ನ್ಯೂಜ್ ಡೆಸ್ಕ್:ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಅಥಾವ ಮೀಮ್ (Meme) ಆಗುವ ಬಹುತೇಕ ವಿಡಿಯೋಗಳಲ್ಲಿ ಚಹಾ ಕುಡಿಯುತ್ತ ನಗುವ ಹುಡುಗನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಮೀಡಿ ವಿಡಿಯೋಗಳಲ್ಲಿ ಚಹಾ ಕುಡಿಯುತ್ತ ಗಹಗಹಿಸಿ ನಗುತ್ತ ಕೈಮೇಲೆ ಕಾಫಿ ಚಲ್ಲಿಕೊಳ್ಳುವ ಯುವಕ all time famous ಎಲ್ಲ ಮೀಮ್ಸ್ಗಳಲ್ಲಿ ಈ ಹುಡುಗನ ವಿಡಿಯೋವನ್ನು ಬಹುತೇಕರು ನೋಡಿದ್ದಾರೆ. ಅವನ ನಗು ಇದೀಗ ದೇಶದಲ್ಲಿ ದೊಡ್ಡ ಸದ್ದು ಮಾಡಿದೆ. ಅಷ್ಟಕ್ಕೂ ಈ ಹುಡುಗ ಯಾರೆಂಬುದು ಬಹುತೇಕರಿಗೆ ಗೊತ್ತಿಲ್ಲ,ಆ ಪ್ರಸಿದ್ಧ ನಗುಮೊಗದ ಚಹಾ ಹುಡುಗನ ಕಥೆ ನಿಜಕ್ಕೂ ಸ್ಫೂರ್ತಿದಾಯಕ. ಆತನ ಬಗ್ಗೆ ಕುತೂಹಲಕಾರಿ
ಹುಡುಗನ ಹೆಸರು ಅರುಣ್. ಈತ ತೆಲಂಗಾಣ ರಾಜ್ಯದ ಭೂಪಾಲಪಲ್ಲಿ ಜಿಲ್ಲೆಯ ಮಾಳಪಲ್ಲಿ/ನಲ್ಲಪುಚ್ಚಟಪಲ್ಲಿಯ ಕುಗ್ರಾಮದವನು. ಅತ್ಯಂತ ಬಡತನದ ಕುಟುಂಬದಿಂದ ಬಂದ ಅರುಣ್, ನಾಲ್ಕನೆ ತರಗತಿ ಓದುತ್ತ ಸ್ಕೂಲ್ ಡ್ರಾಪ್ ಔಟ್ ಆಗುತ್ತಾನೆ ನಂತರ ಜೀವನೋಪಾಯಕ್ಕಾಗಿ ಲಾರಿಯಲ್ಲಿ ಕ್ಲೀನರ್ (ಸಹಾಯಕ) ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಎಂಬಂತೆ ಲಾರಿ ಚಾಲಕ ನೆಹರು ಅವರು ಚಹಾ ಕುಡಿಯುವಾಗ ಒಂದು ಜೋಕ್ ಹೇಳುತ್ತಾನೆ ಅದನ್ನು ಕೇಳಿದ ಅರುಣ್ ತನ್ನ ಮುಗ್ಧತೆಯಿಂದ ಗಹಗಹಿಸಿ ನಗುತ್ತಾನೆ.ಅರುಣ್ ನಗುವನ್ನು ಚಾಲಕ ನೆಹರು ತನ್ನ ಮೊಬೈಲ್ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೆ. ಇದು ಅಪ್ಲೋಡ್ ಆದ ಕೇವಲ ಒಂದೂವರೆ ತಿಂಗಳಲ್ಲೇ ಈ ವಿಡಿಯೋ 40 ಮಿಲಿಯನ್ (4 ಕೋಟಿ) ಜನರ ವೀಕ್ಷಣೆಗಳನ್ನು ಪಡೆದು ದಾಖಲೆ ಬರೆಯುತ್ತದೆ.
ಈ ವಿಡಿಯೋ ವೈರಲ್ ಆದ ನಂತರ ಚಾಲಕ ನೆಹರು ಸಹಕಾರದಿಂದ ಅರುಣ್ ಮತ್ತೆ ಓದಿನತ್ತ ಒಲವು ತೋರುತ್ತಾನೆ ಅಷ್ಟೆ ಅಲ್ಲ 10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದಾನೆ. ರಾತ್ರೋರಾತ್ರಿ ಪ್ರಸಿದ್ಧಿ ಪಡೆದ ಅರುಣ್, ಟ್ರೋಲಿಗರು ಯಾವುದೇ ಕಾಮಿಡಿ ವಿಡಿಯೋ ಎಡಿಟ್ ಮಾಡುವಾಗ ಅರುಣ್ ನಗುವಿನ ಕ್ಲಿಪ್ ಇಲ್ಲದೆ ಪೂರ್ಣಗೊಳಿಸುವುದಿಲ್ಲ.ಆ ಮಟ್ಟಕ್ಕೆ ಅರುಣ್ ನಗು ಎಲ್ಲಾ ಕಡೆ ಫೇಮಸ್ ಆಗಿದೆ.ಈಗ ತೆಲಂಗಾಣದಲ್ಲಿ ಸೆಲೆಬ್ರಿಟಿ. ಪ್ರಖ್ಯಾತ ಯೂಟ್ಯೂಬ್ ಗಳು ಅರುಣ್ ಸಂದರ್ಶನ ಮಾಡಿವೆ.ಅರುಣ್ ತಾನೇ ಒಂದು ಇನ್ಸ್ಟಾಗ್ರಾಂ ಖಾತೆ ತೆರೆದು ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ಸಾವಿರಾರು ಫಾಲೋವರ್ಸ್ ಹೊಂದಿದ್ದಾನೆ.ಆತನ ಮುಗ್ಧ ನಗು ಎಂತಹ ಒತ್ತಡದಲ್ಲಿರುವವರಿಗೂ ಒಂದು ಕ್ಷಣ ಉತ್ಸಾಹ ತರುತ್ತದೆ.
ಸಂದರ್ಶನವೊಂದರಲ್ಲಿ ಅರುಣ್ ಹೀಗೆ ಹೇಳಿದ್ದಾನೆ.ನಗುವಾಗ ನಾನೊಬ್ಬ ಬಡ ಲಾರಿ ಕ್ಲೀನರ್ ಎಂಬ ನೆನಪೇ ಇರಲಿಲ್ಲ. “ನನ್ನ ನಗು ಇಷ್ಟೊಂದು ಜನರಿಗೆ ಇಷ್ಟವಾಗುತ್ತದೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಬಡತನದ ನೋವಿನ ನಡುವೆಯೂ ಆ ಒಂದು ಕ್ಷಣದ ನಗು ನನ್ನ ಜೀವನವನ್ನೇ ಬದಲಿಸಿದೆ ಎಂದು ಭಾವುಕನಾಗಿ ಹೇಳಿಕೊಂಡಿದ್ದಾನೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



