ಶ್ರೀನಿವಾಸಪುರ:ಕಾಂಗ್ರೆಸ್ ನವರಿಗೆ ಸರ್ಕಾರಿ ಶಿಷ್ಟಚಾರದ ಸಬ್ಯತೆ ಗೊತ್ತಿಲ್ಲದ ಅವರದು ಗೂಂಡಾ ಸಂಸೃತಿ ಎಂದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಆಶೋಕರೆಡ್ಡಿ ಕಿಡಿಕಾರಿದರು.
ಅವರು ಇಂದು ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ರಾಮನಗರದಲ್ಲಿ ನಡೆದಂತ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜ್ಯ ಮಂತ್ರಿಯನ್ನು ಅಪಮಾನ ಮಾಡಿ ಅದರಲ್ಲೂ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಭೆಯಲ್ಲಿ ಆಗೌರವದಿಂದ ನಡೆದುಕೊಂಡಿರುವ ಸಂಸದ ಡಿ.ಕೆ.ಸುರೇಶ್ ಗೂಂಡಾ ರಿತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಯರಾಮರೆಡ್ಡಿ,ಕೊಟ್ರಗೂಳಿ ನಾರಯಣಸ್ವಾಮಿ,ಪುರಸಭೆ ಸದಸ್ಯ ವಿನೋದ್,ಷಫಿ,ರಮೇಶ್, ರಾಮಾಂಜಿ, ಜಯಣ್ಣ,ಬೈರೆಡ್ಡಿ,ಅಂಕುಶಂ ನಾರಯಣಸ್ವಾಮಿ ಮುಂತಾದವರು ಇದ್ದರು.
ಶ್ರೀನಿವಾಸಪುರ ಬಿಜೆಪಿಗರ ಎಡವಟ್ಟು
ಪ್ರತಿಭಟನೆ ಸಂದರ್ಭದಲ್ಲಿ ಶ್ರೀನಿವಾಸಪುರದ ಬಿಜೆಪಿಗರು ಪಕ್ಷದ ಮುಖಂಡರು ಕಾರ್ಯಕರ್ತರು ಡಿ.ಕೆ. ಸುರೇಶ್ ಗೆ ದಿಕ್ಕಾರ ಕೂಗುವ ಬದಲು ಡಿ.ಕೆ.ರವಿಗೆ ದಿಕ್ಕಾರ ಕೂಗಿ ಎಡವಟ್ಟು ಮಾಡಿ ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಒಳಗಾದರು.
ಶ್ರೀನಿವಾಸಪುರದ ಬಿಜೆಪಿಗರ ವಿರುದ್ದ ನೆಟ್ಟಿಗರ ಟ್ರೋಲ್!
ಸಂಸದ ಡಿ.ಕೆ ಸುರೇಶ್ ಹಾಗು ಕೋಲಾರದಲ್ಲಿ ಕ್ರೀಯಾಶೀಲ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಹೆಸರಿನ ನಡುವಿನ ವ್ಯತ್ಯಾಸ ತಿಳಿಯದ ಶ್ರೀನಿವಾಸಪುರ ಬಿಜೆಪಿಗರು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಶ್ರೀನಿವಾಸಪುರದ ಬಿಜೆಪಿ ಮುಖಂಡರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಕಾಂಗ್ರೆಸ್ ಆಕ್ರೋಶ
ಸಂಸದ ಡಿ.ಕೆ.ಸುರೆಶ್ ಹೆಸರು ತಿಳಿಯದೆ ಅವರ ವಿರುದ್ದ ಪ್ರತಿಭಟೆನೆಗೆ ಹೋರಟ ಬಿಜೆಪಿಯದು ಎಂತ ಸಂಸೃತಿ ಎಂದು ತಾಲೂಕು ಕಾಂಗ್ರೆಸ್ ಐಟಿ ಸೆಲ್ ಪ್ರಮುಖ ಹರಿಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸಪುರ ಬಿಜೆಪಿಗರು ದಿಕ್ಕಾರ ಕೂಗಿರುವುದು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದು ಅಲ್ಲದೆ ಕೋಲಾರವನ್ನು ಮಲೆನಾಡು ಮಾಡಬೇಕು ಎನ್ನುವ ಕನಸು ಭಿತ್ತಿದ್ದ ಹೃದಯವಂತ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ವಿರುದ್ದ ಎಂದು ಶ್ರೀನಿವಾಸಪುರ ಬಿಜೆಪಿ ಮುಖಂಡರ ವಿರುದ್ದ ತೀವ್ರಧಾಟಿಯಲ್ಲಿ ಅಸಮಧಾನ ವ್ಯಕ್ತಪಡಿಸಿದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



