ಶ್ರೀನಿವಾಸಪುರ:ಅಪರಿಚಿತ ವಾಹನ ಬಡಿದು ದ್ವಿಚಕ್ರ ವಾಹನದಲ್ಲಿ ಊರಿಗೆ ತೆರಳುತ್ತಿದ್ದ ತಾಯಿ ಮಗ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಮಂಗಳವಾರ ರಾತ್ರಿ 8 ಗಂಟೆ ಸಮಯದಲ್ಲಿ ಪಟ್ಟಣದ ಹೊರ ವಲಯದಲ್ಲಿ ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯಲ್ಲಿ ಪುರಸಭೆ ಕಟ್ಟಡದ ಬಳಿ ನಡೆದಿರುತ್ತದೆ.ಮೃತರನ್ನು ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದ ಪದ್ಮಮ್ಮ(48)ಹಾಗು ಅವರ ಮಗ ರಘು(22)ಎಂದು ಗುರುತಿಸಲಾಗಿದೆ.ಪದ್ಮಮ್ಮನಿಗೆ ಮೈಯಲ್ಲಿ ಹುಷಾರಿಲ್ಲ ಎಂದು ಮಗ ರಘು ಜೋತೆ ದ್ವಿಚಕ್ರ ವಾಹನದಲ್ಲಿ ಶ್ರೀನಿವಾಸಪುರಕ್ಕೆ ಆಗಮಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಊರಿಗೆ ಹೋಗುತ್ತಿರುವಾಗ ಎದರುಗಡೆಯಿಂದ ಬಂದಂತ ಬೊಲೊರೋ ವಾಹನ ಡಿಕ್ಕಿ ಹೋಡೆದ ಪರಿಣಾಮ ಅಪಘಾತ ಆಗಿದೆ ಎಂದು ಹೇಳಲಾಗುತ್ತಿದೆ ಡಿಕ್ಕಿ ಹೊಡೆದ ವಾಹನ ನಿಲ್ಲಿಸದೆ ಹೋರಟು ಹೋಗಿದ್ದು ಅಪರಿಚಿತ ವಾಹನದ ಪತ್ತೆಗಾಗಿ ಪೊಲೀಸರು ಹಾದಿಯಲ್ಲಿರುವಂತ ಸಿಸಿ ಕ್ಯಾಮೆರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
Author: Srinivas_Murthy
ನ್ಯೂಜ್ ಡೆಸ್ಕ್:ಹರಿಯಾಣ ವಿಧಾನಸಭಾ ಚುನಾವಣೆ ನಡೆದು ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯಭೇರಿ ಬಾರಿಸಿದೆ.ಚುನಾವಣೋತ್ತರ ಸಮೀಕ್ಷೇಯನ್ನು ನಂಬಿಕೊಂಡಿದ್ದ ಕಾಂಗ್ರೆಸ್ ಏಕಾಏಕಿ ಬೆಚ್ಚಿ ಬಿದ್ದಿದೆ ಇದಕ್ಕೆ ಇಲ್ಲಿ ಅಡಳಿತಾರೂಡ ಬಿಜೆಪಿಯಲ್ಲಿ 200 Days ಮುಖ್ಯಮಂತ್ರಿ ಕಾರಣ ಎನ್ನುವ ಮಾತು ಎಲ್ಲಡೆ ಕೇಳಿ ಬರುತ್ತಿದೆ ಚುನಾವಣೆ ಹೊತ್ತಿನಲ್ಲಿ ಮುಖ್ಯಮಂತ್ರಿ ಪದವಿ ವಹಿಸಿಕೊಂಡ ನಯಾಬ್ ಸಿಂಗ್ ಸೈನಿ ಬಿಜೆಪಿಯನ್ನು ಅಭೂತಪೂರ್ವ ವಿಜಯದತ್ತ ಮುನ್ನಡೆಸಿದ್ದಾರೆ ಕೇವಲ 200 ದಿನಗಳ ಅಂತರದಲ್ಲಿ ಹ್ಯಾಟ್ರಿಕ್ ವಿಜಯಕ್ಕೆ ಕಾರಣರಾಗಿ ಬಿಜೆಪಿ ಹೈಕಮಾಂಡ್ ಖುಷಿ ಪಡುವಂತೆ ಮಾಡಿದ ನಯಾಬ್ ಸಿಂಗ್ ಸೈನಿ ಆರಂಭದಲ್ಲಿ ಡಮ್ಮಿ ಸಿಎಂ ಎಂದು ಅವರನ್ನು ಅಪಹಾಸ್ಯಕ್ಕೆ ಈಡಾಗಿ ಟೀಕೆಗೆ ಒಳಪಟ್ಟಿದ್ದರು. ಬಿಜೆಪಿಯ ಸಂಪೂರ್ಣ ಚುನಾವಣಾ ಪ್ರಚಾರ ಅವರ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಫಲಿತಾಂಶಗಳ ಆರಂಭಿಕ ಜವಾಬ್ದಾರಿಯನ್ನು ವಹಿಸಿಕೊಂಡ ಸೈನಿ, ಬಿಜೆಪಿ ಸರ್ಕಾರದ ವೈಫಲ್ಯಗಳ ನಡುವೆಯೂ ರಾಜಕೀಯ ಲೆಕ್ಕಾಚಾರಗಳನ್ನು ಹುಸಿಗೊಳಿಸಿ ಬಿಜೆಪಿಗೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟಿದ್ದಾರೆ.90ಸ್ಥಾನಗಳ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 48 ವಿಧಾನಸಭಾ ಸ್ಥಾನಗಳನ್ನು ಗೆದ್ದು…
ಶ್ರೀನಿವಾಸಪುರ: ಶ್ರೀನಿವಾಸಪುರದ RTO ಚೆಕ್ ಪೋಸ್ಟ್ ಮೇಲೆ ಕೋಲಾರ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಶ್ರೀನಿವಾಸಪುರದ ತಾಲೂಕಿನ ತಾಡಿಗೋಳ್ ಕ್ರಾಸ್ ಚೆಕ್ ಪೋಸ್ಟ್ ಹಾಗೂ ಮುಳಬಾಗಲಿನ ನಂಗಲಿ ಚೆಕ್ ಪೋಸ್ಟ್ ಎರಡು ಚೆಕ್ ಪೋಸ್ಟ್ ಗಳ ಮೇಲೆ ಓಟ್ಟಿಗೆ ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದ್ದು ಈ ಸಂದರ್ಭದಲ್ಲಿ ಆರ್ ಟಿ ಓ ಕಛೇರಿಗಳಲ್ಲಿ ಇದ್ದಂತ ದಾಖಲೆಗಳು ಹಾಗೂ ಹಣದ ವ್ಯವಹಾರದ ಬಗ್ಗೆ ಸಹ ಪರಿಶೀಲನೆ ನಡೆಸಲಾಗಿ ಒಂದು ಚೆಕ್ ಪೋಸ್ಟ್ ನಲ್ಲಿ 20 ಸಾವಿರಕ್ಕೂ ಅಧಿಕ ಹಣ ಹಾಗೂ ಮತ್ತೊಂದು ಚೆಕ್ ಪೋಸ್ಟ್ ನಲ್ಲಿ 400 ಹಣ ಕಡಿಮೆ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ ಇನ್ನು ಎರಡು ಕಚೇರಿಗಳಲ್ಲಿ ಸತತ ಸುಮಾರು 8 ಗಂಟೆಗೂ ಅಧಿಕಕಾಲ ತನಿಖೆ ನಡೆಸಿರುವ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಜಂಟಿ ಕಾರ್ಯಾಚರಣೆಯಲ್ಲಿ ಕೋಲಾರ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದು ಕೋಲಾರ ಲೋಕಾಯುಕ್ತ…
ಶ್ರೀನಿವಾಸಪುರ:ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮಗಳ ಸರಮಾಲೆ ನಡೆದಿದೆ ಜನ ಓಡಾಡುವ ರಸ್ತೆಗೂ ಖಾತೆ ಮಾಡಿರುವ ಅಲ್ಲಿನ ಅಧಿಕಾರಿಗಳು ಅಕ್ರಮಗಳ ವ್ಯವಹಾರ ಸಾಬಿತು ಪಡಿಸಿದ್ದಾರೆ ಎಂದು ಡಾ..ಬಿ.ಅರ್. ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆ ಆರೋಪಿಸಿದೆ. ಮುತ್ತಕಪಲ್ಲಿ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆ ಮಾಡುವಂತೆ ಒತ್ತಾಯಿಸಿ ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಲಯದ ಮುಂದೆ ಡಾ..