Author: Srinivas_Murthy

ನ್ಯೂಜ್ ಡೆಸ್ಕ್:ವಾಯುವ್ಯ ಸೌದಿ ಅರೇಬಿಯಾದ ಖೈಬರ್ ಓಯಸಿಸ್‌ನಲ್ಲಿ ಪುರಾತತ್ವ ಶಾಸ್ತ್ರಜ್ಞರು 4,000 ವರ್ಷಗಳಷ್ಟು ಹಳೆಯದಾದ ಪಟ್ಟಣವನ್ನು ಕಂಡುಹಿಡಿದಿದ್ದಾರೆ. ಇದರ ಹೆಸರನ್ನು ಅಲ್-ನತಾಹ್ ಎಂದು ಗುರುತಿಸಲಾಗಿದೆ. ಪಟ್ಟಣದ ಸುತ್ತಲೂ 14.5 ಕಿಮೀ ಉದ್ದದ ಗೋಡೆಯನ್ನು ಹೊಂದಿದ್ದು ಕ್ರಿ.ಪೂ.2400BC ಯಷ್ಟು ಹಳೆಯದಾಗಿದ್ದು ಅಲ್ಲಿ 500 ಜನ ವಾಸಿಸುತ್ತಿದ್ದರು ಎನ್ನಲಾಗಿದ್ದು,ಮರುಭೂಮಿಯಲ್ಲಿನ ಹಸಿರು ಪ್ರದೇಶವಾದ ಖೈಬರ್‌ನ ಗೋಡೆಯ ಓಯಸಿಸ್‌ನೊಳಗೆ ಅಡಗಿದ್ದು. ಪ್ರಾಚೀನ ಅಲೆಮಾರಿ ಜೀವನ ಶೈಲಿಯಿಂದ ಜನರು ನಗರ ಜೀವನಶೈಲಿಗೆ ಹೇಗೆ ಬದಲಾದರು ಎಂಬುದನ್ನು ಈ ಸಂಶೋಧನೆಯು ತೋರಿಸುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.

Read More

ಬೆಂಗಳೂರು:ಕನ್ನಡ ಚಲನ ಚಿತ್ರ ನಟ,ಸಿನಿಮಾ ನಿರ್ದೇಶಕ ಗುರುಪ್ರಸಾದ್ (52)ಆತ್ಮಹತ್ಯೆಗೆ ಶರಣಾಗಿದ್ದಾರೆ.ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ನಲ್ಲಿ ಸುಸೈಡ್ ಮಾಡಿಕೊಂಡಿದ್ದು ಅವರ ಮೃತದೇಹ ಅಪಾರ್ಟ್‌ಮೆಂಟ್‌ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ನವೆಂಬರ್‌ 2ರಂದು ಗುರುಪ್ರಸಾದ್‌ ಹುಟ್ಟುಹಬ್ಬ ಇದ್ದು ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್‌ ಕೊಟ್ಟಿದೆ. ಮೂರು ದಿನಗಳ ಹಿಂದೆ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು ಇಂದು ಭಾನುವಾರ ಬೆಳಗ್ಗೆಯಿಂದ ಸ್ಥಳೀಯ ನಿವಾಸಿಗಳಿಗೆ ವಾಸನೆ ಬರತೊಡಗಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಬಾಗಿಲನ್ನು ತೆರೆಯಲಾಗಿದೆ ಎನ್ನುತ್ತಾರೆ.ಗುರುಪ್ರಸಾದ್ ಆತ್ಮಹತ್ಯೆಗೆ ಪ್ರಮುಖ ಕಾರಣ, ಸಾಲಗಾರರ ಕಿರುಕುಳ ಎನ್ನುವ ಮಾತು ಕೇಳಿಬರುತ್ತಿದೆ.ಪೊಲೀಸರು ತನಿಖೆಯಿಂದ ಸತ್ಯ ಹೋರಬರಬೇಕಿದೆ.ಬೆಂಗಳೂರು ಗ್ರಾಮಾಂತರದ ಕನಕಪುರದಲ್ಲಿ 1972ರಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಪ್ರಯಾಣ ಆರಂಭಿಸಿದ ಅವರು ನವರಸ ನಾಯಕ ಜಗ್ಗೇಶ್‌ರ 100ನೇ ಚಿತ್ರ ನಿರ್ದೇಶಿಸಿದ ನಂತರ ‘ಎದ್ದೇಳು ಮಂಜುನಾಥ’ ಸಿನಿಮಾವನ್ನು ನಿರ್ದೇಶಿಸಿದರು. ಇವೆರಡೂ ಸಿನಿಮಾಗಳು ಗುರುಪ್ರಸಾದ್‌ಗೆ ಭಾರಿ…

Read More

ನ್ಯೂಜ್ ಡೆಸ್ಕ್:ಕೆನಡಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ತೊಡಗಿಸಿಕೊಳ್ಳುವ ಮೂಲಕ ರಾಜಕೀಯದಲ್ಲಿ ಹಿಂದೂಗಳಿಗೆ ಹೆಚ್ಚಿನ ಪ್ರಾತಿನಿಧ್ಯ ವಹಿಸಲು ಕರ್ನಾಟಕ ಮೂಲದ ಕೆನಡಾ ದೇಶದ ಸಂಸದ ಚಂದ್ರ ಆರ್ಯ ಅವರು ಕರೆ ನೀಡಿದ್ದಾರೆ. ಹಿಂದೂ ಪರಂಪರೆ ಮಾಸದ ಅಂಗವಾಗಿ ಅವರು Parliament Hillನಲ್ಲಿ ಕೇಸರಿ ಧ್ವಜಾರೋಹಣ ಮಾಡಿ ಮಾತನಾಡಿದರು. ಕೆನಡಾದಲ್ಲಿ ಮೂರನೇ ಅತಿ ದೊಡ್ಡ ಧಾರ್ಮಿಕ ಸಮೂಹವಾಗಿರುವ ಹಿಂದೂಗಳು ದೇಶದ ಬೆಳವಣಿಗೆಗೆ ವಿಶೇಷ ಪ್ರಯತ್ನ ನಡೆಸುತ್ತಿದ್ದರೆ,ಅದೇ ರೀತಿ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗುವಂತೆ ಕರೆ ನೀಡಿದರು.ಯಾರು ಈ ಚಂದ್ರ ಆರ್ಯಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದವರಾದ ಚಂದ್ರಆರ್ಯ,ನಿವೃತ್ತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕೆ.ಗೋವಿಂದ ಅಯ್ಯರ್‌ ಎಂಬುವರ ಪುತ್ರ ಚಂದ್ರ ಆರ್ಯ, ಓದಿದ್ದೆಲ್ಲ ಭಾರತದಲ್ಲಿ. ಬೆಂಗಳೂರು ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್‌ ಪದವಿ ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿದ್ದು ಕೆನಡಾಕ್ಕೆ ಹೋಗುವ ಮೊದಲು ದೆಹಲಿಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ಕೆಲಸ ಮಾಡುತ್ತಿದ್ದರು. ಕರ್ನಾಟಕ ಸ್ಟೇಟ್‌ ಫೈನಾನ್ಸ್‌…

Read More

ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸುವತ್ತ ಮುನ್ನುಗ್ಗುತ್ತಿದ್ದು ಇತ್ತೀಚೆಗೆ ಅವರು ಸನಾತನ ಧರ್ಮ ರಕ್ಷಣೆಗಾಗಿ ವಿಶೇಷ ಸೇನೆ ರಚನೆಗೆ ಮುಂದಾಗಿರುವುದು ನಾನಾ ಚರ್ಚೆಗಳಿಗೆ ಕಾರಣವಾಗುತ್ತಿದೆ. ಅವರು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ಜನಸೇನಾ ವತಿಯಿಂದ ಸನಾತನ ಧರ್ಮದ ಸಂರಕ್ಷಣೆಗಾಗಿ “ನರಸಿಂಹ ವಾರಾಹಿ ಗಣಂ” (NVG) ಎಂಬ ಸಂಘಟನೆ ಮಾಡಲು ನಿರ್ಧರಿಸಿದ್ದಾರೆ ಇದು ಸನಾತನ ಧರ್ಮವನ್ನು ಕಾಪಾಡಲು ತನ್ನಿಂದಾದಷ್ಟು ಪ್ರಯತ್ನಿಸುತ್ತದೆ. ಬಿಜೆಪಿಯ ಬಜರಂಗದಳದಂತೆಯೇ.. ಜನಸೇನೆಗೂ ಈ “ನರಸಿಂಹ ವಾರಾಹಿ ಗಣಂ” ಇರಬಹುದೆಂದು ನಿರೀಕ್ಷೆ ಮಾಡಬಹುದಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಪವನ್ ಕಲ್ಯಾಣ್ ಹಿಂದೂ ಧರ್ಮ ಮತ್ತು ಸನಾತನ ಧರ್ಮದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದು ತಿರುಪತಿಯಲ್ಲಿನ ಸಭೆಯಲ್ಲಿ ವಾರಾಹಿ ಘೋಷಣೆ ಮಾಡಿದ್ದರು. ಹಿಂದೂ ಧರ್ಮವನ್ನು ಸೆಕ್ಯುಲರಿಸಂ ಎಂದು ಅವಹೇಳನ ಮಾಡುವ ಬಗ್ಗೆ ತೀವ್ರವಾಗಿ ವಿರೋಧಿಸುವ ಅವರು ಹಿಂದೂ ಧರ್ಮವನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ ಎಂದು ಪ್ರಶ್ನಿಸುತ್ತಾರೆ.ಎಲ್ಲಾ ಧರ್ಮಗಳ ಬಗ್ಗೆ ಸಮಾನತೆ ಇರುವ ಕುರಿತಾಗಿ ಹೇಳುವ…

Read More

ನ್ಯೂಜ್ ಡೆಸ್ಕ್:ರಾಜಕೀಯ ಮುಖಂಡನಾಗಿ ಹೊರಹೊಮ್ಮಿರುವ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್, ಚುನಾವಣೆಗೆ ಸಲಹೆಗಾರನಾಗಿ ಫೀಜು ನೂರು ಕೋಟಿ ತೆಗೆದುಕೊಳ್ಳುತ್ತೆನೆ ಎಂದು ಹೇಳಿದ್ದಾರೆ.ಪ್ರಶಾಂತ್ ಕಿಶೋರ್ ಅವರ ಶುಲ್ಕದ ಬಗ್ಗೆ ಇದುವರೆಗೆ ಯಾರಿಗೂ ಸ್ಪಷ್ಟತೆ ಇಲ್ಲ. ಅವರ ಸೇವೆಯನ್ನು ತೆಗೆದುಕೊಂಡ ರಾಜಕೀಯ ಪಕ್ಷಗಳು ಈ ಬಗ್ಗೆ ಸ್ಪಷ್ಟವಾಗಿ ಘೋಷಿಸಿಲ್ಲ ಅವರು ಸ್ಥಾಪಿಸಿದ ಐ-ಪ್ಯಾಕ್ ಸಂಸ್ಥೆ ಕೂಡ ಹೇಳಲಿಲ್ಲ. ಆದರೆ ಅವರು ತುಂಬಾ ದುಬಾರಿ ತಂತ್ರಜ್ಞ ಎಂಬುದು ಎಲ್ಲರಿಗೂ ಗೊತ್ತು, ಈಗ ಅವರೆ ಹೇಳಿರುವಂತೆ ಅವರ ಸಲಹೆ ಮೌಲ್ಯ 100 ಕೋಟಿ ಎಂದು ಘೋಷಿಸಿದ್ದಾರೆ.ಒಂದು ಪಕ್ಷಕ್ಕೆ ದುಡಿದರೆ ಎರಡು ವರ್ಷಗಳ ಕಾಲ ಪ್ರಚಾರದ ತಂತ್ರಗಾರಿಕೆಗೆ ಹಣ ಸರಿಹೋಗುತ್ತದೆ ಎನ್ನುತ್ತಾರೆ.ವಿವಿಧ ರಾಜ್ಯಗಳಲ್ಲಿ ಹತ್ತು ಸರ್ಕಾರಗಳು ನನ್ನ ಕಾರ್ಯತಂತ್ರಗಳ ಮೇಲೆ ಅಧಿಕಾರ ನದೆಸುತ್ತಿದೆ ಎನ್ನುತ್ತಾರೆ.ಪ್ರಶಾಂತ್ ಕಿಶೋರ್ ದೇಶದ ನಂಬರ್ ಒನ್ ರಾಜಕೀಯ ರಣ ತಂತ್ರಗಾರ ಎನ್ನುವ ಬಗ್ಗೆ ಸಂದೇಹವಿಲ್ಲ. ಬಂಗಾಳ ಮತ್ತು ತಮಿಳುನಾಡಿನಲ್ಲಿ ಟಿಎಂಸಿ ಮತ್ತು ಡಿಎಂಕೆಗಾಗಿ ಕೆಲಸ ಮಾಡಿದ ನಂತರ ಅವರು ರಾಜಕೀಯಕ್ಕೆ ಹೋದರು. ಅವರೆ ಸ್ಥಾಪಿಸಿದ್ದ…

Read More

ಚಿಂತಾಮಣಿ:ಚಿಂತಾಮಣಿ-ಹೊಸಕೋಟೆ ಹೆದ್ದಾರಿಯಲ್ಲಿ APSRTC ಬಸ್ಸು ಹಾಗೂ ಸಿಲಿಂಡರ್ ತುಂಬಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿ ಬಸ್ಸಿನಲ್ಲಿದ್ದ ಹಲವರು ಗಾಯಗೊಂಡ ಘಟನೆ ಸಂತೇಕಲ್ಲಹಳ್ಳಿ ಗೇಟ್ ಸಮೀಪ ಇಂದು ನಡೆದಿದೆ.ಆಂಧ್ರದ ಕಡಪದಿಂದ ಬೆಂಗಳೂರಿಗೆ ಹೋಗುತ್ತಿದ್ದ ಆಂಧ್ರದ ಸಾರಿಗೆ ಸಂಸ್ಥೆ ಬಸ್ಸು ಮತ್ತು ಚಿಂತಾಮಣಿ ಕಡೆಗೆ ಬರುತ್ತಿದ್ದ ಸಿಲಿಂಡರ್ ತುಂಬಿದ್ದ ಲಾರಿ ಸಂತೇಕಲ್ಲಹಳ್ಳಿ ಗೇಟ್ ಸಮೀಪ ಡಿಕ್ಕಿಯಾಗಿದೆ ಲಾರಿಯಲ್ಲಿದ್ದ ನೂರಾರು ಅಡುಗೆ ಸಿಲಿಂಡರ್ ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ನಷ್ಟದ ಅನಾಹುತ ಸಂಭವಿಸಿಲ್ಲ.ಬಸ್ಸಿನಲ್ಲಿದ್ದ ನಿತ್ಯ ಪೂಜಿತ್(19 ವರ್ಷ)ಅರುಣಮ್ಮ(40 ವರ್ಷ)ವೆಂಕಟೇಶ್ (60 ವರ್ಷ) ಇವರು ಗಾಯಗೊಂಡು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಂಭೀರವಾಗಿ ಗಾಯಗೊಂಡ ಗಾಯಾಳುಗಳು ಹೊಸಕೋಟೆ ಸೇರಿದಂತೆ ಇತರೆ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎನ್ನಲಾಗಿದ್ದು,ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮುರುಳಿಧರ್, ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸಪೇಕ್ಟರ್ ಶಿವರಾಜ್,ನಗರ ಠಾಣೆ ಇನ್ಸಪೇಕ್ಟರ್ ವಿಜಿಕುಮಾರ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ನಡೆದಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಉನ್ನತ…

Read More

ರಾಮನಗರ:ಹೋಂ ಸ್ಟೇ ನಲ್ಲಿ ಯುವತಿಯ ಪೋಟೋ ತೆಗೆಯುತ್ತಿದ್ದ ಯುವಕರ ಕೃತ್ಯ ಪ್ರಶ್ನಿಸಿದ ಯುವಕನನ್ನು ದೊಣ್ಣೆಯಿಂದ ದಾರುಣವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿಯ ಫಾರ್ಮ್ ಹೌಸ್ ನಲ್ಲಿ ಘಟನೆ ನಡೆದಿದ್ದು ಬಿಕಾಂ ಪದವಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಚಿಕ್ಕೇನಹಳ್ಳಿಯ ಹೋಂ ಸ್ಟೇ-ನಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿ ಸಂಭ್ರಮಿಸಿದ್ದಾರೆ ನಂತರ ವಿದ್ಯಾರ್ಥಿಗಳು ಹೊರಡುವಾಗ ಹೋಂ ಸ್ಟೇ ನಲ್ಲಿದ್ದ ಚಂದು ಮತ್ತು ನಾಗೇಶ್ ಎಂಬ ಇಬ್ಬರು ವಿದ್ಯಾರ್ಥಿನಿಯ ಫೋಟೋ ತೆಗೆದಿದ್ದಾರೆ ಇದಕ್ಕೆ ಪುನೀತ್ ಎಂಬ ವಿದ್ಯಾರ್ಥಿ ಯುವತಿಯ ಫೋಟೋ ಯಾಕೆ ತೆಗೆದಿದ್ದೀರಾ ಎಂದು ಪ್ರಶ್ನಿಸಿದ್ದಾನೆ ಇದಕ್ಕೆ ಪೋಟೋ ಶೂಟ್ ಮಾಡುತ್ತಿದ್ದ ಚಂದು ಮತ್ತು ನಾಗೇಶ್ ಕೋಪಗೊಂಡು ಇಬ್ಬರು ಸೇರಿ ದೊಣ್ಣೆಯಿಂದ ಪುನೀತ್ ನನ್ನು ಹೊಡೆದಿದ್ದಾರೆ.ದೊಣ್ಣೆ ಏಟಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು ಗಾಯಗೊಂಡ ಪುನೀತ್ ನನ್ನು ಬೆಂಗಳೂರಿನ ಕೆಂಗೇರಿ ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಚಿಕಿತ್ಸೆ ಫಲಿಸದೇ ಪುನೀತ್ ಮೃತಪಟ್ಟಿದ್ದಾನೆ.ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ರಾಮನಗರ ಗ್ರಾಮಾಂತರ…

