ಶ್ರೀನಿವಾಸಪುರ:ವಾಸವಿ ಮಾತೆ ಅನ್ಯಾಯದ ವಿರುದ್ಧ ಹೋರಾಡಿ,ಅಗ್ನಿ ಪ್ರವೇಶ ಮಾಡಿ, ಅಹಿಂಸೆಯ ಮೂಲಕ ಲೋಕಕ್ಕೆ ಮಾದರಿಯಾದ ಜಗನ್ಮಾತೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಪಟ್ಟಣದ ಶ್ರೀವಾಸವಿ ಕನ್ಯಕಪರಮೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ವಾಸವಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸವಿ ಜಯಂತಿ ಶುಭಾಶಯಕೋರಿ ಮಾತನಾಡಿದರು.ವಾಸವಿ ಮಾತೆಯನ್ನು ಆರಾಧಿಸುವ ಆರ್ಯ ವೈಶ್ಯ ಸಮಾಜದವರು ಅಹಿಂಸೆ ಮತ್ತು ತ್ಯಾಗವನ್ನು ನಂಬಿದ ಜನಾಂಗವಾಗಿದ್ದು ಎಲ್ಲರೊಂದಿಗೂ ಹೊಂದಿಕೊಂಡು ಹೋಗುವಂತ ಸಹೃದಯಿಗಳು ಎಂದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ ಆರ್ಯ ವೈಶ್ಯ ಸಮಾಜ ಶಿಸ್ತಿನೊಂದಿಗೆ ಯೋಚಿಸಿ ತೀರ್ಮಾನ ಮಾಡುವ ಸಮಾಜ. ಅವರು ದುಡಿಮೆಯ ಲೆಕ್ಕಾಚಾರದಲ್ಲಿ ಸಮಾಜಕ್ಕೂ ಕೊಡುಗೆ ನೀಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಬೀಮಗುಂಟಪಲ್ಲಿಶಿವಾರೆಡ್ಡಿ,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ ಆರ್ಯವೈಶ್ಯ ಮಂಡಳಿ ಪ್ರಮುಖರಾದ ಎಸ್.ಬಿ.ಅಮರನಾಥ್,ಯೈಆರ್.ಎಸ್.ಪ್ರಕಾಶ್.ಸೂರ್ಯನಾರಯಣಶೆಟ್ಟಿ, ಸತ್ಯನಾರಯಣಶೆಟ್ಟಿ,ಜೆರಾಕ್ಸ್ ಬದ್ರಿ,ಸುಜಯ್,ಮ್ಯಾಂಗೋ ವ್ಯಾಲಿ ಅಮರನಾಥ್,ಅಂಜನಾದ್ರಿ ನಾಗರಾಜ್,ಸೀತಾರಾಮ್ ಮುಂತಾದವರು ಇದ್ದರು
ಮಾಜಿ ಸ್ಪೀಕರ್ ಭೇಟಿ
ಮೂರು ದಿನಗಳ ಕಾಲ ಆಯೋಜಿಸಿದ್ದ ವಾಸವಿ ಜಯಂತಿ ಅಂಗವಾಗಿ ಎರಡನೆ ದಿನವಾದ ಶನಿವಾರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕನ್ಯಾಕಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಆರ್ಯ ವೈಶ್ಯ ಸಮಾಜಕ್ಕೆ ವಾಸವಿಜಯಂತಿ ಶುಭಾಶಯ ಕೋರಿದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