ಬಿ.ಅರ್. ಅಂಬೇಡ್ಕರ್ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಜೈ ಭೀಮ್ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಮಾತಾನಾಡಿದ ಜೈ ಭೀಮ್ ಶ್ರೀನಿವಾಸ್ ಮಾತನಾಡಿ ಗ್ರಾಮಪಂಚಾಯಿತಿಯಲ್ಲಿ ದೂಡ್ಡಮಟ್ಟದಲ್ಲಿ ಅಕ್ರಮಗಳು ನಡೆದಿದ್ದು ಸಿ.ಸಿ ರಸ್ತೆಗೂ ಇ ಖಾತಾ ಮಾಡಿದ್ದಾರೆ ಅದನ್ನು ರದ್ದು ಗೊಳಿಸುವಂತೆ ಒತ್ತಾಯಿಸಿದರು. ಮುತ್ತಕಪಲ್ಲಿ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ಮಾಡಲು ವಿಶೇಷ ತಂಡ ರಚಿಸಬೇಕು ಹಾಗೂ ಸಿ.ಸಿ ರಸ್ತೆಗೆ ಮಾಡಿರುವ ಇ ಖಾತಾ ರದ್ದು ಗೊಳಿಸಿ ವೆಂಕಟರಾಮಪ್ಪ ಮನೆಗೆ ಹೋಗಲು ರಸ್ತೆ ಅನುಕೂಲ ಮಾಡಬೇಕು ತಾಲೂಕಿನಾದ್ಯಂತ ಆಗಿರುವ ನರೇಗಾ ಕಾಮಗಾರಿಗಳಲ್ಲಿ ಬಾರಿ ಅವ್ಯವಹಾರಗಳು…
ಶ್ರೀನಿವಾಸಪುರ:ತಾಲೂಕಿನ ಯದರೂರು ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಸುಮಾರು 1200 ಕ್ಕೂ ಹೆಚ್ಚು ಎಕರೆ ಪ್ರದೇಶ ಭೂ ಸ್ವಾಧೀನಕ್ಕೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಒಂದೆಡೆ ರೈತರು ಜೀವನಕ್ಕಾಗಿ ನಮಗೆ ಕೃಷಿ ಭೂಮಿ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಆದರೆ ಸರಕಾರ ಭೂಮಿಯ ಜಾತಕ ಹಿಡಿದು ಕೈಗಾರಿಕೆಗಳನ್ನು ಮಾಡಿಯೇ ಸಿದ್ಧ ಎಂದು ಕೂತಂತಿದೆ.ಸದ್ಯದ ಅಂಕಿ-ಅಂಶಗಳ ಪ್ರಕಾರ 1200 ಎಕರೆ ಪ್ರದೇಶದಲ್ಲಿ ಫಲವತ್ತಾದ ಜಮೀನು, ಇದ್ದು ಪುಷ್ಪಕೃಷಿ ರೇಷ್ಮೆ, ಮಾವು, ಕೋಳಿ ಫಾರಂ ಇದೆ. ಆದರೆ ಇಲ್ಲಿ ಕೃಷಿಗಿಂತ ಕೈಗಾರಿಕೆ ಪ್ರದೇಶವಾದರೆ ಮಾತ್ರ ಈ ಭಾಗದ ಅಭಿವೃದ್ಧಿ ಸಾಧ್ಯ ಎನ್ನುವುದು ಸರಕಾರದ ವಾದ.ಶೇಷಾಪುರಗೋಪಾಲ್ ಮತ್ತು ಬೇಟಪ್ಪ ನಡುವೆ ಮಾತಿನ ಜಟಾಪಟಿಈ ಎಲ್ಲಾ ಬೆಳವಣಿಗೆಗಳ ನಡುವೆ ತಾಲೂಕಿನ ಪ್ರಮುಖ ಇಬ್ಬರು ಕಾಂಗ್ರೆಸ್ ಮುಖಂಡರ ನಡುವೆ ಯದರೂರಿನಲ್ಲಿ ಕೈಗಾರಿಕೆ ಸ್ಥಾಪನೆ ಕುರಿತಾಗಿ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ ಆರಂಬದಲ್ಲಿ ಇಬ್ಬರ ನಡುವಿನ ಮಾತಿನ ಸಮರ ಸಭ್ಯತೆಯಿಂದ ಕೂಡಿತ್ತು ಇತ್ತಿಚಿಗೆ ಇಬ್ಬರು ಮುಖಂಡರು ನಡುವೆ ವೈಯುಕ್ತಿಕ…
