ಶ್ರೀನಿವಾಸಪುರ:ಕಿಡಿಗೇಡಿಗಳು ಹಾಕಿದ ಬೆಂಕಿಗೆ ಮೊಬೈಲ್ ಅಂಗಡಿಗಳ ಸೈನ್ ಬೋರ್ಡ್ ಸೇರಿದಂತೆ ನಾಮಫಲಕಳು ವಿದ್ಯತ್ ತಂತಿಗಳು ಸುಟ್ಟು ಕರಕಲಾಗಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಜೆ.ಸಿ.ರಸ್ತೆಯ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿರುವ ರಜನಿ ಮೋಬೈಲ್ ಅಂಗಡಿಯಲ್ಲಿ ನಡೆದಿದ್ದು ಅದೃಷವತ್ ಪ್ರಾಣ ಹಾನಿಯಂತಹವು ನಡೆದಿಲ್ಲ ಸಮಯಕ್ಕೆ ಅಗ್ನಿ ಶಾಮಕ ದಳ ಕಾರ್ಯಚರಣೆ ನಡೆಸಿದ ಪರಿಣಾಮ ದೊಡ್ದ ಮಟ್ಟದ ನಷ್ಟ ಸಹ ಆಗಿರುವುದಿಲ್ಲ.
ಜೆ.ಸಿ.ರಸ್ತೆಯಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಮಹಡಿ ಏರಲು ಇರುವಂತ ಮೆಟ್ಟಿಲ ಕೆಳಗೆ ಹಣ್ಣುಗಳ ಅಂಗಡಿಯ ಮರದ ಟೆಬಲ್ ಕೆಳಗೆ ಕೂತಿರುವ ಕಿಡಿಗೇಡಿಗಳು ಶನಿವಾರ ತಡ ರಾತ್ರಿ ಚಳಿಕಾಯಿಸಲು ಬೆಂಕಿಹಾಕಿದ್ದು ನಂತರ ಅದನ್ನು ನಿರ್ಲಕ್ಷಿಸಿ ಹೋಗಿದ್ದಾರೆ ಉರಿಯುತ್ತಿದ್ದ ಬೆಂಕಿ ರಜನಿ ಮೊಬೈಲ್ ಅಂಗಡಿಯ ಪ್ಲಾಸ್ಟಿಕ್ ಸೈನ್ ಬೋರ್ಡ್ ಗೆ ತಾಕಿ ಅಂಗಡಿ ಮುಂದಿನ ಎಲ್ಲಾ ಪ್ಲಾಸಟಿಕ್ ಬೋರ್ಡ್ ಗಳು ಸುಟ್ಟಿದೆ ಅಲ್ಲೆ ಹಾದು ಹೋಗಿರುವ ಬೆಸ್ಕಾಂ ಮೈನ್ ವಿದ್ಯತ್ ತಂತಿಗೂ ಹೊತ್ತಿಕೊಂಡು ಸುಟ್ಟಿದೆ ಎಂದು ಹೇಳಲಾಗಿದ್ದು ತಡ ರಾತ್ರಿಯಲ್ಲಿ ಬೆಂಕಿ ದೃಶ್ಯ ಕಂಡವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಪರಿಣಾಮ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿರುತ್ತಾರೆ ಇದರಿಂದಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿರುತ್ತದೆ ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6


