ಮಳೆಯಿಲ್ಲ ನೀರಿಲ್ಲ ಕರೆಂಟಿಲ್ಲ ಮಾವು ಇಲ್ಲ
ಶ್ರೀನಿವಾಸಪುರ:ವಿಭಜಿತ ಕೋಲಾರ ಜಿಲ್ಲೆಯ ಜನತೆ ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದಾರೆ ಹಗಲು ಸೂರ್ಯನ ತಾಪಕ್ಕೆ ಭೂಮಿ ಕಾದ ಕೆಂಡವಾಗುತ್ತಿದ್ದು, ರಾತ್ರಿ ಧಗೆ ಹೆಚ್ಚಾಗುತ್ತಿದೆ.ಮಳೆ ಇಂದೋ ನಾಳೆಯೋ ಬರಬಹುದು ಎಂಬ ನೀರಿಕ್ಷೆಯಲ್ಲಿ ಬಿಸಿ ಗಾಳಿಯನ್ನು ಸೇವಿಸುತ್ತ ಜನತೆ ಪರಿತಪಿಸುತ್ತಿದ್ದಾರೆ.ಈಗಾಗಲೆ ಕಳೆದ 122 ವರ್ಷಗಳಲ್ಲೇ ಅತ್ಯಂತ ಹೆಚ್ಚು ತಾಪಮಾನ ದಾಖಲಾಗಿದೆ ಇದು ಜನರ ಅರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಅದರಲ್ಲೂ ವಯಸ್ಸಾದವರು ಎಳೆಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದ್ದು ಆರೋಗ್ಯ ಸಮಸ್ಯೆಗಳು ಕಾಡುತ್ತದೆ ಎಂಬ ಆತಂಕ.
ಬಿಸಿಲ ತಾಪಕ್ಕೆ ಮನೆ ಸೇರುತ್ತಿರುವ ಜನತೆ
ಬಿಸಿಲ ತಾಪಕ್ಕೆ ಹೆದರಿ ಜನ ಮುಂಜಾನೆಯೆ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದು ಬೆಳಿಗ್ಗೆ ಹತ್ತುಗಂಟೆ ಹೊತ್ತಿಗೆ ಬಿಸಿಲು ಪ್ರಖರವಾಗುತ್ತ ಹೋಗಿ ಹನ್ನೆರಡು ಗಂಟೆಯೊಷ್ಟೊತ್ತಿಗೆ ಭೂಮಿ ಕಾದು ಕೆಂಡವಾಗುತ್ತಿದೆ ಇದರಿಂದ ಜನತೆ ರಣ ಬಿಸಿಲಿನ ಕಾರಣಕ್ಕೆ ಮಧ್ಯಾನದಃ ಹೊತ್ತಿಗೆ ಮನೆ ಸೇರಿಕೊಳ್ಳುತ್ತಿದ್ದಾರೆ,ಇದರಿಂದಾಗಿ ಪಟ್ಟಣ ಹಾಗು ನಗರದ ರಸ್ತೆಗಳು ಜನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿವೆ ಇದು ವ್ಯಾಪಾರದ ಮೇಲೂ ತೀವ್ರ ಪರಿಣಾಮ ಬೀರಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ಕರೆಂಟ್ ಇಲ್ಲ ಬೆಳೆಗೆ ನೀರು ಇಲ್ಲ ಮಾವು ಇಲ್ಲ
ಸುಡು ಬಿಸಿಲಿಗೆ ಜನತೆ ತತ್ತರಿಸಿ ಹೋಗಿದ್ದರೆ ಮತ್ತೊಂದಡೆ ವಿದ್ಯುತ್ ಕಡಿತದಿಂದ ಕೃಷಿ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಿದ್ದು ಬೆಳೆಗೆ ಸಮಯಕ್ಕೆ ನೀರುಣಿಸಲು ಸಾಧ್ಯವಾಗದೆ ರೈತಾಪಿ ಜನರು ಕಂಗಾಲಾಗಿದ್ದಾರೆ.
ಬಿಸಿಲ ತಾಪಕ್ಕೆ ಇಲ್ಲಿನ ಜೀವನಾಡಿ ಬೆಳೆಯಾದ ಮಾವಿನ ಫಸಲು ಬಹುತೇಕ ಉದುರುತ್ತಿದ್ದು ನೆಲದ ಪಾಲಾಗಿದೆ ಎನ್ನುತ್ತಾರೆ ಮಾವಿನ ಬೆಳೆಗಾರರು.
ಬಿಸಿಲ ಬೇಗೆ ತಣಿಸಿಕೊಳ್ಳಲು ಜನ ತಂಪು ಪಾನಿಯಗಳ ಮೊರೆ ಹೋಗುತ್ತಿದ್ದು ಲಿಂಬು ಷರಬತ್, ಮಜ್ಜಿಗೆ, ಎಳೆ ನೀರು ಸೇವನೆ ಹೆಚ್ಚಾಗಿದೆ.ಅದರಲ್ಲೂ ವೃದ್ಧರು ಒ.ಆರ್.ಎಸ್ ಸೇವನೆ ಹೆಚ್ಚುತ್ತಿದೆ.
ಕೋಲಾರ ಜಿಲ್ಲೆ ಹೊರತು ಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕರ್ಣಾಟಕದ ಬಾಗಲಕೋಟೆ, ಕಲಬುರಗಿ, ಕೊಪ್ಪಳ ಹಾಗೂ ರಾಯಚೂರು, ವಿಜಯಪುರದಲ್ಲಿ ಅಧಿಕ ಮಳೆ ಸುರಿಯಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಹಾಸನ, ಕೊಡಗು ಸೇರಿದಂತೆ ಮಂಡ್ಯ, ಮೈಸೂರು, ರಾಮನಗರದಲ್ಲಿ ಸಾಧಾರಣ ಮಳೆಯಾಗಲಿದ್ದು, ಬೆಂಗಳೂರು ನಗರ,ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ತುಮಕೂರು, ವಿಜಯನಗರದಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



