ಚಿತ್ತೂರು:ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೆಲೆ ನಡೆಯುತ್ತಿದ್ದ ದಾಳಿಗಳು ಕಡಿಮೆಯಾಗುತ್ತಿದೆ ಅನ್ನುವಷ್ಟರಲ್ಲಿ ದುಷ್ಕರ್ಮಿಗಳು ಕಾಣಿಪಾಕಂ ದೇವಾಲಯದ ರಥಚಕ್ರಗಳಿಗೆ ಬೆಂಕಿಹಚ್ಚಿದ್ದಾರೆ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕಾಣಿಪಾಕಂ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದ ಹಳೆಯ ರಥದ ಚಕ್ರಗಳಿಗೆ ಅಪರಿಚಿತರು ಬೆಂಕಿ ಹಚ್ಚಿದ್ದಾರೆ. ಗೋಶಾಲೆ ಪಕ್ಕದಲ್ಲಿ ದಾಸ್ತಾನು ಕೊಠಡಿ ಬಳಿಯಲ್ಲಿ ಸಂಗ್ರಹಿಸಿಟ್ಟಿದ್ದ ಹಳೆಯ ರಥದ ಚಕ್ರಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ.
ಇದು ದುಷ್ಕರ್ಮಿಗಳ ಕೃತ್ಯವೆ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿಹಚ್ಚಿದ್ದಾರ ಎಂದು ದೇವಾಲಯದ ಅಧಿಕಾರಿಗಳು ಈ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದಾರೆ.
ಆಂಧ್ರದಲ್ಲಿ ದೇವಾಯಲಗಳ ಮೆಲೆ ದಾಳಿ ಮಾಡುವುದು ರಥಗಳಿಗೆ ಬೆಂಕಿಹಚ್ಚುವ ಕೃತ್ಯಗಳು ನಡೆಯುತ್ತಿದ್ದು ತೀರಾ ಇತ್ತಿಚಿಗೆ ಇಂತಹ ಯಾವುದೇ ಪ್ರಕರಣಗಳು ನಡೆದಿರಲಿಲ್ಲ.
ಇದುವರಿಗೂ ದೇವಾಲಯಗಳ ಮೆಲೆ ನಡೆದ ದಾಳಿಗಳು
ಕರಾವಳಿ ಆಂಧ್ರದ ಪ್ರಮುಖ ವೈಷ್ಣವ ಪುಣ್ಯಕ್ಷೇತ್ರ ಅಂತರವೇದಿ ಶ್ರೀನರಸಿಂಹಸ್ವಾಮಿ ದೇವಾಸ್ಥಾನದ ರಥವನ್ನು ಸುಟ್ಟುಹಾಕಿದ್ದು ಭಾರೀ ಸಂಚಲನ ಮೂಡಿಸಿತ್ತು ಪ್ರಕರಣವನ್ನು ಸಿಬಿಐಗೆ ವಹಿಸಲು ಆಂಧ್ರ ಸರ್ಕಾರ ನಿರ್ಧರಿಸಿದೆ.ಇಂದಿಗೂ ನಿಗೂಢವಾಗಿಯೇ ಉಳಿದಿದೆ. ನೆಲ್ಲೂರು ಜಿಲ್ಲೆಯ ಬೋಗೋಳದ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿದ ಪ್ರಕರಣ,ಶ್ರೀಕಾಕುಳಂ ಬಳಿಯ
ರಾಮತೀರ್ಥ ಕ್ಷೇತ್ರದಲ್ಲಿ ಶ್ರೀರಾಮಚಂದ್ರಮೂರ್ತಿಯ ವಿಗ್ರಹದ ಶಿರಚ್ಛೇದ ಮಾಡಿದ ಘಟನೆ, ವಿಜಯವಾಡ ಪ್ರಸಿದ್ದ ಕನಕದುರ್ಗಮ್ಮ ದೇವಾಲಯದ ರಥಕ್ಕೆ ಸೇರಿದ ನಾಲ್ಕು ಬೆಳ್ಳಿ ಸಿಂಹಗಳ ಪೈಕಿ ಮೂರು ಸಿಂಹಗಳು ಕಳವಾಗಿದ್ದು,ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡ್ರಜಾವರಂ ಅಮ್ಮನವರ ದೇವಸ್ಥಾನದ ಪ್ರವೇಶ ದ್ವಾರವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವುದು ಇದುವರಿಗೂ ನಡೆದಿರುವಂತ ದೇವಾಲಯಗಳ ದಾಳಿ ಘಟನೆಗಳು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



