ಶ್ರೀನಿವಾಸಪುರ: ತಾಲೂಕಿನ ಯಲ್ದೂರು ಹೋಬಳಿ ಮಂಜಲನಗರ ಗ್ರಾಮದಲ್ಲಿ ಕಮ್ಮಸಂದ್ರ ಗ್ರಾಮಕ್ಕೆ ಹೋಗುವ ದಾರಿಯಲ್ಲಿನ ಮಾವಿನ ತೋಪಿನಲ್ಲಿ ಹದಿಮೂರನೆ ಶತಮಾನದಲ್ಲಿ ಹೊಯ್ಸಳ ಅರಸರ Hoysala dynasty ಆಳ್ವಿಕೆಯಲ್ಲಿ ನಿರ್ಮಾಣವಾದದ್ದೆಂದು ಹೇಳಲಾದ ದೇವಾಲಯ ಪತ್ತೆಯಾಗಿದೆ.ಮಂಜಲನಗರದ ಗ್ರಾಮದ ಜಯಕುಮಾರ್ ಅವರ ವಿನಂತಿ ಮೇರೆಗೆ ಇತಿಹಾಸಕಾರರು ಹಾಗು ಶಾಸನ ತಜ್ಞ ಪ್ರೋ,ಕೆ. ಆರ್.ನರಸಿಂಹನ್, ಮತ್ತು ವೀರಗಲ್ಲುಗಳ ಅಧ್ಯಯನಕಾರ ಕೆ.ಧನಪಾಲ್ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿಕೊಟ್ಟು ಮಂಜಲನಗರದ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ಪುರಾತನ ದೇವಾಲಯ ಅಧ್ಯಯನ ನಡೆಸಿದಾಗ ಅಲ್ಲಿದ್ದ ಶಾಸನಗಳು ಪುರಾವೆಗಳ ಆಧಾರದಲ್ಲಿ ದೇವಾಲಯ ಹದಿಮೂರನೆ ಶತಮಾನ ಅಂದರೆ 1288 ಇಸವಿಯಲ್ಲಿ ಹೊಯ್ಸಳರ ಅರಸ ರಾಮನಾಥನ ಕಾಲಕ್ಕೆ ಸೇರಿದ್ದು ಅಂದಾಜಿಸಗಿದೆ. Hoysala administration ಅರಸ ರಾಮನಾಥನ ಬಲವೖದ್ಧಿಗೆ ಆತನ ಮಂತ್ರಿ, ಪ್ರಮುಖ ಅಧಿಕಾರಿಗಳು ವೆಟ್ಟಪಲ್ಲಿಗೆ ಸೇರಿದ ಜಮೀನುಗಳನ್ನು ಧರ್ಮವಾಗಿ ಬಿಟ್ಟಿದ್ದಾರೆ ಎಂದು ಶಾಸನ ತಜ್ಞರು ಹೇಳುತ್ತಾರೆ. ಹೊಯ್ಸಳರ ಕಾಲದ ದೇವಾಲಯವಾದರು ಇದನ್ನು ಚೋಳರ ಶೈಲಿಯಲ್ಲಿ ನಿರ್ಮಿಸಿರುವುದು ವಿಶೇಷ ಎನ್ನಲಾಗಿದೆ ಈ ದೇವಾಲಯದಲ್ಲಿ ಈಗ್ಗೆ ನಲವತ್ತೖದು ವರ್ಷಗಳ ಹಿಂದೆ ಪೂಜಾದಿ ಕಾರ್ಯಗಳು…
Author: Srinivas_Murthy
ಶ್ರೀನಿವಾಸಪುರ:ಊರು ಬಿಟ್ಟು ಯಾರು ವಲಸೆ ಹೋಗಬೇಡಿ ಇಲ್ಲೆ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಿ ಎಲ್ಲೋ ದೂರದ ನಗರಗಳಿಗೆ ವಲಸೆ ಹೋದರೆ ಅಲ್ಲಿ ಯಾವ ಕೆಲಸ ಮಾಡಲು ಸಾಧ್ಯವಾಗುತ್ತದೆ ಸೆಕ್ಯೂರಿಟಿ ಅಥಾವ ಪಾನಿ ಪೂರಿ ಹಾಕುವಂತ ಕೆಲಸ ಸಿಗುತ್ತದೆ, ಭೂಮಿ ಮೇಲೆ ಯಾರು ಅಥಾವ ಏನು ಶಾಶ್ವತ ಅಲ್ಲ,ಇರುವಷ್ಟು ಕಾಲ ಇಲ್ಲೆ ಪ್ರೀತಿ ವಿಶ್ವಾಸ ಸಹಬಾಳ್ವೆಯಿಂದ ಬದುಕು ಸವಿಸಬಹುದು ಎಲ್ಲವನ್ನು ರಾಜಕೀಕರಣ ಮಾಡುವುದು ಸೂಕ್ತ ಅಲ್ಲ ಎಲ್ಲರೂ ಅಣ್ಣ-ತಮ್ಮಂದಿರಂತೆ ಬಾಳಿ ಮುಂದಿನ ದಿನಗಳಲ್ಲಿ ನಿಮ್ಮ ಜೊತೆಗೆ ಸದಾ ಕಾಲ ಇರುತ್ತೇನೆ ನಿಮ್ಮ ಕಷ್ಟ-ಸುಖಗಳಿಗೆ ಭಾಗಿಯಾಗುತ್ತೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ K. R. Ramesh Kumar ಹೇಳಿದರು. ಅವರು ತಾಲೂಕಿನ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ಯಾಗತ್ತೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಮೊದಲನೆ ಮಹಡಿ ಉದ್ಘಾಟಿಸಿ ಮಾತನಾಡಿದರು.ಎಲ್ಲರೂ ನನ್ನವರೇ ಯಾರು ಕೆಟ್ಟವರು ಅಂತ ನಾನು ಎಕ್ಸರೇ ಮಾಡಿ ನೋಡುವ ಅವಶ್ಯಕತೆ ನನಗೆ ಬೇಗಿಲ್ಲ ಎಲ್ಲರೂ ಒಳ್ಳೆಯವರೆ ತಂದೆ-ತಾಯಿ ಬದುಕಿರುವಾಗಲೆ…
ನ್ಯೂಜ್ ಡೆಸ್ಕ್:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಹಾಸ್ಟೆಲ್ ನಲ್ಲಿ ಇರುವ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ,ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ರಾಯಚೂರು ಸಮಾಜ ಕಲ್ಯಾಣ ಇಲಾಖೆ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ವಾರ್ಡನ್ ದೇವರಾಜ್ ಅವರನ್ನು ಅಮಾನತು ಮಾಡಲಾಗಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಹಾಸ್ಟೆಲ್ ನಲ್ಲಿ ವಾಸ್ತವಿಕ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಇದ್ದಾರೆಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಲಾಗಿ,ಭ್ರಷ್ಟಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.ಉಪಲೋಕಾಯುಕ್ತರ ಸಾಹಸ ಕಾರ್ಯಚರಣೆ ಭ್ರಷ್ಟಾಚಾರ ಬಯಲುಆಗಸ್ಟ್ 28 ರಂದು ರಾತ್ರಿ 8 ಗಂಟೆ ವೇಳೆ ಸುರಿಯುತ್ತಿದ್ದ ಭಾರೀ ಮಳೆಯ ನಡುವೆಯೂ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹಾಸ್ಟೆಲ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ಈ ವೇಳೆ ಅಕ್ರಮ ಬೆಳಕಿಗೆ ಬಂದಿತ್ತು. ಬಯೋ-ಮೆಟ್ರಿಕ್ ಹಾಜರಾತಿಯ ಪ್ರಕಾರ ಹಾಸ್ಟೆಲ್ ನಲ್ಲಿ ಕೇವಲ 159…
ಶ್ರೀನಿವಾಸಪುರ:ಮೊನ್ನೆಯಷ್ಟೆ ರಾಯಲ್ಪಾಡು ಪೋಲಿಸ್ ಠಾಣೆ ವ್ಯಾಪ್ತಿಯ ಸುಣ್ ಕಲ್ಲು ಅರಣ್ಯ ಪ್ರದೇಶ ಬಳಿ ಬೊಲೊರೋ ಜೀಪಲ್ಲಿ ಸುಮಾರು 40 ವರ್ಷದ ವ್ಯಕ್ತಿಯೊಬ್ಬನ ಶವ ಸಿಕ್ಕಿದ್ದು ಈ ಬಗ್ಗೆ ರಾಯಲ್ಪಾಡು ಪೋಲಿಸರು ಅದರ ಜಾಡು ಹಿಡಿದು ಹೋದಾಗ ಕೊಲೆಯ ರಹಸ್ಯವೊಂದು ಬಯಲಾಗಿದೆ.ಕಾರಿನಲ್ಲಿ ಪತ್ತೆಯಾದ ಮೃತದೇಹ ಪೊಲೀಸರು ಪರಿಶೀಲನೆ ಮಾಡಿದಾಗ ಅಚ್ಚರಿ ವಿಷಯ ಬೆಳಕಿಗೆ ಬಂದಿದೆ ಮೃತ ವ್ಯಕ್ತಿಯ ಕೈ ಕಾಲುಗಳನ್ನು ವೈಯರ್ ನಿಂದ ಕಟ್ಟಿದ್ದು ಗಮನಿಸಿದರೆ ದೂರದಲ್ಲಿ ಎಲ್ಲೋ ಕೊಂದು ಕಾರಿನಲ್ಲಿ ಮೃತದೇಹ ಇಟ್ಟು ಪರಾರಿಯಾದ ಬಗ್ಗೆ ಪೊಲೀಸರು ಶಂಕಿಸಿದ್ದರು ಅದರಂತೆ ಮೃತದೇಹ 40 ವರ್ಷದ ವೆಂಕಟರವಣ ಎಂಬುದು ಎಂದು ಪತ್ತೆ ಹಚ್ಚಿದ್ದಾರೆ.ಸುಣ್ ಕಲ್ಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಎಸ್. ಗೊಲ್ಲಪಲ್ಲಿ ನಿವಾಸಿ ವೆಂಕಟರವಣ ಎಂದು ಗುರುತಿಸಿದ್ದು ಈತ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಇತನದು ಮೂಲತಃ ಮುಳಬಾಗಿಲು ತಾಲೂಕು ಬೆಟ್ಟೆವಾರಿಪಲ್ಲಿ ನಿವಾಸಿ ಸುಮಾರು 20 ವರ್ಷಗಳ ಹಿಂದೆ ಎಸ್. ಗೊಲ್ಲಪಲ್ಲಿ ಗ್ರಾಮದ ಕದಿರಮ್ಮ ಎಂಬಾಕೆಯನ್ನು ವಿವಾಹವಾಗಿ ಹೆಂಡತಿ ಮನೆಯಲ್ಲಿ ವಾಸಕ್ಕೆ…
ಶ್ರೀನಿವಾಸಪುರ:ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಸಾವನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಹೊರವಲಯ ಚಿಂತಾಮಣಿ ರಸ್ತೆಯ ಕಾಲೋನಿ ಗೇಟ್ ಬಳಿ ನಡೆದಿದೆ.ಮೃತ ಪಟ್ಟ ದ್ವಿಚಕ್ರ ವಾಹನ ಸವಾರ ಸೀತಿರೆಡ್ಡಿಹಳ್ಳಿ ಗ್ರಾಮದ ರಾಮರೆಡ್ಡಿ (50) ಎಂದು ಗುರತಿಸಲಾಗಿದ್ದು ಗಂಬೀರವಾಗಿ ಗಾಯಗೊಂಡಿರುವ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯಿಲಾಗಿದಿಯಂತೆ, ಮೃತ ರಾಮರೆಡ್ಡಿ ಚಿಂತಾಮಣಿ ಕಡೆಯಿಂದ ಸ್ಕೂಟರ್ ನಲ್ಲಿ ಬರುತಿದ್ದು ಗಾಯಗೊಂಡವರು ಬೈಕನಲ್ಲಿ ಹೋಗುತ್ತಿದ್ದರು ಎನ್ನಲಾಗುತ್ತಿದೆ, ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಳಬಾಗಿಲು:ಇತಿಹಾಸ ಪ್ರಸಿದ್ದ ಚೋಳರ ಕಾಲದಲ್ಲಿ ನಿರ್ಮಿಸಿರುವ ಕುರುಡುಮಲೆ ವಿನಾಯಕ ರಾಜ್ಯದಲ್ಲಿನ ಏಕೈಕ ಲಕ್ಷ್ಮೀ ಗಣಪತಿ ಪುಣ್ಯಕ್ಷೇತ್ರ ಎಂಬ ಖ್ಯಾತಿ ಇದೆ ಕುರುಡುಮಲೆ ವಿನಾಯಕ ದೇಗುಲಕ್ಕೆ ಬಂದು ಬೇಡಿಕೊಂಡರೆ ಯಾವ ಕೆಲಸವಾದರು ಸುಲಲಿತವಾಗಿ ನಡೆಯುತ್ತದೆ ಎಂಬುದು ಪ್ರತಿತಿ.ಹಬ್ಬದ ಮಾರನೆ ದಿನ ರಥೋತ್ಸವಗಣೇಶನಿಗೆ ವಿನಾಯಕ ಚೌತಿ ಗಣಪತಿ ಹಬ್ಬದ ಮಾರನೇ ದಿನವಾದ ಇಂದು ಅದ್ಧೂರಿಯಾಗಿ ಬ್ರಹ್ಮ ರಥೋತ್ಸವ ನಡೆಯಿತು.ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮಿಗಣಪತಿ ರಥೋತ್ಸವಕ್ಕೂ ಮುಂಚಿತವಾಗಿ ದೇವಾಲಯದಲ್ಲಿ ಬೃಹತ್ ಏಕಶಿಲಾ ಸಾಲಿಗ್ರಾಮ ವಿನಾಯಕಮೂರ್ತಿಗೆ ವಿಶೇಷ ಅಲಂಕಾರ ಪೂಜಾ ಹಾಗು ಹೋಮದ ಕಾರ್ಯಕ್ರಮಗಳು ನಡೆಯಿತು,ನಂತರದಲ್ಲಿ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಉತ್ಸವ ಮೂರ್ತಿಗಳನ್ನು ಬೃಹತ್ ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತಾಧಿಗಳ ಜಯಘೋಷಗಳ ನಡುವೆ ರಥೋತ್ಸವವನ್ನು ಎಳೆಯಲಾಯಿತು ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತಾದಿಗಳು ರಥಕ್ಕೆ ಹಣ್ಣುಕಾಯಿ ನೀಡಿದರೆ ಇನ್ನು ಕೆಲ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಕೃತಾರ್ಥರಾದರು.ರಥೋತ್ಸವಕ್ಕೆ ರಾಜ್ಯದ ವಿವಿದ ಮೂಲೆಗಳಿಂದ ಹಾಗು ಆಂಧ್ರ,ತಮಿಳುನಾಡು ರಾಜ್ಯಗಳಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಆಗಮಿಸಿದ್ದ ಗಣ್ಯರುರಾಜ್ಯ ಸರ್ಕಾರದ ಆಹಾರ…