Read More

ಶ್ರೀನಿವಾಸಪುರ:ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಸಡಗರದಿಂದ ನಡೆಯುತ್ತಿದೆ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಿಗರಿಗೆ ಕನ್ನಡದಲ್ಲೇ ಶುಭಕೋರಿ ರಾಜ್ಯೋತ್ಸವ ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ.ಇದು ಪ್ರಧಾನಿಯವರ ಸೌಹಾರ್ದತೆ ಇಂತಹುದರಲ್ಲಿ ಸಂಭ್ರಮದಿಂದ ಆಚರಿಸಬೇಕಾಗಿದ್ದ ಕನ್ನಡ ರಾಜ್ಯೋತ್ಸವ ಶ್ರೀನಿವಾಸಪುರದಲ್ಲಿ ಕಳಾಹೀನವಾಗಿದ್ದು ಇಲ್ಲಿನ ಕನ್ನಡಾಭಿಮಾನಿಗಳು ತಾಲೂಕು ಆಡಳಿತದ ವಿರುದ್ದ ಸಿಡಿದೆದ್ದು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ ತಾಲೂಕು ತಹಶೀಲ್ದಾರ್ ಧೋರಣೆಯನ್ನು ತೀವ್ರವಾಗಿ ವಿರೋಧಿಸಿ ವೇದಿಕೆಯಿಂದ ಹೋರನಡೆದ ಘಟನೆ ಇಂದು ಬಾಲಕೀಯ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇಂದು ನಡೆಯಿತು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಪ್ರದಾಯದಂತೆ ರಾಷ್ಟ್ರೀಯ ಧ್ವಜದ ಜೋತೆಗೆ ಕನ್ನಡ ಭಾವುಟ ಹಾರಿಸುವುದು ಇಲ್ಲಿನ ಸಂಪ್ರದಾಯ ಇದನ್ನು ಮುರಿದ ತಾಲೂಕು ಆಡಳಿತ ರಾಷ್ಟ್ರೀಯ ಧ್ವಜ ಮಾತ್ರ ಹಾರಿಸಿ ಕನ್ನಡ ಭಾವುಟ ಹಾರಿಸದೆ ನಿರ್ಲಕ್ಷಿಸಿದದ್ದಲ್ಲದೆ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಭುವನೇಶ್ವರಿ ಭಾವಚಿತ್ರ ಕೂಡ ಪ್ರಷ್ಠಾಪಿಸದೆ…

