ಶ್ರೀನಿವಾಸಪುರ:ರಣ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ ಬೆಂಕಿಯಂತ ಕಿರಣಗಳು ಜನರ ಮೇಲೆ ಬಿಳುತಿದ್ದು ಬಿಸಿಲ ಪ್ರತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿಲ ತಾಪ ಮಾನ 36-37 ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು,ರಣ ರಣ ಬಿಸಿಲಿನ ಆರ್ಭಟಕ್ಕೆ ಜನ ಹೈರಾಣರಾಗಿದ್ದಾರೆ.
ಜೀವನಾಡಿ ಮಾವಿಗೂ ಮಾರಕ
ಬಿಸಿಲ ತಾಪಕ್ಕೆ ಶ್ರೀನಿವಾಸಪುರ ಜೀವನಾಡಿ ಮಾವಿಗೆ ಮಾರಕವಾಗಿದೆ.ತೀವ್ರವಾದ ಬಿಸಿಲು ಮತ್ತು ನೀರಿನ ಕೊರತೆಯಿಂದಾಗಿ ಮಾವಿನ ಕಾಯಿಗಳು ದೊಡ್ಡದಾಗುವ ಮುನ್ನವೇ ನೆಲಕ್ಕೆ ಉದುರಿ ಹೋಗುತ್ತಿವೆ,ಜೊತೆಗೆ ಮಾವಿನ ಬೆಳೆಗೆ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿವೆ ಬಿಸಿಲಿನ ತಾಪ ಹೀಗೆಯೇ ಮುಂದುವರೆದರೆ ಮಾವಿನ ಇಳುವರಿ ಕಡಿಮೆಯಾಗುತ್ತದೆ ಎಂದು ಮಾವು ಬೆಳೆಗಾರರು ಆತಂಕದಿಂದ ಹೇಳುತ್ತಾರೆ.
ಬಿಸಿಲಿನ ತಾಪ ತಾಳಲಾಗದೆ ಜನತೆ ಬಾಯಾರಿಕೆ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳಿಗೆ ಮುಗಿಬಿದ್ದಿದ್ದಾರೆ. ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ಝಳ ಏರಿಕೆಯಾಗುತ್ತಿದ್ದು,ಬಿಸಿಲಿನ ಧಗೆಗೆ ಜನಜೀವನ ತತ್ತರಿಸಿದೆ,
ಮನೆಯಿಂದ ಹೊರಗೆ ಬರಲು ಭಯ ಬೀಳುತ್ತಿದ್ದಾರೆ.
ಸೂರ್ಯನ ಆರ್ಭಟಕ್ಕೆ ಕಾಂಕ್ರೀಟ್ ರಸ್ತೆ, ಕಟ್ಟಡಗಳು ಹಾಗು ಮನೆಯ ಚಾವಣಿ ಕಾದ ಕಾವಲಿಯಂತಾಗಿವೆ. ಡಾಂಬರು ರಸ್ತೆಗಳು ಬಿಸಿಲ ತಾಪನ್ನು ಉಗುಳುತ್ತಿದ್ದು ಜನತೆ ಬೆಚ್ಚಿ ಬಿದಿದ್ದಾರೆ.ಎಂತಹ ಬಿಸಿಲು ಎನ್ನುತ್ತ ಮಧ್ಯಾನಃ 12 ಗಂಟೆಗೆ ಜನತೆ ಮನೆ ಸೇರಿಕೊಳ್ಳುತ್ತಿದ್ದಾರೆ.ಇದರಿಂದಾಗಿ ಊರಿನ ರಸ್ತೆಗಳು ಜನಸಂಚಾರವಿಲ್ಲದ, ಬಿಕೋ ಎನ್ನುತ್ತಿದೆ.ಮನೆಯಲ್ಲಿ ದಿನ ಪೂರ್ತಿ ಫ್ಯಾನ್, ಎಸಿಗಳು ಕಾರ್ಯನಿರತವಾಗಿರುತ್ತವೆ ಅವು ಕೆಲಸ ಮಾಡಲಿಲ್ಲ ಎಂದರೆ ಜನ ಮನೆಯ ಒಳಗೂ ಇರಲಾಗದೇ, ಹೊರಗೂ ಬರಲಾಗದೆ ಪರಿತಪಿಸುತ್ತಿದ್ದಾರೆ.
ಬಾರಪ್ಪ ಹುಯ್ಯೊ ಮಳೆರಾಯ
ಮಳೆ ಬಂದರೆ ಸಾಕು ಎಂದು, ವರುಣನ ಆಗಮನದತ್ತ ಜನ ನಿರೀಕ್ಷೆಯಲ್ಲಿದ್ದಾರೆ. ಬಿಸಿಲ ಝಳಕ್ಕೆ ರಸ್ತೆಯಲ್ಲಿ ಜನತೆ ಸಂಚರಿಸಲು ಒದ್ದಾಡುತ್ತಿದ್ದಾರೆ.ಬಿರು ಬಿಸಿಲಿನಲ್ಲಿ ಬಸ್ನಲ್ಲಿ ಸಂಚಾರ ಮಾಡುವುದೇ ಪ್ರಯಾಣಿಕರಿಗೆ ದೊಡ್ಡ ಸಾಹಸವಾಗಿದೆ.ದೂರದ ಊರುಗಳಿಗೆ ಪ್ರಯಾಣಿಸಲು ಬಸ್ನಲ್ಲಿ ಕೊಂಚ ದೂರ ಸಾಗಿದರೂ ಸಾಕು ದೇಹಪೂರ್ತಿ ಒದ್ದೆಯಾಗುತ್ತದೆ. ಸಿಟಿ ಬಸ್ಗಳಲ್ಲಿ ಸಂಚಾರಿಸುವರ ಪಾಡು ಹೇಳತೀರದು.
