- ತಮಿಳು ಕಾಂಗ್ರೆಸ್ ಶಾಸಕರು ರಾಜ್ಯಕ್ಕೆ ಶಿಫ್ಟ್ ಆಗಿಲ್ಲ ಡಿಕೆಶಿ ಸ್ಪಷ್ಟನೆ
ನ್ಯೂಜ್ ಡೆಸ್ಕ್:ತಮಿಳುನಾಡಿನಲ್ಲಿ ರಾಜಕೀಯ ದಿನಕ್ಕೊಂದು ಬದಲಾವಣೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಸಿನಿಮಯ ರೀತಿಯಲ್ಲಿ ರಾಜಕೀಯದಲ್ಲೂ ಸಸ್ಪೆನ್ಸ್ ಮೂಡುತ್ತಿದೆ ಮತ್ತೊಂದು ಬದಲಾವಣೆ ಅಂದರೆ ರಾತ್ರಿಯಿಂದ ಇಚಿಗೆ ವಿದುತಲೈ ಚಿರುತೈಗಲ್ ಕಚ್ಚಿ (VCK) ವಿಜಯ್ ಯಿಂದ ದೂರ ಸರಿಯುವ ಮಾತಾಡಿದ್ದು ಈಗ ಬೆಳಿಗ್ಗೆ ಶನಿವಾರ ಸಂಜೆ 4 ಗಂಟೆಗೆ ವಿಜಯ್ ಅವರ ಟಿವಿಕೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ತನ್ನ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದಿಯಂತೆ.
ಇದರಿಂದ ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ ರಚನೆಯಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಅಂತಿಮ ಘಟ್ಟ ತಲುಪಬಹುದು ಎನ್ನಲಾಗುತ್ತಿದೆ.234 ಸದಸ್ಯ ಬಲದ ತಮಿಳುನಾಡು ಅಸೆಂಬ್ಲಿಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಅಗತ್ಯ ಬಹುಮತ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ
ರಾಜಕೀಯ ವಲಯಗಳಲ್ಲಿ ಘೋಷಣೆ ಹೊರ ಬಂದಿದೆ ಎನ್ನಲಾಗುತ್ತಿದೆ.
TVK ಈಗಾಗಲೇ ಹಲವಾರು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದು ಅಧಿಕಾರದ ಗಡಿ ತಲುಪಲು ಕೇವಲ ಇಬ್ಬರು ಶಾಸಕರ ಬೆಂಬಲದ ಅಗತ್ಯವಿದೆ. ಇದಲ್ಲದೆ, ಪಕ್ಷದ ಮೂಲಗಳ ಪ್ರಕಾರ, ಟಿವಿಕೆ ನಾಯಕರು ಔಪಚಾರಿಕವಾಗಿ ವಿಸಿಕೆ ಅಧ್ಯಕ್ಷ ತೋಲ್ ಅವರನ್ನು ಮಾತನಾಡಿ ಸರ್ಕಾರ ರಚನೆಗೆ ಬೆಂಬಲ ಕೋರಿದ್ದಾರೆ.ಈ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ರಾಜಕೀಯ ವೀಕ್ಷಕರು ಪಕ್ಷದ ಅಂತಿಮ ನಿಲುವಿನ ಬಗ್ಗೆ ಸ್ಪಷ್ಟತೆಗಾಗಿ ಕಾಯುತ್ತಿದ್ದಾರೆ.
ತಮಿಳು ರಾಜಕೀಯ ಕರ್ನಾಟಕಕ್ಕೆ ಶೀಫ್ಟ್ ಆಗಿತ್ತ?
ಇತ್ತೀಚಿಗೆ ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ಆಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ರಚನೆಗೆ ಎಲ್ಲಾ ಪಕ್ಷಗಳು ತಮ್ಮದೇ ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ತಮಿಳುನಾಡು ರಾಜಕೀಯ ಕರ್ನಾಟಕಕ್ಕೆ ಶಿಫ್ಟ್ ಆಗಿದೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಇದೀಗ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಕೂಡ ಬಹುಮತ ಸಾಧಿಸಲು ಸರ್ಕಸ್ ಮಾಡುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಟಿವಿಕೆ ಜೊತೆ ಕೈ ಜೋಡಿಸಿದ್ದರೆ. ಇನ್ನೂ ಕೆಲ ಮಿತ್ರ ಪಕ್ಷಗಳು ಹಿಂದೆ ಮುಂದೆ ನೋಡುತ್ತಿದೆ, ಈ ಮಧ್ಯೆ ತಮಿಳುನಾಡಿನ ಕಾಂಗ್ರೆಸ್ ಶಾಸಕರು (Congress MLA’s) ಕರ್ನಾಟಕಕ್ಕೆ ಶಿಫ್ಟ್ ಆಗಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದ ಬೆನ್ನಲ್ಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದು ತಮಿಳುನಾಡಿನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ ಎಂಬುದು ಸತ್ಯವಲ್ಲ. ತಮಿಳು ಕಾಂಗ್ರೆಸ್ ಶಾಸಕರು ರಾಜ್ಯಕ್ಕೆ ಶಿಫ್ಟ್ ಆಗಿಲ್ಲ. ಕೆಲವರು ಹೈದರಾಬಾದ್ಗೆ, ಕೆಲವರು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ ಎಂದು ಹೇಳ್ತಿದ್ದಾರೆ. ಆದರೆ ನನಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಬಗ್ಗೆ ಹೈಕಮಾಂಡ್ ನನಗೆ ಈ ಬಗ್ಗೆ ಏನೂ ಹೇಳಿಲ್ಲ ಎಂದು ಅವರು ಹೇಳಿದ್ದಾರೆ.



