ಶ್ರೀನಿವಾಸಪುರ:ಕ್ಷುಲ್ಲಕ ಕಾರಣಕ್ಕಾಗಿ ಯುವಕರ ನಡುವೆ ಬಡಿದಾಟವಾಗಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿಯ ತರಕಾರಿ ರೈತರು ಹೆಚ್ಚಾಗಿ ಇರುವ ಶೀಗೆಹಳ್ಳಿ ಗ್ರಾಮದಲ್ಲಿ ನಡೆದಿರುತ್ತದೆ.ಯುವಕರ ನಡುವೆ ನಡೆದಂತ ಗಲಾಟೆಯಲ್ಲಿ ಮೂರು ಯುವಕರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಶೀಗೆಹಳ್ಳಿ ಗ್ರಾಮದಲ್ಲಿ ಪವನ್ ಎಂಬುವರು ತಮ್ಮ ಸ್ನೇಹಿತ ಮಾತನಾಡಿಕೊಂಡು ಕುಳತಿದ್ದಾಗ ಅಲ್ಲೆ ಇದ್ದ ಬಾಬು ಎನ್ನುವರು ಜೋರಾಗಿ ಮಾತನಾಡ ಬೇಡವೆಂದು ರಗಳೆ ತಗೆದಿದ್ದಾನೆ ಇದಕ್ಕೆ ಪವನ್ ನಾನು ಮಾತನಾಡಿಕೊಳ್ಳುತ್ತಿದ್ದರೆ ನಿನಗೇನು ಅಬ್ಯಂತರ ಎಂದಿದ್ದಕ್ಕೆ ಬಾಬು ತೀವ್ರ ಸ್ಥಾಯಿಯಲ್ಲಿ ಗಲಾಟೆಮಾಡಿದ್ದಾನೆ ಈ ಸಂದರ್ಭದಲ್ಲಿ ಪವನ್ ಅಣ್ಣ ಮೋಹನ್ ಹಾಗು ರವಿ ಎಂಬುವರು ಗಲಾಟೆ ಬಿಡಿಸಲು ಮುಂದಾಗ ಬಾಬು ಗಲಾಟೆ ಬೀಡಿಸಲು ಬಂದ ಇಬ್ಬರ ಮೇಲು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.ಗಲಾಟೆಯಲ್ಲಿ ಪವನ್ ಸೇರಿದಂತೆ ಮೂರು ಮಂದಿ ಗಾಯಗೊಂಡಿದ್ದಾರೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



