ಶ್ರೀನಿವಾಸಪುರ:ದೇಶದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರದಲ್ಲಿ ಮಾವು ಮಂಡಿಗಳು ಹಾಗು ಕೃಷಿ ಉತ್ಪನ್ನ ಮಾರುಕಟ್ಟೆ ಇರುವಂತ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಇದ್ದು, ಇಲ್ಲಿ ಮಾವು ರವಾನಿಸಲು ಬರುವಂತ ಬಾರಿಗಾತ್ರದ ಲಾರಿಗಳು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿಕೊಂಡು ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತಿದ್ದಾರೆ ಇದರಿಂದ ಈ ರಸ್ತೆಯಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಕನ್ನಡಪರ ಸಂಘಟನೆಗಳ ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳಿಗೆ ಮತ್ತು ಪೋಲಿಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿರುತ್ತಾರೆ.
ಪ್ರತಿ ವರ್ಷ ಮೇ,ಜುನ್,ಜುಲೈ ತಿಂಗಳ ಅಂತ್ಯದವರಿಗೂ ಮಾವು ಕಟಾವು ಆರಂಭವಾಗುತ್ತದೆ ಅವುಗಳನ್ನು ತಂದು ಮಂಡಿಗಳಿಗೆ ಹಾಕುತ್ತಾರೆ ಸಾವಿರಾರು ಟನ್ ಮಾವನ್ನು ದೇಶದ ವಿವಿಧ ಭಾಗದ ಮಾರುಕಟ್ಟೆಗಳಿಗೆ ಸಾಗಿಸಲು ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಾರಿಗಾತ್ರದ ಲಾರಿಗಳು ಬರುತ್ತವೆ ಇದರೊಂದಿಗೆ ಮಾವು ಪ್ಯಾಕಿಂಗ್ ವಸ್ತುಗಳ ಅಂಗಡಿಗಳು ಅಲ್ಲೆ ಪ್ರಾರಂಭಿಸುತ್ತಾರೆ ಲಾರಿ ಕಮೀಷನ್ ಆಫಿಸ್ ಗಳು,ಮಾವು ಸಾಗಿಸಲು ಕೂಲಿ ಕಾರ್ಮಿಕರು ಇದರ ಜೊತೆಗೆ ಹೊರಗಡೆಯಿಂದ ಬರುವಂತ ಲಾರಿಗಳು,ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತದೆ,ಇದರೊಂದಿಗೆ ಮಾವು ತಗೆದುಕೊಂಡು ಹಳ್ಳಿಗಳಿಂದ ಬರುವಂತ ಟ್ರ್ಯಾಕ್ಟರ್ ಗಳು ಇಡಿ ರಸ್ತೆ ಜನಸಂಚಾರದಿಂದ ಬಿಝಿಯಾಗಿ ಟ್ರಾಫಿಕ್ ಸಮಸ್ಯ ಉಂಟಾಗುತ್ತದೆ ಇದರಿಂದ ಇಲ್ಲಿ ಸಣ್ಣಪುಟ್ಟ ವಾಹನಗಳು ಸರಗವಾಗಿ ಸಂಚರಿಸಲು ಸಮಸ್ಯೆ ಉಂಟಾಗಿ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಸಾವು ನೋವುಗಳಿಗೂ ಕಾರಣವಾಗುತ್ತದೆ ಈ ಬಗ್ಗೆ ತಾಲೂಕು ಆಡಳಿತ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಸಂಚಾರ ವ್ಯವಸ್ಥೆ ಸುಗಮ ಗೊಳಿಸಬೇಕು ಅಪಘಾತಗಳನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಆಟೋಜಗದೀಶ್,ಸಾದಿಕ್ ಪಾಷ,ನರಸಿಂಹಮೂರ್ತಿ,ಸುಬ್ರಮಣಿ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



