ಶ್ರೀನಿವಾಸಪುರ:ಡಿಸೆಂಬರ್ 1 ರಿಂದ ದ್ವಿಚಕ್ರ ವಾಹನ ಸವಾರರು ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಪ್ರಯಾಣಿಸಬೇಕು ಎಂಬ ನಿಯಮವನ್ನು ಕೋಲಾರ ಜಿಲ್ಲಾದ್ಯಂತ ಜಾರಿಮಾಡಿ ಕಳೆದ ಎಂಟೆತ್ತು ದಿನಗಳಿಂದ ಸಾರ್ವಜನಿಕವಾಗಿ ಜಾರಿಯಾಗುವಂತೆ ಆದೇಶಿಸಿ ಇದಕ್ಕಾಗಿ ಕೋಲಾರ ಜಿಲ್ಲಾ ಪೋಲಿಸರು ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದ್ದರು.
ಅದರಂತೆ ಇಂದು ಶ್ರೀನಿವಾಸಪುರದಲ್ಲಿ ರಸ್ತೆಗಿಳಿದ ಪೋಲಿಸರು ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಜನರನ್ನು ತಡೆದು ಹೆಲ್ಮೆಟ್ ರಹಿತ ವಾಹನ ಚಾಲನೆ ಅಪಾಯಕಾರಿ. ಅದರಲ್ಲೂ ಅಪಘಾತ ಸಂದರ್ಭಗಳಲ್ಲಿ ಶಿರಸ್ತ್ರಾಣ ಧರಿಸದ ಪರಿಣಾಮ ಮಾರಣಾಂತಿಕವಾಗಿ ಗಾಯಗೊಂಡು ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಫುಲ್ ಕ್ಲಾಸ್ ನೀಡಿದರು.

ತಾಲೂಕು ಆಫಿಸ್ ಮುಂಬಾಗದಲ್ಲಿ ವೃತ್ತ ನಿರೀಕ್ಷಕ ಮೊಹಮ್ಮದ್ ಕೊಳ್ಳ ಸಬ್ ಇನ್ಸಪೇಕ್ಟರ್ ಚಂದ್ರಪ್ಪ ನೇತೃತ್ವದಲ್ಲಿ ಪೋಲಿಸರು ಕಾರ್ಯಚರಣೆ ನಡೆಸಿ ಹೆಲ್ಮೆಟ್ ಧರಿಸದೆ ಬರು ವಾಹನ ಸವಾರರಿಗೆ ಅರಿವು ಮೂಡಿಸಿ ಎಚ್ಚರಿಕೆ ಕೊಟ್ಟು ಕಳಿಸಿದರೆ ಹೆಲ್ಮೆಟ್ ಧರಿಸಿ ಬಂದವರನ್ನು ಅಭಿನಂದಿಸಿದರು.
ಹೆಲ್ಮೆಟ್ ಖಡ್ಡಾಯ ಇಂದು ಆರಂಭವಾಗಿದೆ ಇವತ್ತು ವಿನಾಯಿತಿ ಕೊಡಲಾಗುತ್ತಿದೆ ಆದರೆ ನಾಳೆಯಿಂದ ಹೆಲ್ಮೆಟ್ ಧರಿಸದೆ ಬಂದರೆ ಮುಲಾಜಿಲ್ಲದೆ ಫೈನ್ ಹಾಕಲಾಗುವುದು ಎಂದು ಎಚ್ಚರಿಸಿದರು.
ವಿದ್ಯಾವಂತರ ಅವೇವಿಕಿತನ
ಕಳೆದ ಎಂಟೆತ್ತು ದಿನಗಳಿಂದ ಪೋಲಿಸರು ಸಾರ್ವಜನಿಕವಾಗಿ ಖಡ್ಡಾಯ ಹೆಲ್ಮೆಟ್ ಧರಿಸುವ ಕುರಿತು ಪ್ರಚಾರ ಮಾಡಿದ್ದರು ಯಾವುದೆ ವ್ಯಾಟ್ಸಾಪ್ ಗ್ರೂಪ್ ತೆರೆದರು, ಹೆಲ್ಮೆಟ್ ಖಡ್ಡಾಯ ಜಾರಿ ಕುರಿತಂತೆ ಸುದ್ಧಿ ಇದ್ದು ಅದನ್ನು ಓದಿದರು ಬಹುತೇಕ ತಿಳುವಳಿಕಸ್ಥ ವಿದ್ಯಾವಂತರು ಇಂದು ಸ್ಟೈಲ್ ಆಗಿ ದ್ವಿಚಕ್ರವಾಹನ ನಡೆಸಿಕೊಂಡು ಬರುತ್ತಿದ್ದು ಅವರ ಅವಿವೇಕಿತನ ಪ್ರದರ್ಶನವಾಯಿತು.
ವರದಿ:ಶಕ್ತಿಶ್ರೀರಾಮ್



