ಶ್ರೀನಿವಾಸಪುರ:ಬೈಕ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಒರ್ವ ವ್ಯಕ್ತಿ ಮೃತಪಟ್ಟ ಘಟನೆ ಚಿಂತಾಮಣಿ-ಹೊಸಕೋಟೆ ಹೆದ್ದಾರಿಯಲ್ಲಿ ನಂದಗುಡಿ ಹೋಬಳಿಯಲ್ಲಿ ಇರುವ ಸುಮಧುರ ಲಾಜಿಸ್ಟಿಕ್ಸ್ ಪಾರ್ಕ್ ಬಳಿ ಬುಧವಾರ ಸಂಜೆ ನಡೆದಿದ್ದು ಮೃತ ವ್ಯಕ್ತಿಯನ್ನು ಶ್ರೀನಿವಾಸಪುರ ಪಟ್ಟಣದ ಕರ್ನಾಟಕ ಬ್ಯಾಂಕ್ ಉಪ ವ್ಯವಸ್ಥಾಪಕ ಶ್ರೀಹರಿ ಎಂದು ಗರುತಿಸಲಾಗಿದೆ,
ಮೃತನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ ತನ್ನ ಪತ್ನಿಯನ್ನು ಕಾಣಲು ಬ್ಯಾಂಕ್ ಕೆಲಸ ಮುಗಿಸಿ ಸಂಜೆ ಪಲ್ಸರ್ ಬೈಕ್ನಲ್ಲಿ ಮಾಡಿಕೆರೆ ಕ್ರಾಸ್-ಹೆಚ್.ಕ್ರಾಸ್ ಹೊಸಕೋಟೆ ಮೂಲಕ ಹೋಗುತ್ತಿದ್ದ ಚಿಂತಾಮಣಿ-ಹೊಸಕೋಟೆ ಹೆದ್ದಾರಿ ಡಿ:ಶೆಟ್ಟಿಹಳ್ಳಿ ಬಳಿ ಇರುವ ಸಮುಧರ್ ಲಾಜಿಸ್ಟಿಕ್ಸ್ ಪಾರ್ಕ್ ಒಳಗಿನಿಂದ ಲಾಜಸ್ಟಿಕ್ ಲಾರಿಯೊಂದು ಹೋರಬಂದಿದೆ ಅದಕ್ಕಿಂತ ಮುಂಚಿತವಾಗಿ ಹೋಗುವ ಧಾವಂತದಲ್ಲಿ ಎದರುಗಡೆಯಿಂದ ಬರುತ್ತಿದ್ದ ಲಾರಿಯನ್ನು ಗಮನಿಸದೆ ಮುನ್ನುಗ್ಗಿದ್ದು ಲಾರಿಗೆ ಡಿಕ್ಕಿ ಹೊಡೆದಿದೆ ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಹೊಸಕೋಟೆ ಸಂಚಾರಿ ಠಾಣೆಯ ಪೊಲೀಸರು ಬೇಟಿ ನೀಡಿ ಶವವನ್ನು ಆಸ್ಪತ್ರೆಗೆ ಸಾಗಿಸಿ ವಾಹನಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಳೆದ ಒಂದೂವರೆ ವರ್ಷಗಳ ಹಿಂದೆ ಮದುವೆ
ಮೃತಪಟ್ಟಿರುವ ಶ್ರೀಹರಿ ಮೂಲತಃ ಆಂಧ್ರದ ಅನ್ನಮಯ್ಯ ಜಿಲ್ಲೆಯ ಬೀರಂಗಿಕೊತ್ತಕೋಟ ಮಂಡಲದ ಘಟ್ಟು ಗ್ರಾಮದ ವ್ಯಕ್ತಿಯಾಗಿದ್ದು ಕಳೆದ ಎರಡು ವರ್ಷಗಳಿಂದ ಕರ್ನಾಟಕ ಬ್ಯಾಂಕ್ ಶ್ರೀನಿವಾಸಪುರ ಶಾಖೆಯಲ್ಲಿ ಉಪ ವ್ಯವಸ್ಥಾಕನಾಗಿ ಕೆಲಸ ಮಾಡುತ್ತಿದ್ದ.ಸದಾಕಾಲ ನಗುನಗುತ್ತ ಗ್ರಾಹಕರೊಂದಿಗೆ ವ್ಯವಹರಿಸುತ್ತಿದ್ದನಂತೆ ಒಂದೂವರೆ ವರ್ಷಗಳ ಹಿಂದೆಯಷ್ಟೆ ತನ್ನ ಸೋದರ ಸಂಬಂದದಲ್ಲಿ ಮದುವೆಯಾಗಿದ್ದು ಪತ್ನಿ ಬಿಇ ಪಧವಿದರೆಯಾಗಿದ್ದು ಕ್ರಾಷ್ ಕೊರ್ಸ್ ಮಾಡಲು ಬೆಂಗಳೂರು ದಕ್ಷಣ ಭಾಗದ ವೈಟ್ ಫೀಲ್ದ್ ನಲ್ಲಿ ಮನೆ ಮಾಡಿ ಅಲ್ಲಿ ಒದಿಸುತ್ತಿದ್ದ ಎನ್ನುತ್ತಾರೆ ಅತನ ಆಪ್ತರು. ಪತ್ನಿಯನ್ನು ಕಾಣಲು ವಾರಕ್ಕೆ ಒಂದೇರಡು ಬಾರಿ ಪಲ್ಸರ್ ಬೈಕನಲ್ಲೆ ಬೆಂಗಳೂರಿಗೆ ಹೋಗಿ ಬರುತ್ತಿದ್ದ ಎನ್ನುತ್ತಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