ಕೊನೆಗೂ ಎಚ್ಚೆತ್ತ ಪುರಸಭೆ ಫುಟ್ ಪಾತ್ ಅತಿಕ್ರಮ ತೆರವು ಅಂಗಡಿ ಮಾಲಿಕರ ಆಕ್ರೋಶ ಶ್ರೀನಿವಾಸಪುರ :ಪಟ್ಟಣದಲ್ಲಿ ಇಂದು ಪುರಸಭೆ ಸಿಬ್ಬಂದಿ ಬೆಳ್ಳಂಬೆಳಗ್ಗೆ ಫುಟ್ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿತು. ಸಾರ್ವಜನಿಕರು ಓಡಾಡುವ ಫುಟ್ ಪಾತ್ ಅನ್ನು ಅತಿಕ್ರಮಿಸಿಕೊಂಡು ರಸ್ತೆ ಬದಿಯಲ್ಲಿ ಅಕ್ರಮವಾಗಿ ಇಟ್ಟಿದ್ದ ಅಂಗಡಿಗಳನ್ನು ಹಾಗು ಹೋಟೆಲ್ ಗಳನ್ನು ಇಂದು ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿಯಿಂದ ರಸ್ತೆ ಬದಿಯಲ್ಲಿ ಬಾಲಕರ ಕಾಲೇಜು ವರಿಗೂ ಇದ್ದ ಅಂಗಡಿಗಳನ್ನ ತೆರವುಗೊಳಿಸಲಾಯಿತು.ಜನದಟ್ಟನೆ ಇದ್ದು ಆಂಧ್ರಪ್ರದೇಶ ಸೇರಿದಂತೆ ಉತ್ತರ ಭಾಗದ ಹಳ್ಳಿಗಳಿಗೆ ಹೋಗುವ ಬಸ್ಸುಗಳು ಇತರೆ ವಾಹನಗಳು ಓಡಾಟದಿಂದ ವಾಹನ ಸಂಚಾರ ಹೆಚ್ಚಾಗಿ ಇರುವ ರಸ್ತೆಯಾಗಿ ಗುರುತಿಸಿಕೊಂಡಿರುವ ಪಟ್ಟಣದ ಬಸ್ ನಿಲ್ದಾಣದಿಂದ ಸಾಗುವ ಪ್ರಮುಖ ರಸ್ತೆಯಾದ ಎಂ ಜಿ ರಸ್ತೆ ಬದಿ ಬಾಲಕೀಯರ ಕಾಲೇಜು ಆವರಣಕ್ಕೆ ಹೊಂದಿಕೊಂಡು ಸಾಗುವ ಚರಂಡಿ ಹಾಗು ಫುಟ್ ಪಾತ್ ಮೇಲೆ ಯಾರ ಅನುಮತಿ ಇಲ್ಲದೆ ಬಾರಿ ಗಾತ್ರದ ಬಂಡೆಗಳನ್ನು ಹಾಸಿ ದೊಡ್ಡ ಗಾತ್ರದ…
ನ್ಯೂಜ್ ಡೆಸ್ಕ್:ರುಚಿ ಎಂದು ಕೇಕ್ ತಿನ್ನುವ ಮುನ್ನಾ ಒಂದಲ್ಲ ಹತ್ತು ಬಾರಿ ಆಲೋಚಿಸುವುದು ಉತ್ತಮ.ಕೇಕ್‌ನಲ್ಲಿ ಕಂಡು ಬಂದಿರುವ 5 ಬಗೆಯ ವಿಷಕಾರಿ ಅಂಶಗಳು, ಹಾಗು 12 ಮಾದರಿಯ ಅಲೂನಾ ರೆಡ್, ಸನ್ ಸೆಟ್ ಯೆಲ್ಲೋ, ಪೊನುಸೆಯಾ 4R, ಕಾರ್ಮಿಯೋಸೆನ್ ಎಂಬ ಅಂಶ ಪತ್ತೆಯಾಗಿದೆ.ಬೇಕರಿಗಳಲ್ಲಿ ಸಿಗುವಂತ ಕೇಕ್ ತಿನ್ನುವವರಿಗೆ ಶಾಕಿಂಗ್ ನ್ಯೂಸ್ ಆಗಿದ್ದು ಕರ್ನಾಟಕದ ಬೇಕರಿಗಳಲ್ಲಿ ಸಿಗುವಂತ ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್‌ನಂತಹ ಕೇಕ್‌ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇದೆ ಎಂದು ಪರೀಕ್ಷೆಗಳು ಹೇಳಿದೆ.ಬೇಕರಿಗಳಿಂದ ಸಂಗ್ರಹಿಸಲಾದ 235 ಕೇಕ್ ಮಾದರಿಗಳನ್ನು ಪರೀಕ್ಷಿಸಲಾಗಿ ಇದರಲ್ಲಿ 12 ವಿವಿಧ ರೀತಿಯ ಕೇಕ್ ಗಳು ಅನ್ ಸೇಫ್ ಎಂದು ಧೃಡವಾಗಿದೆ. ಅಂದ್ರೆ ಕ್ಯಾನ್ಸರ್ ಕಾರಕ ಅಂಶಗಳು ಕೇಕ್ ಗಳಲ್ಲಿ ಪತ್ತೆಯಾಗಿವೆ. ರೆಡ್ ವೆಲ್ ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್ ನಲ್ಲಿ ಹೆಚ್ಚು ಬಣ್ಣ ಬಳಸುವುದು ಕಾಣಿಸಿದ್ದು ಕ್ಯಾನ್ಸರ್ ಕಾರಕ ಅಂಶಗಳನ್ನು ಹೊಂದಿದೆ ಎಂದು ಹೇಳಲಾಗಿದೆ ಕೇಕ್ ಗಳಲ್ಲಿ ಬಳಸುವ ಕೃತಕ ಬಣ್ಣಗಳಿಂದ ಕ್ಯಾನ್ಸರ್ ಜೊತೆಗೆ…