ನ್ಯೂಜ್ ಡೆಸ್ಕ್:ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಭಾರತದ ಒರ್ವ ಟೆಕ್ಕಿ ಮಹಿಳೆ ತಮ್ಮ ಭಾರತದ ಮನೆಯಲ್ಲಿ ನಡೆಯುತ್ತಿದ್ದ ಕಳ್ಳತನ ತಡೆದಿದ್ದಾರೆ.ಇದು ನಡೆದಿರುವುದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಸಿದ್ರಾಮೇಶ್ವರ ಕಾಲೋನಿಯಲ್ಲಿರುವ ನಿವೃತ್ತ ಎಂಜಿನಿಯರ್ ಹನಮಂತಗೌಡ ಅವರ ಮನೆಯಲ್ಲಿ ಅಮೇರಿಕಾದಲ್ಲಿರುವ ಅವರ ಪುತ್ರಿ ಶೃತಿ ವಿದೇಶದಲ್ಲಿದ್ದರೂ ಸಮಯಪ್ರಜ್ಞೆ ಮೆರೆಯುವ ಮೂಲಕ ಮನೆಗೆ ನುಗ್ಗಿದ್ದ ಕಳ್ಳರನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೆಲ ವರ್ಷಗಳ ಹಿಂದೆ ಸ್ವದೇಶಕ್ಕೆ ಆಗಮಿಸಿದ್ದ ಶೃತಿ ತಂದೆ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಅದನ್ನು ನೋಡಲು ತಮ್ಮ ಮೊಬೈಲಿಗೆ ಬರುವಂತೆ ಸಿಂಕ್ ಮಾಡಿಸಿದ್ದರು,ಮಂಗಳವಾರ ತಡರಾತ್ರಿ 1 ರಿಂದ 2 ಗಂಟೆಯ ಮಧ್ಯೆ ಚಡ್ಡಿ ಗ್ಯಾಂಗ್ ಇಬ್ಬರು ಹನಮಂತಗೌಡ ಸಂಕಪ್ಪನವರ್ ಮನೆಗೆ ನುಗ್ಗಿದ್ದಾರೆ.ಇದೆ ಸಮಯದಲ್ಲಿ ಅಮೇರಿಕಾದಲ್ಲಿದ್ದ ಶ್ರುತಿ ಅಲ್ಲಿಂದಲೇ ಮನೆಯಲ್ಲಿನ ವಿದ್ಯಮಾನ್ಯಗಳನ್ನು ಗಮನಿಸಿದ್ದಾರೆ ಭಾರತದಲ್ಲಿ ಮಧ್ಯರಾತ್ರಿ ಆಗಿದ್ದರೆ ಅಮೆರಿಕದಲ್ಲಿ ಮಧಾಹ್ನದ 3:30ರ ಸಮಯವದು. ಹೀಗೆ ಮೊಬೈಲ್ ನೋಡುತ್ತಿದ್ದಾಗ ಮನೆಗೆ ಕಳ್ಳರು ನುಗ್ಗಿದ ದೃಶ್ಯವನ್ನು ನೋಡಿ ಕೂಡಲೇ ಶೃತಿ ಪೋಷಕರಿಗೆ ಕರೆ ಮಾಡಿದ್ದಾರೆ.ತಕ್ಷಣ ಎಚ್ಚೆತ್ತ ಶೃತಿ ಪೋಷಕರು ಬಾಗಿಲು…
ಸಿನಿ ಡೆಸ್ಕ್:ಮೆಗಾಸ್ಟಾರ್ ಚಿರಂಜೀವಿ ಮತ್ತು ಅನಿಲ್ ರಾವಿಪುಡಿ ಕಾಂಬಿನೇಷನಲ್ ಬರುತ್ತಿರುವ ಹೊಸ ಸಿನಿಮಾದ ರೋಮಾಂಚಕಾರಿ ಅಪ್ಡೇಟ್ ಹೊರ ಬಿದ್ದಿದೆ. ಚಿರಂಜೀವಿ ಹುಟ್ಟುಹಬ್ಬಕ್ಕೆ ಸಿನಿಮಾದ ಟೈಟಲ್ ಹಾಗು ಗ್ಲಿಂಪ್ಸ್ ಬಿಡುಗಡೆಯಾಗಿದ್ದು ಸಿನಿಮಾದ ಟೈಟಲ್ “ಮನ ಶಂಕರವರ ಪ್ರಸಾದ್” ಎಂದು ಸಬ್ ಟೈಟಲ್ ಪಂಡುಗಕಿ ವಸ್ತುನ್ನಾರು ಹೆಸರಿಸಲಾಗಿದೆ. ಇದರೊಟ್ಟಿಗೆ ಫಸ್ಟ್ ಲುಕ್ ಪ್ರೋಮೊ ಸಹ ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಗ್ಲಿಂಪ್ಸ್ ನಲ್ಲಿ ಜೀಪಿನಿಂದ ಇಳಿಯುವ ಚಿರಂಜೀವಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಯಿಯಲ್ಲಿ ಸಿಗರೇಟ್ ಹಿಡಿದು ಕನ್ನಡಕ ಧರಿಸಿ ಹೆಜ್ಜೆಹಾಕುತ್ತಿರುವ ಅವರ ಲುಕ್ ಮಾಸ್ & ಕ್ಲಾಸ್ ಮಿಕ್ಸೆಡ್ ಆಗಿದ್ದು ಚಿರಂಜೀವಿ ಭುಜದ ಮೇಲೆ ಬಂದೂಕನ್ನು ಹಿಡಿದು ಮೆಟ್ಟಿಲುಗಳಿಂದ ಇಳಿಯುವ ದೃಶ್ಯವು ಗ್ಲಿಂಪ್ಸ್‌ನ ಹೈಲೈಟ್ ಎನ್ನಬಹುದು. ವಿಂಟೇಜ್ ಲುಕ್ ಅಲ್ಲಿ ಚಿರು… ಸಿಗರೇಟ್ ಎಸೆಯುವ ಶೈಲಿ, ಅವರ ನಡಿಗೆ ಮತ್ತು ಅವರ ಸ್ಟೈಲ್ ಎಲ್ಲವೂ ವಿಂಟೇಜ್ ಮೆಗಾಸ್ಟಾರ್ ಅನ್ನು ನೆನಪಿಸುತ್ತದೆ. ಹಿನ್ನೆಲೆ ಸಂಗೀತ ಚಿರಂಜೀವಿ ಅವರ ಹಳೆಯ ಕ್ಲಾಸಿಕ್ ಸಿನಿಮಾಗಳ ರೀತಿಯಂತೆ ಸೇಳೆಯುತ್ತದೆ ವಿಡಿಯೋ ಗ್ಲಿಂಪ್ಸ್…
ಶ್ರೀನಿವಾಸಪುರ:ಅಣ್ಣ-ತಂಗಿಯರ ಬಂಧವು ಸಹೋದರತೆಯ ಅನನ್ಯ ಬಾಂಧವ್ಯವಾಗಿದ್ದು, ರಕ್ಷಾಬಂಧನದಂತಹ ಹಬ್ಬಗಳ ಮೂಲಕ ತಂಗಿ ಅಣ್ಣನ ರಕ್ಷಣೆ ಮತ್ತು ಅಣ್ಣ ತಂಗಿಯರ ಒಳಿತನ್ನು ಬಯಸುವಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ಧರ್ಮ ಎಂದು ಭೈರವೇಶ್ವರ ವಿಧ್ಯ ಸಂಸ್ಥೆ ನಿರ್ದೇಶಕ ಕಲ್ಲೂರುವೆಂಕಟರೆಡ್ಡಿ ಹೇಳಿದರುಅವರು ಪಟ್ಟಣದ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರೀನಿವಾಸಪುರ ಶಾಖೆಯಿಂದ ನೂಲು ಹುಣ್ಣಿಮೆ ಅಂಗವಾಗಿ ಏರ್ಪಡಿಸಿದ್ದ ರಕ್ಷಾ ಬಂಧನ ಹಾಗು ಮಾತೃಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾತೃಭೋಜನ ಸನಾತನ ಸಂಸ್ಕೃತಿಯ ಪ್ರತೀಕ ಅನ್ನ ಇಟ್ಟವರು ತಾಯಿಗೆ ಸಮಾನ, ವಾತ್ಸಲ್ಯ ಮೂರ್ತಿಯ ಕೈತುತ್ತು ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಸಂಕೇತ ಇಂತಹ ವೈಶಿಷ್ಟ ನಮ್ಮ ಧರ್ಮದಲ್ಲಿ ಮಾತ್ರ ಕಾಣಲು ಸಾಧ್ಯ ಪ್ರಪಂಚದಲ್ಲಿ ತಂತ್ರಜ್ಞಾನ ಎಷ್ಟೆ ಬೆಳೆದರು ಪ್ರತಿ ಮಹಿಳೆಯನ್ನು ಗೌರವದಿಂದ ಕಾಣೂವ ಮೂಲಕ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರ ಪರಂಪರೆಯನ್ನು ಅಳವಡಿಸಿಕೊಂಡು ಸಾಗುವ ಅಗತ್ಯತೆ ಇದೆ ಎಂದರು.ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಭೈರೇಗೌಡ ಮಾತನಾಡಿ ಇಂದು…
ಶ್ರೀನಿವಾಸಪುರ:ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ 2047 ಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಂಬೈ ಕೇಂದ್ರಿ ಕೃತವಾಗಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಕುರಿತಂತೆ ನೂತನ ಆರ್ಥಿಕ ನೀತಿ ನಿಯಮಗಳನ್ನು ಪ್ರಸ್ತುತಪಡಿಸುತ್ತಾರೆ.ದಿನ ಬೆಳೆಗ್ಗೆ ಭಾರತದ ರಸ್ತೆಗಳ ಅಭಿವೃದ್ಧಿಯದೆ ಮಾತು ಈಗೆಲ್ಲ ರಾಷ್ಟ್ರೀಯ ಹೆದ್ದಾರಿ 4 ಪಥ ಅಥಾವ 6 ಪಥದ ಹೆದ್ದಾರಿಗಳದೆ ಪಾರುಪತ್ಯ,ಆದರೆ ಗ್ರಾಮೀಣ ರಸ್ತೆ ಕೊಂಚವೂ ಸುಧಾರಣೆಯಾಗಿಲ್ಲ ಎನ್ನಬಹುದು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ವ್ಯವಸ್ಥೆ ಕುರಿತಾಗಿ ಆಳುವರ ಮನಸ್ಸಿಗೆ ಇನ್ನೂ ತಟ್ಟಿಲ್ಲ, ಆಧುನಿಕತೆ ಹಳ್ಳಿ ಹಳ್ಳಿಗಳನ್ನೂ ತಲುಪುತ್ತಿದೆ ಗುಣಮಟ್ಟದ ರಸ್ತೆಗಳು ಹಳ್ಳಿಗಳನ್ನು ತಲುಪಿಲ್ಲ ಎನ್ನಬಹುದಾಗಿದೆ.ಇದಕ್ಕೆ ಕಾರಣ ಸಮರ್ಪಕ ರಸ್ತೆಗಳ ಕೊರತೆ ಎದ್ದು ಕಾಣುತ್ತಿದೆ ಈಗಿರುವ ರಸ್ತೆಗಳು ನಿರ್ವಹಣೆ ಇಲ್ಲದೆ ಅಧ್ವಾನ ಸ್ಥಿತಿಗೆ ತಲುಪಿವೆ.ಇದರಿಂದ ತುರ್ತು ಸನ್ನಿವೇಶಗಳಲ್ಲಿ ಜನ ಸಾಮಾನ್ಯರ ಪಾಡು ಹೇಳತೀರದು.ಶ್ರೀನಿವಾಸಪುರ-ಹೋಳೂರು ರಸ್ತೆ ಇಂದು ನಿನ್ನೆಯದಲ್ಲ ತುಂಬಾ ಹಳೆಯ ರಸ್ತೆಯಾಗಿದ್ದು ಶ್ರೀನಿವಾಸಪುರ-ಕೋಲಾರ ಎರಡು ತಾಲೂಕುಗಳ ಹತ್ತಾರು ಹಳ್ಳಿಗಳಿಗೆ ಕೊಂಡಿಯಂತೆ ಸಂಪರ್ಕದ ಈ ರಸ್ತೆ ಹೋಳೂರು ಭಾಗದ ಜನತೆ ಶ್ರೀನಿವಾಸಪುರಕ್ಕೆ ವಾಣಿಜ್ಯ ವ್ಯವಹಾರಗಳಿಗೆ ಬರಲು…


