ಶ್ರೀನಿವಾಸಪುರ:ತಾಲೂಕಿನ ಕೋಟೆ ಕಲ್ಲೂರು ಗ್ರಾಮದಲ್ಲಿನ ಪುರಾತನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಮಂಗಳವಾರದ ವೈಕುಂಠ ಏಕಾದಶಿ ಪೂಜೆ ವಿಚಾರವಾಗಿ ಗ್ರಾಮದ ಎರಡು ಗುಂಪುಗಳ ನಡುವೆ ಪ್ರತಿಷ್ಠೆ ವಿಷಯವಾಗಿ ಸಂಘರ್ಷ ಏರ್ಪಟ್ಟಿದ್ದು, ಪರಿಸ್ಥಿತಿ ತಿಳಿಗೊಳಿಸಲು ತಾಲ್ಲೂಕು ಆಡಳಿತ ಮಧ್ಯಪ್ರವೇಶ ಮಾಡಿ ಡಿಸೆಂಬರ್ 30ರಂದು ನಡೆಯಲಿರುವ ವೈಕುಂಠ ಏಕಾದಶಿ ವಿಶೇಷ ಪೂಜೆ ಕಾರ್ಯಕ್ರಮ ನೆರವೇರಿಸಲು ತಾ.ಆಡಳಿತ ಸಿದ್ದತೆ ಮಾಡಿಕೊಂಡಿದೆ.
ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ
ಚನ್ನಕೇಶವ ದೇವಾಲಯದಲ್ಲಿ ಪೂಜೆಗಾಗಿ ಏರ್ಪಟ್ಟಿರುವ ವಿಷಯ ಹಲವಾರು ದಿನಗಳಿಂದ ನಡೆಯುತ್ತಿದ್ದು ನಾಳಿನ ವೈಕುಂಠ ಏಕಾದಶಿ ಪೂಜೆ ಹಿನ್ನಲೆಯಲ್ಲಿ ಮತ್ತೆ ಮುನ್ನಲೆಗೆ ಬಂದಿದ್ದು ಕಾರ್ಯಕ್ರಮದ ಅನ್ವಯ ಪೈಪೋಟಿಗೆ ಬಿದ್ದವರಂತೆ ಪ್ರತ್ಯೇಕ ಪೂಜೆ ನಡೆಸಲು ಮುಂದಾಗಿದ್ದ ಗುಂಪುಗಳು ಪ್ರತ್ಯೇಕ ಅನ್ನ ಸಂತರ್ಪಣೆ ಮಾಡಲು ಮುಂದಾಗಿದ್ದರು ಇದು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಹಿನ್ನಲೆಯಲ್ಲಿ ತಾಲೂಕು ತಹಶೀಲ್ದಾರ್ ಸುಧೀಂದ್ರ ಪೊಲೀಸ್ ಸಹಕಾರದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ದೇವಾಲಯದ ಬಳಿ ಪರಿಸ್ಥಿತಿ ಪರಿಶೀಲನೆ ನಡೆಸಿ ಅನ್ನ ಸಂತರ್ಪಣೆ ಮಾಡಲು ಹಾಕಲಾಗಿರುವ ಪ್ರತ್ಯಕ ಪೆಂಡಾಲ್ಗಳನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿದ್ದಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಾಲಯದ ಸುತ್ತಮುತ್ತಲು ಸೆಕ್ಷನ್ 144 ಜಾರಿಗೊಳಿಸಿ ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುತ್ತಾರೆ.
ಪೂಜಾ ಕಾರ್ಯಕ್ರಮಗಳು ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಭಕ್ತರು ತರುವಂತ ಪ್ರಸಾದ ಸಾಮಾಗ್ರಿಗಳನ್ನು ದೇವಾಲಯಕ್ಕೆ ನೀಡಬೇಕು, ಪುರೋಹಿತರೇ ಅದನ್ನು ವಿತರಿಸಲಿದ್ದಾರೆ.ವೈಕುಂಠ ಏಕಾದಶಿಗೆ 4 ಗ್ರಾಮಗಳ ಮುಖಂಡರು ಒಟ್ಟಾಗಿ ಸುಸೂತ್ರವಾಗಿ ನೆರವೇರಿಸಬೇಕು
ಎಂದು ತಹಶೀಲ್ದಾರ್ ಸೂಚಿಸಿದ್ದು ದೇವಾಲಯ ಕಟ್ಟಡ ಸರ್ಕಾರಿ ‘ಬಿ ಕರಾಬು’ ಜಾಗದಲ್ಲಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



