ಶ್ರೀನಿವಾಸಪುರ:ತಾಡಿಗೋಳ್ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡೆವೆ ನಡೆದ ಗಲಭೆಯಲ್ಲಿ ಕಾರ್ಯಕರ್ತರುಗಳಿಗೆ ಗಾಯಗಳಾಗಿದ್ದು ಈ ಸಂಭಂದ ಪೋಲಿಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ತಾಡಿಗೋಳ್ ಗ್ರಾಮದ ಪಂಚಾಯಿತಿ ಸದಸ್ಯ ಮಂಜುನಾಥ್ ಮೃತಪಟ್ಟ ಹಿನ್ನಲೆಯಲ್ಲಿ ಉಪಚುನಾವಣೆ ನಡೆದು ಇಂದು ನಡೆದ ಚುನಾವಣೆ ಮತ ಎಣಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಕ್ಬೂಲ್ ಬರಿದ್ 90 ಮತಗಳ ಅಂತರದಿಂದ ವಿಜೇತರಾಗಿ ವಿಜೆತ ಅಭ್ಯರ್ಥಿಯೊಂದಿಗೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಗ್ರಾಮದಲ್ಲಿ ವಿಜಯೋತ್ಸವ ಆಚರಿಸುವಾಗ ಗ್ರಾಮದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಭೆ ನಡೆದು ತಳ್ಳಾಟ ನೂಕಾಟಗಳು ಆಗಿ ಪರಸ್ಪರ ಹೋಡೆದಾಡಿಕೊಂಡು ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿದ್ದು ಪೋಲಿಸರು ಲಾಠಿ ಬೀಸಿ ಗಲಭೆಯನ್ನು ನಿಯಂತ್ರಿಸಿ ಗ್ರಾಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ನಿಯೋಜಿಸಲಾಗಿದ್ದು ಪರಿಸ್ಥಿತಿ ಹತೋಟಿಯಲ್ಲಿರುವುದಾಗಿ ಇನ್ಸೆಪೇಕ್ಟರ್ ರವಿಕುಮಾರ್ ತಿಳಿಸಿರುತ್ತಾರೆ. ಈ ಸಂಬಂಧ ಎರಡು ಪಕ್ಷದ ಕಾರ್ಯಕರ್ತರು ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Friday, April 24



