ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಬಹುತೇಕ ಇಲಾಖೆ ಅಧಿಕಾರಿಗಳು ಪಾಲ್ಗೋಳ್ಳದೆ ನಿರ್ಲಕ್ಷ್ಯ ವಹಿಸಿದ್ದು ತಾಲೂಕು ಆಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿತ್ತು
ಶ್ರೀನಿವಾಸಪುರ:ಭಾರತದ ಮಾಜಿ ಉಪಪ್ರಧಾನಿ,ಕೃಷಿ ಸಚಿವ,ಕಾರ್ಮಿಕ, ರೈಲ್ವೆ, ದೂರ ಸಂಪರ್ಕ, ರಕ್ಷಣೆ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಡಾ.ಬಾಬು ಜಗಜೀವನರಾಮ್ ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು ಬಡವರ ಆಹಾರ ಕೊರತೆ ನೀಗಿಸಿದ ಬಾಬೂಜಿ ಎಂದೇ ಹೆಸರಾದರು ಬಾಬು ಜಗಜೀವನರಾಂ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಭಾವನೆ ನಮಗೆಲ್ಲ ಆದರ್ಶ ಎಂದು ಶಾಸಕ ವೆಂಕಟಶಿವಾರೆಡ್ದಿ ಹೇಳಿದರು.
ಡಾ. ಬಾಬು ಜಗಜೀವನರಾಮ್ 119ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೃಷಿ ಸಚಿವರಾಗಿದ್ದ ಜಗಜೀವನರಾಮ್ ಬಾರಿ ಅಣೆಕಟ್ಟು ನಿರ್ಮಿಸಿ ನೀರಾವರಿ ಕಲ್ಪಿಸಿದರಲ್ಲದೆ ರಸಗೊಬ್ಬರ ಕಾರ್ಖಾನೆಗಳನ್ನು ಆರಂಭಿಸಿ ಬೆಳೆಯ ಇಳುವರಿಯನ್ನು ಹೆಚ್ಚಿಸುವ ಅತ್ಯಾಧುನಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹಸಿರು ಕ್ರಾಂತಿಗೆ ಮುನ್ನೂಡಿ ಬರೆದರು ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೋಂಡಿರುವುದು ನನ್ನ ಸೌಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸುಧೀಂದ್ರ,ಸಮಾಜ ಕಲ್ಯಾಣ ಇಲಾಖೆ ರಾಜೇಶ್,ಪುರಸಭೆ ಮುಖ್ಯಾಧಿಕಾರಿ ನಾಗರಾಜ್,ಬಿಇಒ ಮುನಿಲಕ್ಷ್ಮಯ್ಯ,ತಾ.ಪಂ.ಇಓ ಸರ್ವೇಶ್,ಸಿಡಿಪಿಒ ಬೈರೆಡ್ಡಿ,ರೇಷ್ಮೇ ಇಲಾಖೆ ಸಹಾಯಕ ನಿರ್ದೇಶಕ ರೂಪೇಶ್, ಕೊಮೂಲ್ ನಿರ್ದೇಶಕ ಕೆ.ಕೆ.ಮಂಜು,ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ,ಮಾಜಿ ಸದಸ್ಯ ನರಸಿಂಹಮೂರ್ತಿ,ಖ್ಯಾತ ವೈದ್ಯೆ ಡಾ.ಚಂದ್ರಕಲಾ,ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಾಸು,ಸೀತಪ್ಪ ಉಪನ್ಯಾಸಕ ಗಾಂಡ್ಲಹಳ್ಳಿ ಚಲಪತಿ,ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆನಂದ್,ಎಂ.ಆರ್.ಎಸ್. ಅಧ್ಯಕ್ಷ ಹೂವಳ್ಳಿ ಕೃಷ್ಣಪ್ಪ,ಮುನಿವೆಂಕಟಪ್ಪ,ಬಂಡಾರ್ಲಹಳ್ಳಿ ಮುನಿಯಪ್ಪ,ನರಸಿಂಹಯ್ಯ ಮುಂತಾದವರು ಇದ್ದರು.
ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದ ನಂತರ ಬೃಹತ್ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು



