ಚಿಂತಾಮಣಿ:ಅತಿವೇಗವಾಗಿ ಬೆಳೆಯುತ್ತಿರುವ ಚಿಂತಾಮಣಿ Chintamani ನಗರದ ವ್ಯಾಪ್ತಿಯಲ್ಲಿ ದಿನೆ ದಿನೆ ಜನದಟ್ಟನೆ ವಾಹನ ದಟ್ಟಣೆ ಹೆಚ್ಚುತ್ತಿದ್ದು ಇದರಿಂದ ಸಂಚಾರ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ ಇದಕ್ಕಾಗಿ ನಗರದ ಉತ್ತರ ಭಾಗದ ಬಾಗೇಪಲ್ಲಿ ವೃತ್ತದಿಂದ ಚೇಳೂರು ರಸ್ತೆಗೆ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸುವುದಾಗಿ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ Dr. M C. Sudhakar ಹೇಳಿದರು.
ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಬುಕ್ಕನಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಸುಮಾರು 42 ಲಕ್ಷ ರೂಪಾಯಿಗಳ ಕಾಮಗಾರಿಗೆ ಸಂಬಂದಿಸಿದಂತೆ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿ ತಿಳಿಸಿದರು.
ಬುಕ್ಕನಹಳ್ಳಿ,ಚೊಕ್ಕರೆಡ್ಡಿಹಳ್ಳಿ,ಮುಂತಕದಿರೇನಹಳ್ಳಿ ಗ್ರಾಮಗಳ ಮಾರ್ಗವಾಗಿ ಬಾಗೇಪಲ್ಲಿ ವೃತ್ತದಿಂದ ಚೇಳೂರು ರಸ್ತೆಗೆ ಬೈಪಾಸ್ ರಸ್ತೆ ನಿರ್ಮಾಣ ಮಾಡಿದರೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಇದನ್ನು ಪರಿಗಣಿಸಬೇಕು ಎಂದು ಬುಕ್ಕನಹಳ್ಳಿ,ಮುಂತಕದಿರೇನಹಳ್ಳಿ ಗ್ರಾಮಗಳ ಜನರು ಸಚಿವರಿಗೆ ಮನವಿ ಸಲ್ಲಿಸಿದರು.

ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸಚಿವರು ಬೈಪಾಸ್ ರಸ್ತೆ ಕನಿಷ್ಠ 50 ಅಡಿ ಅಗಲ ಇದ್ದರೆ ವಾಹನ ಸಂಚಾರಕ್ಕೆ ಸುಗಮವಾಗಿರುತ್ತದೆ ಇದಕ್ಕೆ ಸ್ಥಳೀಯ ರೈತರು ಸಹಕಾರ ನೀಡುವಂತೆ ಕೋರಿದರು. ಈ ಮಾರ್ಗದಲ್ಲಿ ನಕ್ಷೆಯಲ್ಲಿರುವ ಬಂಡಿದಾರಿಯನ್ನು ಸರ್ವೇ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಚಿಂತಾಮಣಿ ನಗರದಿಂದ ಜೆ ಜೆ ಕಾಲೋನಿ ಮೂಲಕ ಬುಕ್ಕನಹಳ್ಳಿ, ಸಿಂಗಸಂದ್ರ, ಎನ್ ಕೊತ್ತೂರು ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಅನಕೂಲ ಎನ್ನುವಂತೆ ಆಜಾದ್ ಚೌಕದಿಂದ ರೈಲ್ವೆ ನಿಲ್ದಾಣಕ್ಕೆ ಕನಿಷ್ಠ 36 ಅಡಿ ರಸ್ತೆ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದರ ಜೊತೆಗೆ ಚಿಂತಾಮಣಿ ರೈಲ್ವೆ ನಿಲ್ದಾಣದ ಬಳಿ ಇರುವ ರೈಲ್ವೆ ಅಂಡರ್ ಪಾಸ್ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಕಿರಿಕಿರಿ ಉಂಟಾಗಿದೆ ಇದನ್ನು ರೈಲ್ವೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ವಿಸ್ತರಿಸು ಕಾರ್ಯ ಆಗಬೇಕು ಎಂದು ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು.



