ನ್ಯೂಜ್ ಡೆಸ್ಕ್:ಸಾಲ ನೀಡದ ಟೀ ಅಂಗಡಿಯ ಮಾಲೀಕನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಧಾರುಣ ಘಟನೆ ರಾಯಚೂರು ನಗರದ ಎಲ್ಬಿಎಸ್ ನಗರದ ಬಡಾವಣೆಯಲ್ಲಿ ಶನಿವಾರ ನಡೆದಿದೆ. ಕೊಲೆಯಾದ ಟೀ ಅಂಗಡಿ ಮಾಲೀಕನನ್ನು ನರಸಿಂಹಯ್ಯ ಶೆಟ್ಟಿ(38)@ ಬಾಪುರ ನರಸಿಂಹ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿಯನ್ನು ತಿಲಕ್ ಸಿಂಗ್ ಎಂದು ಹೇಳಲಾಗಿದೆ.
ಎಲ್ಬಿಎಸ್ ನಗರದಲ್ಲಿ ನರಸಿಂಹಯ್ಯ ಶೆಟ್ಟಿ ಟೀ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ತಿಲಕ್ಸಿಂಗ್ ಎನ್ನುವ ಯುವಕ ಆಗಾಗ್ಗೆ ಅಂಗಡಿಗೆ ಆಗಮಿಸಿ ಟೀ, ಸಿಗರೇಟ್, ಗುಟ್ಕಾ ತೆಗೆದುಕೊಳ್ಳುತ್ತಿದ್ದ ಇತ್ತೀಚೆಗೆ ತಿಲಕ್ ಸಿಂಗ್ ಸಿಗರೇಟ್ ಸಾಲ ಕೇಳಿದ್ದು ಇದಕ್ಕೆ ಅಂಗಡಿ ಮಾಲೀಕ ನಿರಾಕರಿಸಿದ್ದಾನೆ.
ಈ ಬಗ್ಗೆ ಸೇಡು ಇಟ್ಟುಕೊಂಡು ಶನಿವಾರದಂದು ಹಾಡಹಗಲೇ ಅಂಗಡಿಯ ಮುಂದೆ ಕಸ ಗುಡಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಆರೋಪಿ ತಿಲಕ್ ಸಿಂಗ್, ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ನರಸಿಂಹಯ್ಯ ಶೆಟ್ಟಿ ಅವರ ಕೊಲೆಗೈದಿದ್ದಾನೆ. ಘಟನೆಯ ತೀವ್ರತೆಯಿಂದ ಸ್ಥಳದಲ್ಲಿ ಆತಂಕ ಮೂಡಿದೆ. ಕೊಲೆ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೋಲಿಸರು ಹೇಳುವಂತೆ ಮೃತ ವ್ಯಕ್ತಿ ಟೀ ಅಂಗಡಿ ನಡೆಸುತ್ತಿದ್ದು ಆರೋಪಿ ಅಂಗಡಿಗೆ ಬಂದು ಸಿಗರೇಟ್ ಕೇಳಿದ್ದಾನೆ. ಆದರೆ ಅಂಗಡಿ ಮಾಲೀಕ ನೀಡಿರಲಿಲ್ಲ. ಈ ವಿಚಾರಕ್ಕೆ ಆರೋಪಿ ಹರಿತವಾದ ಆಯುದದಿಂದ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ನರಸಿಂಹಯ್ಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಹೇಳುತ್ತಾರೆ.
ಹತ್ಯೆಯ ಭೀಕರ ದೃಶ್ಯ ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ತಿಲಕ್ ಸಿಂಗ್ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ವ್ಯಾಪರಸ್ಥರಿಗೆ ರಕ್ಷಣೆ ಕೋಡಿ
ಹತ್ಯೆ ಖಂಡಿಸಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ, ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ, ವ್ಯಾಪರಸ್ಥರಾದ ನಮಗೂ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಹಕರು ಅಂಗಡಿಗೆ ಬಂದು ಬೆದರಿಕೆ ಹಾಕಿದರೆ, ಹೆಚ್ಚಿನ ಭದ್ರತೆ ಕೊಡಬೇಕು ಎಂದು ಹೇಳಿದ್ದಾರೆ.
Trending
- ಸೀಗರೇಟ್ ಸಾಲ ನೀಡದ ಅಂಗಡಿ ಮಾಲೀಕನ ಕೊಚ್ಚಿ ಕೊಲೆ!
- Municipal:34 ವರ್ಷ ದಿನಗೂಲಿ ಟೈಪಿಸ್ಟ್ ಆಗಿದ್ದ ಮಹಿಳೆ ಸೇವೆ ಖಾಯಂಗೆ ಹೈಕೋರ್ಟ್ ಸೂಚನೆ.
- ಸರ್ಕಾರಿ ಬಸ್ ನಲ್ಲಿ ಸೀಟು ಕಿತ್ತಾಟ ರೌಡಿಗಳಿಂದ ಮಹಿಳೆಯರ ಮೇಲೆ ಹಲ್ಲೆ!
- ಶ್ರೀನಿವಾಸಪುರ:ಪದವೀಧರ ಚುನಾವಣೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ತ್ರಿಮೂರ್ತಿಗಳು ಒಂದಾದರ?
- ತಿರುವಣ್ಣಾಮಲೈ ದೇಗುಲಕ್ಕೆ ಅನ್ಯಧರ್ಮಿಯ ಪ್ರವೇಶ,ವಿವಾದ!
- ಪುರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ರಣರಂಗವಾದ ಪುಂಗನೂರು!
- ಬೆಂಗಳೂರು ಪಬ್ ನಲ್ಲಿ ಪೋಲಿಸರೊಂದಿಗೆ ಗಲಾಟೆ ಆಂಧ್ರ IAS ಅಧಿಕಾರಿ ವಿರುದ್ಧ ಪ್ರಕರಣ!
- ಚಿಂತಾಮಣಿ ಪಾಲಿಟೆಕ್ನಿಕ್ ಮೈದಾನದಲ್ಲಿ ದಸರಾ ಉತ್ಸವದ ವೈಭವ!
Monday, October 26



