ಶ್ರೀನಿವಾಸಪುರ:ಕೋಲಾರ ಜಿಲ್ಲೆಯಲ್ಲಿ ಇತ್ತಿಚಿಗೆ ಹೆಚ್ಚುತ್ತಿರುವ ಕ್ರೈಮ್ ಕುರಿತಂತೆ ಕೋಲಾರ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡಂತಿದೆ ಇತ್ತಿಚಿಗೆ ನಡೆದಂತ ನಾಲ್ಕೈದು ಕೊಲೆ ಕೆಸುಗಳ ವಿಚಾರವಾಗಿ ಕೋಲಾರ ಜಿಲ್ಲಾ ಪೋಲಿಸ್ ಇಲಾಖೆ ವಿರುದ್ದ ಸಾರ್ವಜನಿಕರಿಂದ ತೀವ್ರ ವಿಮರ್ಶೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಪೋಲಿಸ್ ಅಧಿಕಾರಿಗಳು ಸಡನ್ ಆಗಿ ಅಲರ್ಟ್ ಆಗಿದ್ದಾರೆ ಪೋಕರಿಗಳು ಪಟಾಲಂಗಳು ಕೂರುವ ಅಡ್ದೆಗಳ ಮೇಲೆ ಏಕಾಏಕಿ ದಾಳಿ ಮಾಡಿರುವ ಪೋಲಿಸರು ಬೀಡಾಡಿ ಪೋಕರಿಗಳಿಗೆ ತಕ್ಕ ಪಾಠಾ ಕಲಿಸಿದ್ದಾರೆ ಇಂದು ಶ್ರೀನಿವಾಸಪುರದ ಹಳೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಕ್ಕೆ ಜೀಪ್ ನುಗ್ಗಿಸಿದ ಪೋಲಿಸರು ನಂದಿನಿ ಪಾರ್ಲರ್ ಹಿಂಬಾಗದಲ್ಲಿ ಅರಾಮಾಗಿ ಸಿಗರೇಟ್ ಹೊಡೆಯುತ್ತಿದ್ದ ಬಿಲ್ಡ್ ಪ ಕೊಡುತ್ತ ಕೂತು ಹರಟೆ ಹೊಡೆಯುತ್ತಿದ್ದ ಕಾಲೇಜು ಹುಡುಗರಿಗೆ ಬೆತ್ತ ಬೀಸಿ ಅಲ್ಲಿಂದ ಓಡಿಸಿದ್ದಾರೆ ಬಾಲಕಿಯರ ಕಾಲೇಜು ಆವರಣದಲ್ಲಿ ಗುಂಪುಗಳು ಕಟ್ಟಿಕೊಂಡು ಅಡ್ಡಾಡುತ್ತಿದ್ದ ಯುವಕರಿಗೆ ಇನ್ನೊಮ್ಮೆ ಇತ್ತ ಬರಬಾರದು ಎಂದು ಎಚ್ಚರಿಸಿ ಕಳಿಸಿದ್ದಾರೆ.
ಶ್ರೀನಿವಾಸಪುರ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸಪೇಕ್ಟರ್ ಗಳಾದ ಜೈರಾಮ್ ಹಾಗೂ ನಂಜುಂಡಪ್ಪ ರವರು ಬಾಲಕೀಯರ ಕಾಲೇಜಿಗೆ ಹೋಗಿ ಹೆಣ್ಮಕ್ಕಳಿಗೆ ಧೈರ್ಯ ತುಂಬಿದ್ದಾರೆ ಆತಂಕವಿಲ್ಲದೆ ಕಾಲೇಜುಗಳಿಗೆ ಬಂದು ವಿದ್ಯಾಭ್ಯಾಸವನ್ನು ಮಾಡಿ ಹೆತ್ತವರಿಗೆ ಗೌರವ ತರುವ ನಿಟ್ಟಿನಲ್ಲಿ ಕಷ್ಟಪಟ್ಟು ಓದುವ ಮೂಲಕ ಉತ್ತಮ ಸಾಧನೆ ಮಾಡಿ ಪುಂಡು ಪೋಕರಿಗಳಿಗೆ ಹೆದರಬೇಡಿ ನಿಮಿಗ್ಯಾರಿಗಾದರು ತೊಂದರೆ ಆದರೆ ನೇರವಾಗಿ ಪೋಲಿಸ್ ಅಧಿಕಾರಿಗಳಿಗೆ ದೂರು ನೀಡುವಂತೆ ಹೇಳಿದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