Read More

ನ್ಯೂಜ್ ಡೆಸ್ಕ್:ದೀಪಾವಳಿ ಸಂಭ್ರಮಿಸಬೇಕು ಎಂದು ಪಟಾಕಿ ತಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಪಟಾಕಿ ಸಿಡಿದು ಒರ್ವ ಸಾವನಪ್ಪಿ ಆರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಆಂಧ್ರದಲ್ಲಿ ನಡೆದಿದೆ.ಆಂಧ್ರದ ಏಲೂರಿನಲ್ಲಿ ನಡೆದ ಪಟಾಕಿ ಸ್ಫೋಟದ ಘಟನೆ ಅಗಿದ್ದು ಹೇಗೆ ಎಂದರೆ ಬೈಕ್‌ನಲ್ಲಿ ಪಟಾಕಿ ಸಾಗಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಏಕಾಏಕಿ ನಡೆದ ಸ್ಪೋಟಕದಿಂದ ಜನರಲ್ಲಿ ಭಯದ ವಾತವರಣ ಉಂಟಾಗಿದ್ದು ಏನಾಯಿತು ಎಂದು ತಿಳಿಯದೆ ಸ್ಥಳೀಯರು ಕೆಲಕಾಲ ಗೊಂದಲಕ್ಕೆ ಸಿಲುಕಿದರು. ಕೊನೆಗೆ ಪಟಾಕಿ ಸಿಡಿದ ವಿಷಯ ತಿಳಿದ ಜನರು ನಿರಾತಂಕ ವ್ಯಕ್ತಪಡಿಸಿದರು. ಸುಧಾಕರ್ ಎಂಬ ವ್ಯಕ್ತಿ ಪಟಾಕಿ ಖರೀದಿಸಿ ಅದನ್ನು ಬೈಕನಲ್ಲಿ ಮನೆಗೆ ತಗೆದುಕೊಂಡು ಹೋಗುತ್ತಿದ್ದಾನೆ ಈ ಸಂದರ್ಬದಲ್ಲಿ ಸಾಗುತ್ತಿದ್ದ ಬೈಕ್ ರಸ್ತೆಯಲ್ಲಿ ಆಯಾತಪ್ಪಿ ರಸ್ತೆ ಗುಂಡಿಗೆ ಬಿದ್ದಿದೆ ಬೈಕ್ ಬಿದ್ದ ರಭಸಕ್ಕೆ ಬೈಕ್ ನೊಂದಿಗೆ ಇಟ್ಟುಕೊಂಡಿದ್ದ ಪಟಾಕಿ ಸ್ಪೋಟಗೊಂಡಿದೆ. ಬಾರಿ ಸದ್ದುಮಾಡುವ ಅಟಂಬಾಂಬು ಪಟಾಕಿ ಬಾರಿ ಸದ್ದಿನೊಂದಿಗೆ ಸ್ಫೋಟಗೊಂಡಿದೆ ಸ್ಫೋಟದಲ್ಲಿ ಸುಧಾಕರ್ ಅವರ ದೇಹ ಛಿದ್ರವಾಗಿದ್ದು ಸ್ಫೋಟದ ಪ್ರಮಾಣವನ್ನು ಊಹಿಸಬಹುದಾಗಿದೆ.

Read More

ಚಿಂತಾಮಣಿ: ಚಿಂತಾಮಣಿ ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸಂಬಂದಿಸಿದಂತೆ ಶೀಘ್ರದಲ್ಲೇ ಮಂಜೂರಾತಿ ನೀಡಲಾಗುವುದು ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.ಅವರು ಚಿಂತಾಮಣಿ ನಗರ ಹೊರವಯಲದ ಚಿಂತಾಮಣಿ-ಶಿಡ್ಲಘಟ್ಟ ರಸ್ತೆಯ ಕೋನಪಲ್ಲಿ ಬಳಿ ಸುಮಾರು 5.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ನೂತನ ಸಾರಿಗೆ ಇಲಾಖೆ RTO ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದರುಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯ ಸಾರಿಗೆ ಸಂಸ್ಥೆಗೆ ನೂತನವಾಗಿ 6400 ಬಸ್ ಖರೀದಿ,9 ಸಾವಿರ ಸಿಬ್ಬಂದಿ ನೇಮಕಾತಿ,1 ಸಾವಿರ ಮಂದಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ.ಕಳೆದ 4 ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಒಂದೂ ಬಸ್ ಖರೀದಿ ಆಗಿರಲಿಲ್ಲ.14 ಸಾವಿರ ಜನ ಸಿಬ್ಬಂದಿ ನಿವೃತ್ತಿ ಹೊಂದಿದ್ದರೂ ನೇಮಕಾತಿ ಮಾಡಿರಲಿಲ್ಲ. ಅನುಕಂಪದ ಆಧಾರ ಯೋಜನೆಯನ್ನೂ ಯಾರಿಗೂ ಉದ್ಯೋಗ ನೀಡಿರಲಿಲ್ಲ ಎಂದು ದೂರಿದರು.ಶಕ್ತಿ ಯೋಜನೆಯ ನಂತರ ರಾಜ್ಯದಲ್ಲಿ ಪ್ರತಿನಿತ್ಯ 20 ಲಕ್ಷ ಜನರು ಸಂಚರಿಸುತ್ತಿದ್ದಾರೆ.ಬಸ್ ಗಳ ಖರೀದಿ, ಸಿಬ್ಬಂದಿಯ ನೇಮಕಾತಿ ನಡೆಯುತ್ತಿದೆ. ವಿವಿಧೆಡೆ ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು…

Read More