ಶ್ರೀನಿವಾಸಪುರ: ಅಪಘಾತ ತಪ್ಪಿಸಲು ಹೋದ ಪೊಲೀಸ್ ವಾಹನ ರಸ್ತೆ ವಿಭಜದ ಮೇಲೆ ಹತ್ತಿ ವಿದ್ಯತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾರಿ ಗಾತ್ರದ ಬೀದಿ ದೀಪದ ವಿದ್ಯತ್ ಕಂಬ ಉರುಳಿ ಬಿದ್ದ ಘಟನೆ ಇಂದು ಮಧ್ಯಾನ್ಹ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಮಂಡಿಗಳ ಬಳಿ ನಡೆದಿರುತ್ತದೆ.
ಅದೃಶ್ಯಾವತ್ ಯಾವುದೆ ಸಾವು ನೋವು ಸಂಭವಿಸಿಲ್ಲ ದ್ವಿಚಕ್ರ ವಾಹನ ಸವಾರ ಮಹಿಳೆಗೆ ತಲೆಗೆ ಪೆಟ್ಟಾಗಿದ್ದು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆಯಲ್ಲಿ ಅವರೆಕಾಯಿ ಮಂಡಿ ರಸ್ತೆ ಸಂಚಾರಕ್ಕೆ ಕಂಟಕ
ಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಮಂಡಿ ನಡೆಸುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದು ಅವರೆಕಾಯಿ ಮಂಡಿಗಳನ್ನು ಸ್ಥಳಾಂತರಿಸುವ ಬಗ್ಗೆ ಪರ-ವಿರೋದ ವ್ಯಕ್ತವಾದ ಹಿನ್ನಲೆಯಲ್ಲಿ ತಿಕ್ಕಾಟ ವಿವಾದಕ್ಕೆ ಕಾರಣವಾಗಿ ರಾಜಕೀಯ ತಿರವು ಪಡೆದುಕೊಂಡು ಅವರೆಕಾಯಿ ಮಂಡಿಗಳು ಎಂ.ಜಿ.ರಸ್ತೆಯಲ್ಲೆ ಮುಂದು ವರೆದಿತ್ತು ಇದು ಸ್ಥಳಿಯ ಜನರಿಗೆ ನುಂಗಲಾರದ ತುತ್ತಾಗಿ ಪರಣಮಿಸಿತ್ತು.ಅವರೆಕಾಯಿ ಮೂಟೆಗಳನ್ನು ಲೋಡ್ ಮಾಡಲು ನಿಲ್ಲಿಸುವ ಟೆಂಪೋ,ಆಟೋ ಟ್ರ್ಯಾಕ್ಟರ್ ಗಳಿಂದ ರಸ್ತೆ ನಿಯಮ ಉಲ್ಲಂಘನೆಯಾಗಿ ರಸ್ತೆ ಸಂಚಾರಕ್ಕೆ , ಸಮಸ್ಯೆ ಉಂಟಾಗಿ ಇಕ್ಕಟ್ಟಿನಲ್ಲೇ ವಾಹನ ಸಂಚಾರ ಪಾದಚಾರಿಗಳ ಒಡಾಟ ಇದು ಬಂಕಾಪುರ ಶ್ರೀನಿವಾಸಪುರ ಪಟ್ಟಣದ ಎಂ.ಜಿ.ರಸ್ತೆ ಅವ್ಯವಸ್ಥೆಯಾಗಿತ್ತು. ಇಲ್ಲಿ ರಸ್ತೆ ಸುಗಮ ಸಂಚಾರ ಅನ್ನುವುದು ಮರೀಚಿಕೆಯಾಗಿದೆ.


ಇಂದು ಸಹ ಆಗಿದ್ದು ಅದೆ ಎಂ.ಜಿ.ರಸ್ತೆಯ ತರಕಾರಿ ವೃತ್ತದಲ್ಲಿ ರಾಮಚಂದ್ರಪ್ಪ ಅವರೆಕಾಯಿ ಮಂಡಿ ಹಾಗು ಜಾವಿದ್ ತರಕಾರಿ ಅಂಗಡಿ ಮುಂಬಾಗ ಅವರೆಕಾಯಿ ಮೂಟೆಗಳನ್ನು ತುಂಬಿಸಿಕೊಳ್ಳಲು ಟೆಂಪೋ ಹಾಗು ಆಟೋ ನಿಂತಿದ್ದು ಅದೆ ಸಮಯಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲಿಸ್ ವಾಹನ ಕೋಲಾರ ಕಡೆಯಿಂದ ಬಂದಿದೆ ಅದೆ ಸಮಯದಲ್ಲಿ ಅಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರ ಮಹಿಳೆಗೆ ಡಿಕ್ಕಿ ಹೋಡೆಯುವುದನ್ನು ತಪ್ಪಿಸಲು ಪೋಲಿಸ್ ವ್ಯಾನ್ ಎಡಕ್ಕೆ ತಿರುಗಿಸಿದ ಪರಿಣಾಮ ಪೋಲಿಸ್ ವಾಹನ ರಸ್ತೆ ವಿಭಜಕ್ಕೆ ಹತ್ತಿದೆ ಅಲ್ಲಿದ್ದ ಬೀದಿ ದೀಪದ ವಿದ್ಯತ್ ಕಂಬಕ್ಕೆ ಡಿಕ್ಕಿ ಹೋಡೆದಿದ್ದು ಕಂಬ ಉರುಳಿ ಬಿದ್ದಿದೆ.ಯಾವುದೆ ಅಪಾಯಕಾರಿ ಘಟನೆ ಸಂಭವಿಸಿಲ್ಲ ಎಂದು ನಿಟ್ಟಿಸುರು ಬಿಟ್ಟು ಹೇಳುತ್ತಾರೆ ಸ್ಥಳೀಯರು.



