ಮುಳಬಾಗಿಲು:ಕುರುಡುಮಲೆ ಮುಳಬಾಗಿಲಿನಲ್ಲಿರುವ ಪವಿತ್ರ ಪುಣ್ಯಕ್ಷೇತ್ರವಾಗಿದ್ದು,ಐತಿಹಾಸಿಕ ಮಹತ್ವ ಹೊಂದಿರುವ ದೇವಾಯದಲ್ಲಿ ಏಕಶಿಲಾ ಸಾಲಿಗ್ರಾಮ ಗಣೇಶ ನಲೆಸಿದ್ದು ಈ ಬೃಹತ್ ಗಣಪತಿಯ ದರ್ಶನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತಿತಿ ಇದೆ.
ಇಲ್ಲಿನ ಗಣೇಶನಿಗೆ ಪ್ರತಿ ಶುಕ್ಲ ಪಕ್ಷದ ಚತುರ್ಥಿಯಂದು ಅಂದರೆ ಗಣೇಶ ಹಬ್ಬದ ಮಾರನೆ ದಿನದಂದು ಅತ್ಯಂತ ವಿಜೃಂಬಣೆಯಿಂದ ವಾರ್ಷಿಕ ಬ್ರಹ್ಮ ರಥೋತ್ಸವ ನಡೆಯುತ್ತದೆ ಅದರಂತೆ ಈ ವರ್ಷವೂ ಅತ್ಯಂತ ಸಡಗರ ಸಂಭ್ರಮದಿಂದ ಕುರುಡುಮಲೆ ಗಣಪತಿಗೆ ಬ್ರಹ್ಮ ರಥೋತ್ಸವ ನಡೆಯಿತು.
ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮಿಗಣಪತಿ ರಥೋತ್ಸವಕ್ಕೂ ಮುಂಚಿತವಾಗಿ ದೇವಾಲಯದಲ್ಲಿ ಬೃಹತ್ ಏಕಶಿಲಾ ಸಾಲಿಗ್ರಾಮ ವಿನಾಯಕಮೂರ್ತಿಗೆ ವಿಶೇಷ ಅಲಂಕಾರ ಪೂಜಾ ಹಾಗು ಹೋಮ ಕಾರ್ಯಕ್ರಮಗಳು ನಡೆಯಿತು,ಅಲಂಕೃತಗೊಂಡ ಬೃಹತ್ ಏಕಶಿಲಾ ಸಾಲಿಗ್ರಾಮ ವಿನಾಯಕಮೂರ್ತಿಯನ್ನು ವೀಕ್ಷಿಸಲು ಎರಡು ಕಣ್ಣುಗಳು ಸಾಲದು! ನಂತರದಲ್ಲಿ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಉತ್ಸವ ಮೂರ್ತಿಗಳನ್ನು ಬೃಹತ್ ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತಾಧಿಗಳ ಜಯಘೋಷಗಳ ನಡುವೆ ರಥೋತ್ಸವವನ್ನು ಎಳೆಯಲಾಯಿತು ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತಾದಿಗಳು ರಥಕ್ಕೆ ಹಣ್ಣುಕಾಯಿ ನೀಡಿದರೆ ಇನ್ನು ಕೆಲ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಕೃತಾರ್ಥರಾದರು.ರಥೋತ್ಸವದಲ್ಲಿ ರಾಜ್ಯದ ವಿವಿದ ಮೂಲೆಗಳಿಂದ ಹಾಗು ಆಂಧ್ರ,ತಮಿಳುನಾಡು ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.
ರಾಜ್ಯ ಸರ್ಕಾರದ ಆಹಾರ ಸಚಿವ ಹಾಗು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ,ಮುಳಬಾಗಿಲು ಶಾಸಕ ಸಮೃದ್ಧಿಮಂಜುನಾಥ್, ತಹಶೀಲ್ದಾರ್ ರೇಖಾ,ತಾಲೂಕು ಪಂಚಾಯಿತಿ ಇಒ ಡಾ.ಸರ್ವೇಶ್,ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ರಾಜಕೀಯ ಪ್ರಮುಖರು,ಉದ್ಯಮಿಗಳು,ಗುತ್ತಿಗೆದಾರರು ಪಾಲ್ಗೋಂಡಿದ್ದರು ಈ ಸಂದರ್ಭದಲ್ಲಿ ಡಿವೈಎಸ್.ಪಿ ನಂದಕುಮಾರ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Breaking News
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
- ಶ್ರೀನಿವಾಸಪುರ ತಾಡಿಗೋಳ್ RTO ಚೆಕ್ ಪೋಸ್ಟ್ ಲೋಕಾಯುಕ್ತ ದಾಳಿ.
- ಮುತ್ತಕಪಲ್ಲಿ ಪಂಚಾಯಿತಿ ಅಕ್ರಮಗಳ ತನಿಖೆಗೆ ಆಗ್ರಹ
Saturday, October 12