ಶ್ರೀನಿವಾಸಪುರ:ಪೋಲಿಸರೆಂದು ನಂಬಿಸಿ ವೃದ್ಧೆಯ ಮಾಂಗಲ್ಯ ಸರ ಅಪಹರಿಸಿರುವ ಘಟನೆ ಪಟ್ಟಣದ ಜನಬಿಡದಿ ವೃತ್ತ ಆಗಿರುವ ಪವನ್ ಆಸ್ಪತ್ರೆ ಬಳಿ ನಡೆದಿದೆ.
ಕಲ್ಲೂರು ಗ್ರಾಮದ ವೃದ್ದೆ ವೆಂಕಟಲಕ್ಷ್ಮಮ್ಮ ಮನೆಗೆ ಸರಕು ಖರೀದಿಸಲು ಆಸ್ಪತ್ರೆ ವೃತ್ತದ ಬಳಿ ನಡೆದು ಹೋಗುತ್ತಿರುವಾಗ ಅಪರಿಚಿತರು ವೆಂಕಟಲಕ್ಷ್ಮಮ್ಮನನ್ನು ಪರಿಚಿತರಂತೆ ಮಾತನಾಡಿ ಕಳ್ಳತನಗಳು ಹೆಚ್ಚಾಗುತ್ತಿವೆ ಮಾಂಗಲ್ಯ ಸರ ತೆಗೆದು ಬ್ಯಾಗ್ ನಲ್ಲಿ ಇಟ್ಟು ಕೊಳ್ಳಿ ಎಂದು ವೃದ್ದೆ ಕತ್ತಿನಲ್ಲಿದ್ದ ಬಂಗಾರದ ಸರವನ್ನು ತೆಗಿಸಿ ಬ್ಯಾಗ್ ನಲ್ಲಿ ಇಡಿಸಲು ಸಹಾಯ ಮಾಡುವರಂತೆ ಮಾಡಿ ಸರವನ್ನು ಎಗರಿಸಿದ್ದಾರೆ, ಇದಾದ ನಂತರ ಬ್ಯಾಗಲ್ಲಿ ಬಂಗಾರದ ಸರ ಇರುವುದನ್ನು ಖಾತ್ರಿ ಪಡಿಸಿಕೊಳ್ಳಲು ವೃದ್ದೆ ಪರಿಚಯಸ್ಥರ ಅಂಗಡಿ ಬಳಿ ಹೋಗಿ ಬ್ಯಾಗ್ ತಗೆದು ನೋಡಿದಾಗ ಮಾಂಗಲ್ಯ ಸರ ಇಲ್ಲದನ್ನು ನೋಡಿ ಗಾಭರಿಯಾಗಿದ್ದಾರೆ ಕೂಡಲೆ ಪರಿಚಯಸ್ಥರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವೃದ್ದೆ ಹೇಳುವಂತೆ ಪೊಲೀಸರೆಂದು ನಂಬಿಸಿ ಪರಿಚಯಸ್ಥರಂತೆ ನಟಿಸಿ ನಾನು ಧರಿಸಿದ್ದ 40ಗ್ರಾಂ ಮಾಂಗಲ್ಯ ಚೈನು 6.5 ಗ್ರಾಂ ತಾಳಿ ಬಟ್ಟುಗಳ ಅಂದಾಜು 3ಲಕ್ಷ ಮೌಲ್ಯದ ಸರವನ್ನು ನಂಬಿಸಿ ಮೋಸಮಾಡಿ ಯಾಮಾರಿಸಿದ್ದಾರೆ ಎಂದು ಅಲವತ್ತುಕೊಳ್ಳುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



