ಚಿಂತಾಮಣಿ:ತೆಲಗು ಚಿತ್ರರಂಗದ ಪ್ರಖ್ಯಾತ ನಟ ನಂದಮೂರಿ ನಟಸಿಂಹ ಬಾಲಕೃಷ್ಣ ಇಂದು ಶುಕ್ರವಾರ ಚಿಂತಾಮಣಿ ನಗರಕ್ಕೆ ಆಗಮಿಸುತ್ತಿದ್ದಾರೆ ಇವರೊಂದಿಗೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ವೇದಿಕೆ ಹಂಚಿಕೊಳ್ಳೊತ್ತಿದ್ದು ಇವರೊಂದಿಗೆ ನಿರ್ದೇಶಕ ಬೋಯಪಾಟಿ ಶ್ರೀನು ಇರಲಿದ್ದಾರೆ.
ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಅಖಂಡ-2’ ಟ್ರೈಲರ್ ಇಂದು (ನವೆಂಬರ್ 21) ಕರ್ನಾಟಕದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದ್ದು ಈ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಚಿಂತಾಮಣಿಯಲ್ಲಿ ನಡೆಯುತ್ತಿದೆ.
ತೆಲುಗು ಚಿತ್ರರಂಗದ ಮೆಗಾ ಹಿಟ್ ‘ಅಖಂಡ’ ಚಿತ್ರದ ಮುಂದುವರಿದ ಭಾಗವಾಗಿರುವ ‘ಅಖಂಡ-2’ ಸಿನಿಮಾ
ಡಿಸೆಂಬರ್ 5, 2025ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭರದಿಂದ ಸಾಗಿದ್ದು, ಇಂದು ಕರ್ನಾಟಕದ ಚಿಂತಾಮಣಿ ಬೈಪಾಸ್ ಬಳಿ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ವರ್ಣರಂಜಿತ ಕಾರ್ಯಕ್ರಮ ಆರಂಭವಾಗಲಿದೆ.
ನಂದಮೂರಿ ಮತ್ತು ರಾಜ್ಕುಮಾರ್ ಕುಟುಂಬಗಳ ನಡುವಿನ ಆತ್ಮೀಯ ಬಾಂಧವ್ಯ ಎಲ್ಲರಿಗೂ ತಿಳಿದಿದೆ. ಅದೇ ಸ್ನೇಹ ಮತ್ತು ಗೌರವದ ಹಿನ್ನೆಲೆಯಲ್ಲಿ, ನಟ ಶಿವರಾಜ್ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ಟ್ರೈಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದು ತೆಲುಗು ಮತ್ತು ಕನ್ನಡ ಚಿತ್ರರಂಗದ ಸಿನಿಮಾ ಪ್ರೆಮಿಗಳಿಗೆ ಹಾಗು ವಿಶೇಷವಾಗಿ ನಂದಮೂರಿ ಬಾಲಕೃಷ್ಣ ಅಭಿಮಾನಿಗಳಿಗೆ ಒಂದು ದೊಡ್ಡ ಸಂಭ್ರಮದ ಕ್ಷಣವಾಗಿದ್ದು,ಗಡಿ ಭಾಗದ ಜನರಲ್ಲಿ ಉತ್ಸಾಹ ಹೆಚ್ಚಿದೆ.
‘ಅಖಂಡ-2’ ಸಿನಿಮಾ ಟೀಸರ್ ಮತ್ತು ‘ದಿ ತಾಂಡವಂ’ ಹಾಗೂ ‘ಜಾಜಿಕಾಯ ಜಾಜಿಕಾಯ’ ಹಾಡುಗಳು ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿವೆ. ಮೊದಲ ಭಾಗದಂತೆ ಈ ಸೀಕ್ವೆಲ್ನಲ್ಲಿಯೂ ಬಾಲಕೃಷ್ಣ ಅವರು ಮಾಸ್ ಮತ್ತು ಸಾಧು ಹೀಗೆ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.


ಥಮನ್ ಅಬ್ಬರದ ಸಂಗೀತ
ಸಿನಿಮಾಗೆ ಎಸ್. ಎಸ್. ಥಮನ್ ಅಬ್ಬರದ ಸಂಗೀತ ಪ್ರೇಕ್ಷಕರಿಗೆ ಗೂಸ್ ಬಂಪ್ಸ್ ತರುತ್ತದೆ ಎನ್ನಲಾಗುತ್ತಿದ್ದು ಉತ್ತರ ಭಾರತದ ಯುವ ಸಂಸೃತ ವಿದ್ವಾನ್ ಪಂಡಿತ ಸಹೋದರರಾದ ಶ್ರವಣ್ ಮತ್ತು ಅತುಲ್ ಮಿಶ್ರಾ ಹಾಡಿರುವ ರುದ್ರ ಹಾಡು ಡಣ ಢಣ ಎಂದು ಥಿಯೆಟರನಲ್ಲಿ ಪ್ರೇಕ್ಷಕರನ್ನು ಬೇರೆ ಲೆವೆಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂದು ಸಿನಿಮಾ ಪಂಡಿತರ ಲೆಕ್ಕಾಚಾರ. ನಿರ್ದೇಶಕ ಬೋಯಪಾಟಿ ಶ್ರೀನು ಬಾಲಯ್ಯ ಅಭಿಮಾನಿಗಳಿಗೆ ರಸದೌತಣ ಉಣಬಡಿಸುತ್ತಾರೆ ಅವರ ಭರ್ಜರಿ ನಿರ್ದೇಶನವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇದು ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದ ಆಕ್ಷನ್ ಸಿನಿಮಾ ಆಗಿರಲಿದ್ದು ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರವನ್ನು 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಆಚಂಟ ಮತ್ತು ಗೋಪಿಚಂದ್ ಆಚಂಟ ನಿರ್ಮಿಸಿದ್ದು, ನಾಯಕಿ ಸಂಯುಕ್ತಾ ಮೆನನ್ ಮತ್ತು ಖಳನಾಯಕ ಆದಿ ಪಿನಿಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಸಿದ್ದಾರೆ.