ಶ್ರೀನಿವಾಸಪುರ ತಾ.ಯದರೂರು ಕಂದಾಯ ವೃತ್ತದಲ್ಲಿ ಉದ್ದೇಶಿತ ಕೈಗಾರಿಕೆ ಬೆರೆಡೆಗೆ ವರ್ಗಾಯಿಸಿ ಬೇಟಪ್ಪ ನೇತೃತ್ವದ ರೈತರ ಅಗ್ರಹ ಕೋಲಾರ:ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯವನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ, ಯದರೂರು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಯದರೂರು ಭಾಗದ ರೈತರು ಗ್ರಾಮಸ್ಥರು ಜಿಲ್ಲಾಧಿಕಾರಿ ಆಕ್ರಂಪಾಷರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ ಬ್ಯಾಟಪ್ಪ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಎದರೂರು ಗ್ರಾಮಗಳ ಸರ್ವೆ ನಂಬರ್ ಸುಮಾರು ಒಂದು ಸಾವಿರದ 273 ಎಕರೆ 24ವರೆ ಗುಂಟೆಯ ಜಮೀನಿನ ಮಾಲೀಕರು ಕುಟುಂಬದವರ ಹಲವಾರು ದಶಕಗಳಿಂದ ಕೃಷಿ ವಲಯವನ್ನು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ.ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ, ರೈತರ ಹೆಸರಿನ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಭಾಗದ ರೈತರು ಜಮೀನುಗಳಲ್ಲಿ ರೇಷ್ಮೆ ಟೊಮೆಟೊ, ಹೈನುಗಾರಿಕೆ ತೋಟಗಾರಿಕೆ ಮತ್ತು ಪುಷ್ಪಕೃಷಿ ಮಾಡುತ್ತ ಇದ್ದು ಇಂತಹ ಫಲವತ್ತಾದ ಜಮೀನುಗಳನ್ನು ಕೈಗಾರಿಕೆ…
ನ್ಯೂಜ್ ಡೆಸ್ಕ್: ನಕಲಿ ದಾಖಲೆ ಸೃಷ್ಟಿಸಿ ಹಿಂದೂ ಹೆಸರಲ್ಲಿ ದಾವಣಗೆರೆಯಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದ ಪಾಕಿಸ್ತಾನ ಮೂಲದ ಕುಟುಂಬವನ್ನು ಬಂಧಿಸಲಾಗಿದೆ ಹಿಂದುಗಳ ಹೆಸರಿಟ್ಟುಕೊಂಡು ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.ಫಾತಿಮಾ ಅಲ್ಲಿನ ಅಲ್ತಾಫ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಉಳಿದಂತೆ, ಮೊಹಮ್ಮದ್ ಹನೀಫ್ ಪಾಕಿಸ್ತಾನದವನಾಗಿರುವ ಹನೀಫ್ ಮತ್ತು ಅವನ ಸೊಸೆ, ಮಗಳು, ಅಳಿಯನನ್ನೂ ಬಂಧಿಸಲಾಗಿದೆ.ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿಯಾಗಿದ್ದು, ಸಿದ್ದಿಕಿ ಮೊಹಮ್ಮದ್ ಯಾಸಿನ್ (ಪುತ್ರ), ಜೈನಾಬಿ ನೂರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದಾರೆ.ಬೆಂಗಳೂರಲ್ಲಿ ಬಂಧನಕಳೆದ ಆರು ವರ್ಷಗಳಿಂದ ನಕಲಿ ಗುರುತಿನೊಂದಿಗೆ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆ ಆತನ ಪತ್ನಿ ಮತ್ತು ಇತರ ಇಬ್ಬರನ್ನು ಭಾನುವಾರ ಬೆಂಗಳೂರಿನ ಜಿಗಣಿ ಪೋಲಿಸರು ಬಂಧಿಸಿದ್ದರು, ಪ್ರಾಥಮಿಕ ವಿಚಾರಣೆಯ ಪ್ರಕಾರ, ಪಾಕ್ ಪ್ರಜೆ ಪತ್ನಿ ಬಾಂಗ್ಲಾದೇಶದವರಾಗಿದ್ದು ಢಾಕಾದಲ್ಲಿ ವಿವಾಹವಾಗಿದ್ದರು.2014ರಲ್ಲಿ ದೆಹಲಿಗೆ ಬಂದಿದ್ದ ದಂಪತಿಗಳು ನಂತರ 2018ರಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಬಂಧಿತ…
ನ್ಯೂಜ್ ಡೆಸ್ಕ್:ಅಪಾರ್ಟ್‌ಮೆಂಟ್ ವೊಂದರಲ್ಲಿ ವಾಸವಿದ್ದ ಮಹಿಳೆಯೊಬ್ಬರಿಗೆ ಇಬ್ಬರು ಕಳ್ಳರು ಚಾಕು ತೋರಿಸಿ ಆಭರಣಗಳನ್ನು ದೋಚಿ ನಂತರ 27 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿರುತ್ತದೆ.ಭುವನೇಶ್ವರದ ಮೈತ್ರಿ ವಿಹಾರ್‌ನಲ್ಲಿ ಸೆಪ್ಟೆಂಬರ್ 30 ರಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಅಪರಾಧ ಘಟನೆ ನಡೆದಿದ್ದು ಪೊಲೀಸರು ಪಡೆದಿರುವ ದೂರಿನ ಪ್ರಕಾರ, ಮಹಿಳೆ ವಾಸವಿದ್ದ ಅಪಾರ್ಟ್‌ಮೆಂಟ್ ಬಂದಿರುವ ಕಳ್ಳರು ಚಾಕು ತೋರಿಸಿ ಮೊದಲು ಆಕೆಯ ಆಭರಣಗಳು ಮತ್ತು ಮೊಬೈಲ್ ಫೋನ್ ಅನ್ನು ದೋಚಿದ್ದಾರೆ ಮತ್ತು ನಂತರ ಸಹಾಯಕ್ಕಾಗಿ ಕಿರುಚಿದರೆ 2 ವರ್ಷದ ಮಗಳನ್ನು ಕೊಲ್ಲುವುದಾಗಿ ಬೆದರಿಸಿ ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಮಹಿಳೆ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, 10 ದಿನಗಳ ಹಿಂದೆಯಷ್ಟೇ ಫ್ಲಾಟ್‌ಗೆ ತೆರಳಿದ್ದಳು ಎಂದು ಪೊಲೀಸರು ಹೇಳುತ್ತಾರೆ.ಮನೆಗೆ ಹೋಗಲು ಕಳ್ಳರು ಬಿದಿರಿನ ಕಂಬಗಳನ್ನು ಬಳಸಿ ಕಟ್ಟಡವನ್ನು ಪ್ರವೇಶಿಸಿರಬಹುದು ಎಂದು ಅವರು ಶಂಕಿಸಿದ್ದಾರೆ. ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು…