ಶ್ರೀನಿವಾಸಪುರ:ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ಜನಪ್ರತಿನಿಧಿಗಳಾದ ನಾವು ಜನರ ಎದರು ಪ್ರಮಾಣಿಕರಾಗಿ ಸ್ಪಷ್ಟತೆಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ವೆಂಕಟಶಿವಾರೆಡ್ಡಿ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಹೇಳಿದರು.
ಅವರು ಇಂದು ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಸಮಕಾಲಿನ ರಾಜಕಾರಣಿಗಳಾದ ನಾವಿಬ್ಬರು ಇವತ್ತು ರಾಜಕಾರಣದ ಸಂಧ್ಯಾಕಾಲದಲ್ಲಿ ಇದ್ದೀವಿ ನಮ್ಮ ಸಾರ್ವಜನಿಕ ಜೀವನದಲ್ಲಿ ಮಾತು ನಡವಳಿಕೆ ಸ್ಪಷ್ಟವಾಗಿರಬೇಕು ಸತ್ಯ ಮುಚ್ಚಿಟ್ಟು ಮಾತನಾಡಬಾರದು ಎಂದ ಅವರು ಕಾನೂನು ಬದ್ದವಾಗಿ ಭೂಮಿಯ ಹಕ್ಕನ್ನು ಪಡೆದು ಕೊಂಡಿದ್ದ ರೈತರನ್ನು ಒಕ್ಕಲೆಬ್ಬಿಸುವ ಮೂಲಕ ಅರಣ್ಯ ಇಲಾಖೆ ತೊಂದರೆ ನೀಡುತ್ತಿರುವ ವಿಷಯ ಪ್ರಸ್ತಾಪಿಸಿ ಮಾತನಾಡಿ ಇವತ್ತು ರೈತರು ಎದರಿಸುತ್ತಿರುವ ಜಮೀನು ಸಮಸ್ಯೆಗೆ ಅವರು ಅನುಭವಿಸುತ್ತಿರುವ ಕಷ್ಟಗಳಿಗೆ ಕಾರಣ ಯಾರು ಎಂಬುದು ಸ್ಪಷ್ಟವಾಗಬೇಕಿದೆ ಎಂದು ವೆಂಕಟಶಿವಾರೆಡ್ಡಿ ಹೇಳಿದರು. ರೈತರ ಜಮೀನು ಅರಣ್ಯ ಇಲಾಖೆಗೆ ಇಂಡಿಕರಣ ಆಗಿರುವುದು ಶ್ರೀನಿವಾಸಪುರ ತಾಲೂಕಿನಲ್ಲಿ ಮಾತ್ರ ಇದು ಗಂಭೀರವಾದ ವಿಚಾರ,ರೈತರ ಭೂಮಿ ಇಂಡಿಕರಣವಾದಾಗ 2021 ರಲ್ಲಿ ರಮೇಶ್ ಕುಮಾರ್ ಶಾಸಕರಾಗಿದ್ದರು, ಇದಾದ ನಂತರ ಸುಮಾರು ಏಳು ಬಾರಿ ಅಧಿವೇಶನ ನಡೆಯಿತು ಏಳು ಅಧಿವೇಶನದಲ್ಲೂ ಭಾಗವಹಿಸಿದ್ದ ರಮೇಶ್ ಕುಮಾರ್ ಅವರು ಇಂಡಿಕರಣ ವಿಚಾರ ಅಧಿವೇಶನದಲ್ಲಿ ಪ್ರಸ್ತಾಪಿಸಿ ಕನಿಷ್ಟ ಸರ್ಕಾರದ ಗಮನಕ್ಕೆ ತಂದು ವಿರೋಧಿಸಬಹುದಿತ್ತು. ಇಂತಹ ಯಾವುದೆ ಪ್ರಯತ್ನ ಮಾಡದೆ ಕೈ ಚಲ್ಲಿದವರು ಇವತ್ತು ಭೂಮಿ ಕಳೆದುಕೊಂಡ ರೈತರು ನನ್ನೊಟ್ಟಿಗೆ ಇರಿ ನಿಮ್ಮ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ ಇದು ಎಷ್ಟು ಸರಿ ಆರ್ಟಿಸಿ ದಾಖಲೆಯಲ್ಲಿ ಅರಣ್ಯ ಭೂ ಪ್ರದೇಶದ ಇಂಡೀಕರಣ ಆದೇಶವನ್ನು ಹಿಂದಕ್ಕೆ ತಗೆಸಿ ರೈತರಿಗೆ ಭೂಮಿ ವಾಪಸ್ಸು ಕೊಡಿಸುವಿರಾ ಈ ಬಗ್ಗೆ ಪ್ರಮಾಣ ಮಾಡಿ ಹೇಳುತ್ತಿರ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಹೇಸರೇಕೆ ಹೇಳುತ್ತಿರ
