿಟ್ಟು ದೇವಸ್ಥಾನಕ್ಕೆ ಹೋಗಿಬರುಷ್ಟರಲ್ಲಿ ಕಾರಿನ ಗಾಜು ಒಡೆದು ಹಣ ಎಗರಿಸಿದ್ದಾರೆ.ಮಂಗಳವಾರ ವೇಮಗಲ್ ನಲ್ಲಿ ಬ್ಯಾಂಕ್ ಬಳಿ ಸ್ಕೂಟರನಲ್ಲಿಟ್ಟಿದ್ದ ಹಣ ಕದ್ದಿದ್ದಾರೆ.ಏನು ಯಾರಿದು ಓಜಿಕುಪ್ಪಂ ಗ್ಯಾಂಗ್?ತಮಿಳುನಾಡು-ಆಂಧ್ರ ಗಡಿಯಲ್ಲಿನ ವಿಕೋಟೆ ಬಳಿ…
ನ್ಯೂಜ್ ಡೆಸ್ಕ್: ಪಂಚೆ ಉಟ್ಟು ಬಂದಿದ್ದ ರೈತನನ್ನು ಮಾಲ್ ಸಿಬ್ಬಂದಿ ಒಳಗೆ ಬಿಡದೆ ಅಪಮಾನಿಸಿದ ಘಟನೆ ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನಲ್ಲಿ ನಡೆದಿದೆ.ಹಾವೇರಿ ಮೂಲದ ನಾಗರಾಜ್ ತಮ್ಮ ತಂದೆ, ತಾಯಿಯನ್ನು ಮಾಲ್ ವ್ಯವಸ್ಥೆಯನ್ನು ಪರಿಚಯಿಸಿ ಮಾಲನಲ್ಲಿ ಸಿನೆಮಾ ತೋರಿಸಲು ಕರೆದುಕೊಂಡು ಹೋಗಿದ್ದು ಮಾಲ್ ಪ್ರವೇಶ ದ್ವಾರದಲ್ಲಿ ನಾಗರಾಜ್ ತಂದೆ ರೈತ ಫಕೀರಪ್ಪ ಪಂಚೆ ಉಟ್ಟಿದ್ದಾರೆ ಅನ್ನೋ ಕಾರಣಕ್ಕೆ ಮಾಲ್ ಒಳಗೆ ಬಿಡದೆ ತಡೆದಿದ್ದಾರೆ ನಾಗರಾಜ್ ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಎಂಬ ಗ್ರಾಮದ ನೇಗಿಲಯೋಗಿ.ಮಾಲ್ ಮುಂದೆ ಅರ್ಧ ಗಂಟೆಗೂ ಹೆಚ್ಚು ಕಾಲ ನಿಲ್ಲಿಸಿದ್ದಾರೆ. ನಾಗರಾಜ್ ಒಳಗೆ ಬಿಡಿ ಅಂತ ಎಷ್ಟು ಪರಿಪರಿಯಾಗಿ ಬೇಡಿಕೊಂಡರು ಪಂಚೆ ನೇಪ ಹೇಳಿ ಬಿಡುವುದಿಲ್ಲ, ಮಾಲ್‌ನಲ್ಲಿ ಪಂಚೆ ಉಟ್ಟು ಬಂದವರನ್ನು ಬಿಡುವುದಿಲ್ಲ. ನಮ್ಮ ಮಾಲ್‌ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಉದ್ದಟತನ ತೋರಿಸಿದ ಹಿನ್ನಲೆಯಲ್ಲಿ ನಾಗರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು.ಪಂಚೆ ಉಟ್ಟ ವ್ಯಕ್ತಿಯನ್ನು ಮಾಲ್ ನಲ್ಲಿ ಬಿಟ್ಟಿಲ್ಲ ಎಂಬ ಸುದ್ದಿ ಸಾಮಜಿಕ ಜಾಲತಾಣಗಳಲ್ಲಿ…