ಶ್ರೀನಿವಾಸಪುರ: ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ಇರುವಂತ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಇಂದು ನರಸಿಂಹ ಜಯಂತಿ ಅಂಗವಾಗಿ ಇದೆ ಪ್ರಥಮ ಬಾರಿಗೆ ರಥೋತ್ಸವ ಆಯೋಜಿಸಿದ್ದು ರಥೋತ್ಸವ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೇವಸ್ಥಾನದಲ್ಲಿ ಮೂಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥದಲ್ಲಿ ಭಕ್ತರು ಎಂ.ಜಿ.ರಸ್ತೆಯಲ್ಲಿ ತೇರನ್ನು ಎಳೆದು ಪುನಿತರಾದರು.

ಪ್ರಥಮ ಬಾರಿಗೆ ಆಯೋಜಿಸಿದ್ದ ರಥೋತ್ಸವಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಶಾಸಕ ವೆಂಕಟಶಿವಾರೆಡ್ಡಿ ಹಾಗು ಸಂಸದ ಮಲ್ಲೇಶ್ ಬಾಬು ರಥೋತ್ಸವದ ಪೂಜೆಯಲ್ಲಿ ಪಾಲ್ಗೊಂಡು ಚಾಲನೆ ನೀಡಿದರು.