ನಿಮ್ಮ ಜಮೀನು ಉಳಿಸಿಕೊಳ್ಳುವುದಾದರೆ ಉಳಸಿಕೊಳ್ಳಿ ನಮ್ಮದೇನು ಅಭ್ಯಂತರ ಇಲ್ಲ ಇದಕ್ಕಾಗಿ ನೀವು ವಿಕಾಸಸೌಧ ವಿಧಾನಸೌಧ ಅರಣ್ಯ ಇಲಾಖೆ ಮಂತ್ರಿ ಮುಖ್ಯಮಂತ್ರಿಗಳ ಕಚೇರಿ ಅಲೆದಿದ್ದೀರಿ ಯಾವುದು ಸಫಲವಾಗದ ಸಂದರ್ಭದಲ್ಲಿ ಕೊನೆಯ ಅಸ್ತ್ರ ಎಂಬಂತೆ ಭೂಮಿ ಕಳೆದುಕೊಂಡ ರೈತರಿಗೆ ಇಲ್ಲದ ಹೊಸ ಆಸೆಗಳನ್ನು ಹುಟ್ಟಿಸಿ ಅವರನ್ನು ಬೀದಿಗಿಳಿಯೋಣ ಬನ್ನಿ ಎನ್ನುತ್ತ,ಇದರಲ್ಲಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ಹೆಸರನ್ನು ಎಳೆದು ತರುವಂತ ಕೆಲಸ ಮಾಡುವುದು ಎಷ್ಟು ಸರಿ ಇದರ ಅವಶ್ಯಕತೆ ನಿಮಗೆ ಎನಿತ್ತು ಎಂದು ದೂರಿದರು.
ನಾನು ಶಾಸಕನಾದ ಮೇಲೆ ಅರಣ್ಯ ಇಂಡಿಕರಣ ವಿಚಾರವನ್ನು ಸಧನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೇಳೆದಿರುವೆ ಇದಕ್ಕೆ ಕಂದಾಯ ಸಚಿವರಾಗಲಿ ಅರಣ್ಯ ಸಚಿವರಾಗಲಿ ಸ್ಪಂದಿಸಲಿಲ್ಲ ಇದು ದುರದೃಷ್ಟಕರ ವಿಚಾರ ಎಂದು ಹೇಳಿದರು.
ಭೂಮಿ ಕೊಡಿಸುವ ಬಗ್ಗೆ ಭರವಸೆ
ಅರಣ್ಯ ಇಲಾಖೆಯಿಂದ ಸಂತ್ರಸ್ತರಾಗಿರುವ ದೊಡಮಲದೊಡ್ಡಿ ಶಿವಪುರ ಸೇರಿದಂತೆ ಕೆಲ ಗ್ರಾಮಗಳಿಗೆ ಭೇಟಿ ಕೊಟ್ಟಿದ್ದು ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಯಾರು ಒಕ್ಕೆಲೆಬ್ಬಿಸಲ್ಲ ಅಂತಹ ರೈತರೊಂದಿಗೆ ನಾನು ಇರುತ್ತೇನೆ ಮತ್ತು ಭೂಮಿ ಕಳೆದುಕೊಂಡ 3 ಎಕರೆ ಒಳಗಿನ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರು ವಾಸಿಸುವ ಪ್ರದೇಶದಲ್ಲಿ ಹಂಚಿಕೆ ಮಾಡಲು ಲಭ್ಯ ಇರುವಂತ ಸರ್ಕಾರಿ ಜಮೀನಿನಲ್ಲಿ ತಾಲೂಕು ಭೂಮಂಜೂರಾತಿ ಸಮಿತಿ ಅಧ್ಯಕ್ಷನಾಗಿ ಆದ್ಯತೆ ಮೇರೆಗೆ ಪರಶೀಲಿಸಲಾಗುವುದು ಎಂದು ಭರವಸೆ ಇತ್ತರು.
ಸುದ್ಧಿ ಗೋಷ್ಠಿಯಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ,ಮಾಜಿ ಸದಸ್ಯ ರಾಜು,ಪೊಲ್ ಶಿವಾರೆಡ್ಡಿ,ಆಟೋ ಯೂನಿಯನ್ ಅಧ್ಯಕ್ಷ ಜಗದೀಶ್,ಸಿಮೆಂಟ್ ನಾರಯಣಸ್ವಾಮಿ ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