ಜನ ಬಿಸಿಯನ್ನು ಎದುರಿಸಲು ತಂಪಾಗಲು ಎಳನೀರು ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ.
ಅನಾರೋಗ್ಯದ ಆತಂಕ
ಬಿಸಿಲಿನ ತಾಪಕ್ಕೆ ಚರ್ಮ ರೋಗ ಅಷ್ಟೆ ಅಲ್ಲ ಸಾಂಕ್ರಾಮಿಕ ರೋಗಗಳ ಭೀತಿ ಜನರನ್ನು ಕಾಡುತ್ತಿದೆ ಸ್ನಾಯು ಸೆಳೆತ, ಸನ್ ಸ್ಟ್ರೋಕ್, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿರುವುದರಿಂದ ಇದ್ದಕ್ಕಿದ್ದಂತೆ ಸುಸ್ತಾಗಿ ಎಲ್ಲಂದರಲ್ಲಿ ಕುಸಿದು ಬಿಳುತ್ತಿದ್ದಾರೆ. ಮೂತ್ರಪಿಂಡ, ಹೃದಯ ಸಂಬಂಧಿ ಕಾಯಿಲೆ ಕಾಡುತ್ತಿದ್ದು ಬೇಸಿಗೆಗೆ ಬಿಸಿಲಿನ ಬೇಗೆಯಿಂದ ವಯಸ್ಸಾದ ವೃದ್ಧರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾಗಿದ್ದು ಬಿಸಿಲಿನಿಂದ ಉಂಟಾಗುವ ಚರ್ಮದ ಸಮಸ್ಯೆಗಳು,ಮೈಗ್ರೇನ್,ನಿರ್ಜಲೀಕರಣ ಮತ್ತು ಇತರ ಅಸ್ವಸ್ಥತೆಗಳನ್ನು ತಪ್ಪಿಸಲು ಎಳೆಮಕ್ಕಳು ಮತ್ತು ವಯಸ್ಸಾದ ವೃದ್ಧರು ಅಗತ್ಯಕ್ರಮಗಳನ್ನು ತಗೆದುಕೊಳ್ಳಬೇಕಿದೆ.
ಗ್ರಾಮೀಣ ಭಾಗಗಳಲ್ಲಿ ವಾಂತಿ-ಭೇದಿಯಂತಹ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅಶುದ್ಧ ನೀರಿನ ಸೇವನೆಯಿಂದ ಅಪಾಯಕಾರಿ ಕಾಲರಾದಂಥ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮೀಣ ಜನತೆ ಅಲವತ್ತುಕೊಳ್ಳುತ್ತಾರೆ.ಅತಿಯಾದ ಬಿಸಿಲು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವೈಧ್ಯಾದಿಕಾರಿಗಳು ಹೇಳುತ್ತಾರೆ.
ಅಗತ್ಯವಾಗಿ ಆಗಬೇಕಿದೆ.
ಕೆರೆ-ಕಟ್ಟೆಗಳು ಬತ್ತಿ ಹೋಗಿವೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದ್ದು, ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಆಹಾರ, ಕುಡಿಯಲು ನೀರು ಸಿಗದಂತಾಗಿದೆ. ಪ್ರಾಣಿ-ಪಕ್ಷಿಗಳ ಬಾಯಾರಿಕೆ ನೀಗಿಸಲು ಕಾರ್ಯ ಆಗಬೇಕಿದೆ ಇದಕ್ಕೆ ಜನಸಂಚಾರದ ಪ್ರದೇಶಗಳಲ್ಲಿ ತಮ್ಮ ಮನೆಯ ಮಹಡಿ ಮೇಲೆ ಪಕ್ಷಿಗಳಿಗೆ ಕುಡಿಯಲು ನೀರಿಡುವ,ಆಹಾರ ದಾನ್ಯಗಳನ್ನು ನೀಡುವ ಮೂಲಕ ಜೀವಸಂಕುಗಳ ಉಳಿವಿಗೆ ಶ್ರಮಿಸಬೇಕಿದೆ.
ಸಾಧ್ಯವಾದರೆ ನಿರ್ಜನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳು ಕುಡಿಯಲು ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಬೇಕಿದೆ ಇದಕ್ಕಾಗಿ ಜನಸಾಮಾನ್ಯರ ಜೊತೆ ಸಂಘಸಂಸ್ಥೆಗಳು ಕೈಜೊಡಿಸುವ ಅಗತ್ಯತೆ ಇದೆ ಎನ್ನುತ್ತಾರೆ ಪ್ರಾಣಿ ಪ್ರಿಯರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



