ಶ್ರೀನಿವಾಸಪುರ:ಭಾರತೀಯ ಸೇನೆಯಲ್ಲಿ 22 ವರ್ಷಗಳಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾ.ಗುಲ್ಲಕುಂಟೆ ಗ್ರಾಮದ ಲಕ್ಷ್ಮೀನಾರಯಣ್ ಅವರನ್ನು ಅವರ ಮನೆಯಲ್ಲೆ ಕರ್ನಾಟಕ ಸರ್ಕಾರದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸನ್ಮಾನಿಸಿ ಗೌರವ ಸಲ್ಲಿಸಿದರು.ಸೈನಿಕರನ್ನು ಗೌರವಿಸಬೇಕು ಅವರ ಜೀವನದ ಮಾರ್ಗದರ್ಶನ ನಮ್ಮ ಯುವಕರಿಗೆ ಸಿಗಬೇಕು ಎಂದರು.
ಗುಲ್ಲಕುಂಟೆ ಗ್ರಾಮದ ಮುನಿವೆಂಕಟಪ್ಪ ಸಾಕಮ್ಮ ದಂಪತಿ ಪುತ್ರ ಲಕ್ಷ್ಮೀನಾರಯಣ್ ಅವರು ಭಾರತೀಯ ಸೇನೆಗೆ ಸೇರಿ ಲಡಾಕ್,ಪಂಜಾಬ್ ಮಣಿಪುರ,ಜಮ್ಮುಕಾಶ್ಮೀರ,ಹೈದರಾಬಾದ್, ರಾಜಸ್ಥಾನ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ,ಬಿಇ ಇಂಜನಿಯರ್ ಪದವಿದರರಾದ ಲಕ್ಷ್ಮೀನಾರಯಣ್ ಭಾರತೀಯ ಸೇನೆಯಲ್ಲಿ ಇ.ಎಮ್.ಇ ಕೊರ್ ವರ್ಕಶಾಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸೈನಿಕರೊಂದಿಗೆ ಗಡಿಭಾಗದ ಕ್ಯಾಂಪ್ ಗಳಲ್ಲಿ ಆಧುನಿಕ ತಂತ್ರಜ್ಞಾನದ ರಕ್ಷಣಾ ಉಪಕರಣಗಳು, ಸೈಬರ್ ಸಾಮರ್ಥ್ಯದ ಉಪಕರಣಗಳು, ಬಾಹ್ಯಾಕಾಶ ಸಂಪರ್ಕ ಸಾಧನೆಗಳ ನಿರ್ವಹಣೆ ಮಾಡುತ್ತಿದ್ದಾಗಿ ಹೇಳುತ್ತಾರೆ.

ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತುಪಲ್ಲಿನಾರಯಣಸ್ವಾಮಿ,ಹೊಳೂರುಸಂತೋಷ್,ದಿಗುಪಲ್ಲಿ ಚಲಪತಿ,ಯುವ ಮುಖಂಡ ಸುಜಯ್,ದುರ್ಗಾಪ್ರಸಾದ್,ಗೌತಮ್ ನಾಯ್ಡು,ಬುಜ್ಜಿ,ಜಯರಾಮರೆಡ್ಡಿ, ಚೌಡರೆಡ್ಡಿ ಗೊರಮಾಕಲಹಳ್ಳಿಶ್ರೀನಿವಾಸ್ ಮತ್ತಿತರರು ಇದ್ದರು.



