ನ್ಯೂಜ್ ಡೆಸ್ಕ್:ಯಾಗಿ ಚಂಡಮಾರುತದ ಎಫೇಕ್ಟ್ ಸುಂದರವಾದ ಹಾಗು ಪ್ರವಾಸಿಗರ ಸ್ವರ್ಗ ದೇಶ ಮ್ಯಾನ್ಮಾರ್ ನಲ್ಲಿ ದೊಡ್ಡಮಟ್ಟದಲ್ಲಿ ಹಾನಿಗೊಳಗಾಗಿದೆ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಸುಮಾರು 236 ಜನರು ಸಾವನ್ನಪ್ಪಿದ್ದು 77 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂಎನ್ನಲಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. 6.31 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ರಸ್ತೆಗಳು ದೊಡ್ಡ ಪ್ರಮಾಣದಲ್ಲಿ ಹಾಳಾಗಿದ್ದು, ಆಸ್ತಿಪಾಸ್ತಿಗೆ ಹಾನಿಯಾಗಿದೆ. ಭಾರತದ ನೇರವು ಯಾಗಿ ಚಂಡಮಾರುತದಿಂದ ತತ್ತರಿಸಿರುವ ಮ್ಯಾನ್ಮಾರ್, ವಿಯೆಟ್ನಾಂ ಮತ್ತು ಲಾವೋಸ್ಗೆ ಭಾರತ ಸರ್ಕಾರ ಮಾನವೀಯತೆಯ ಸಹಾಯ ಹಸ್ತ ಚಾಚಿದೆ
ಮ್ಯಾನ್ಮಾರ್ಗೆ ರೇಷನ್, ಬಟ್ಟೆ ಮತ್ತು ಔಷಧಗಳು ಸೇರಿದಂತೆ ಹತ್ತು ಟನ್ಗಳ ನೆರವು. IAF ವಿಯೆಟ್ನಾಂಗೆ ನೀರು ಶುದ್ಧೀಕರಣ ವಸ್ತುಗಳನ್ನು ನೀರಿನ ಪಾತ್ರೆಗಳು, ಹೊದಿಕೆಗಳು, ಅಡುಗೆ ಪಾತ್ರೆಗಳು, ಸೌರ ಲ್ಯಾಂಟರ್ನ್ಗಳನ್ನು ಒಳಗೊಂಡ 35 ಟನ್ಗಳ ನೆರವನ್ನು ಒಯ್ಯುತ್ತಿದೆ. ಜೆನ್ಸೆಟ್, ನೀರು ಶುದ್ಧೀಕರಣ ವಸ್ತುಗಳು, ನೈರ್ಮಲ್ಯ ಸರಬರಾಜು, ಸೊಳ್ಳೆ ಪರದೆಗಳು, ಹೊದಿಕೆಗಳು ಮತ್ತು ಮಲಗುವ ಚೀಲಗಳನ್ನು ಒಳಗೊಂಡ ಹತ್ತು ಟನ್ಗಳ ಸಹಾಯವನ್ನು ಲಾವೋಸ್ಗೆ ಕಳುಹಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಾಮಾಜಿಕ ಮಾಧ್ಯಮ ‘X’ ನಲ್ಲಿ ಹಂಚಿಕೊಂಡಿದ್ದಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



