ಶ್ರೀನಿವಾಸಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಾಗು ಜನ ಸಾಮಾನ್ಯರು ಬಳಸುವ ದಿನ ನಿತ್ಯದ ವಸ್ತುಗಳ ಮೇಲೆನ ಜಿಎಸ್ಟಿ ಹಿಂಪಡೆಯ ಬೇಕು ಎಂದು ರೈತ ಹಾಗು ಕಾರ್ಮಿಕ ಮುಖಂಡ ಪಾತಕೋಟ ನವೀನ್ ಕುಮಾರ್ ಅಗ್ರಹಿಸಿದರು.ಅವರು ಮಾತನಾಡಿ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಿಂಪಡೆಯಬೇಕು ಎಂದು ಉತ್ತಾಯಿಸಿ ಆಂದೋಲನ ಪ್ರಾರಂಭಿಸಿದ್ದು ಅದರಂತೆ ತಾಲ್ಲೂಕಿನ ನೆಲವಂಕಿ ಹೋಬಳಿಯ ಲಕ್ಷ್ಮೀಪುರದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದರು.
ರೈತ ವಿರೋದಿ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿತಿಗಳಿಂದ ರೈತರು ಜನಸಾಮಾನ್ಯರು ನರಳುವಂತಾಗಿದೆ ಎಂದು ದೂರಿದರು ಜನಸಾಮನ್ಯರ ಅನಕೂಲಕ್ಕಾಗಿ ಯಾವುದೆ ಅಜೆಂಡ ಇಲ್ಲದೆ ಸರ್ಕಾರಗಳನ್ನು ನಡೆಸುತ್ತಿದ್ದಾರೆ ಮಿತಿಮೀರಿದ ತೆರೆಗಳನ್ನು ವಿಧಿಸುತ್ತಿರುವುದರಿಂದ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದರು.
ಮುಖಂಡ ವೀರಪ್ಪರೆಡ್ಡಿ ಮಾತನಾಡಿ ಕೇಂದ್ರ ಸರ್ಕಾರ ಕೃಷಿ ಸಾಂಪ್ರದಾಯಿಕ ಪರಿಕಲ್ಪನೆಗೆ ಕೊಳ್ಳಿ ಇಟ್ಟಿದೆ ಎಂದು ಆರೋಪಿಸಿದರು ನೆಲವಂಕಿ ಹೋಬಳಿಯ ಗೌರವಾಧ್ಯಕ್ಷ ಜಯರಾಮರೆಡ್ಡಿ ಅಧ್ಯಕ್ಷ ಪಿಜಿ ನಾರಾಯಣಸ್ವಾಮಿ ಕಾರ್ಯದರ್ಶಿಸೀನಪ್ಪ ಉಪಾಧ್ಯಕ್ಷ ರಾಜಾರೆಡ್ಡಿ ಮತ್ತು ನಾಗರಾಜ ಶಾಸ್ತ್ರಿ ಸಹ ಕಾರ್ಯದರ್ಶಿ ವೆಂಕಟಸ್ವಾಮಿರೆಡ್ಡಿ ಮತ್ತು ಗಂಗಪ್ಪ ಸದಸ್ಯರಾದ ಬಿವಿ ವೆಂಕಟೇಶ್ ಆರ್ ವೆಂಕಟರವಣಪ್ಪ ಓಬಣ್ಣ ನಾಗರಾಜು ಕೃಷ್ಣಮೂರ್ತಿ ನಾರಾಯಣಸ್ವಾಮಿ ಪಿಎಂ ನಾಗರಾಜ ವೆಂಕಟರೆಡ್ಡಿ ಕಿವಿ ಬಂಗಾರಪ್ಪ ವೆಂಕಟರಾಮಪ್ಪ ತಾಲೂಕು ಮುಖಂಡರಾದ ಆರ್ ವೆಂಕಟೇಶ್ ಸೈಯದ್ ಫಾರೂಕ್ ಮುಂತಾದವ್ರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



