ಶ್ರೀನಿವಾಸಪುರ: ಕೊನೆ ಉಸಿರು ಇರುವ ತನಕ ನಿಮ್ಮೊಂದಿಗೆ ಇರುತ್ತೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾವುಕರಾಗಿ ನುಡಿದರು.ಅವರು ತಾಲೂಕಿನ ಅಡ್ಡಗಲ್ ಪಂಚಾಯಿತಿ ವ್ಯಾಪ್ತಿಯ ಎ.ವ್ಯಾಪಲಪಲ್ಲಿ ಗ್ರಾಮದಲ್ಲಿ 135 ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಹೊನಲು ಬೆಳಕಿನ ವಾಲೀಬಾಲ್ ಪಂದ್ಯಾವಳಿಗಳಿಗೆ ಚಾಲನೆ ನೀಡಿದ ನಂತರ ಗ್ರಾಮದ ಯುವಕರೊಂದಿಗೆ ಪಂದ್ಯಾವಳಿಗಳನ್ನು ವಿಕ್ಷಿಸಿದ ಅವರು ಗ್ರಾಮಸ್ಥರ ಆಪ್ಯಾಯಿತೆ ಕಂಡು ಭಾವುಕರಾದರು ಭೂಮಿ ಮೇಲೆ ಹಣ, ಆಸ್ತಿ ಬೇಕು ಎನ್ನುವವರು ಬಡವ, ದರಿದ್ರರರು, ಬದುಕಲು ಸಾಕಾಗುವಷ್ಟು ಹಣ ಸಾಕು ಎನ್ನುವವರು ಶ್ರೀಮಂತರು. ನಾನು ಕೋಟ್ಯಾದಿಪತಿ ಅಲ್ಲ,ನಾನು ಹಣ ಅಂತಸ್ತು ಮಾಡಬೇಕು ಎಂದು ಯಾವತ್ತು ಆಲೋಚನೆ ಮಾಡಿಲ್ಲ ನೀವೆ ನನ್ನ ಆಸ್ತಿ ನಿಮ್ಮಂತೆ ಸರಳವಾಗಿ ಜೀವನ ಮಾಡುತ್ತ ನಿಮ್ಮೊಂದಿಗೆ ಇರುತ್ತೇನೆ, ಗ್ರಾಮಸ್ಥರು ನನ್ನ ಕುಟುಂಬ ಎಂದು ಭಾವಿಸಿದ್ದೇನೆ ಭಗವಂತ ನನಗೆ ಆಯಸ್ಸು, ಆರೋಗ್ಯ ಕೋಡಬೇಕು ಅಷ್ಟೆ ನಾನು ಇಡೀ ಜೀವನಪೂರ್ತಿ ನಿಮ್ಮೊಂದಿಗೆ ಇರಲು ಬಯಸುತ್ತೇನೆ ಎಂದರು.
ನನ್ನ ಅಧಿಕಾರವಧಿಯಲ್ಲಿ ಎ.ವ್ಯಾಪಲಪಲ್ಲಿ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಲಾಗಿದೆ ಇನ್ನೂ ಕೆಲಸ ಕಾರ್ಯಗಳು ಆಗಬೇಕಿದೆ ಕತ್ತಲು ಕಳೆದ ಬೆಳಕು ಬರಲೇ ಬೇಕು ಅದೇ ರೀತಿ ಒಳ್ಳೇ ದಿನಗಳು ನಮಗೆ ಬಂದೇ ಬರುತ್ತವೆ ಆಗ ನಿಮ್ಮ ಋಣ ತೀರಿಸುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಎ.ವ್ಯಾಪಲಪಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನರೇಶ್ ಮಾತನಾಡಿ ಗ್ರಾಮದ ಜನತೆಗೆ ಓದು ಬರಹ ಬರುತ್ತಿರಲಿಲ್ಲ, ಗ್ರಾಮದಲ್ಲಿ ಮೂಲಭೂತ ಸೌಲಬ್ಯಗಳು ಇರಲಿಲ್ಲ, ಆದರೆ ರಮೇಶ್ ಕುಮಾರ್ ಅಧಿಕಾರವಧಿಯಲ್ಲಿ ಗ್ರಾಮದಲ್ಲಿ 60 ಮನೆಗಳಾಗಿದೆ,ರಸ್ತೆ,ಚರಂಡಿ, ಬೀದಿ ದೀಪಗಳು, ಅಂಗನವಾಡಿ ಹಾಗು ಶಾಲಾಕಟ್ಟಡ ನಿರ್ಮಾಣದ ಪ್ರತಿಫಲ ಗ್ರಾಮದ ಮಕ್ಕಳು ವಿದ್ಯಾವಂತರಾಗಿದ್ದಾರೆ ಇದಕ್ಕೆ ಕಾರಣಿಭೂತರಾದ ರಮೇಶ್ ಕುಮಾರ್ ಅವರ ಋಣದಲ್ಲಿ ನಾವು ಇದ್ದೀವಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಮೇಶ್ ಕುಮಾರ್ ಸಹೋದರ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅದ್ಯಕ್ಷ, ಮ್ಯಾಕಲ ನಾರಾಯಣಸ್ವಾಮಿ, ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೆಶಕ ಕೆ.ಕೆ. ಮಂಜುನಾಥ್, ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ, ದರಕಾಸ್ತು ಕಮಿಟಿ ಸದಸ್ಯ ಮುನಿಯಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಶ್ರೀನಿವಾಸ್, ದೊರೆಸ್ವಾಮಿ,ಗೌವನಪಲ್ಲಿಬಕ್ಷುಸಾಬ್, ದಲಿತ ಮುಖಂಡರಾದ ಉಪ್ಪರಪಲ್ಲಿ ತಿಮ್ಮಯ್ಯ, ರಾಮಾಂಜಮ್ಮ, ಕೂಸ್ಸಂದ್ರ ರೆಡ್ಡೆಪ್ಪ, ಬದ್ರಿ ನರಸಿಂಹ,ನರಸಿಂಹಮೂರ್ತಿ ಮುಂತಾದವರು ಇದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



