ಶ್ರೀನಿವಾಸಪುರ:ಶುಕ್ರವಾರ ಮುಂಜಾನೆ ನಸುಕಿನಲ್ಲಿ ಲಕ್ಷ್ಮೀಪುರ ಬಳಿ ನಡೆದ ರಸ್ತೆ ಅಪಘಾತಕ್ಕೆ ಮದನಪಲ್ಲಿಯ ದಂಪತಿ ಬಲಿಯಾಗಿದ್ದಾರೆ ಮೃತ ದಂಪತಿಯನ್ನು ಆಂಧ್ರಪ್ರದೇಶದ ಮದನಪಲ್ಲಿ ನಗರದ ಕೋಟೆ ಬೀದಿಯ ನಿವಾಸಿಗಳಾಗಿದ್ದ ಶಫಿ (55) ಶಮಾ (50) ಎಂದು ಗುರುತಿಸಲಾಗಿದೆ ವೃತ್ತಿಯಲ್ಲಿ ಸಿವಿಲ್ ಇಂಜನಿಯರ್ ಆಗಿದ್ದ ಶಫಿ ಸಾಫ್ಟ್ ವೇರ್ ಇಂಜನಿಯರ್ ಆಗಿದ್ದ ತಮ್ಮ ಹಿರಿಯ ಪುತ್ರಿಯನ್ನು ದೇವನಹಳ್ಲಿ ಕೇಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಸ್ಟ್ರೇಲಿಯಾ ವಿಮಾನ ಹತ್ತಿಸಿ ನಸುಕಿನ ಜಾವದಲ್ಲಿ ಮದನಪಲ್ಲಿಗೆ ತಮ್ಮ ಸ್ವಂತ ಟಯೋಟ ಇಟಿಯಾಸ್ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಲಕ್ಷ್ಮೀಪುರ ಕ್ರಾಸ್ ಆದ ನಂತರ ಮುಂದಿನ ತಿರುವಿನಲ್ಲಿ 20ರಿಂದ 25 ಅಡಿಗಳ ಹಳ್ಳಕ್ಕೆ ಬಿದ್ದ ಪರಿಣಾಮ ವಾಹನ ಚಲಾಯಿಸುತ್ತಿದ್ದ ಶಫಿ ಮತ್ತು ಅವರ ಪತ್ನಿ ಸ್ಥಳದಲ್ಲಿಯೇ ಸಾವನಪ್ಪಿರುತ್ತಾರೆ.ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕ್ರೇನ್ ಸಹಾಯದೊಂದಿಗೆ ಕಾರು ಮೇಲತ್ತಲಾಗಿ ಮೃತ ದೇಹಗಳನ್ನು ಕಾರಿನಿಂದ ಹೊರತಗೆದು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ನಡೆಸಿ ಕುಟುಂಬಸ್ಥರ ವಶಕ್ಕೆ ನೀಡಲಾಗಿದೆ.
ಮಗನ ಸಾವು ಇಲ್ಲೇ ಆಗಿತ್ತು!ಅಪಘಾತದಲ್ಲಿ ಮೃತ ಪಟ್ಟಿರುವ ಶಫಿ (55) ಶಮಾ (50) ದಂಪತಿ ಏಕೈಕ ಪುತ್ರ ಕಳೆದ ಎರಡು ವರ್ಷಗಳ ಹಿಂದೆ ಇದೇ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವುದಾಗಿ ಮದನಪಲ್ಲಿಯ ಕೆಲವರು ಹೇಳುತ್ತಾರೆ.
ಮಾಜಿ ಶಾಸಕ ಶಹಜಹಾನ್ ಆರೋಪ
ಮೃತ ದಂಪತಿ ವಿಚಾರವಾಗಿ ಶ್ರೀನಿವಾಸಪುರಕ್ಕೆ ಆಗಮಿಸಿದ್ದ ಮದನಪಲ್ಲಿ ಮಾಜಿ ಹಾಗು ಟಿಡಿಪಿ ಮುಖಂಡ ಶಹಜಹಾನ್ ಬಾಷ ಸುದ್ದಿಗಾರರೊಂದಿಗೆ ಮಾತನಾಡಿ ಈ ಅಪಘಾತಕ್ಕೆ ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರ ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದರು. ರಸ್ತೆ ಅಭಿವೃದ್ದಿ ಅಥಾವ ನಿರ್ಮಾಣ ಮಾಡುವಾಗ ಅಗತ್ಯ ಕ್ರಮಗಳನ್ನು ಕೈಗೊಂಡು ನಿಯಮಾವಳಿಗಳಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಗುತ್ತಿಗೆದಾರ ಸಂಸ್ಥೆ ಯಾವುದನ್ನು ಪಾಲಿಸದೆ ಬೇಜವಾಬ್ದಾರಿ ತನದಿಂದ ಕಾಮಗಾರಿ ಮಾಡುತ್ತಿದ್ದಾರೆ ಇದರಿಂದ ಅಪಘಾತಗಳು ನಿರಂತರವಾಗಿ ನಡೆಯುತ್ತಿದೆ ಎಂದು ದೂರಿದ ಅವರು ಇನ್ನು ಮುಂದೆಯಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ಅಪಘಾತಗಳನ್ನು ತಡೆಗಟ್ಟಿ ಮನುಷ್ಯರ ಪ್ರಾಣ ಉಳಿಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು ನಿಯಮಾವಳಿಗಳಂತೆ ಸೂಚನ ಫಲಕಗಳನ್ನು ಅಳವಡಿಸಿ ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಗ್ರಹಿಸಿದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16