ತಿರುಪತಿ:- ಆಂಧ್ರದಲ್ಲಿ ಎತೇಚ್ಚವಾಗಿ ಕರ್ನಾಟಕದ ಮದ್ಯದ ಸರಕು ವ್ಯಾಪಾರವಾಗುತ್ತಿದೆ ಖಚಿತ ಮಾಹಿತಿ ಮೇರೆಗೆ ತಂಬಾಕು ಉತ್ಪನ್ನಗಳನ್ನು ಹಿಡಿಯುವ ಸಲುವಾಗಿ ತಿರುಪತಿಯ ಮನೆಯೊಂದರ ಮೇಲೆ ದಾಳಿ ನಡೆಸಿರುವ ತಿರುಪತಿ ಅಪರಾಧ ವಿಭಾಗದ ಪೋಲಿಸರಿಗೆ ಅಲ್ಲಿ ಕರ್ನಾಟಕದ ಮದ್ಯದ ಬಾಟಿಲ್ ಗಳು ಇದ್ದು ಅದನ್ನು ವಶಪಡಿಸಿಕೊಂಡಿದ್ದಾರೆ. ಒರ್ವ ಆರೋಪಿಯನ್ನು ಬಂಧಿಸಲಾಗಿದೆ. ಪೂರ್ವ ಸಿಐ ಶಿವಪ್ರಸಾದ್ ರೆಡ್ಡಿ ಅವರ ಪ್ರಕಾರ, ತಿರುಪತಿ ನಗರದ ಪಿಕೆ ಲೇಟ್ ನಿವಾಸಿ ಕೇಶವ್, ಕರ್ನಾಟಕ ಮದ್ಯದ ಜೊತೆಗೆ ಅಕ್ರಮ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು ಗುರುವಾರ ರಾತ್ರಿ ಅವರ ಮನೆಯ ಮೇಲೆ ದಾಳಿ ನಡೆಸಿ ಅಕ್ರಮ ತಂಬಾಕು ಉತ್ಪನ್ನಗಳ ಜೊತೆಗೆ 15 ಸಾವಿರ ಮೌಲ್ಯದ 78 ಕರ್ನಾಟಕದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ರಾಯಲ್ಪಾಡಿನಿಂದ ಮದ್ಯದ ಬಾಟಿಲಗಳನ್ನು ತಂದು ಕಲಿಕಿರಿ ಮಂಡಲ ಕಾಲೋನಿ ಬಳಿಯ ಅಕುಲ ಗುಟ್ಟಾದಲ್ಲಿ ಮಾರಾಟ ಮಾಡುತ್ತಿದ್ದಾಗ ಕಲಿಕಿರಿಯ ಇಂದಿರಾಮ್ಮ ಕಾಲೋನಿ ನಿವಾಸಿ ಟಿ.ಕುಮಾರಸ್ವಾಮಿ ಅವರನ್ನು ಪೊಲೀಸರು ಬಂಧಿಸಿ, ಅವರಿಂದ 20 ಬಾಟಲಿಗಳ ಮದ್ಯವನ್ನು ವಶಪಡಿಸಿಕೊಂಡು ರಿಮ್ಯಾಂಡ್ ಗೆ ಕಳಿಸಿರುವುದಾಗಿ ಸ್ಥಳೀಯ ಎಸ್ಐ ಲೋಕೇಶ್ ರೆಡ್ಡಿ ತಿಳಿಸಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



